ದೇಶ
ಬಿಜೆಪಿಯವರು ನಕಲಿ ರಾಮನ ಭಕ್ತರು, ಕಾಂಗ್ರೆಸ್ ನಿಜವಾದ ರಾಮಭಕ್ತರು: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ
ಬೆಂಗಳೂರು: ಬಿಜೆಪಿಯವರು ನಕಲಿ ರಾಮನ ಭಕ್ತರು. ಓಟು ಮತ್ತು ಚುನಾವಣೆಗೋಸ್ಕರ ಮಾತ್ರ ರಾಮನ ಹೆಸರನ್ನು ಬಳಸುತ್ತಾರೆ. ಕಾಂಗ್ರೆಸ್ ನಿಜವಾದ ರಾಮನ ಭಕ್ತರು ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿರುವುದನ್ನು ಖಂಡಿಸಿದರು. ಮೊದಲು ನರೇಗಾ ಯೋಜನೆಗೆ ಕೇಂದ್ರ ಸರ್ಕಾರವೇ ಶೇ.100 ಅನುದಾನ ನೀಡುತ್ತಿತ್ತು. ಆದರೆ ಈಗ ಹೊಸ ಕಾಯ್ದೆಯ ಮೂಲಕ ರಾಜ್ಯ ಸರ್ಕಾರಕ್ಕೆ ಶೇ.40 ಹೊರೆ ಹಾಕಲಾಗಿದೆ. ಕೇಂದ್ರ ಸರ್ಕಾರ ಹೇಳಿದ ಕಡೆಗಳಲ್ಲಿ ಮಾತ್ರ ಕೆಲಸ ಮಾಡಬೇಕೆಂದು ನಿಯಮ ಮಾಡಲಾಗಿದೆ. ಇದರಿಂದ ಉದ್ಯೋಗ ಖಾತ್ರಿ ಎಂಬ ಅರ್ಥವೇ ನಾಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಹೆಸರನ್ನು ‘ಜಿ ರಾಮ್ ಜೀ’ ಎಂದು ಬದಲಾಯಿಸಿರುವುದು ಬಡವರ ವಿರುದ್ಧದ ದ್ರೋಹ. ಇದು ಬಡಜನರ ಬದುಕಿನ ಮೇಲೆ ನೇರ ದಾಳಿ ಎಂದು ಅವರು ಕಿಡಿಕಾರಿದರು. ಗಾಂಧೀಜಿ ಹೆಸರನ್ನು ತೆಗೆಯಲು ಹೇಗೆ ಅವರಿಗೆ ಮನಸ್ಸು ಬಂತು ಎಂದು ಪ್ರಶ್ನಿಸಿದ ಅವರು, ಬೇರೆ ದೊಡ್ಡ ಯೋಜನೆಗೆ ಗಾಂಧೀಜಿ ಹೆಸರಿಟ್ಟಿದ್ದರೆ ಒಪ್ಪಬಹುದಿತ್ತು. ಆದರೆ ನರೇಗಾ ಹೆಸರನ್ನು ಬದಲಾಯಿಸಿರುವುದು ಗಾಂಧಿ ವಿರುದ್ಧದ ಅಸಹನೆ ಮತ್ತು ದ್ವೇಷವನ್ನು ತೋರಿಸುತ್ತದೆ ಎಂದರು.
ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ರಾಮನನ್ನು ಕಂಡರೆ ಆಗುವುದಿಲ್ಲ ಎಂದು ಆರೋಪಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ದೇವಸ್ಥಾನಗಳನ್ನು ಕಟ್ಟಿದ್ದು ನಾವು. ನಾವೇ ನಿಜವಾದ ರಾಮನ ಭಕ್ತರು. ಬಿಜೆಪಿಯವರು ನಕಲಿ ಹಿಂದೂಗಳು ಎಂದು ತೀಕ್ಷ್ಣ ಟೀಕೆ ಮಾಡಿದರು.
ಮೈಸೂರಿನಲ್ಲಿ ಸಿಎಂ-ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ರಾಮಲಿಂಗಾರೆಡ್ಡಿ, ರಾಜ್ಯಕ್ಕೆ ಬಂದಾಗ ನಾಯಕರು ಸಹಜವಾಗಿ ಮಾತಾಡುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಗಂಭೀರ ರಾಜಕೀಯ ಚರ್ಚೆಯೇನೂ ಆಗಿಲ್ಲ. ಅದನ್ನು ಅನಾವಶ್ಯಕವಾಗಿ ನೀವು ಸೃಷ್ಟಿ ಮಾಡುತ್ತಿದ್ದೀರಾ ಎಂದು ಹೇಳಿದರು.
ಸಿನಿಮಾ
‘Toxic’ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಕುಸಿತ; ಯಶ್ ಸಿನಿಮಾಗೆ ಎದುರಾಯ್ತಾ ನಿರೀಕ್ಷೆಗೂ ಮೀರಿದ ಶಾಕ್?
ನವದೆಹಲಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘Toxic: A Fairy Tale for Grown-Ups’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ ಎಂಬ ಚರ್ಚೆ ಶುರುವಾಗಿದೆ. ಮೊದಲ ದಿನವೇ ₹100 ಕೋಟಿಗೂ ಹೆಚ್ಚು ಗಳಿಕೆ ದಾಖಲಿಸಿದ್ದ ಸಿನಿಮಾದ ಕಲೆಕ್ಷನ್ ಎರಡನೇ ದಿನ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇದೀಗ ಮೂರನೇ ದಿನದ ಥಿಯೇಟರ್ ಆಕ್ಯುಪೆನ್ಸಿಗೆ ಸಂಬಂಧಿಸಿದ ವರದಿಗಳು ಮತ್ತಷ್ಟು ಗಮನ ಸೆಳೆದಿವೆ.

ಮೂರನೇ ದಿನ ನೋಯ್ಡಾದ ಪ್ರಮುಖ ಚಿತ್ರಮಂದಿರವೊಂದರಲ್ಲಿ ಬೆಳಗ್ಗೆ 9 ಗಂಟೆಯ ಶೋಗೆ ಒಬ್ಬ ಪ್ರೇಕ್ಷಕರೂ ಇರಲಿಲ್ಲ ಎನ್ನಲಾಗಿದೆ. ಅದೇ ಥಿಯೇಟರ್‌ನ 10.30ರ ಶೋಗೆ 300 ಆಸನಗಳ ಪೈಕಿ ಕೇವಲ ಐವರು ಪ್ರೇಕ್ಷಕರು ಹಾಜರಾಗಿದ್ದರು ಎಂಬ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಎರಡನೇ ದಿನ ಕಲೆಕ್ಷನ್‌ನಲ್ಲಿ ಭಾರೀ ಕುಸಿತ
ಗೀತು ಮೋಹನ್‌ದಾಸ್ ನಿರ್ದೇಶನದ ‘Toxic’ ಮೊದಲ ದಿನ ಭಾರತದಲ್ಲಿ ₹101.10 ಕೋಟಿ ನಿವ್ವಳ ಗಳಿಕೆ ದಾಖಲಿಸಿತ್ತು ಎನ್ನಲಾಗಿದೆ. ಆದರೆ ಎರಡನೇ ದಿನ ಕಲೆಕ್ಷನ್‌ನಲ್ಲಿ ಸುಮಾರು 64ರಷ್ಟು ಕುಸಿತ ಕಂಡುಬಂದಿದೆ.
ವರದಿಗಳ ಪ್ರಕಾರ, ಗುರುವಾರ ಸಿನಿಮಾ ಭಾರತದಲ್ಲಿ ₹36.40 ಕೋಟಿ ನಿವ್ವಳ ಗಳಿಕೆ ಮಾಡಿದೆ. ಇದರೊಂದಿಗೆ ಎರಡು ದಿನಗಳಲ್ಲಿ ಚಿತ್ರದ ಒಟ್ಟು ಭಾರತ ನಿವ್ವಳ ಕಲೆಕ್ಷನ್ ₹137.50 ಕೋಟಿಗೆ ತಲುಪಿದೆ.
ಎರಡನೇ ದಿನ ದೇಶಾದ್ಯಂತ 19,413 ಶೋಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿದ್ದು, ಒಟ್ಟಾರೆ ಶೇ.26.6ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ ಎನ್ನಲಾಗಿದೆ.
ಕನ್ನಡಕ್ಕಿಂತ ಹಿಂದಿ ಅವತರಣಿಕೆಗೆ ಹೆಚ್ಚು ಗಳಿಕೆ?
ಯಶ್ ಅಭಿನಯದ ‘Toxic’ ಸಿನಿಮಾದ ಮೂಲ ಭಾಷೆ ಕನ್ನಡವಾದರೂ, ಸದ್ಯ ಹಿಂದಿ ಅವತರಣಿಕೆ ಉತ್ತಮ ಪ್ರದರ್ಶನ ನೀಡುತ್ತಿದೆ ಎನ್ನಲಾಗಿದೆ. ತೆಲುಗು ಆವೃತ್ತಿಯೂ ಚಿತ್ರದ ಒಟ್ಟಾರೆ ಗಳಿಕೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ತಮಿಳು ಮತ್ತು ಮಲಯಾಳಂ ಆವೃತ್ತಿಗಳ ಗಳಿಕೆ ತುಲನಾತ್ಮಕವಾಗಿ ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರೀ ಬಜೆಟ್‌ನ ಸಿನಿಮಾ
‘Toxic: A Fairy Tale for Grown-Ups’ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಚಿತ್ರವನ್ನು ನಿರ್ಮಿಸಿದ್ದಾರೆ.
ಸಿನಿಮಾದಲ್ಲಿ ಯಶ್ ಅವರು ರಾಯ ಮತ್ತು ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
2023ರಲ್ಲಿ ಅಧಿಕೃತವಾಗಿ ಘೋಷಣೆಯಾದಾಗಿನಿಂದಲೇ ‘Toxic’ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ಯಶ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿತ್ತು. ಆದರೆ ಬಿಡುಗಡೆಯ ಬಳಿಕ ಹಿಂಸಾತ್ಮಕ ದೃಶ್ಯಗಳು, ಸಂವೇದನಾಶೀಲ ಅಂಶಗಳು ಹಾಗೂ ಭಾವನಾತ್ಮಕ ಆಳದ ಕೊರತೆಯ ಕುರಿತು ಕೆಲ ಪ್ರೇಕ್ಷಕರಿಂದ ಟೀಕೆಗಳು ವ್ಯಕ್ತವಾಗಿವೆ.
ಗಮನಿಸಿ: ಬಾಕ್ಸ್ ಆಫೀಸ್ ಅಂಕಿಅಂಶಗಳು ವರದಿಗಳ ಆಧಾರದ ಮೇಲಿದ್ದು, ಅಂತಿಮ ಗಳಿಕೆಯಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ.
ಕ್ರೀಡೆ
Ravindra Jadejaಗೆ ಸುನಿಲ್ ಗವಾಸ್ಕರ್ ಕ್ಲಾಸ್; ನೋ-ಬಾಲ್‌ಗಳ ಸರಣಿಗೆ ಕಠಿಣ ದಂಡಕ್ಕೆ ಆಗ್ರಹ
ಕ್ರಿಕೆಟ್: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬೆನ್ನಲ್ಲೇ ಭಾರತದ ಆಲ್‌ರೌಂಡರ್ Ravindra Jadeja ಅವರ ನೋ-ಬಾಲ್‌ಗಳು ಚರ್ಚೆಗೆ ಗ್ರಾಸವಾಗಿವೆ. ಪದೇಪದೇ ಬೌಲಿಂಗ್ ಕ್ರೀಸ್ ದಾಟುತ್ತಿರುವ ಜಡೇಜಾ ವಿರುದ್ಧ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ತಪ್ಪುಗಳಿಗೆ ಕಠಿಣ ದಂಡ ವಿಧಿಸಬೇಕು ಎಂದು ಸಲಹೆ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲೂ ಜಡೇಜಾ ಹಲವು ಬಾರಿ ನೋ-ಬಾಲ್ ಎಸೆದಿದ್ದರು. 2021ರಿಂದ ಜಡೇಜಾ 85ಕ್ಕೂ ಹೆಚ್ಚು ನೋ-ಬಾಲ್‌ಗಳನ್ನು ಎಸೆದಿದ್ದಾರೆ ಎಂಬ ಅಂಕಿ-ಅಂಶವೂ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಬೌಲಿಂಗ್ ಶಿಸ್ತಿನ ಬಗ್ಗೆ ಪ್ರಶ್ನೆಗಳು ಎದ್ದಿವೆ.
‘ನೋ-ಬಾಲ್‌ಗಳನ್ನು ತುರ್ತಾಗಿ ನಿಯಂತ್ರಿಸಬೇಕು’
ನೋ-ಬಾಲ್‌ಗಳು ಪಂದ್ಯದ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಆಟಗಾರನ ನಿಯಂತ್ರಣದಲ್ಲಿರುವ ಕೆಲವೇ ಸಂಗತಿಗಳಲ್ಲಿ ಬೌಲರ್ ನೋ-ಬಾಲ್ ಎಸೆಯದಿರುವುದೂ ಒಂದು ಎಂದು ಅವರು ಹೇಳಿದ್ದಾರೆ.
ಇಂದಿನ ಆಧುನಿಕ ಕ್ರಿಕೆಟ್‌ನಲ್ಲಿ ರನ್‌ಅಪ್ ಅಳೆಯಲು ಟೇಪ್ ಸೇರಿದಂತೆ ಅಗತ್ಯ ಸೌಲಭ್ಯಗಳಿವೆ. ಹೀಗಿರುವಾಗ ಬೌಲರ್‌ಗಳು ಪದೇಪದೇ ಕ್ರೀಸ್ ದಾಟುವುದಕ್ಕೆ ಯಾವುದೇ ಕಾರಣ ನೀಡಲು ಸಾಧ್ಯವಿಲ್ಲ ಎಂದು ಗವಾಸ್ಕರ್ ತಮ್ಮ ಅಂಕಣದಲ್ಲಿ ಹೇಳಿದ್ದಾರೆ.
ಫ್ರೀ ಹಿಟ್ ಸಲಹೆಗೆ ಗವಾಸ್ಕರ್ ವಿರೋಧ
ಭಾರತದ ಸ್ಪಿನ್ ಬೌಲಿಂಗ್ ಕೋಚ್ ಸೈರಾಜ್ ಬಹುತುಲೆ, ನೋ-ಬಾಲ್ ಬಳಿಕ ಫ್ರೀ ಹಿಟ್ ನೀಡಿದರೆ ಆಟಗಾರರು ಎಚ್ಚರಿಕೆಯಿಂದ ಬೌಲಿಂಗ್ ಮಾಡಬಹುದು ಎಂಬ ರೀತಿಯಲ್ಲಿ ಹಾಸ್ಯವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಈ ಸಲಹೆಯನ್ನು ಗವಾಸ್ಕರ್ ಒಪ್ಪಿಕೊಂಡಿಲ್ಲ.
ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ ಬ್ಯಾಟರ್‌ಗಳಿಗೆ ರನ್ ಗಳಿಸಲು ಹಲವು ಅನುಕೂಲಗಳಿವೆ. ಇಂತಹ ಸಂದರ್ಭದಲ್ಲಿ ನೋ-ಬಾಲ್‌ಗೆ ಫ್ರೀ ಹಿಟ್ ನೀಡುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಅನ್ನು ಮತ್ತಷ್ಟು ಸುಲಭಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ತಪ್ಪು ಪುನರಾವರ್ತನೆಯಾದರೆ ದಂಡ ಹೆಚ್ಚಿಸಿ’
ನೋ-ಬಾಲ್ ನಿಯಮ ಉಲ್ಲಂಘನೆಯನ್ನು ತಡೆಯಲು ದಂಡದ ಮೊತ್ತವನ್ನು ಪ್ರತಿ ಬಾರಿ ಹೆಚ್ಚಿಸುವಂತೆ ಗವಾಸ್ಕರ್ ಸಲಹೆ ನೀಡಿದ್ದಾರೆ. ಮೊದಲ ತಪ್ಪಿಗೆ ಒಂದು ಮೊತ್ತದ ದಂಡ, ಮತ್ತೆ ತಪ್ಪು ಮಾಡಿದರೆ ಅದರ ಎರಡು ಪಟ್ಟು, ನಂತರ ಮತ್ತೆ ಉಲ್ಲಂಘನೆಯಾದರೆ ಇನ್ನಷ್ಟು ಹೆಚ್ಚಿನ ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ತರಬಹುದು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಆಟಗಾರರು ಪದೇಪದೇ ನೋ-ಬಾಲ್ ಎಸೆಯುತ್ತಿದ್ದರೆ ಬೌಲಿಂಗ್ ಕೋಚ್‌ಗೂ ದಂಡದ ಒಂದು ಭಾಗವನ್ನು ವಿಧಿಸಬಹುದು ಎಂಬ ಸಲಹೆಯನ್ನು ನೀಡಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಡೇಜಾ ಮಾತ್ರವಲ್ಲದೆ ಪದಾರ್ಪಣೆ ಮಾಡಿದ ಸ್ಪಿನ್ನರ್ ಸಾರಾಂಶ್ ಜೈನ್ ಕೂಡ ನೋ-ಬಾಲ್‌ಗಳನ್ನು ಎಸೆದಿದ್ದರು. ಹೀಗಾಗಿ ಭಾರತೀಯ ಬೌಲರ್‌ಗಳು ಬೌಲಿಂಗ್ ಕ್ರೀಸ್ ಬಗ್ಗೆ ಹೆಚ್ಚಿನ ಶಿಸ್ತು ಪಾಲಿಸಬೇಕಾದ ಅಗತ್ಯವಿದೆ ಎಂಬ ಚರ್ಚೆ ಇದೀಗ ಜೋರಾಗಿದೆ.
ಬೆಂಗಳೂರು
KPSC ರದ್ದು ಮಾಡುತ್ತೇನೆ ಎಂದಿದ್ದ ಪ್ರಿಯಾಂಕ್ ಖರ್ಗೆ ಈಗ ಏಕೆ ಸುಮ್ಮನಿದ್ದಾರೆ? ಹೆಚ್‌ಡಿಕೆ ಕಿಡಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿ ನಡೆಯುತ್ತಿರುವ ನೇಮಕಾತಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆಪಿಎಸ್‌ಸಿ ಬಗ್ಗೆ ಸಾರ್ವಜನಿಕರಲ್ಲಿ ಅಸಹ್ಯಕರ ಭಾವನೆ ಮೂಡಿದ್ದು, ಇಂತಹ ಸಂಸ್ಥೆ ಅಗತ್ಯವಿದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ ಎಂದು ಅವರು ಹೇಳಿದ್ದಾರೆ.

ಕೆಪಿಎಸ್‌ಸಿ ಎಇಇ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್‌ಡಿ ಕುಮಾರಸ್ವಾಮಿ, ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಕೆಪಿಎಸ್‌ಸಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
‘ಸಂಪೂರ್ಣ ಅಧಿಕಾರ ಸಿಕ್ಕರೆ KPSC ರದ್ದು ಮಾಡ್ತೀನಿ ಎಂದಿದ್ರಲ್ಲಾ’
ಪ್ರಿಯಾಂಕ್ ಖರ್ಗೆ ಅವರು ಹಿಂದೆ ಸಂಪೂರ್ಣ ಅಧಿಕಾರ ದೊರೆತರೆ ಕೆಪಿಎಸ್‌ಸಿಯನ್ನು ರದ್ದುಪಡಿಸುವುದಾಗಿ ಹೇಳಿದ್ದರು. ಇದೀಗ ಅಧಿಕಾರದಲ್ಲಿರುವ ಅವರು ಕೆಪಿಎಸ್‌ಸಿ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ ಎಂದು ಹೆಚ್‌ಡಿಕೆ ಪ್ರಶ್ನಿಸಿದರು.
ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಕೆಪಿಎಸ್‌ಸಿ ಪರಿಸ್ಥಿತಿ ಹಂತಹಂತವಾಗಿ ಹದಗೆಡುತ್ತಿದೆ. ಇಂತಹ ಸಂಸ್ಥೆಯನ್ನು ಹೇಗೆ ಸರಿಪಡಿಸುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾನೂನುಬಾಹಿರವಾಗಿ ಯಾರಿಗೂ ಸೂಚನೆ ನೀಡಿಲ್ಲ. ತಮ್ಮ ಸಂಬಂಧಿಕರು ಅಥವಾ ಆಪ್ತರಿಗೆ ಅನುಕೂಲವಾಗುವಂತೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನ ನೀಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 2006ರಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾಗಿ ಅವರು ಹೇಳಿದರು.
ಎಇಇ ನೇಮಕಾತಿ ಕುರಿತು ಗಂಭೀರ ಆರೋಪ
ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ ಹೆಚ್‌ಡಿಕೆ, ಪ್ರಶ್ನೆಪತ್ರಿಕೆ ಸೇರಿದಂತೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಪ್ರಶ್ನೆಪತ್ರಿಕೆಯನ್ನು ರೆಸಾರ್ಟ್‌ಗೆ ತೆಗೆದುಕೊಂಡು ಹೋಗಲಾಗಿದೆ ಎಂಬ ಆರೋಪದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಒಎಂಆರ್ ಶೀಟ್ ತಿದ್ದಲಾಗಿದೆ, ಸಿಸಿಟಿವಿ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಹಾಗೂ ದೃಶ್ಯಾವಳಿಗಳಿಗೆ ಸಂಬಂಧಿಸಿದಂತೆ ಹಲವು ಅನುಮಾನಗಳಿವೆ ಎಂದು ಅವರು ಆರೋಪಿಸಿದರು. ಈ ವಿಚಾರದಲ್ಲಿ ಸರ್ಕಾರ ನ್ಯಾಯಾಲಯದ ಮುಂದೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಂಡಿಸಬೇಕಿತ್ತು ಎಂದರು.
‘ಯುವಕರಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ?’
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಎಷ್ಟು ಉದ್ಯೋಗಗಳನ್ನು ನೀಡಲಾಗಿದೆ ಎಂಬುದನ್ನು ಸರ್ಕಾರ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಸಿಗದೆ ಕಡಿಮೆ ಅಂಕ ಪಡೆದವರಿಗೆ ಉತ್ತಮ ರ‍್ಯಾಂಕ್ ದೊರೆತಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಣ ನೀಡಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಅವರು ಆರೋಪಿಸಿದರು.
ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ
ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ಹಾಗೂ ಕಂಟ್ರೋಲರ್‌ಗಳ ಅಧಿಕಾರ ಮತ್ತು ಜವಾಬ್ದಾರಿಗಳ ಬಗ್ಗೆಯೂ ಹೆಚ್‌ಡಿಕೆ ಪ್ರಶ್ನೆಗಳನ್ನು ಎತ್ತಿದರು. ನೇಮಕಾತಿ ಅಕ್ರಮಗಳ ಆರೋಪ ಕೇಳಿಬಂದರೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ಕೆಪಿಎಸ್‌ಸಿ ಅಕ್ರಮಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ ಅವರು, ಉದ್ಯೋಗಾಕಾಂಕ್ಷಿಗಳ ಹಿತ ಕಾಪಾಡಲು ಪಾರದರ್ಶಕ ನೇಮಕಾತಿ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.
‘ಬರೀ ಹೇಳಿಕೆ ಕೊಡಬೇಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿ. ಕೆಪಿಎಸ್‌ಸಿ ಯಾವಾಗ ಸರಿಪಡಿಸುತ್ತೀರಿ ಎಂಬುದನ್ನು ಜನರಿಗೆ ತಿಳಿಸಿ’ ಎಂದು ಸರ್ಕಾರದ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
-
ರಾಜ್ಯ19 ಗಂಟೆಗಳು agoST Leaders ನ್ನೇ ಗುರಿಯಾಗಿಸಲಾಗುತ್ತಿದೆ: B Nagendra ರಾಜೀನಾಮೆ ಕುರಿತು K N Rajanna ಸ್ಫೋಟಕ ಹೇಳಿಕೆ
-
ದೇಶ19 ಗಂಟೆಗಳು agoRewa Hospital ‘ಇಲ್ಲಿ ಡೆಲಿವರಿ ಮಾಡಿಸಬೇಡಿ’ ಎಂದ ಯುವತಿ: ಹೆರಿಗೆ ಬಳಿಕ ತಾಯಿ-ಮಗು ದಾರುಣ ಸಾವು
-
ದೇಶ19 ಗಂಟೆಗಳು agoNepal ದಲ್ಲಿ ಪ್ರವಾಹದ ಆರ್ಭಟ: ತೇಲಿಬಂದ Bank ಲಾಕರ್ ಒಡೆದು ಲಕ್ಷಾಂತರ ರೂಪಾಯಿ ಕಳವು
-
ಬೆಂಗಳೂರು8 ಗಂಟೆಗಳು agoGruha Lakshmi ಯೋಜನೆ: ಫಲಾನುಭವಿಗಳಿಗೆ ಹೊಸ ನಿಯಮ, ಆಗಸ್ಟ್ 30ರಿಂದ ಬಯೋಮೆಟ್ರಿಕ್ ಪರಿಶೀಲನೆ
-
ರಾಜ್ಯ21 ಗಂಟೆಗಳು agoOld Pension Scheme ಮರುಜಾರಿ: ಸರ್ಕಾರಿ ನೌಕರರಿಗೆ ಶೀಘ್ರವೇ ಸಿಗಲಿದೆಯೇ ಸಿಹಿಸುದ್ದಿ?
-
ರಾಜಕೀಯ23 ಗಂಟೆಗಳು agoB Nagendra ಗೆ Janardhana Reddy ಸವಾಲ್; 10 ಶಾಸಕರಿಗೆ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಿ ಎಂದ ಬಿಜೆಪಿ ಶಾಸಕ
-
ಕ್ರೀಡೆ19 ಗಂಟೆಗಳು agoಒಲಿಂಪಿಕ್ಸ್ನಲ್ಲಿ ಕನ್ನಡಿಗರು 10ರಿಂದ 15 ಪದಕ ಗೆಲ್ಲಬೇಕು: K Govindaraj
-
ಬೆಂಗಳೂರು21 ಗಂಟೆಗಳು agoRavichandran ರಾಜಕೀಯಕ್ಕೆ ಬರ್ತಾರಾ? ವಿಧಾನ ಪರಿಷತ್ ಸ್ಥಾನಕ್ಕೆ ಹೆಸರು ಮುನ್ನೆಲೆಗೆ
