Connect with us

ಕ್ರೀಡೆ

ದುಷ್ಮನ್‌ ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ಫ್ಯಾನ್ಸ್‌ ವಿರುದ್ಧ ಮತ್ತೆ ಗರಂ

Published

on

ದುಷ್ಮನ್‌ ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ಫ್ಯಾನ್ಸ್‌ ವಿರುದ್ಧ ಮತ್ತೆ ಗರಂ
ದುಷ್ಮನ್‌ ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ಫ್ಯಾನ್ಸ್‌ ವಿರುದ್ಧ ಮತ್ತೆ ಗರಂ

ನವದೆಹಲಿ: ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ವಿರಾಟ್‌ ಕೊಹ್ಲಿ  ಹಾಗೂ ನವೀನ್‌ ಉಲ್‌ ಹಕ್‌  ಮೈದಾನದಲ್ಲಿ ಮುಖಾಮುಖಿಯಾಗುವ ಬಗ್ಗೆ ಸಾಕಷ್ಟು ಕುತೂಹಲವಿತ್ತು. 2023ರ ಐಪಿಎಲ್‌ ಬಳಿಕ ಇದೇ ಮೊದಲಬಾರಿಗೆ ಮುಖಾಮುಖಿಯಾಗಿದ್ದು, ಮತ್ತೆ ಕಿರಿಕ್‌ ಆಗಬಹುದೇ? ಕೊಹ್ಲಿ ಕಣಕ್ಕಿಳಿದ್ರೆ ಬ್ಯಾಟಿಂಗ್‌ನಲ್ಲಿ ಹೇಗೆ ಅಬ್ಬರಿಸುತ್ತಾರೆ? ಅನ್ನೋದನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದುಕುಳಿತಿದ್ದರು. ಆದ್ರೆ ಮೈದಾನದಲ್ಲಿ ನಡೆದಿದ್ದೇ ಬೇರೆ.

ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ (Afghanistan) ನೀಡಿದ 273 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಜೋಡಿ ಮೊದಲ ವಿಕೆಟ್‌ಗೆ 156 ರನ್‌ಗಳ ಜೊತೆಯಾಟ ನೀಡಿತ್ತು. ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ್ದ ರೋಹಿತ್‌ ಶರ್ಮಾಗೆ ಸಾಥ್‌ ನೀಡುತ್ತಿದ್ದ ಇಶಾನ್‌ ಕಿಶನ್‌ 47 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ 3ನೇ ಕ್ರಮಾಂಕದಲ್ಲಿ ಕೊಹ್ಲಿ ಕ್ರೀಸ್‌ಗೆ ಇಳಿಯುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕುವ ಮೂಲಕ ಸ್ವಾಗತ ಕೋರಿದರು. ಕೊಹ್ಲಿ ಕ್ರೀಸ್‌ಗೆ ಬಂದು ನವೀನ್‌ ಉಲ್‌ ಹಕ್‌ ಬೌಲಿಂಗ್‌ನಲ್ಲಿ ಎದುರಾದ ಕೊಹ್ಲಿ ಅಬ್ಬರಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ನವೀನ್‌ ಉಲ್‌ ಹಕ್‌ ಅವರ ಹಲವು ಎಸೆತಗಳನ್ನು ಕೊಹ್ಲಿ ಡಾಟ್‌ ಮಾಡಿಸಿದರು. ಜೊತೆಗೆ ಕೊಹ್ಲಿ… ಕೊಹ್ಲಿ… ಎಂದು ಜೈಕಾರ ಕೂಗುತ್ತಾ ನವೀನ್‌ ಉಲ್‌ ಹಕ್‌ ನನ್ನ ರೇಗಿಸುತ್ತಿದ್ದ ಅಭಿಮಾನಿಗಳನ್ನ ಕೈಸನ್ನೆಯಲ್ಲೇ ಸುಮ್ಮನಿರುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲದೇ ಪಂದ್ಯದ ವೇಳೆ ನವೀನ್‌ ಉಲ್‌ ಹಕ್‌ನನ್ನ ಆತ್ಮೀಯವಾಗಿ ಅಪ್ಪಿಕೊಂಡು ಮಾತನಾಡಿಸಿದರು. ನವೀನ್‌ ಹೆಗಲಮೇಲೆ ಕೈಯಿಟ್ಟು ಪ್ರೀತಿಯಿಂದ ಮಾತನಾಡಿಸಿದರು. ವಿರಾಟ್‌ ಕೊಹ್ಲಿ ನಡೆಗೆ ಅಭಿಮಾನಿಗಳೂ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೂ ಕೊಹ್ಲಿ-ನವೀನ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ (Gautam Gambhir), ಕೊಹ್ಲಿಯನ್ನು ಹೊಗಳುತ್ತಲೇ ಅಭಿಮಾನಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಪ್ರತಿಯೊಬ್ಬ ಆಟಗಾರನೂ ತನ್ನ ತಂಡಕ್ಕಾಗಿ ಹೋರಾಡುತ್ತಾನೆ ಅನ್ನೋದಕ್ಕೆ ಕೊಹ್ಲಿ ಸಾಕ್ಷಿಯಾಗಿದ್ದಾರೆ. ಯಾರು ಯಾವ ದೇಶದವರು ಅನ್ನೋದಕ್ಕಿಂತ ಕ್ರೀಡೆಯಲ್ಲಿ ಎಷ್ಟು ಉತ್ತಮವಾಗಿ ಆಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಕೊಹ್ಲಿ ಮತ್ತು ನವೀನ್‌ ಅವರನ್ನು ಕ್ರೀಡೆಯ ಉದ್ದೇಶದಿಂದಲೇ ನೋಡಿದ್ರೆ ಒಳ್ಳೆಯದು. ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಿ ಆಟಗಾರರನ್ನ ಟ್ರೋಲ್‌ ಮಾಡುವುದನ್ನು ನಿಲ್ಲಿಸಬೇಕು ಎಂದು ಕೊಹ್ಲಿ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಕ್ರೀಡೆ

ವಾಂಖೆಡೆನಲ್ಲಿ RCB ದಬ್ಬಾಳಿಕೆ: ಚಿನ್ನಸ್ವಾಮಿ ಕಾದಿದೆ!

Published

on

By

ಮುಂಬೈ: Indian Premier League 2026ರ ಪಂದ್ಯದಲ್ಲಿ Royal Challengers Bengaluru ತಂಡವು Mumbai Indians ವಿರುದ್ಧ 18 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ RCB ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತವನ್ನು ದಾಖಲಿಸಿದೆ.

ಈ ಪಂದ್ಯದಲ್ಲಿ Phil Salt 36 ಎಸೆತಗಳಲ್ಲಿ 78 ರನ್ ಸಿಡಿಸಿ ‘ಪ್ಲೇಯರ್ ಆಫ್ ದ ಮ್ಯಾಚ್’ ಪ್ರಶಸ್ತಿ ಪಡೆದರು. ನಾಯಕ Rajat Patidar ಕೇವಲ 20 ಎಸೆತಗಳಲ್ಲಿ 53 ರನ್ ಸಿಡಿಸಿ ತಂಡಕ್ಕೆ ಬಲವಾದ ವೇದಿಕೆ ಒದಗಿಸಿದರು. ಪಾಟಿದಾರ್ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಟೂರ್ನಿಯ ಇತಿಹಾಸದಲ್ಲೇ ವೇಗವಾದ ಫಿಫ್ಟಿ ಸಿಡಿಸಿದ ನಾಯಕ ಎಂಬ ದಾಖಲೆ ನಿರ್ಮಿಸಿದರು.

ಬೌಲಿಂಗ್ ವಿಭಾಗದಲ್ಲಿ Krunal Pandya (1/26) ಮತ್ತು Suyash Sharma (2/47) ಪ್ರಮುಖ ಪಾತ್ರವಹಿಸಿ ಮುಂಬೈ ತಂಡವನ್ನು ನಿಯಂತ್ರಿಸಿದರು.

ಪಂದ್ಯದ ಬಳಿಕ ಮಾತನಾಡಿದ ಪಾಟಿದಾರ್, “ಪ್ರತಿ ಪಂದ್ಯದಲ್ಲೂ 200ಕ್ಕೂ ಹೆಚ್ಚು ರನ್‌ಗಳು ಬರುತ್ತಿವೆ. ಇದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ” ಎಂದು ಹೇಳಿದರು. ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿ, “ನಾನು ಬಾಲ್‌ಗೆ ಪ್ರತಿಕ್ರಿಯಿಸುತ್ತೇನೆ, ಸ್ಪಷ್ಟತೆಯಿಂದ ಆಟ ಆಡುತ್ತೇನೆ” ಎಂದು ತಿಳಿಸಿದ್ದಾರೆ.

ಕೃಣಾಲ್ ಪಾಂಡ್ಯಾ ತಂಡದ ಬ್ಯಾಟಿಂಗ್ ಶಕ್ತಿಯನ್ನು ಮೆಚ್ಚಿ, “ವಿರಾಟ್, ಸಾಲ್ಟ್, ಟಿಮ್ ಎಲ್ಲರೂ ಕೊಡುಗೆ ನೀಡಿದ್ದಾರೆ” ಎಂದರು. ಕೋಚ್ Malolan Rangarajan ರಸಿಖ್‌ರ ಹೋರಾಟ ಮನೋಭಾವವನ್ನು ಶ್ಲಾಘಿಸಿದರು.

ಈ ಗೆಲುವಿನೊಂದಿಗೆ RCB ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಮುಂದಿನ ಚಿನ್ನಸ್ವಾಮಿ ಪಂದ್ಯಕ್ಕಾಗಿ ಕಾತುರವಾಗಿದೆ.

Continue Reading

ಕ್ರೀಡೆ

IPL 2026: ಮುಂಬೈ ಇಂಡಿಯನ್ಸ್ ಸಂಕಷ್ಟದಲ್ಲಿ! ಹಾರ್ದಿಕ್ ಪಾಂಡ್ಯ ಆತ್ಮಾವಲೋಕನದ ಮಾತು

Published

on

By

ಬೆಂಗಳೂರು: Indian Premier League 2026ರ ಕಣದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ Mumbai Indians ತಂಡಕ್ಕೆ ಈ ಬಾರಿ ಹಾದಿ ಅಷ್ಟು ಸುಲಭವಾಗಿಲ್ಲ. Hardik Pandya ನೇತೃತ್ವದ ತಂಡವು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಈಗ ಸತತ ಸೋಲುಗಳಿಂದ ಸಂಕಷ್ಟಕ್ಕೆ ಸಿಲುಕಿದೆ.

ಈ ಸೀಸನ್‌ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಕೇವಲ ಒಂದು ಗೆಲುವು ಸಾಧಿಸಿ, ಮೂರು ಪಂದ್ಯಗಳಲ್ಲಿ ಸೋತಿದೆ. ಇದರಿಂದ ಕೇವಲ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇತ್ತೀಚೆಗೆ Royal Challengers Bengaluru ವಿರುದ್ಧದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ತಂಡದ ಪ್ರದರ್ಶನ ಕುರಿತು ಸ್ಪಷ್ಟವಾಗಿ ಮಾತನಾಡಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಪಾಂಡ್ಯ, “ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪ್ರಸ್ತುತ ಯೋಜನೆಗಳು ಕೆಲಸ ಮಾಡುತ್ತಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಹೊಸ ಆಯ್ಕೆಗಳು ಮತ್ತು ತಂತ್ರಗಳನ್ನು ಪರಿಶೀಲಿಸಬೇಕಾಗಿದೆ” ಎಂದು ತಿಳಿಸಿದ್ದಾರೆ.

ಇನ್ನೂ, ತಂಡಕ್ಕೆ ಕೆಲವು ದಿನಗಳ ವಿರಾಮ ದೊರಕಿದ್ದು, ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಯಲಿದೆ ಎಂದು ಹೇಳಿದರು.

ಇದೀಗ ಮುಂಬೈ ಇಂಡಿಯನ್ಸ್ ಮುಂದಿನ ಏಪ್ರಿಲ್ 26ರಂದು Punjab Kings ವಿರುದ್ಧ ಕಣಕ್ಕಿಳಿಯಲಿದೆ. ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಮುಂಬೈಗೆ ಇದು ದೊಡ್ಡ ಸವಾಲಾಗಲಿದೆ.

ಮುಂಬೈ ತಂಡ ಈ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳುತ್ತದೆಯೇ ಎಂಬುದನ್ನು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

Continue Reading

ಕ್ರೀಡೆ

CSK ಮೊದಲ ಜಯದ ನಡುವೆ ವಿವಾದ: ಡಿಸಿ ತಂಡದ ಕೋಪ ಸಿಡಿತ

Published

on

By

ನವದೆಹಲಿ: Indian Premier League 2026 ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು Delhi Capitals ನಡುವಿನ ಪಂದ್ಯ ವಿವಾದಕ್ಕೆ ಕಾರಣವಾಗಿದೆ. MA Chidambaram Stadium ನಲ್ಲಿ ನಡೆದ ಈ ಪಂದ್ಯದಲ್ಲಿ ಅಂತಿಮ ಕ್ಷಣಗಳಲ್ಲಿ ಗ್ಲವ್ಸ್ ಬದಲಾವಣೆ ವಿಚಾರವಾಗಿ ಗದ್ದಲ ಉಂಟಾಯಿತು.

ಡಿಸಿ ಬ್ಯಾಟ್ಸ್‌ಮನ್ Tristan Stubbs ಗ್ಲವ್ಸ್ ಬದಲಾಯಿಸಲು ಕೇಳಿದಾಗ ನಾಲ್ಕನೇ ಅಂಪೈರ್ ಅನುಮತಿ ನಿರಾಕರಿಸಿದ ಘಟನೆ ತೀವ್ರ ಚರ್ಚೆಗೆ ಕಾರಣವಾಯಿತು. ಈ ನಿರ್ಧಾರಕ್ಕೆ ವಿರೋಧವಾಗಿ ಕೋಚ್ Hemang Badani ಹಾಗೂ ಆಟಗಾರರಾದ Nitish Rana ಮತ್ತು Karun Nair ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದರು.

ಈ ಘಟನೆ ಬಳಿಕದ ಬಾಲ್‌ನಲ್ಲೇ ಸ್ಟಬ್ಸ್ ಔಟ್ ಆಗಿದ್ದು, ಪಂದ್ಯದಲ್ಲಿ ತಿರುವು ತಂದ ಕ್ಷಣವಾಯಿತು. 38 ಎಸೆತಗಳಲ್ಲಿ 60 ರನ್ ಗಳಿಸಿದ್ದ ಸ್ಟಬ್ಸ್ ತಂಡಕ್ಕೆ ಹೋರಾಟದ ಶಕ್ತಿ ನೀಡಿದರೂ, ಅಂತಿಮವಾಗಿ ಡಿಸಿ 213 ರನ್ ಗುರಿ ಬೆನ್ನಟ್ಟುವಲ್ಲಿ ವಿಫಲವಾಯಿತು.

ಪಂದ್ಯದ ಆರಂಭದಲ್ಲಿ KL Rahul ಮತ್ತು Pathum Nissanka ಉತ್ತಮ ಆರಂಭ ನೀಡಿದರೂ, ನಂತರ ವಿಕೆಟ್‌ಗಳ ಪತನದಿಂದ ತಂಡ ಒತ್ತಡಕ್ಕೆ ಸಿಲುಕಿತು. ಚೆನ್ನೈ ಬೌಲರ್‌ಗಳು ತಂತ್ರ ಬದಲಿಸಿ, ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.

ಈ ಮೂಲಕ Chennai Super Kings ಈ ಸೀಸನ್‌ನ ಮೊದಲ ಜಯ ದಾಖಲಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದು ಸತತ ಎರಡನೇ ಸೋಲು ಆಯಿತು. ಗ್ಲವ್ಸ್ ವಿವಾದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Continue Reading

Trending