Connect with us

ಸಿನಿಮಾ

ಪ್ರಭಾಸ್‌,ವಿಷ್ಣು ಮಂಚು, ಮೋಹನ್‌ಲಾಲ್‌ ಜೊತೆ ಸ್ಕ್ರೀನ್‌ ಶೇರ್‌ಮಾಡಲಿದ್ದಾರೆ ಶಿವಣ್ಣ!

Published

on

ಪ್ರಭಾಸ್‌,ವಿಷ್ಣು ಮಂಚು, ಮೋಹನ್‌ಲಾಲ್‌ ಜತೆ ಸ್ಕ್ರೀನ್‌ ಶೇರ್‌ಮಾಡಲಿದ್ದಾರೆ ಶಿವಣ್ಣ!

ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಸಿನಿಮಾ ಕೆರಿಯರ್‌ನ ಆರಂಭದಲ್ಲಿ ಹಿಟ್‌ ಕೊಟ್ಟ ಸಿನಿಮಾಗಳ ಸಾಲಿನಲ್ಲಿ, ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾ ಸಹ ಒಂದು. 1988ರಲ್ಲಿ ತೆರೆಗೆ ಬಂದ ಈ ಸಿನಿಮಾವನ್ನು ವಿಜಯ್‌ ನಿರ್ದೇಶನ ಮಾಡಿದ್ದರೆ, ಎಸ್‌.ಎ. ಗೋವಿಂದ್‌ ರಾಜು ನಿರ್ಮಾಣ ಮಾಡಿದ್ದರು. ಶಿವಣ್ಣನ ಜೊತೆಗೆ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಗೀತಾ, ಸರಳಾ ದೇವಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ಇದೀಗ ಇದೇ ಕಣ್ಣಪ್ಪ ಮತ್ತೆ ಸುದ್ದಿಯಲ್ಲಿದೆ. ಶಿವರಾಜ್‌ಕುಮಾರ್‌ ಕಣ್ಣಪ್ಪ ಸಿನಿಮಾದಲ್ಲಿ ನಟಿಸಲಿದ್ದಾರೆ. ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ ಸಿನಿಮಾದ ಶೂಟಿಂಗ್‌ ಸದ್ಯ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿದೆ. ಸ್ಟಾರ್‌ ತಾರಾಗಣವಿರುವ ಈ ಸಿನಿಮಾ ಬಳಗಕ್ಕೀಗ ಕನ್ನಡದಿಂದ ಶಿವರಾಜ್‌ಕುಮಾರ್‌ ಸೇರ್ಪಡೆಯಾಗಿದ್ದಾರೆ.ಶಿವರಾಜ್‍ಕುಮಾರ್ ಅವರಿಗೂ, ಕಣ್ಣಪ್ಪನಿಗೂ ಬಹಳ ಹಳೆಯ ನಂಟು. ಈ ಹಿಂದೆ ಶಿವರಾಜ್‍ಕುಮಾರ್ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ , ಆ ನಂತರ ಶಿವನ ಅನುಗ್ರಹಕ್ಕೆ ಪಾತ್ರವಾಗುವ ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಪಾತ್ರವನ್ನು ತೆಲುಗಿನಲ್ಲಿ ವಿಷ್ಣು ಮಂಚು ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ಹಾಗಾದರೆ ಈ ‘ಕಣ್ಣಪ್ಪ’ ಚಿತ್ರದಲ್ಲಿ ಶಿವರಾಜ್‍ಕುಮಾರ್ ಅವರ ಪಾತ್ರವೇನು?ಸದ್ಯದ ಮಟ್ಟಿಗೆ ಆ ಕೌತುಕವನ್ನು ಚಿತ್ರತಂಡ ಎಲ್ಲಿಯೂ ರಿವೀಲ್‌ ಮಾಡಿಲ್ಲ. ಆ ಪಾತ್ರದ ವಿಶೇಷತೆಯನ್ನು ಚಿತ್ರತಂಡ ಸದ್ಯಕ್ಕೆ ರಹಸ್ಯವಾಗಿಟ್ಟಿದೆ. ಆದರೆ, ಶಿವಣ್ಣ ಅವರ ಪಾತ್ರ ಇಡೀ ಚಿತ್ರದ ಹೈಲೈಟ್‍ ಆಗಲಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅಂಬೋಣ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾ ಶೂಟಿಂಗ್‌ನಲ್ಲಿಯೂ ಶಿವಣ್ಣ ಭಾಗವಹಿಸಲಿದ್ದಾರೆ.ಮೋಹನ್‍ ಬಾಬು ನಿರ್ಮಿಸುತ್ತಿರುವ ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಾಲಾತೀತ ಕಥೆಯ ಚಿತ್ರೀಕರಣ ಈಗಾಗಲೇ ನ್ಯೂಜಿಲ್ಯಾಂಡ್‍ನಲ್ಲಿ ಪ್ರಾರಂಭವಾಗಿದೆ.

Continue Reading

ದೇಶ

ಮೆಲೊಡಿ ಟ್ರೆಂಡ್‌ಗೆ ಎಂಟ್ರಿ ಕೊಟ್ಟ ಬಾಲಿವುಡ್ ಜೋಡಿ: ಸೋನಾಕ್ಷಿ ವಿಡಿಯೋ ಸದ್ದು

Published

on

ಬಾಲಿವುಡ್ ನಟಿ Sonakshi Sinha ಮತ್ತು ಅವರ ಪತಿ Zaheer Iqbal ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೋಜಿನ ಪೋಸ್ಟ್‌ಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರುವ ‘ಮೆಲೊಡಿ’ ಮೀಮ್‌ಗೆ ಈ ಜೋಡಿ ಹೊಸ ಟ್ವಿಸ್ಟ್ ನೀಡಿದ್ದು, ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ರೀಲ್ಸ್‌ನಲ್ಲಿ, ಸೋನಾಕ್ಷಿ ತಮ್ಮ ಪತಿ ಜಹೀರ್ ಅವರನ್ನು “ನೀನು ಏನು ಕೇಳಲು ಬಯಸುತ್ತೀಯ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಜಹೀರ್, “ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅನ್ನೋದು ನಿನಗೆ ಗೊತ್ತಿದೆ” ಎಂದು ಉತ್ತರಿಸುತ್ತಾರೆ. ಆದರೆ ಸೋನಾಕ್ಷಿ ತಮಾಷೆಯಾಗಿ “ಇಲ್ಲ” ಎಂದು ಪ್ರತಿಕ್ರಿಯಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಜಹೀರ್ ತಮ್ಮ ಜೇಬಿನಿಂದ ‘ಮೆಲೊಡಿ’ ಚಾಕೊಲೇಟ್ ತೆಗೆದು “ಮೆಲೊಡಿ ತಿನ್ನು, ನೀನೇ ತಿಳಿದುಕೋ” ಎಂದು ಹೇಳುವ ದೃಶ್ಯ ಅಭಿಮಾನಿಗಳನ್ನು ನಗಿಸುವಂತಾಗಿದೆ.

ಈ ವಿಡಿಯೋ ಬಿಡುಗಡೆಯಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಹಲವರು ಈ ಜೋಡಿಯ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದು, ವೈರಲ್ ಟ್ರೆಂಡ್‌ಗೆ ತಮ್ಮದೇ ಶೈಲಿಯಲ್ಲಿ ಸ್ಪಂದಿಸಿರುವುದನ್ನು ಪ್ರಶಂಸಿಸಿದ್ದಾರೆ. ವಿಶೇಷವೆಂದರೆ, ಇವರ ಬಹುನಿರೀಕ್ಷಿತ ‘ಸಿಸ್ಟಮ್’ ಚಿತ್ರದ ಬಿಡುಗಡೆಗೂ ಮುನ್ನ ಈ ವಿಡಿಯೋ ಹೊರಬಂದಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

‘ಮೆಲೊಡಿ’ ಟ್ರೆಂಡ್ ಮೊದಲು ಪ್ರಧಾನಿ Narendra Modi ಮತ್ತು ಇಟಲಿ ಪ್ರಧಾನಿ Giorgia Meloni ಅವರ ವೈರಲ್ ಫೋಟೋಗಳಿಂದ ಹುಟ್ಟಿಕೊಂಡಿತ್ತು. ಬಳಿಕ #Melodi ಹ್ಯಾಶ್‌ಟ್ಯಾಗ್ ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಆಗಿ, ಇದೀಗ ಸಿನಿಮಾ ಮತ್ತು ಮನರಂಜನಾ ವಲಯಕ್ಕೂ ವ್ಯಾಪಿಸಿದೆ.

Continue Reading

ದೇಶ

‘ಜೋರಾಗಿ ಸಾರಿ ಹೇಳಿ!’ ಪಾಪರಾಜಿಗಳನ್ನು ಕಿಚಾಯಿಸಿದ ಸಲ್ಮಾನ್

Published

on

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟ Salman Khan ಮತ್ತು ಪಾಪರಾಜಿಗಳ ನಡುವಿನ ಸಂಬಂಧ ಮತ್ತೆ ಸುದ್ದಿಯಾಗಿದೆ. ಮುಂಬೈನ ಆಸ್ಪತ್ರೆಯೊಂದರ ಹೊರಗೆ ನಡೆದ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟಿಕೊಂಡಿತ್ತು. ಆದರೆ, ಇದೀಗ ಅದೇ ವಿಚಾರ ಸ್ನೇಹಪೂರ್ಣ ತಿರುವು ಪಡೆದುಕೊಂಡಿದೆ.

ಮರಾಠಿ ಸಿನಿಮಾ Raja Shivaji ಯಶಸ್ಸಿನ ಸಮಾರಂಭದಲ್ಲಿ ಸಲ್ಮಾನ್ ಖಾನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅಲ್ಲಿದ್ದ ಫೋಟೋಗ್ರಾಫರ್‌ಗಳು ಒಂದೇ ಸ್ವರದಲ್ಲಿ “ಸಾರಿ ಸರ್” ಎಂದು ಕೂಗಿ ಕ್ಷಮೆಯಾಚಿಸಿದರು. ಇದನ್ನು ಕೇಳಿದ ಸಲ್ಮಾನ್ ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, “ಜೋರಾಗಿ ಸಾರಿ ಹೇಳಿ” ಎಂದು ಕಿಚಾಯಿಸಿದರು. ನಟ Riteish Deshmukh ಕೂಡ ಈ ಕ್ಷಣವನ್ನು ನೋಡಿ ನಗುವುದರಲ್ಲಿ ತೊಡಗಿಕೊಂಡರು.

ಇದಕ್ಕೂ ಮುನ್ನ ಸಲ್ಮಾನ್ ಖಾನ್ ತಮ್ಮ ಆತ್ಮೀಯರನ್ನು ಭೇಟಿ ಮಾಡಲು ಮುಂಬೈನ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಕೆಲ ಪಾಪರಾಜಿಗಳು ಅವರ ಹೆಸರನ್ನು ಕೂಗಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದರು. ಇದರಿಂದ ಅಸಮಾಧಾನಗೊಂಡ ನಟ, ಆಸ್ಪತ್ರೆಗಳಂತಹ ಖಾಸಗಿ ಸ್ಥಳಗಳಲ್ಲಿ ಗೌಪ್ಯತೆಯನ್ನು ಕಾಪಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಇದೇ ವೇಳೆ ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ “Alone” ಮತ್ತು “Lonely” ಕುರಿತ ಚಿಂತನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ. “ಒಂಟಿತನ ನಮ್ಮ ಆಯ್ಕೆ ಆಗಿರಬಹುದು. ಆದರೆ ಯಾರೂ ನಮ್ಮ ಜೊತೆ ಇರಲು ಬಯಸದಾಗ ಅದು ನಿಜವಾದ ನೋವು” ಎಂದು ಅವರು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ನಟಿ Sneha Ullal ಸಹ ಹಾಸ್ಯಮಯ ಕಾಮೆಂಟ್ ಮಾಡಿದ್ದು ವೈರಲ್ ಆಗಿದೆ.

ಸದ್ಯ ಸಲ್ಮಾನ್ ಖಾನ್ ಅವರ ಮುಂಬರುವ Kick 2, Tiger vs Pathaan ಹಾಗೂ Sikandar ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.

Continue Reading

ದೇಶ

‘ಪೆದ್ದಿ’ ಟ್ರೇಲರ್‌ಗೆ ರಿಷಬ್ ಶೆಟ್ಟಿ ಫಿದಾ: “ರಾಮ್ ಚರಣ್ ಆ್ಯಬ್ಸಲ್ಯೂಟ್ ಫೈರ್”

Published

on

ಬೆಂಗಳೂರು: Rishab Shetty ಅಭಿನಯದ ‘ಕಾಂತಾರ’ ಬಳಿಕ ದೇಶವ್ಯಾಪಿ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ, ಇದೀಗ Peddi ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ram Charan ಹಾಗೂ Shiva Rajkumar ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಆ್ಯಕ್ಷನ್–ಸ್ಪೋರ್ಟ್ಸ್ ಡ್ರಾಮಾ ಜೂನ್ 4, 2026ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಮೇ 18ರಂದು ಸಂಜೆ ಮುಂಬೈನ Jio World Driveನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.

“ಪ್ರತಿ ಫ್ರೇಮ್‌ನಲ್ಲೂ ರಾಮ್ ಚರಣ್ ಫೈರ್”

ಟ್ರೇಲರ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, “ಪೆದ್ದಿ ಟ್ರೇಲರ್ ಅದ್ಭುತವಾಗಿದೆ. ರಾಮ್ ಚರಣ್ ಪ್ರತಿಯೊಂದು ಫ್ರೇಮ್‌ನಲ್ಲೂ ಸ್ಟನ್ನಿಂಗ್ ಆಗಿ ಕಾಣಿಸುತ್ತಿದ್ದಾರೆ. ಅವರು ಆ್ಯಬ್ಸಲ್ಯೂಟ್ ಫೈರ್” ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಶಿವರಾಜ್‌ಕುಮಾರ್ ಅವರ ಸ್ಕ್ರೀನ್ ಪ್ರೆಸೆನ್ಸ್ ಚಿತ್ರಕ್ಕೆ ಭವ್ಯತೆ ತಂದಿದೆ ಎಂದು ಶ್ಲಾಘಿಸಿದ ಅವರು, Janhvi Kapoor ಅಭಿನಯವನ್ನೂ ಮೆಚ್ಚಿಕೊಂಡಿದ್ದಾರೆ.

ಶಿವಣ್ಣ ಪಾತ್ರಕ್ಕೂ ಭಾರೀ ಮೆಚ್ಚುಗೆ

ಟ್ರೇಲರ್ ಬಿಡುಗಡೆಗೂ ಮುನ್ನ ಶಿವರಾಜ್‌ಕುಮಾರ್ ನಿರ್ವಹಿಸಿರುವ “ಗೌರ್ನಾಯ್ಡು” ಪಾತ್ರದ ಪರಿಚಯ ವಿಡಿಯೋ ಕೂಡ ಬಿಡುಗಡೆಯಾಗಿತ್ತು. ಟ್ರೇಲರ್‌ನಲ್ಲಿ ಶಿವಣ್ಣನ ಸ್ಟೈಲಿಶ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ಟ್ರೇಲರ್‌ನಲ್ಲಿ ಏನಿದೆ?

3 ನಿಮಿಷ 7 ಸೆಕೆಂಡ್ ಅವಧಿಯ ಟ್ರೇಲರ್‌ನಲ್ಲಿ ರಾಮ್ ಚರಣ್ ಹಲವು ಕ್ರೀಡಾಂಗಣಗಳಲ್ಲಿ ಮಿಂಚುತ್ತಿರುವ ದೃಶ್ಯಗಳಿವೆ. ಕುಸ್ತಿ, ಕ್ರಿಕೆಟ್ ಹಾಗೂ ಓಟ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಅವರ ಪಾತ್ರವನ್ನು ತೋರಿಸಲಾಗಿದೆ.

ಒಂದು ದೃಶ್ಯದಲ್ಲಿ Boman Irani, ರಾಮ್ ಚರಣ್ ಅವರನ್ನು “ಭಾರತದ ಕ್ರಾಸ್ ಅಥ್ಲೀಟ್” ಎಂದು ಹೊಗಳುತ್ತಾರೆ.

ಗ್ರಾಮೀಣ ಹಿನ್ನೆಲೆಯ ಕಥೆಯಲ್ಲಿ Divyendu Sharma ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬುಚಿ ಬಾಬು ಸನಾ ನಿರ್ದೇಶನ

ಚಿತ್ರವನ್ನು Buchi Babu Sana ನಿರ್ದೇಶಿಸಿದ್ದು, A. R. Rahman ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಚಿತ್ರವನ್ನು ವೆಂಕಟ್ ಸತೀಶ್ ಕಿಲಾರು ನಿರ್ಮಿಸಿದ್ದು, Mythri Movie Makers ಮತ್ತು Sukumar Writings ಪ್ರಸ್ತುತಪಡಿಸುತ್ತಿವೆ.

Continue Reading

Trending