ಬೆಂಗಳೂರು
ನಕಲಿ ಸ್ವಾಮಿ ಎಂದ ಡಿಕೆಶಿಗೆ ಜೆಡಿಎಸ್ ತಿರುಗೇಟು ರಕ್ತ ಹೀರುವ ವ್ಯಕ್ತಿ ಎಂದು ಆಕ್ರೋಶ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಕಲಿ ಸ್ವಾಮಿ ಎಂದು ಕರೆದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಜೆಡಿಎಸ್ ತೀವ್ರ ಟೀಕಾಪ್ರಹಾರ ನಡೆಸಿದೆ. ಈ ವ್ಯಕ್ತಿ ರಾಜ್ಯದ ಉಪ ಮುಖ್ಯಮಂತ್ರಿ. ಅದೇ ಕನ್ನಡಿಗರ ಪಾಲಿನ ದೌರ್ಭಾಗ್ಯ ಎಂದು ಜೆಡಿಎಸ್ ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದೆ.
ಐಟಿ ದಾಳಿಯಲ್ಲಿ ಪತ್ತೆಯಾದ ಹಣ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ಗೆ ಸೇರಿದ್ದು, SST, YST ಕಲೆಕ್ಷನ್ ಎಂದು ಬಿಜೆಪಿ ಮತ್ತು ಕುಮಾರಸ್ವಾಮಿ ಅವರು ಸೋಮವಾರ ವಾಗ್ದಾಳಿ ನಡೆಸಿದ್ದರು. ಅದರ ಬೆನ್ನಿಗೇ ಡಿ.ಕೆ. ಶಿವಕುಮಾರ್ ಅವರು ನಕಲಿ ಸ್ವಾಮಿ, ಲೂಟಿ ರವಿ, ಹೀಗೆ ಎಲ್ಲ ಬಣ್ಣ ಬಯಲು ಮಾಡುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಬಾಣ ಬಿಟ್ಟಿದೆ ಜೆಡಿಎಸ್.
ಅವರು ರಾಜ್ಯಕ್ಕೆ ಉಪ ಮುಖ್ಯಮಂತ್ರಿ. ಅವರನ್ನು ‘ಮೂರ್ಖ ಶಿಖಾಮಣಿ ‘ ಎನ್ನುವುದು ತರವಲ್ಲ. ಅಸಲಿಗೆ, ಹಾಗೆಂದು ಹೇಳಲು ನಮಗೂ ಇಷ್ಟವಿಲ್ಲ ಬಿಡಿ. ಲೂಟಿಯನ್ನೇ ನಿತ್ಯಕಾಯಕ, ದಂಧೆಯನ್ನೇ ದಿನವಹಿ ಧನಾರ್ಜನೆಗೆ ರಹದಾರಿ ಮಾಡಿಕೊಂಡಿರುವ, ಕಂಡ ಕಂಡವರ ಜಮೀನುಗಳಿಗೆ ಬೇಲಿ ಬಿಗಿದು ಅವರ ರಕ್ತ ಹಿರುತ್ತಿರುವ ವ್ಯಕ್ತಿ ರಾಜ್ಯಕ್ಕೆ ಉಪ ಮುಖ್ಯಮಂತ್ರಿ!! ಇದಲ್ಲವೇ ಕನ್ನಡಿಗರ ದೌರ್ಭಾಗ್ಯ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದೆ ಜೆಡಿಎಸ್.
ಅವರ ‘ಅಂತ್ಯವಿಲ್ಲದ ಹೈ ಕಮಾಂಡ್ ಕೃಪಾಪೋಷಿತ ಅಕ್ರಮ’ಗಳಿಗೆ ಕೊನೆ ಎಂಬುದಿಲ್ಲವೇ? ಎಂದು ಜನ ಕೇಳುತ್ತಿದ್ದಾರೆ. ಕೊನೆ ಇದೆ, ಇದ್ದೇ ಇರುತ್ತದೆ.. ಕಾಯಬೇಕಷ್ಟೇ. ವಾಕ್ಯ ಎಂದ ಮೇಲೆ ಪುಲ್ ಸ್ಟಾಪ್ ಇರಲೇಬೇಕು ಎಂದು ಜೆಡಿಎಸ್ ಮಾರ್ಮಿಕವಾಗಿ ಹೇಳಿದೆ.
ಕರ್ನಾಟಕವನ್ನು ಹೈ ಕಮಾಂಡ್ ಗೆ ಒತ್ತೆ ಇಟ್ಟ ಭೂಪತಿ, ಆಧುನಿಕ ಈಸ್ಟ್ ಇಂಡಿಯಾ ಕಂಪನಿಗಳ ಪೊಲಿಟಿಕಲ್ ಏಜೆಂಟ್, ಕರುನಾಡಿನ ಕರೋಡ್ ಪತಿ, ಬದುಕೆಲ್ಲ ಬ್ರೋಕರೇಜ್ ಮಾಡಿಕೊಂಡೇ ಕೊಳ್ಳೆ ಹೊಡೆದ ವ್ಯಕ್ತಿ, ಈಗ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುವುದೇ? ಅರೆರೆ.. ಇವರ SST, YST ಅಬ್ಬರ ಕಂಡು GSTಯೇ ಬೆಚ್ಚಿದೆ. ಇದೇ ನೋಡಿ ಕರ್ನಾಟಕದ ಮಾದರಿ! ಎಂದು ಜೆಡಿಎಸ್ ಕಿಡಿಕಾರಿದೆ.
ಕಾಂಗ್ರೆಸ್ ಪಕ್ಷವೇ ಪರ್ಸಂಟೇಜ್ ಪಟಾಲಂ. ಕಮೀಷನ್ ಕೈಂಕರ್ಯವೇ ಅದರ ರಾಜಧರ್ಮ. ಲೂಟಿ, ದಂಧೆ, ಅಕ್ರಮವೇ ಅದರ ಗ್ಯಾರಂಟಿ. ಅನ್ಯರಾಜ್ಯಗಳ ಚುನಾವಣೆ ಇವರಿಗೆ ಚಿನ್ನದ ಗಣಿ. ಹೈಕಮಾಂಡ್ ಆಸರೆಯೇ ಅಕ್ಷಯ ಪಾತ್ರೆ.. ಇಂಥವರಿಗೆ ಕುಮಾರಸ್ವಾಮಿಯವರ ಕೂಗು ಕೇಳುವುದೇ? ಇಲಾಖೆಗೊಂದು ಹಿಟಾಚಿ ಇಟ್ಟುಕೊಂಡು 24X7 ಬಾಚುತ್ತಿದ್ದಾರೆ ಎಂದು ಜೆಡಿಎಸ್ ಕೈ ಪಕ್ಷದ ವಿರುದ್ಧ ಆರೋಪ ಮಾಡಿದೆ.
ಸ್ವತಃ ತಾನೇ ಕೊಳೆತು ನಾರುತ್ತಿದೆ. ಆದರೆ, ಪಕ್ಕದ ಮನೆ ಕಂಪೌಂಡಿನ ಮೇಲೆ ಮರದೆಲೆ ಬಿದ್ದಿದೆ ಎಂದು ಕಾಂಗ್ರೆಸ್ ಅಂಗೈ ಪರಚಿಕೊಳ್ಳುತ್ತಿದೆ. ಪರಚಿಕೊಳ್ಳುವುದರ ಜತೆಗೆ, ಕರ್ನಾಟಕವನ್ನೇ ಪಾಪರ್ ಮಾಡುವುದೇ ಪರ್ಸಂಟೇಜ್ ಪಟಾಲಂ ಹಾಕಿಕೊಂಡಿರುವ ಏಕೈಕ ಗುರಿ. ಅದರ ಪಾಲಿಗೆ ಹೈ ಕಮಾಂಡ್ ಸೇವೆಯೇ ಆನಂದದಾಯಕ ಸೇವೆ! ಕಾಲಕ್ಕೆ ತಕ್ಕ ಕಾಂಗ್ರೆಸ್!! ಎಂದು ಆ ಪಕ್ಷದ ಕಾಲೆಳೆದಿದೆ ಜೆಡಿಎಸ್.
ದೇಶ
‘ನೀಟ್ ಅಕ್ರಮಕ್ಕೆ ಮೋದಿ-ಧರ್ಮೇಂದ್ರ ಪ್ರಧಾನ್ ಹೊಣೆ’: CM ಸಿದ್ದರಾಮಯ್ಯ
ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ NEET ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಪ್ರಧಾನಿ Narendra Modi ಹಾಗೂ ಕೇಂದ್ರ ಶಿಕ್ಷಣ ಸಚಿವ Dharmendra Pradhan ನೇರ ಹೊಣೆ ಹೊರಬೇಕು ಎಂದು ಮುಖ್ಯಮಂತ್ರಿ Siddaramaiah ಒತ್ತಾಯಿಸಿದರು.
ಬೆಂಗಳೂರಿನ Freedom Park ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, “ಈ ಹಿಂದೆ ರಾಜ್ಯಗಳು ತಮ್ಮದೇ CET ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿದ್ದರು. ಆದರೆ 2016ರಲ್ಲಿ ಮೋದಿ ಸರ್ಕಾರ ಬಲವಂತವಾಗಿ NEET ಜಾರಿಗೆ ತಂದ ಬಳಿಕ ಅಕ್ರಮಗಳು ಹೆಚ್ಚಾಗಿವೆ” ಎಂದು ಆರೋಪಿಸಿದರು.
“ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯ ವಿಷಯ. ರಾಜ್ಯಗಳಿಗೆ ಸ್ವಾಯತ್ತತೆ ಇರಬೇಕು. ಆದರೆ ಕೇಂದ್ರ ಸರ್ಕಾರ ಎಲ್ಲಾ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡ ಪರಿಣಾಮ ಇಂತಹ ಹಗರಣಗಳು ಮರುಕಳಿಸುತ್ತಿವೆ” ಎಂದು ಅವರು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ವರ್ಷವಿಡೀ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ ಪೇಪರ್ ಲೀಕ್ ಮೂಲಕ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಸಿಎಂ, “ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹತಾಶರಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಬಿಜೆಪಿ ಆಡಳಿತದಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ PSI ನೇಮಕಾತಿ ಹಗರಣವನ್ನೂ ಉಲ್ಲೇಖಿಸಿದರು. “ದೇಶದ ಯುವಜನತೆ ಆಕ್ರೋಶದಲ್ಲಿದ್ದರೂ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ” ಎಂದು ಟೀಕಿಸಿದರು.
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ದೊರೆಯುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ದೇಶ
ಪೆಟ್ರೋಲ್-ಡಿಸೇಲ್ ತೆರಿಗೆ ಕಡಿತಕ್ಕೆ ಸಿಎಂ ಸ್ಪಷ್ಟ ನಕಾರ
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಕುರಿತು ಚರ್ಚೆಗಳು ತೀವ್ರವಾಗಿರುವ ನಡುವೆ ಮುಖ್ಯಮಂತ್ರಿ Siddaramaiah ರಾಜ್ಯ ಸರ್ಕಾರ ಇಂಧನ ಮೇಲಿನ ತೆರಿಗೆಯನ್ನು ಕಡಿತ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಿಸಿದರೆ ನಾವು ತೆರಿಗೆ ಕಡಿಮೆ ಮಾಡಬೇಕಾ? ಅವರು ಬೆಲೆ ಏರಿಕೆ ಮಾಡಿದಾಗ ಯಾಕೆ ಪ್ರಶ್ನೆ ಕೇಳುವುದಿಲ್ಲ?” ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಕೇಂದ್ರ ಸರ್ಕಾರವೇ ಎಂದು ಆರೋಪಿಸಿದರು.
ಮುಂದುವರಿದು ಅವರು, “Narendra Modi ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮತ್ತು ಡಿಸೇಲ್ ದರ ಎಷ್ಟು ಇತ್ತು? ಮಾಜಿ ಪ್ರಧಾನಿ Manmohan Singh ಅವಧಿಯಲ್ಲಿ ಪೆಟ್ರೋಲ್ ₹70 ಮತ್ತು ಡಿಸೇಲ್ ₹48 ಇತ್ತು. ಗ್ಯಾಸ್ ಸಿಲಿಂಡರ್ ಬೆಲೆ ₹414 ಇತ್ತು. ಈಗ ದರ ಎಷ್ಟು ಏರಿದೆ ಎಂಬುದನ್ನು ಜನರು ಗಮನಿಸಬೇಕು” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಜನರಿಗೆ ಯಾವುದೇ ನೆರವು ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಕೇಂದ್ರ ಸರ್ಕಾರ ದರ ಹೆಚ್ಚಿಸಿದಾಗ ಅವರ ವಿರುದ್ಧ ಪ್ರಶ್ನೆ ಕೇಳುವುದಿಲ್ಲ. ಆದರೆ ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಬೇಕೆಂದು ಕೇಳುತ್ತೀರಿ. ನಿಮ್ಮ ಪ್ರಶ್ನೆಗಳಲ್ಲೇ ಕೇಂದ್ರ ಸರ್ಕಾರದ ಪರ ನಿಲುವು ಕಾಣಿಸುತ್ತದೆ” ಎಂದು ಮಾಧ್ಯಮಗಳ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಇಂಧನ ದರ ಏರಿಕೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ.
ದೇಶ
‘ಹೈದರಾಬಾದ್‌ನಲ್ಲಿ ಗುಂಡಿಗಳೇ ಇಲ್ಲ, ಬೆಂಗಳೂರಿನಲ್ಲಿ ಯಾಕೆ?’: ವಿದೇಶಿಗನ ಪ್ರಶ್ನೆ ವೈರಲ್
ಹೈದರಾಬಾದ್: Bengaluru ನಗರದ ಟ್ರಾಫಿಕ್ ಮತ್ತು ರಸ್ತೆ ಸಮಸ್ಯೆಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈ ಬಾರಿ ಕೆನಡಾ ಮೂಲದ ಕ್ಯಾಲೆಬ್ ಫ್ರೀಸೆನ್ ಎಂಬುವವರು Hyderabad ನಗರದ ರಸ್ತೆಗಳನ್ನು ಹೊಗಳಿ, ಬೆಂಗಳೂರಿನ ಮೂಲಸೌಕರ್ಯವನ್ನು ಪ್ರಶ್ನಿಸಿರುವ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ X ನಲ್ಲಿ ವಿಡಿಯೋ ಹಂಚಿಕೊಂಡಿರುವ ಕ್ಯಾಲೆಬ್, “ಹೈದರಾಬಾದ್‌ನಲ್ಲಿ ರಸ್ತೆಗಳು ಅತ್ಯುತ್ತಮವಾಗಿವೆ. ನಗರದ ಮಧ್ಯಭಾಗದಲ್ಲಿದ್ದರೂ ಸಂಚಾರ ಸುಲಭವಾಗಿದೆ. ಎಲ್ಲೆಡೆ ಉತ್ತಮ ರಸ್ತೆ ಸಂಪರ್ಕವಿದ್ದು, ಗುಂಡಿಗಳ ಸಮಸ್ಯೆ ಕಾಣುತ್ತಿಲ್ಲ” ಎಂದು ಹೇಳಿದ್ದಾರೆ.
ಮುಂದುವರಿದು ಅವರು, “ಇಲ್ಲಿ ರಸ್ತೆಗಳ ಮೇಲೆ ಪ್ರಾಣಿಗಳ ಓಡಾಟ ಇಲ್ಲ, ಪಾದಚಾರಿಗಳು ಹಠಾತ್ ವಾಹನಗಳ ಮುಂದೆ ಬರುತ್ತಿಲ್ಲ. ಹೈದರಾಬಾದ್‌ನಲ್ಲಿ ಇಷ್ಟು ಉತ್ತಮ ರಸ್ತೆ ವ್ಯವಸ್ಥೆ ಇರುವಾಗ ಬೆಂಗಳೂರಿನಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಹೈದರಾಬಾದ್‌ನಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಇರುವುದನ್ನೂ ಅವರು ಮೆಚ್ಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ‘ಬೆಂಗಳೂರು Vs ಹೈದರಾಬಾದ್’ ಚರ್ಚೆ ಜೋರಾಗಿದೆ. ಹಲವರು ಬೆಂಗಳೂರಿನಲ್ಲಿ ಯೋಜಿತ ರಸ್ತೆ ಅಭಿವೃದ್ಧಿ ಹಾಗೂ ಪರಿಣಾಮಕಾರಿ ಟ್ರಾಫಿಕ್ ನಿರ್ವಹಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಬಿಬಿಎಂಪಿ ಆಡಳಿತದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಬೆಂಗಳೂರು ಪರವಾಗಿ ಪ್ರತಿಕ್ರಿಯಿಸಿದ ಕೆಲ ನೆಟ್ಟಿಗರು, “ಎಲ್ಲಾ ನಗರಗಳಲ್ಲೂ ಒಳ್ಳೆಯ ಮತ್ತು ಕೆಟ್ಟ ರಸ್ತೆಗಳು ಇರುತ್ತವೆ. ಹೈದರಾಬಾದ್‌ನ ಪ್ರಮುಖ ಪ್ರದೇಶಗಳನ್ನು ನೋಡಿ ಮಾತ್ರ ಇಂತಹ ಅಭಿಪ್ರಾಯ ನೀಡಲಾಗಿದೆ” ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಹೈದರಾಬಾದ್ ನಿವಾಸಿಯೊಬ್ಬರು, “ದಯವಿಟ್ಟು ನಮ್ಮ ನಗರವನ್ನು ಇಷ್ಟು ಹೊಗಳಬೇಡಿ. ಇಲ್ಲದಿದ್ದರೆ ಬೆಂಗಳೂರಿನಂತೆ ಮನೆ ಬಾಡಿಗೆಗಳು ಏರಿಬಿಡುತ್ತವೆ” ಎಂದು ಹಾಸ್ಯಭರಿತ ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ರಸ್ತೆ ಅಭಿವೃದ್ಧಿ ಮತ್ತು ನಗರ ಯೋಜನೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
-
ಕ್ರೀಡೆ7 hours agoಹಾಂಗ್ ಕಾಂಗ್ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್ಶಿಪ್ಗೆ ಕರ್ನಾಟಕದ ಇಬ್ಬರು ಆಯ್ಕೆ
-
ದೇಶ11 hours ago59 ವರ್ಷಗಳ ಬಳಿಕ ತಮಿಳುನಾಡು ಸಚಿವ ಸಂಪುಟಕ್ಕೆ ಕಾಂಗ್ರೆಸ್ ಎಂಟ್ರಿ! ಇಂದು ವಿಜಯ್ ಕ್ಯಾಬಿನೆಟ್ ವಿಸ್ತರಣೆ
-
ದೇಶ11 hours agoಬಿಜೆಪಿಗಿಂತ ವೇಗವಾಗಿ ಬೆಳೆದ ‘Cockroach Janta Party’!
-
ದೇಶ5 hours ago“ನಾವು ಯಾರೂ ಸುರಕ್ಷಿತರಲ್ಲ”: ಮುಂದಿನ ಮಹಾಮಾರಿಯ ಬಗ್ಗೆ ಜಾಗತಿಕ ವರದಿ ಆತಂಕ
-
ದೇಶ5 hours agoCockroach Janata Party ಖಾತೆ ತಡೆ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ
-
ಅಪರಾಧ9 hours agoLatest : ನಿಪ್ಪಾಣಿಯಲ್ಲಿ ಆಶ್ರಯ ಮನೆ ಹಂಚಿಕೆ ವೇಳೆ ಗಲಾಟೆ: ಕಣ್ಣೀರಿಟ್ಟ ಶಾಸಕಿ ಶಶಿಕಲಾ ಜೊಲ್ಲೆ
-
ದೇಶ9 hours agoಮೆಲೊಡಿ ಟ್ರೆಂಡ್ಗೆ ಎಂಟ್ರಿ ಕೊಟ್ಟ ಬಾಲಿವುಡ್ ಜೋಡಿ: ಸೋನಾಕ್ಷಿ ವಿಡಿಯೋ ಸದ್ದು
-
ದೇಶ9 hours ago‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯಾದರೆ ₹7 ಲಕ್ಷ ಕೋಟಿ ಉಳಿತಾಯ: ಜೆಪಿಸಿ ಸಮಿತಿ
