Connect with us

ಸಿನಿಮಾ

33 ವರ್ಷಗಳ ಬಳಿಕ ಒಂದಾದ ಬಿಗ್‌ಬಿ, ರಜನಿಕಾಂತ್‌

Published

on

33 ವರ್ಷಗಳ ಬಳಿಕ ಒಂದಾದ ಬಿಗ್‌ಬಿ, ರಜನಿಕಾಂತ್‌

ತಲೈವರ್‌ 170 ಸಿನಿಮಾದ ಕುರಿತು ರಜನಿಕಾಂತ್‌ ಹೊಸ ಅಪ್‌ಡೇಟ್‌ ನೀಡಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್‌ ಜತೆ ನಟಿಸುವ ಕುರಿತು ಅಧಿಕೃತವಾಗಿ ಎಕ್ಸ್‌ನಲ್ಲಿ ರಜನಿಕಾಂತ್‌ ಪೋಸ್ಟ್‌ ಮಾಡಿದ್ದಾರೆ. “ಸುಮಾರು 33 ವರ್ಷಗಳ ಬಳಿಕ ನನ್ನ ಗುರು, ನನ್ನ ಮಾರ್ಗದರ್ಶಕರು, ಶ್ರೀ ಅಮಿತಾಬ್‌ ಬಚ್ಚನ್‌ ಜತೆ ಲೈಕಾದ ತಲೈವರ್‌ 170 ಚಿತ್ರದಲ್ಲಿ ಮತ್ತೆ ಕೆಲಸ ಮಾಡುತ್ತಿದ್ದೇನೆ. ಇದು ಟಿಜೆ ಗುಣವೇಲು ನಿರ್ದೇಶನದ ಚಿತ್ರ. ನನ್ನ ಹೃದಯ ಖುಷಿಯಿಂದ ಮಿಡಿಯುತ್ತಿದೆ” ಎಂದು ರಜನಿಕಾಂತ್‌ ಟ್ವೀಟ್‌ ಮಾಡಿದ್ದಾರೆ.ರಜನಿಕಾಂತ್‌ ಮತ್ತು ಅಬಿತಾಬ್‌ ಬಚ್ಚನ್‌ ಜತೆಯಾಗಿ ಸಿನಿಮಾ ಮಾಡಿ ಬರೋಬ್ಬರಿ 33 ವರ್ಷಗಳು ಕಳೆದಿವೆ. ಇವರು 1991ರಲ್ಲಿ ಕೊನೆಯ ಬಾರಿ ಫ್ಯಾಮಿಲಿ ಡ್ರಾಮಾ ಹಮ್‌ನಲ್ಲಿ ಜತೆಯಾಗಿ ನಟಿಸಿದ್ದರು. ತಲೈವರ್‌ ಚಿತ್ರದಲ್ಲಿ ಮತ್ತೆ ಇವರು ಒಂದಾಗಲಿದ್ದಾರೆ.
ತಲೈವರ್‌ 170 ಎನ್ನುವುದು ಸಿನಿಮಾದ ಹೆಸರಲ್ಲ. ಇದು ತಲೈವಾ ರಜನಿಕಾಂತ್‌ರ 170ನೇ ಚಿತ್ರ ಎಂದು ಅರ್ಥ. ಮುಂಬರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದ ಕುರಿತು ಮಾರ್ಚ್‌ ತಿಂಗಳಲ್ಲಿ ಲೈಕಾ ಪ್ರೊಡಕ್ಷನ್‌ ಅಪ್‌ಡೇಟ್‌ ನೀಡಿತ್ತು. ಇದು ಜ್ಞಾನವೇಲು ಅವರ ನಿರ್ದೇಶನದ ಚಿತ್ರ. ತಲೈವಾರ 170ರ ಚಿತ್ರ. “ನನ್ನ 170ನೇ ಸಿನಿಮಾವನ್ನು ಜ್ಞಾನವೇಲು ನಿರ್ದೇಶಿಸಲಿದ್ದಾರೆ. ಸಾಮಾಜಿಕ ಸಂದೇಶದೊಂದಿಗೆ ಈ ಚಿತ್ರ ಪ್ರಮುಖ ಮನರಂಜನಾ ಚಿತ್ರವಾಗಿರಲಿದೆ” ಎಂದು ರಜನಿಕಾಂತ್‌ ಇತ್ತೀಚೆಗೆ ಮಾಹಿತಿ ನೀಡಿದ್ದರು.ಸೂಪರ್‌ಸ್ಟಾರ್‌ ರಜನಿಕಾಂತ್‌ ಮುಂದಿನ ಚಿತ್ರ ತಲೈವರ್‌ 170ನಲ್ಲಿ ಪ್ರಮುಖ ನಟ ನಟಿಯರ ದಂಡೇ ಇದೆ. ಈಗಾಗಲೇ ಚಿತ್ರತಂಡವು ಹಲವು ಪ್ರಮುಖ ನಟರ ಹೆಸರನ್ನು ಘೋಷಿಸಿದೆ. ಮಲಯಾಳದ ಪ್ರಮುಖ ನಟ ಫಹಾದ್‌ ಫಾಸಿಲ್‌ ತಲೈವಾರ್‌ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಈಗಾಗಲೇ ಲೈಕಾ ಘೋಷಿಸಿದೆ. ಈ ಹಿಂದೆ ಬಾಹುಬಲಿ ನಟ ರಾಣಾ ದಗ್ಗುಬಟ್ಟಿ, ಮಂಜು ವಾರಿಯರ್, ರಿತಿಕಾ ಸಿಂಗ್ ಮತ್ತು ದುಶಾರಾ ವಿಜಯನ್ ಈ ಸಿನಿಮಾ ತಂಡಕ್ಕೆ ಸೇರ್ಪಡೆಯಾಗಿದ್ದರು. ಒಟ್ಟಾರೆ, ಇದು ಪ್ಯಾನ್‌ ಇಂಡಿಯಾದ ಪ್ರಮುಖ ಚಿತ್ರವಾಗುವ ನಿರೀಕ್ಷೆಯಿದೆ.

Continue Reading

ದೇಶ

‘ನಮಸ್ಕಾರ ಬೆಂಗಳೂರು’ ಎಂದೇ ಕನ್ನಡದಲ್ಲಿ ಮಾತು ಆರಂಭಿಸಿದ ಹುಮಾ ಖುರೇಷಿ; ‘ಟಾಕ್ಸಿಕ್’ ಬಗ್ಗೆ ಕೊಟ್ಟ ಹೊಸ ಅಪ್ಡೇಟ್

Published

on

ಬೆಂಗಳೂರು, ಜು.8: ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ ಬೆಂಗಳೂರಿಗೆ ಭೇಟಿ ನೀಡಿ ತಮ್ಮ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಹಾಗೂ ತಮ್ಮದೇ ನಿರ್ಮಾಣದ ‘ಬೇಬಿ ಡು ಡೈ ಡು’ ಚಿತ್ರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. “ನಮಸ್ಕಾರ ಬೆಂಗಳೂರು… ಅಲ್ಪ ಸ್ವಲ್ಪ ಕನ್ನಡ ಗೊತ್ತು” ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಅವರು, ನೆರೆದಿದ್ದವರಿಂದ ಭರ್ಜರಿ ಚಪ್ಪಾಳೆ ಗಳಿಸಿದರು.

ತಮ್ಮ ಸಹೋದರ ಸಾಕಿಬ್ ಸಲೀಮ್ ಅವರೊಂದಿಗೆ ನಿರ್ಮಿಸಿರುವ ‘ಬೇಬಿ ಡು ಡೈ ಡು’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಹುಮಾ, ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ ದಾಸ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸಿದರು. “ನಮ್ಮ ಸಣ್ಣ ಬಜೆಟ್ ಚಿತ್ರದ ಬಗ್ಗೆ ಯಶ್ ಮತ್ತು ಗೀತೂ ಮೋಹನ್ ದಾಸ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೋರಿ ಹಂಚಿಕೊಂಡಿದ್ದರು. ಅವರ ಬೆಂಬಲದಿಂದ ಬೆಂಗಳೂರಿನಲ್ಲಿ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ದೊರೆತು, ಪ್ರದರ್ಶನಗಳ ಸಂಖ್ಯೆಯೂ ಹೆಚ್ಚಾಯಿತು” ಎಂದು ಹೇಳಿದರು.

‘ಗ್ಯಾಂಗ್ಸ್ ಆಫ್ ವಾಸಿಪುರ್’ ಖ್ಯಾತಿಯ ಹುಮಾ, ‘ಬೇಬಿ ಡು ಡೈ ಡು’ ಚಿತ್ರದಲ್ಲಿ ಕಿವುಡ ಮತ್ತು ಮೂಗಿಯಾದ ಹಿಟ್‌ವುಮನ್ ‘ಬೇಬಿ ಕರ್ಮಾಕರ್’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕಾಗಿ ಸನ್ನೆ ಭಾಷೆಯ ತಜ್ಞರಿಂದ ವಿಶೇಷ ತರಬೇತಿ ಪಡೆದಿದ್ದು, ವಿಶೇಷ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆದಿರುವುದಾಗಿ ತಿಳಿಸಿದರು. ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ಸಾರ್ವತ್ರಿಕ ಸನ್ನೆ ಭಾಷೆಯನ್ನು ಚಿತ್ರದಲ್ಲಿ ಬಳಸಲಾಗಿದೆ ಎಂದರು.

ಇದೇ ವೇಳೆ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಕುರಿತು ಮಾತನಾಡಿದ ಹುಮಾ, “ಇಡೀ ಜಗತ್ತೇ ಈ ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದೆ. ಯಶ್ ದೇಶದ ಅತ್ಯಂತ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರೊಂದಿಗೆ ಕೆಲಸ ಮಾಡುವುದರಿಂದ ಪ್ರತಿದಿನ ಹೊಸದನ್ನು ಕಲಿಯುತ್ತಿದ್ದೇನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಎಂದು ಅವರು ಮನವಿ ಮಾಡಿದರು.

Continue Reading

ದೇಶ

‘ಕಿಂಗ್100’ನಲ್ಲಿ ಟಬು ವಿಲನ್! ನಾಗಾರ್ಜುನ ವಿರುದ್ಧ ಹೊಸ ಅವತಾರ

Published

on

ಹೈದರಾಬಾದ್: ಟಾಲಿವುಡ್‌ನ ಸ್ಟಾರ್ ನಟ ನಾಗಾರ್ಜುನ ಅಕ್ಕಿನೇನಿ ಮತ್ತು ಬಹುಭಾಷಾ ನಟಿ ಟಬು ಸುಮಾರು 28 ವರ್ಷಗಳ ಬಳಿಕ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನಾಗಾರ್ಜುನ ಅವರ ವೃತ್ತಿಜೀವನದ 100ನೇ ಸಿನಿಮಾ ಎನ್ನಲಾಗುತ್ತಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ಸದ್ಯ ‘ಕಿಂಗ್100’ ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ.

ಈ ಸುದ್ದಿಯ ವಿಶೇಷವೆಂದರೆ, ಈ ಬಾರಿ ಟಬು ಅವರು ನಾಗಾರ್ಜುನ ಅವರ ಪ್ರೇಯಸಿಯಾಗಿ ಅಲ್ಲ, ಪ್ರಮುಖ ಖಳನಾಯಕಿ (ವಿಲನ್) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ನಾಗಾರ್ಜುನ ಮತ್ತು ಟಬು ಮೊದಲ ಬಾರಿಗೆ ‘ನಿನ್ನೇ ಪೆಳ್ಳಾಡತಾ’ ಚಿತ್ರದ ಮೂಲಕ ಜೋಡಿಯಾಗಿ ಪ್ರೇಕ್ಷಕರ ಮನಗೆದ್ದಿದ್ದರು. ಬಳಿಕ ‘ಆವಿಡಾ ಮಾ ಆವಿಡೇ’ ಹಾಗೂ ‘ಸಿಸಿಂದ್ರಿ’ ಸಿನಿಮಾಗಳಲ್ಲೂ ಒಟ್ಟಿಗೆ ನಟಿಸಿದ್ದರು. ಆದರೆ ಹಲವು ವರ್ಷಗಳಿಂದ ಈ ಜೋಡಿ ಮತ್ತೆ ಒಂದಾಗಿ ಕಾಣಿಸಿಕೊಳ್ಳದೇ ಇದ್ದ ಕಾರಣ, ಈಗಿನ ಘೋಷಣೆ ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ.

ಇದೀಗ ನಿರ್ಮಾಣ ಹಂತದಲ್ಲಿರುವ ‘ಕಿಂಗ್100’ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಈ ಆ್ಯಕ್ಷನ್ ಚಿತ್ರವನ್ನು ರಾ. ಕಾರ್ತಿಕ್ ನಿರ್ದೇಶಿಸುತ್ತಿದ್ದು, ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಿಸುತ್ತಿದೆ. ನಾಗಾರ್ಜುನ ಅವರ 100ನೇ ಸಿನಿಮಾ ಎಂಬ ಕಾರಣಕ್ಕೆ ಚಿತ್ರಕ್ಕೆ ಈಗಾಗಲೇ ಭಾರೀ ನಿರೀಕ್ಷೆ ವ್ಯಕ್ತವಾಗಿದೆ.

ಟಬು ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ವಿಭಿನ್ನ ಹಾಗೂ ಸವಾಲಿನ ಪಾತ್ರಗಳನ್ನು ನಿರ್ವಹಿಸಿ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ‘ಮಕ್ಬೂಲ್’, ‘ಹೈದರ್’, ‘ಅಂಧಾಧುನ್’, ‘ಫಿತೂರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ ಪ್ರಶಂಸೆಗೆ ಪಾತ್ರವಾಗಿತ್ತು. ಇತ್ತೀಚೆಗೆ ಅವರು ‘ಭೂತ್ ಬಂಗ್ಲಾ’ ಹಾಗೂ ಅಂತರರಾಷ್ಟ್ರೀಯ ವೆಬ್ ಸರಣಿ **’ಡ್ಯೂನ್: ಪ್ರೊಫೆಸಿ’**ಯಲ್ಲೂ ಕಾಣಿಸಿಕೊಂಡಿದ್ದಾರೆ.

ಇತ್ತ ನಾಗಾರ್ಜುನ ಕೂಡ ಇತ್ತೀಚೆಗೆ ಬಿಡುಗಡೆಯಾದ ‘ಕುಬೇರ’ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ‘ಕಿಂಗ್100’ನಲ್ಲಿ ಹೀರೋ ಮತ್ತು ವಿಲನ್ ಆಗಿ ನಾಗಾರ್ಜುನ ಹಾಗೂ ಟಬು ನಡುವಿನ ಮುಖಾಮುಖಿ ಹೇಗಿರಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.

Continue Reading

ದೇಶ

ಸೋನಾಕ್ಷಿ ಸಿನ್ಹಾ ಲೂಸಸ್ ಕೂಲ್: ವೈರಲ್ ಆದ ವಿಡಿಯೋ ಒಳಗೇನಿದೆ?

Published

on

Sonakshi Sinha Loses Cool With Paps: ಇತ್ತೀಚೆಗೆ ಬಾಲಿವುಡ್ ಮತ್ತು ಕನ್ನಡ ಚಿತ್ರರಂಗದ ನಟಿಯರು ಪಾಪರಾಜಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಈ ಮೊದಲು ಹಿರಿಯ ನಟಿ ಜಯಾ ಬಚ್ಚನ್ ಮಗಳೊಂದಿಗಿನ ಫೋಟೋ ಕ್ಲಿಕ್ಕಿಸುವ ವೇಳೆ ಅನುಚಿತ ಮಾತುಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಸಾಲಿಗೆ ಸೇರಿರುವುದು ನಟಿ ಸೋನಾಕ್ಷಿ ಸಿನ್ಹಾ.

ಸೋಮವಾರ ಸೋನಾಕ್ಷಿ ಸಿನ್ಹಾ ಕುಟುಂಬ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಭೋಜನಕೂಟ ಆಯೋಜಿಸಿತ್ತು. ಭೋಜನದ ನಂತರ ತಂದೆ ಶತ್ರುಘ್ನ ಸಿನ್ಹಾ ಮತ್ತು ಪತಿ ಜಹೀರ್ ಇಕ್ಬಾಲ್ರನ್ನು ಬೀಳ್ಕೊಡುಗೆ ನೀಡುತ್ತಿದ್ದ ವೇಳೆ, ಪಾಪರಾಜಿಗಳು ಕಾರಿನೊಳಗಿನ ದೃಶ್ಯಗಳನ್ನು ಚಿತ್ರೀಕರಿಸಲು ಮುಂದಾದರು. ಇದರಿಂದ ಬೇಸತ್ತ ಸೋನಾಕ್ಷಿ, ಚಿತ್ರೀಕರಣ ನಿಲ್ಲಿಸುವಂತೆ ಕೈ ಮುಗಿದು ಮನವಿ ಮಾಡಿದ ದೃಶ್ಯಗಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೆಲವರು ಪಾಪರಾಜಿಗಳ ವರ್ತನೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಇದಕ್ಕೂ ಮುನ್ನ ಕಾಕ್ಟೇಲ್ 2 ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣಗೆ ಜನಸಂದಣಿಯ ನಡುವೆ ಕೃತಿ ಸನೂನ್ ಸುರಕ್ಷಿತವಾಗಿ ಮಾರ್ಗದರ್ಶನ ನೀಡಿದ್ದರು. ಇದೇ ವಿಷಯವಾಗಿ ನಟಿ ಸಪ್ತಮಿ ಗೌಡ ಸಹ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕಲಾವಿದರನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸುವ ಪ್ರವೃತ್ತಿ ವಿರುದ್ಧ ಬಲವಾಗಿ ಧ್ವನಿ ಎತ್ತಿದ್ದು, ಇದಕ್ಕೆ ಕನ್ನಡ ಚಿತ್ರರಂಗದ ಇತರ ನಟಿಯರೂ ಸಹಮತ ವ್ಯಕ್ತಪಡಿಸಿದ್ದಾರೆ.

Continue Reading

Trending