Connect with us

ಬೆಂಗಳೂರು

ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಬೀಳುತ್ತೆ ಅಶ್ವತ್ಧ ನಾರಾಯಣ

Published

on

ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಬೀಳುತ್ತೆ ಅಶ್ವತ್ಧ ನಾರಾಯಣ
ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಬೀಳುತ್ತೆ ಅಶ್ವತ್ಧ ನಾರಾಯಣ

ಬೆಂಗಳೂರು: ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಬೀಳುತ್ತೆ ಎಂದು ಮಾಜಿ ಸಚಿವ ಅಶ್ವತ್ಧ ನಾರಾಯಣ ಭವಿಷ್ಯ ನುಡಿದಿದ್ದಾರೆ, ಬೆಂಗಳೂರಿನಲ್ಲಿ ಸುದ್ದಗಾರರೊಂದಿಗೆ ಅವರು ಮಾತನಾಡುತ್ತ ಕಾಂಗೆಸ್ ಪಕ್ಷಕ್ಕೆ ಬಹಳ ದೊಡ್ಡ ಬಹುಮತ ಬಂದಿದೆ, ಅದರೆ ಅವರು ಕೈಚೆಲ್ಲಿ ಕುಳಿತಿದ್ದಾರೆ, ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಪತನ ಆಗಲಿದೆ ಎಂದಿದ್ದಾರೆ, ಮುಖ್ಯಮಂತ್ರಿ ಬದಲಾಗಬೇಕು, ಉಪಮುಖ್ಯಮಂತ್ರಿ ಆಗಬೇಕು, ಮಂತ್ರಿಗಳು ಹೆಚ್ಚಾಗಬೇಕು, ಅಧಿಕಾರ ಬದಲಾಗಬೇಕು ಎಂದು ಎಲ್ಲರೂ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ, ಪಕ್ಷದಲ್ಲಿ ಅರಾಜಕತೆ ಯಾವ ಪರಿಸ್ಧಿತಿಗೆ ಬಂದಿದೆ ಎಂದು ನೋಡಬಹುದು, ಕಾಂಗ್ರೆಸ್‌ನಲ್ಲಿ ಸಂಪೂರ್ಣ ಅಸಮಾಧಾನ ಇದೆ, ನಿಮ್ಮಲ್ಲಿ ಲೀಡರ್‌ಶಿಪ್ ಕ್ವಾಲಿಟಿ ಇಲ್ಲ, ನಮ್ಮಲ್ಲಿ ಇದೆ ನಮಗೆ ಅವಕಾಶ ಕೊಡಿ ಅಂತ ಕೇಳ್ತಿದ್ದಾರೆ, ಇದಕ್ಕೆಲ್ಲ ಆ ಪಕ್ಷದವರೇ ಅವರಿಗೆ ಉತ್ತರ ಕೊಡಬೇಕು ಎಂದರು,
ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಸಭೆ ಮಾಡಲಾಗಿದೆ ಎಂಬ ವಿಚಾರ ಕುರಿತು ಮಾತನಾಡಿದ ಅವರು ಈ ಮೊದಲು ಪರಮೇಶ್ವರ್ ಅವರು ಸಿಎಂ ಸ್ಧಾನ ಕೇಳಿರಲಿಲ್ಲ, ಸಿದ್ದರಾಮಯ್ಯ ಸಿಎಂ ಇದ್ದಾಗ ನನ್ನ ಉಪಮುಖ್ಯಮಂತ್ರಿ ಮಾಡಿ ಎಂದು ಕೇಳಿದ್ದರು, ಅಮೇಲೆ ಅವರನ್ನು ಡಿಸಿಎಂ ಮಾಡಲಾಯಿತು, ಈಗ ಮತ್ತೆ ಅವರ ಮೂಗಿಗೆ ತುಪ್ಪ ಸಮರುವ ಕೆಲಸ ಮಾಡಿದ್ದಾರೆ, ಸಿಎಂ, ಡಿಸಿಎಂ, ಎಂದು ಆ ಗುಂಪು, ಈ ಗುಂಪು ಸೇರಿ ಅನೇಕ ಸಭೆ ಮಾಡ್ತಿದ್ದಾರೆ, ದುಬೈಗೆ ಹೋಗೋದು ಹೊಸ ಕಾರ್ ಖರೀದಿ ಮಾಡೋದು, ಕಚೇರಿ ನವೀಕರಣ ಮಾಡೋದು ಮಾಡ್ತಿದ್ದಾರೆ, ಅದರೆ ನಯಾ ಪೈಸೆ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ,

ದೇಶ

ಬೆಂಗಳೂರು ಮಳೆಗಾಲಕ್ಕೆ ಸಿದ್ಧವೇ? ಜಿಬಿಎ ಅರಣ್ಯ ವಿಭಾಗದಲ್ಲಿ ತೀವ್ರ ಸಿಬ್ಬಂದಿ ಕೊರತೆ

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮರಗಳ ಸಂರಕ್ಷಣೆ, ಒಣ ಮರಗಳ ತೆರವು ಹಾಗೂ ಪರಿಸರ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅರಣ್ಯ ವಿಭಾಗವು ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಸಿಬ್ಬಂದಿಯ ಬದಲು ಪ್ರಸ್ತುತ ಕೇವಲ 14 ಅಧಿಕಾರಿಗಳು ಮಾತ್ರ ಸೇವೆಯಲ್ಲಿ ಇರುವುದರಿಂದ ಮರಗಳ ನಿರ್ವಹಣೆ ಹಾಗೂ ತುರ್ತು ಸ್ಪಂದನೆಗೆ ಅಡ್ಡಿಯಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಕಾಂಕ್ರೀಟೀಕರಣದ ಪರಿಣಾಮ ಮರಗಳ ಬೇರುಗಳು ದುರ್ಬಲಗೊಂಡಿದ್ದು, ಮಳೆ ಮತ್ತು ಗಾಳಿಗೆ ಮರಗಳು ಹಾಗೂ ಕೊಂಬೆಗಳು ಸುಲಭವಾಗಿ ನೆಲಕ್ಕುರುಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.

ದೂರು ನೀಡಿದರೂ ತೆರವುಗೆ ಹಲವು ದಿನಗಳ ವಿಳಂಬ

ಸಾರ್ವಜನಿಕರು ಮರ ಬಿದ್ದಿರುವ ಕುರಿತು ದೂರು ಸಲ್ಲಿಸಿದ ನಂತರ ಐದುರಿಂದ ಆರು ದಿನಗಳ ಬಳಿಕವೇ ತೆರವು ಕಾರ್ಯ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಿಬ್ಬಂದಿ ಕೊರತೆಯಿಂದಾಗಿ ತಕ್ಷಣದ ಸ್ಪಂದನೆ ನೀಡುವುದು ಅರಣ್ಯ ವಿಭಾಗಕ್ಕೆ ಸವಾಲಾಗಿ ಪರಿಣಮಿಸಿದೆ.

ಇತ್ತೀಚೆಗೆ ನಡೆದ ವರ್ಗಾವಣೆ ಪ್ರಕ್ರಿಯೆಯಿಂದ ಹಲವು ಅಧಿಕಾರಿಗಳು ಬೇರೆಡೆಗೆ ವರ್ಗಾವಣೆಯಾಗಿದ್ದು, ಈಗಾಗಲೇ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದ ವಿಭಾಗಕ್ಕೆ ಮತ್ತಷ್ಟು ಹೊರೆ ಹೆಚ್ಚಾಗಿದೆ.

ಹೊಸ ನೇಮಕಾತಿಗೆ ಇನ್ನೂ ಅನುಮೋದನೆ ಇಲ್ಲ

ಅರಣ್ಯ ವಿಭಾಗವು ಹೊಸ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ಇದುವರೆಗೆ ಅನುಮೋದನೆ ದೊರೆತಿಲ್ಲ. ಪರಿಣಾಮ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯದ ಕಾರ್ಯಭಾರ ನಿಭಾಯಿಸುವುದೇ ಕಷ್ಟಕರವಾಗಿದೆ.

ಒಂದೇ ತಿಂಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ

ಕಳೆದ ಏಪ್ರಿಲ್ 29ರಿಂದ ಮೇ 29ರವರೆಗೆ ಬೆಂಗಳೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಮರಗಳು ಹಾಗೂ ಕೊಂಬೆಗಳು ನೆಲಕ್ಕುರುಳಿದ ಪ್ರಕರಣಗಳು ದಾಖಲಾಗಿವೆ. ಮಳೆಗಾಲ ಇನ್ನಷ್ಟೇ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

55 ಅಧಿಕಾರಿಗಳ ಅಗತ್ಯ

ನಗರದ ಐದು ಪಾಲಿಕೆ ವ್ಯಾಪ್ತಿಗಳಲ್ಲಿ ಸಮರ್ಪಕ ಸೇವೆ ನೀಡಲು ಕನಿಷ್ಠ 55 ಅಧಿಕಾರಿಗಳ ಅಗತ್ಯವಿದೆ ಎಂದು ಅರಣ್ಯ ವಿಭಾಗವು ಫೆಬ್ರವರಿಯಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಪ್ರತಿ ಪಾಲಿಕೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು ಹಾಗೂ ಉಪ ವಲಯ ಅರಣ್ಯಾಧಿಕಾರಿಗಳನ್ನು ನೇಮಿಸುವಂತೆ ಕೋರಲಾಗಿತ್ತು.

ಆದರೆ, 55 ಅಧಿಕಾರಿಗಳ ಬದಲಿಗೆ ಕೇವಲ 25 ಅಧಿಕಾರಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ನೇಮಕಾತಿ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸಿಬ್ಬಂದಿ ಕೊರತೆ ಮುಂದುವರಿದರೆ ಮಳೆಗಾಲದಲ್ಲಿ ನೆಲಕ್ಕುರುಳುವ ಮರಗಳ ತೆರವು, ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading

ದೇಶ

ಕರ್ನಾಟಕ ರಾಜಕೀಯಕ್ಕೆ ಬಿಹಾರದ VIP ಪಕ್ಷ ಎಂಟ್ರಿ; 2028 ಚುನಾವಣೆಗೆ ಭರ್ಜರಿ ಸಿದ್ಧತೆ

Published

on

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಪೈಪೋಟಿಯ ನಡುವೆ ಇದೀಗ ಬಿಹಾರ ಮೂಲದ Vikassheel Insaan Party (VIP) ಪಕ್ಷ ಹೊಸದಾಗಿ ಪ್ರವೇಶಿಸಿದೆ. ಪಕ್ಷದ ಸಂಸ್ಥಾಪಕ Mukesh Sahani ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದ ಮೂಲಕ ಪಕ್ಷವು ಅಧಿಕೃತವಾಗಿ ಕರ್ನಾಟಕ ರಾಜಕೀಯಕ್ಕೆ ಕಾಲಿಟ್ಟಿದೆ.

ಮೀನುಗಾರರು ಮತ್ತು ಹಿಂದುಳಿದ ವರ್ಗಗಳ ಮೇಲೆ ಗಮನ

ಬಿಹಾರದಲ್ಲಿ ನಿಶಾದ್ (ಮೀನುಗಾರ) ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ಪರವಾಗಿ ಆರಂಭವಾದ VIP ಪಕ್ಷ ಇದೀಗ ಕರ್ನಾಟಕದಲ್ಲೂ ತನ್ನ ನೆಲೆ ವಿಸ್ತರಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಮಾತನಾಡಿದ ಮುಖೇಶ್ ಸಹಾನಿ, ದೇಶಾದ್ಯಂತ ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿದ ಸುಮಾರು 312 ಸಮುದಾಯಗಳಿದ್ದು, ಅವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಶಕ್ತಿ ನೀಡುವ ಉದ್ದೇಶದಿಂದ ಪಕ್ಷ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹರಡಿರುವ ಕೋಲಿ ಹಾಗೂ ಇತರೆ ಹಿಂದುಳಿದ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

2028ರ ವಿಧಾನಸಭೆ ಚುನಾವಣೆಗೆ ಸಿದ್ಧತೆ

ಪ್ರಸ್ತುತ ರಾಜ್ಯದಲ್ಲಿ ಯಾವುದೇ ಪ್ರಮುಖ ಚುನಾವಣೆ ಇಲ್ಲದಿದ್ದರೂ, VIP ಪಕ್ಷವು ದೀರ್ಘಾವಧಿಯ ರಾಜಕೀಯ ಯೋಜನೆಯೊಂದಿಗೆ ಕರ್ನಾಟಕಕ್ಕೆ ಪ್ರವೇಶಿಸಿದೆ. 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪಕ್ಷ ಘೋಷಿಸಿದೆ.

ಪಕ್ಷದ ರಾಜ್ಯ ಉಪಾಧ್ಯಕ್ಷ Mohan Kumar B. K. ಮಾತನಾಡಿ, ಹಿಂದುಳಿದ ವರ್ಗಗಳ ಪರ್ಯಾಯ ರಾಜಕೀಯ ಶಕ್ತಿಯಾಗಿ ಪಕ್ಷವನ್ನು ಬೆಳೆಸುವುದಾಗಿ ಹೇಳಿದ್ದಾರೆ.

ಬಿಹಾರದಲ್ಲಿ ಮಿಶ್ರ ಸಾಧನೆ

VIP ಪಕ್ಷವು ಬಿಹಾರದಲ್ಲಿ ತನ್ನ ಪ್ರಭಾವ ಸ್ಥಾಪಿಸಲು ಪ್ರಯತ್ನಿಸಿದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ. ಆ ಸಮಯದಲ್ಲಿ Rashtriya Janata Dal ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಪಕ್ಷಕ್ಕೆ ಒಂದು ಸ್ಥಾನವೂ ದೊರೆಯಲಿಲ್ಲ. ಆದರೂ ರಾಷ್ಟ್ರೀಯ ಮಟ್ಟದಲ್ಲಿ ತನ್ನ ವಿಸ್ತರಣೆ ಮುಂದುವರಿಸುವ ಗುರಿಯನ್ನು ಹೊಂದಿದೆ.

ಮುಖೇಶ್ ಸಹಾನಿ ಯಶೋಗಾಥೆ

ಮುಖೇಶ್ ಸಹಾನಿ ಅವರ ಜೀವನ ಪಯಣ ಗಮನಾರ್ಹವಾಗಿದೆ. ಬಿಹಾರದ ಬಡ ಮೀನುಗಾರ ಕುಟುಂಬದಲ್ಲಿ ಜನಿಸಿದ ಅವರು, ಕೇವಲ ಎಂಟನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರು. ನಂತರ ಮುಂಬೈಗೆ ತೆರಳಿ ಸಿನಿಮಾ ಕ್ಷೇತ್ರದಲ್ಲಿ ಸೆಟ್ ಡಿಸೈನರ್ ಆಗಿ ಕೆಲಸ ಆರಂಭಿಸಿದರು.

ಮುಂದೆ ತಮ್ಮದೇ Cineyug ಸಂಸ್ಥೆಯ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದರು. ಬಾಲಿವುಡ್‌ನ ಜನಪ್ರಿಯ ಚಿತ್ರಗಳಾದ Devdas ಮತ್ತು Bajrangi Bhaijaan ಸೇರಿದಂತೆ ಹಲವು ಯೋಜನೆಗಳಲ್ಲಿ ಕೆಲಸ ಮಾಡಿ ಗಮನ ಸೆಳೆದಿದ್ದರು.

ಈಗ ರಾಜಕೀಯದಲ್ಲಿ ತಮ್ಮದೇ ಗುರುತು ಮೂಡಿಸಲು ಮುಂದಾಗಿರುವ ಮುಖೇಶ್ ಸಹಾನಿ, ಕರ್ನಾಟಕದ ರಾಜಕೀಯ ಅಖಾಡದಲ್ಲಿ ಎಷ್ಟು ಪ್ರಭಾವ ಬೀರುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

Continue Reading

ಕ್ರೀಡೆ

ದೇವಾಂಗ ಯೂನಿಯನ್ ಶತಮಾನೋತ್ಸವ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಯಂಗ್ ಓರಿಯನ್ಸ್ ಚಾಂಪಿಯನ್

Published

on

ಬೆಂಗಳೂರು: ದೇವಾಂಗ ಯೂನಿಯನ್ ಶತಮಾನೋತ್ಸವ ಹಾಗೂ ಪ್ರೊ. ಎನ್.ಸಿ. ಪರಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಆಹ್ವಾನಿತ ಪುರುಷರ ಫ್ಲಡ್‌ಲೈಟ್ ಬ್ಯಾಸ್ಕೆಟ್‌ಬಾಲ್ ಟೂರ್ನಿ-2026 ರೋಚಕ ಪಂದ್ಯಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜೂನ್ 7ರಂದು ದೇವಾಂಗ ಯೂನಿಯನ್ ಕೋರ್ಟ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ Young Orion’s SC ತಂಡವು GST & Customs ತಂಡವನ್ನು 84-71 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಸೆಮಿಫೈನಲ್ ಫಲಿತಾಂಶ

ಮೊದಲ ಸೆಮಿಫೈನಲ್‌ನಲ್ಲಿ Young Orion’s SC ತಂಡವು DYES ಬೆಂಗಳೂರು ವಿರುದ್ಧ 80-72 ಅಂಕಗಳ ಗೆಲುವು ಸಾಧಿಸಿತು. ಯಂಗ್ ಓರಿಯನ್ಸ್ ಪರ ಅರ್ಜುನ್ ಯಾದವ್ 22 ಹಾಗೂ ಶಶಾಂಕ್ 14 ಅಂಕಗಳನ್ನು ಗಳಿಸಿದರೆ, DYES ಪರ ಮನೋಜ್ 24 ಹಾಗೂ ಬತೇಶ್ 16 ಅಂಕಗಳನ್ನು ದಾಖಲಿಸಿದರು. ಅರ್ಧಾವಧಿಯಲ್ಲಿ ಯಂಗ್ ಓರಿಯನ್ಸ್ 41-40 ಅಂಕಗಳಿಂದ ಮುನ್ನಡೆಯಲ್ಲಿತ್ತು.

ಎರಡನೇ ಸೆಮಿಫೈನಲ್‌ನಲ್ಲಿ GST & Customs ತಂಡವು Bank of Baroda ವಿರುದ್ಧ 71-63 ಅಂಕಗಳಿಂದ ಗೆಲುವು ದಾಖಲಿಸಿತು. GST & Customs ಪರ ಧೀರಜ್ ರೆಡ್ಡಿ 25 ಹಾಗೂ ಪ್ರತ್ಯಾಂಶು ತೋಮರ್ 12 ಅಂಕಗಳನ್ನು ಗಳಿಸಿದರು.

ಫೈನಲ್‌ನಲ್ಲಿ ಯಂಗ್ ಓರಿಯನ್ಸ್ ಪ್ರಾಬಲ್ಯ

ಅಂತಿಮ ಪಂದ್ಯದಲ್ಲಿ ಯಂಗ್ ಓರಿಯನ್ಸ್ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿತು. ಸುಮಂತ್ 20 ಹಾಗೂ ಅಭಿಷೇಕ್ ಗೌಡ 16 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. GST & Customs ಪರ ಧೀರಜ್ ರೆಡ್ಡಿ 23 ಹಾಗೂ ಪ್ರತ್ಯಾಂಶು ತೋಮರ್ 22 ಅಂಕಗಳನ್ನು ಗಳಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಅರ್ಧಾವಧಿಯಲ್ಲಿ 46-35 ಅಂಕಗಳ ಮುನ್ನಡೆ ಸಾಧಿಸಿದ್ದ ಯಂಗ್ ಓರಿಯನ್ಸ್, ಅಂತಿಮವಾಗಿ 84-71 ಅಂಕಗಳ ಅಂತರದಿಂದ ಜಯ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಬಹುಮಾನ ವಿತರಣೆ

ಚಾಂಪಿಯನ್ ಆಗಿ ಹೊರಹೊಮ್ಮಿದ Young Orion’s SC ತಂಡಕ್ಕೆ ₹75,000 ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು. ರನ್ನರ್-ಅಪ್ GST & Customs ತಂಡಕ್ಕೆ ₹50,000 ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಯುವ ಆಟಗಾರರಿಗೆ ಕೆ. ಗೋವಿಂದರಾಜ್ ಪ್ರೋತ್ಸಾಹ

ಪಂದ್ಯಾವಳಿ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ K. Govindaraj ಅವರು ಯುವ ಆಟಗಾರರನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು, ಸಮರ್ಪಣೆ ಮತ್ತು ನಿರಂತರ ಪರಿಶ್ರಮದ ಮಹತ್ವವನ್ನು ವಿವರಿಸಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಯುವ ಕ್ರೀಡಾಪಟುಗಳು ಕಠಿಣ ಪರಿಶ್ರಮದೊಂದಿಗೆ ಮುಂದುವರಿಯಬೇಕು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ದೇವಾಂಗ ಯೂನಿಯನ್ ಅಧ್ಯಕ್ಷ Jayaram, ಕಾರ್ಯದರ್ಶಿ Vardharaju ಹಾಗೂ ದೇವಾಂಗ ಯೂನಿಯನ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳ ಭಾಗವಹಿಸುವಿಕೆಯಿಂದ ಈ ಟೂರ್ನಿ ಯಶಸ್ವಿಯಾಗಿ ನೆರವೇರಿದ್ದು, ಯುವ ಬ್ಯಾಸ್ಕೆಟ್‌ಬಾಲ್ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿತ್ತು.

Continue Reading

Trending