Connect with us

ಕ್ರೀಡೆ

ಆಫ್ಘನ್ ಗೆಲುವನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಇರ್ಫಾನ್-ಹರ್ಭಜನ್

Published

on

ಆಫ್ಘನ್ ಗೆಲುವನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಇರ್ಫಾನ್-ಹರ್ಭಜನ್
ಆಫ್ಘನ್ ಗೆಲುವನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಇರ್ಫಾನ್-ಹರ್ಭಜನ್

ಪುಣೆ: ಸೋಮವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಶ್ರೀಲಂಕಾ ತಂಡವನ್ನು 7 ವಿಕೆಟ್ಗಳಿಂದ ಮಣಿಸಿತು. ಈ ಮೂಲಕ ಆಫ್ಘನ್ ಹಾಲಿ ಆವೃತ್ತಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಅಫಘಾನಿಸ್ತಾನ ತಂಡ ಗೆದ್ದ ಖುಷಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಅವರು ಸ್ಟಾರ್ ಸ್ಪೋರ್ಟ್ಸ್ ಸುಡಿಯೋದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೊ ಮತ್ತು ಫೋಟೊ ವೈರಲ್ ಆಗಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಅಫಘಾನಿಸ್ತಾನ ತಂಡ ಲಂಕಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ಸು ಸಾಧಿಸಿತು. ಬ್ಯಾಟಿಂಗ್ ಆಹ್ವಾನ ಪಡೆದ ಲಂಕಾ ಪಡೆ 49.3 ಓವರ್ಗಳಲ್ಲಿ 241 ರನ್ ಗಳಿಗೆ ಆಲ್ಔಟ್ ಆಯಿತು. ಜವಾಬಿತ್ತ ಆಪ್ಘನ್ 26 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 242 ರನ್ ಬಾರಿಸಿ ಜಯಶಾಲಿಯಾಯಿತು. ಈ ಗೆಲುವಿನೊಂದಿಗೆ ಆಫ್ಘನ್ ತಂಡದ ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ.

ಆಫ್ಘನ್ ತಂಡ ಗೆದ್ದ ಖುಷಿಯಲ್ಲಿ ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ತಮ್ಮ ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್ ಅವರೊಂದಿಗೆ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದು ಮಾತ್ರವಲ್ಲದೆ ಟ್ವಿಟರ್ ಎಕ್ಸ್ ಖಾತೆಯಲ್ಲಿ “ಅಫ್ಘಾನಿಸ್ತಾನ ತಂಡದಿಂದ ಎಂತಹ ಅದ್ಭುತ ಗೆಲುವು. ವಿಶ್ವಕಪ್ನಲ್ಲಿ ನಿಮ್ಮ 3ನೇ ಗೆಲುವಿಗೆ ಅಭಿನಂದನೆಗಳು. ನೀವು ಸೋಲಿಸಿದ್ದು 3 ಮಾಜಿ ವಿಶ್ವ ಚಾಂಪಿಯನ್ಗಳನ್ನು. ನಿಮ್ಮ ಸಾಹಸಕ್ಕೆ ಮೆಚ್ಚಲೇ ಬೇಕು” ಎಂದು ಇರ್ಫಾನ್ ಪಠಾಣ್ ಬರೆದುಕೊಂಡಿದ್ದಾರೆ.

ಕ್ರೀಡೆ

ವಾಂಖೆಡೆನಲ್ಲಿ RCB ದಬ್ಬಾಳಿಕೆ: ಚಿನ್ನಸ್ವಾಮಿ ಕಾದಿದೆ!

Published

on

By

ಮುಂಬೈ: Indian Premier League 2026ರ ಪಂದ್ಯದಲ್ಲಿ Royal Challengers Bengaluru ತಂಡವು Mumbai Indians ವಿರುದ್ಧ 18 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ RCB ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತವನ್ನು ದಾಖಲಿಸಿದೆ.

ಈ ಪಂದ್ಯದಲ್ಲಿ Phil Salt 36 ಎಸೆತಗಳಲ್ಲಿ 78 ರನ್ ಸಿಡಿಸಿ ‘ಪ್ಲೇಯರ್ ಆಫ್ ದ ಮ್ಯಾಚ್’ ಪ್ರಶಸ್ತಿ ಪಡೆದರು. ನಾಯಕ Rajat Patidar ಕೇವಲ 20 ಎಸೆತಗಳಲ್ಲಿ 53 ರನ್ ಸಿಡಿಸಿ ತಂಡಕ್ಕೆ ಬಲವಾದ ವೇದಿಕೆ ಒದಗಿಸಿದರು. ಪಾಟಿದಾರ್ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಟೂರ್ನಿಯ ಇತಿಹಾಸದಲ್ಲೇ ವೇಗವಾದ ಫಿಫ್ಟಿ ಸಿಡಿಸಿದ ನಾಯಕ ಎಂಬ ದಾಖಲೆ ನಿರ್ಮಿಸಿದರು.

ಬೌಲಿಂಗ್ ವಿಭಾಗದಲ್ಲಿ Krunal Pandya (1/26) ಮತ್ತು Suyash Sharma (2/47) ಪ್ರಮುಖ ಪಾತ್ರವಹಿಸಿ ಮುಂಬೈ ತಂಡವನ್ನು ನಿಯಂತ್ರಿಸಿದರು.

ಪಂದ್ಯದ ಬಳಿಕ ಮಾತನಾಡಿದ ಪಾಟಿದಾರ್, “ಪ್ರತಿ ಪಂದ್ಯದಲ್ಲೂ 200ಕ್ಕೂ ಹೆಚ್ಚು ರನ್‌ಗಳು ಬರುತ್ತಿವೆ. ಇದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ” ಎಂದು ಹೇಳಿದರು. ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿ, “ನಾನು ಬಾಲ್‌ಗೆ ಪ್ರತಿಕ್ರಿಯಿಸುತ್ತೇನೆ, ಸ್ಪಷ್ಟತೆಯಿಂದ ಆಟ ಆಡುತ್ತೇನೆ” ಎಂದು ತಿಳಿಸಿದ್ದಾರೆ.

ಕೃಣಾಲ್ ಪಾಂಡ್ಯಾ ತಂಡದ ಬ್ಯಾಟಿಂಗ್ ಶಕ್ತಿಯನ್ನು ಮೆಚ್ಚಿ, “ವಿರಾಟ್, ಸಾಲ್ಟ್, ಟಿಮ್ ಎಲ್ಲರೂ ಕೊಡುಗೆ ನೀಡಿದ್ದಾರೆ” ಎಂದರು. ಕೋಚ್ Malolan Rangarajan ರಸಿಖ್‌ರ ಹೋರಾಟ ಮನೋಭಾವವನ್ನು ಶ್ಲಾಘಿಸಿದರು.

ಈ ಗೆಲುವಿನೊಂದಿಗೆ RCB ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಮುಂದಿನ ಚಿನ್ನಸ್ವಾಮಿ ಪಂದ್ಯಕ್ಕಾಗಿ ಕಾತುರವಾಗಿದೆ.

Continue Reading

ಕ್ರೀಡೆ

IPL 2026: ಮುಂಬೈ ಇಂಡಿಯನ್ಸ್ ಸಂಕಷ್ಟದಲ್ಲಿ! ಹಾರ್ದಿಕ್ ಪಾಂಡ್ಯ ಆತ್ಮಾವಲೋಕನದ ಮಾತು

Published

on

By

ಬೆಂಗಳೂರು: Indian Premier League 2026ರ ಕಣದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ Mumbai Indians ತಂಡಕ್ಕೆ ಈ ಬಾರಿ ಹಾದಿ ಅಷ್ಟು ಸುಲಭವಾಗಿಲ್ಲ. Hardik Pandya ನೇತೃತ್ವದ ತಂಡವು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಈಗ ಸತತ ಸೋಲುಗಳಿಂದ ಸಂಕಷ್ಟಕ್ಕೆ ಸಿಲುಕಿದೆ.

ಈ ಸೀಸನ್‌ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಕೇವಲ ಒಂದು ಗೆಲುವು ಸಾಧಿಸಿ, ಮೂರು ಪಂದ್ಯಗಳಲ್ಲಿ ಸೋತಿದೆ. ಇದರಿಂದ ಕೇವಲ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇತ್ತೀಚೆಗೆ Royal Challengers Bengaluru ವಿರುದ್ಧದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ತಂಡದ ಪ್ರದರ್ಶನ ಕುರಿತು ಸ್ಪಷ್ಟವಾಗಿ ಮಾತನಾಡಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಪಾಂಡ್ಯ, “ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪ್ರಸ್ತುತ ಯೋಜನೆಗಳು ಕೆಲಸ ಮಾಡುತ್ತಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಹೊಸ ಆಯ್ಕೆಗಳು ಮತ್ತು ತಂತ್ರಗಳನ್ನು ಪರಿಶೀಲಿಸಬೇಕಾಗಿದೆ” ಎಂದು ತಿಳಿಸಿದ್ದಾರೆ.

ಇನ್ನೂ, ತಂಡಕ್ಕೆ ಕೆಲವು ದಿನಗಳ ವಿರಾಮ ದೊರಕಿದ್ದು, ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಯಲಿದೆ ಎಂದು ಹೇಳಿದರು.

ಇದೀಗ ಮುಂಬೈ ಇಂಡಿಯನ್ಸ್ ಮುಂದಿನ ಏಪ್ರಿಲ್ 26ರಂದು Punjab Kings ವಿರುದ್ಧ ಕಣಕ್ಕಿಳಿಯಲಿದೆ. ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಮುಂಬೈಗೆ ಇದು ದೊಡ್ಡ ಸವಾಲಾಗಲಿದೆ.

ಮುಂಬೈ ತಂಡ ಈ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳುತ್ತದೆಯೇ ಎಂಬುದನ್ನು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

Continue Reading

ಕ್ರೀಡೆ

CSK ಮೊದಲ ಜಯದ ನಡುವೆ ವಿವಾದ: ಡಿಸಿ ತಂಡದ ಕೋಪ ಸಿಡಿತ

Published

on

By

ನವದೆಹಲಿ: Indian Premier League 2026 ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು Delhi Capitals ನಡುವಿನ ಪಂದ್ಯ ವಿವಾದಕ್ಕೆ ಕಾರಣವಾಗಿದೆ. MA Chidambaram Stadium ನಲ್ಲಿ ನಡೆದ ಈ ಪಂದ್ಯದಲ್ಲಿ ಅಂತಿಮ ಕ್ಷಣಗಳಲ್ಲಿ ಗ್ಲವ್ಸ್ ಬದಲಾವಣೆ ವಿಚಾರವಾಗಿ ಗದ್ದಲ ಉಂಟಾಯಿತು.

ಡಿಸಿ ಬ್ಯಾಟ್ಸ್‌ಮನ್ Tristan Stubbs ಗ್ಲವ್ಸ್ ಬದಲಾಯಿಸಲು ಕೇಳಿದಾಗ ನಾಲ್ಕನೇ ಅಂಪೈರ್ ಅನುಮತಿ ನಿರಾಕರಿಸಿದ ಘಟನೆ ತೀವ್ರ ಚರ್ಚೆಗೆ ಕಾರಣವಾಯಿತು. ಈ ನಿರ್ಧಾರಕ್ಕೆ ವಿರೋಧವಾಗಿ ಕೋಚ್ Hemang Badani ಹಾಗೂ ಆಟಗಾರರಾದ Nitish Rana ಮತ್ತು Karun Nair ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದರು.

ಈ ಘಟನೆ ಬಳಿಕದ ಬಾಲ್‌ನಲ್ಲೇ ಸ್ಟಬ್ಸ್ ಔಟ್ ಆಗಿದ್ದು, ಪಂದ್ಯದಲ್ಲಿ ತಿರುವು ತಂದ ಕ್ಷಣವಾಯಿತು. 38 ಎಸೆತಗಳಲ್ಲಿ 60 ರನ್ ಗಳಿಸಿದ್ದ ಸ್ಟಬ್ಸ್ ತಂಡಕ್ಕೆ ಹೋರಾಟದ ಶಕ್ತಿ ನೀಡಿದರೂ, ಅಂತಿಮವಾಗಿ ಡಿಸಿ 213 ರನ್ ಗುರಿ ಬೆನ್ನಟ್ಟುವಲ್ಲಿ ವಿಫಲವಾಯಿತು.

ಪಂದ್ಯದ ಆರಂಭದಲ್ಲಿ KL Rahul ಮತ್ತು Pathum Nissanka ಉತ್ತಮ ಆರಂಭ ನೀಡಿದರೂ, ನಂತರ ವಿಕೆಟ್‌ಗಳ ಪತನದಿಂದ ತಂಡ ಒತ್ತಡಕ್ಕೆ ಸಿಲುಕಿತು. ಚೆನ್ನೈ ಬೌಲರ್‌ಗಳು ತಂತ್ರ ಬದಲಿಸಿ, ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.

ಈ ಮೂಲಕ Chennai Super Kings ಈ ಸೀಸನ್‌ನ ಮೊದಲ ಜಯ ದಾಖಲಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದು ಸತತ ಎರಡನೇ ಸೋಲು ಆಯಿತು. ಗ್ಲವ್ಸ್ ವಿವಾದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Continue Reading

Trending