Connect with us

ಸೋಶಿಯಲ್ ಮೀಡಿಯಾ

ಡೀಪ್‌ಫೇಕ್ ವಿಡಿಯೋ ಹೇಗೆ ಸೃಷ್ಟಿಯಾಗುತ್ತದೆ?

Published

on

ಡೀಪ್‌ಫೇಕ್ ವಿಡಿಯೋ ಹೇಗೆ ಸೃಷ್ಟಿಯಾಗುತ್ತದೆ?

ಡೀಪ್‌ಫೇಕ್‌ಗಳು ಶಕ್ತಿಶಾಲಿ ಕಂಪ್ಯೂಟರ್ ಟೆಕ್ನಾಲಜಿಗಳನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬರ ಮುಖದೊಂದಿಗೆ ಬದಲಾಯಿಸಿ ಸೃಷ್ಟಿಸುವ ನಕಲಿ ವಿಡಿಯೋ ಆಗಿದೆ. ಈ ಫೇಕ್ ಚಿತ್ರವನ್ನು ರಚಿಸಲು ಕೃತಕ ಬುದ್ಧಿಮತ್ತೆಯ ರೂಪವನ್ನು ಬಳಸುತ್ತಾರೆ. ಹೀಗಾಗಿ ಇದಕ್ಕೆ “ಡೀಪ್‌ಫೇಕ್‌ಗಳು” ಎಂದು ಕರೆಯಲಾಗುತ್ತದೆ. ಎಐ ದುರುಪಯೋಗ ಯಾವ ಮಟ್ಟದವರೆಗೆ ಆಗಬಹುದು ಎಂಬುದಕ್ಕೆ ರಶ್ಮಿಕಾ ಮಂದಣ್ಣ ಅವರ ಫೇಕ್ ವಿಡಿಯೋ ಉತ್ತಮ ಉದಾಹರಣೆಯಾಗಿದೆ. AI ಡೀಪ್‌ಫೇಕ್‌ಗಳು ಡಿಜಿಟಲ್ ಮ್ಯಾನಿಪ್ಯುಲೇಷನ್‌ನ ಒಂದು ರೂಪವಾಗಿದೆ. ಡೀಪ್‌ಫೇಕ್ ಸಾಮಾಜಿಕ ಜಾಲತಾಣ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಿದ್ಧಿ ಪಡೆದಿರುವ ವ್ಯಕ್ತಿಯ ಬಗ್ಗೆ ಡೇಟಾವನ್ನು ಸಂಗ್ರಹಿಸುತ್ತದೆ. ಹೀಗೆ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಲು ಮತ್ತು ಕಲಿಯಲು AI ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈಗ ನೀವು ಒಂದು ಫೋಟೋ ಅಥವಾ ವಿಡಿಯೋವನ್ನು ಡೀಪ್‌ಫೇಕ್ ಮಾಡಲು ಹೊರಟಾಗ, ನೀವು ಹಂಚಿಕೊಂಡ ಫೈಲ್​ಗೆ ಮ್ಯಾಚ್ ಆಗುವ, ಅಂದರೆ ಒಂದೇ ಮುಖ ಲಕ್ಷಣವಿರುವ, ಧ್ವನಿಯನ್ನು ಮತ್ತು ಇತರ ಗುಣಲಕ್ಷಣಗಳನ್ನು ಗುರುತಿಸಿ ನಿಮ್ಮ ವಿಡಿಯೋ ಅಥವಾ ಫೋಟೋದ ಮೇಲೆ ಹೇರಲಾಗುತ್ತದೆ. ಆಗ ಹೊಸ ವಿಡಿಯೋ ಕ್ರಿಯೆಟ್ ಆಗುತ್ತದೆ.
ಕೃತಕ ಬುದ್ಧಿಮತ್ತೆಯಿಂದ (AI) ರಚಿತವಾದ ನಕಲಿ ವಿಡಿಯೋಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ನಟಿ ರಶ್ಮಿಕಾ ಮಂದಣ್ಣ ಒಳಗೊಂಡ ಡೀಪ್‌ಫೇಕ್ ವಿಡಿಯೋ ಎಲ್ಲರಲ್ಲೂ ಭಯ ಹುಟ್ಟಿಸಿದೆ. ಇದು ಸೆಲಿಬ್ರಿಟಿಗಳಿಗೆ ಮಾತ್ರವಲ್ಲದೆ ಸಾಮಾನ್ಯ ಇಂಟರ್ನೆಟ್ ಬಳಕೆದಾರರಿಗೂ ಅಪಾಯ ತಂದೊಡುವಂತೆ ಕಾಣುತ್ತಿದೆ.
AI ಯಿಂದ ರಚಿತವಾದ ನಕಲಿ ವಿಷಯಗಳು ನೈಜವಾದದ ರೀತಿಯಲ್ಲೇ ಕಾಣಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನವು ಫೋಟೋಗಳು, ವಿಡಿಯೋಗಳು ಅಥವಾ ಆಡಿಯೋ ರೆಕಾರ್ಡಿಂಗ್‌ಗಳ ರೂಪದಲ್ಲಿರಬಹುದು. ಇದು ಥೇಟ್ ವರಿಜಿನ್ ರೂಪದಲ್ಲೇ ಇರುತ್ತದೆ. ಇದನ್ನು ಸಾಮಾನ್ಯರಿಗೆ ಕಂಡು ಹಿಡಿಯುವುದು ಕಷ್ಟ. ಇಲ್ಲಿ ರಶ್ಮಿಕಾ ಅವರ ಫೇಕ್ ವಿಡಿಯೋ ಕೂಡ ಆಗಿದ್ದು ಹೀಗೆ.ಡೀಪ್‌ಫೇಕ್ ವಿಡಿಯೋಗಳನ್ನು ಗುರುತಿಸುವುದು ಅಷ್ಟೊಂದು ಸುಲಭಲ್ಲ. ಇತ್ತೀಚಿನ ದಿನಗಳಲ್ಲಿ ಡೀಪ್‌ಫೇಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ,ಸೆಲೆಬ್ರಿಟಿಗಳು ಮಾತ್ರವಲ್ಲದೆ ಸಾಮಾನ್ಯರು ಇದೇ ರೀತಿಯ ಮೋಸಗೊಳಿಸುವ ವಿಡಿಯೋಗಳಿಗೆ ಬಲಿಯಾಗಿದ್ದಾರೆ.

Continue Reading

ದೇಶ

ಕೆಂಕೆರಮ್ಮ ದೇವಿಯ ಆಶೀರ್ವಾದ ಪಡೆದ ಡಿಕೆಶಿ; ಬಲಗಡೆ ಹೂ ಪ್ರಸಾದ

Published

on

ರಾಮನಗರ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ D. K. Shivakumar ಅವರ ಯಶಸ್ಸು ಹಾಗೂ ರಾಜ್ಯದ ಒಳಿತಿಗಾಗಿ ರಾಮನಗರದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಡಿಕೆ ಶಿವಕುಮಾರ್ ಅವರ ಮನೆ ದೇವರಾದ ಕೆಂಕೆರಮ್ಮ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕೆಂಕೆರಮ್ಮ ದೇವಿಗೆ ವಿಶೇಷ ಅಭಿಷೇಕ, ಅರ್ಚನೆ ಹಾಗೂ ಪೂಜೆಗಳನ್ನು ನೆರವೇರಿಸಿದ ಭಕ್ತರು, ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಆಡಳಿತ ನಡೆಸಲಿ ಎಂದು ಪ್ರಾರ್ಥಿಸಿದರು. ದೇವಾಲಯದ ಸಮಿತಿಯ ಸದಸ್ಯರು ಹಾಗೂ ಅಭಿಮಾನಿಗಳು ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕಾಗಿ ವಿಶೇಷ ಸಂಕಲ್ಪ ಕೈಗೊಂಡರು.

ಪೂಜೆಯ ವೇಳೆ ಕೆಂಕೆರಮ್ಮ ದೇವಿಗೆ ಬಲಗಡೆ ಹೂ ಪ್ರಸಾದವಾಗಿರುವುದು ಭಕ್ತರಲ್ಲಿ ಸಂತಸ ಮೂಡಿಸಿತು. ಇದನ್ನು ಶುಭಸೂಚನೆ ಎಂದು ಭಾವಿಸಿದ ಅಭಿಮಾನಿಗಳು, ಡಿಕೆ ಶಿವಕುಮಾರ್ ಅವರ ರಾಜಕೀಯ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.

ಪೂಜೆ ಬಳಿಕ ದೇವಾಲಯದಲ್ಲಿ ಪ್ರಸಾದ ವಿತರಣೆಯೂ ನಡೆಯಿತು. ಡಿಕೆಶಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು. ಸಿಎಂ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ತವರೂರು ಹಾಗೂ ರಾಮನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ಹಾಗೂ ಸಂಭ್ರಮಾಚರಣೆಗಳು ನಡೆಯುತ್ತಿವೆ.

Continue Reading

ಕ್ರೀಡೆ

ಸರಳ ಉಡುಪಿನಲ್ಲಿ ಆಶ್ರಮಕ್ಕೆ ಆಗಮಿಸಿದ ವಿರಾಟ್-ಅನುಷ್ಕಾ; ಫೋಟೋಗಳಿಗೆ ಭಾರಿ ಮೆಚ್ಚುಗೆ

Published

on

ಲಕ್ನೋ: ಐಪಿಎಲ್ 2026ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಧ್ಯಾತ್ಮಿಕ ಪಯಣ ಕೈಗೊಂಡಿದ್ದಾರೆ. ಈ ದಂಪತಿ ಸೋಮವಾರ ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಮಹಾರಾಜರ ‘ರಾಧಾ ಕೇಳಿ ಕುಂಜ್’ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಆಶ್ರಮಕ್ಕೆ ಆಗಮಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಹಾರಾಜರ ದರ್ಶನ ಪಡೆದು ಕೆಲ ಸಮಯ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಭೇಟಿ ಬಳಿಕ ಆಶ್ರಮದಿಂದ ಹೊರಬರುತ್ತಿರುವ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿರಾಟ್ ಮತ್ತು ಅನುಷ್ಕಾ ವೃಂದಾವನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅವರು ಹಲವು ಬಾರಿ ಪ್ರೇಮಾನಂದ್ ಮಹಾರಾಜರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಜೀವನದ ಪ್ರಮುಖ ಘಟ್ಟಗಳು ಹಾಗೂ ವೃತ್ತಿಜೀವನದ ಮಹತ್ವದ ಸಂದರ್ಭಗಳಲ್ಲಿ ಈ ದಂಪತಿ ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯುವುದು ವಿಶೇಷವಾಗಿದೆ.

ಈ ಬಾರಿ ಕೂಡ ಎಂದಿನಂತೆ ಯಾವುದೇ ವಿಶೇಷ ಭದ್ರತಾ ಪ್ರದರ್ಶನವಿಲ್ಲದೆ ಸರಳ ಉಡುಪಿನಲ್ಲಿ ಆಶ್ರಮಕ್ಕೆ ಆಗಮಿಸಿದ ವಿರಾಟ್ ಮತ್ತು ಅನುಷ್ಕಾ, ತಮ್ಮ ಸರಳತೆ ಮೂಲಕ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಭಕ್ತಿ ಹಾಗೂ ವಿನಯಶೀಲತೆಯನ್ನು ಮೆಚ್ಚಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ಆರ್‌ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ವೇಳೆಯಲ್ಲೇ ಕೊಹ್ಲಿ ಆಧ್ಯಾತ್ಮಿಕ ಆಶೀರ್ವಾದ ಪಡೆಯಲು ತೆರಳಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಆಸಕ್ತಿ ಮೂಡಿಸಿದೆ. ಸದ್ಯ ಅವರ ವೃಂದಾವನ ಭೇಟಿ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

Continue Reading

ದೇಶ

ಭಾರತೀಯ ಇನ್‌ಫ್ಲುಯೆನ್ಸರ್‌ಗಳಿಗೆ ನೇಪಾಳ ರಾಯಭಾರ ಕಚೇರಿಯಿಂದ ವಿಶೇಷ ಅವಕಾಶ

Published

on

ನವದೆಹಲಿ: Embassy of Nepal in India ಭಾರತೀಯ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು, ವ್ಲಾಗರ್‌ಗಳು ಹಾಗೂ ಪಾಡ್‌ಕಾಸ್ಟರ್‌ಗಳಿಗೆ ವಿಶೇಷ ಅವಕಾಶ ಘೋಷಿಸಿದೆ.

ಡಿಜಿಟಲ್ ಮಾಧ್ಯಮಗಳ ಮೂಲಕ Nepalದ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಐದು ಭಾರತೀಯ ಕಂಟೆಂಟ್ ಕ್ರಿಯೇಟರ್‌ಗಳನ್ನು ಆಯ್ಕೆ ಮಾಡಿ ವಿಶೇಷ “ಫ್ಯಾಮಿಲಿಯರೈಸೇಶನ್ ಟ್ರಿಪ್” ಆಯೋಜಿಸಲಾಗುತ್ತಿದೆ.

ಐದು ಕ್ರಿಯೇಟರ್‌ಗಳಿಗೆ ವಿಶೇಷ ಪ್ರವಾಸ

ಈ ಕುರಿತು ನೇಪಾಳ ರಾಯಭಾರ ಕಚೇರಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಆಸಕ್ತ ಭಾರತೀಯ ಕಂಟೆಂಟ್ ಕ್ರಿಯೇಟರ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಯ್ಕೆಯಾದ ಐದು ಮಂದಿಗೆ ನೇಪಾಳದ ಪ್ರಮುಖ ಪ್ರವಾಸಿ ತಾಣಗಳು, ಸಾಂಸ್ಕೃತಿಕ ಕೇಂದ್ರಗಳು ಹಾಗೂ ನೈಸರ್ಗಿಕ ಸೌಂದರ್ಯ ಪ್ರದೇಶಗಳನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ನೇಪಾಳದ ಸಂಸ್ಕೃತಿ ಅನುಭವಿಸುವ ಅವಕಾಶ

ಪ್ರವಾಸದ ವೇಳೆ ಸ್ಥಳೀಯ ಜೀವನಶೈಲಿ, ಆಹಾರ ಸಂಸ್ಕೃತಿ, ಪರಂಪರೆ ಹಾಗೂ ಪ್ರವಾಸೋದ್ಯಮ ವೈಶಿಷ್ಟ್ಯಗಳನ್ನು ನೇರವಾಗಿ ಅನುಭವಿಸುವ ವ್ಯವಸ್ಥೆಯೂ ಇರಲಿದೆ.

ವಿಶೇಷವಾಗಿ ಯೂಟ್ಯೂಬ್, ಇನ್‌ಸ್ಟಾಗ್ರಾಂ, ಟ್ರಾವೆಲ್ ವ್ಲಾಗಿಂಗ್ ಹಾಗೂ ಪಾಡ್‌ಕಾಸ್ಟ್ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಭಾರತೀಯ ಯುವ ಕ್ರಿಯೇಟರ್‌ಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ.

ಡಿಜಿಟಲ್ ಪ್ರಚಾರಕ್ಕೆ ಹೊಸ ಹೆಜ್ಜೆ

ಪ್ರವಾಸೋದ್ಯಮ ಪ್ರಚಾರದಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಯುವಜನತೆಗೆ ತಲುಪುವ ಹೊಸ ಮಾರ್ಗವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.

ಆಯ್ಕೆಯಾದ ಕ್ರಿಯೇಟರ್‌ಗಳು ತಮ್ಮ ಪ್ರವಾಸ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದ್ದು, ಅದರ ಮೂಲಕ ನೇಪಾಳದ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶ ಹೊಂದಲಾಗಿದೆ.

ಭಾರತ-ನೇಪಾಳ ಬಾಂಧವ್ಯಕ್ಕೆ ಉತ್ತೇಜನ

ಭಾರತ ಮತ್ತು ನೇಪಾಳದ ನಡುವೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಬಾಂಧವ್ಯಗಳಿದ್ದು, ಇಂತಹ ಕಾರ್ಯಕ್ರಮಗಳು ಜನರಿಂದ ಜನರಿಗೆ ಇರುವ ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಅರ್ಜಿ ಹೇಗೆ ಸಲ್ಲಿಸಬೇಕು?

ಅರ್ಜಿ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗಾಗಿ Embassy of Nepal in India Official Website ಅಥವಾ ರಾಯಭಾರ ಕಚೇರಿಯ ಅಧಿಕೃತ ಸಾಮಾಜಿಕ ಜಾಲತಾಣ ಪೋಸ್ಟ್ ಪರಿಶೀಲಿಸಬಹುದು.

Continue Reading

Trending