ಸುತ್ತ ಮುತ್ತ
ಅಯೋಧ್ಯೆ ‘ದೀಪೋತ್ಸವ’ ಗಿನ್ನೆಸ್ ದಾಖಲೆ! ಸರಯೂ ನದಿ ತೀರದಲ್ಲಿ ಬೆಳಗಿದ 22 ಲಕ್ಷ ಮಣ್ಣಿನ ದೀಪಗಳು
ಪ್ರತಿ ವರ್ಷದಂತೆ ದೀಪಾವಳಿ ಹಿನ್ನೆಲೆಯಲ್ಲಿಶ್ರೀ ರಾಮಜನ್ಮಭೂಮಿ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಸರಕಾರದಿಂದ ಆಯೋಜಿಸಲಾಗುವ ಭವ್ಯ ದೀಪೋತ್ಸವ ಕಾರ್ಯಕ್ರಮವು ಈ ಬಾರಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದೆ.22.23 ಲಕ್ಷ ಮಣ್ಣಿನ ಹಣತೆಗಳನ್ನು ಒಂದೇ ಬಾರಿಗೆ ಬೆಳಗಲಾಗಿದೆ. ಈ ಮೂಲಕ ಕಳೆದ ವರ್ಷ 15.76 ಲಕ್ಷ ದೀಪಗಳನ್ನು ಬೆಳಗುವ ಮೂಲಕ ನಿರ್ಮಿಸಲಾಗಿದ್ದ ದಾಖಲೆಯನ್ನು ಮುರಿಯಲಾಗಿದೆ. ಇದಕ್ಕೂ ಮುನ್ನ , ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಸಂಪುಟ ಸಚಿವರು ಸೇರಿದಂತೆ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಸಂಜೆ ವೇಳೆ ನಡೆದ ‘ಶೋಭಾಯಾತ್ರೆ’ಯಲ್ಲಿ ಭಾಗಿಯಾದರು. ರಾಮ-ಸೀತೆ -ಲಕ್ಷ್ಮಣ ವೇಷಧಾರಿಗಳು ಕುಳಿತಿದ್ದ ರಥವನ್ನು ಎಳೆದು ಜೈಕಾರ ಕೂಗಿದ್ದು ವಿಶೇಷವಾಗಿತ್ತು.
2024ರ ಜ.22ರಂದು ರಾಮ ಮಂದಿರದ ಉದ್ಘಾಟನೆ ಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.2017 ರಿಂದ ಆರಂಭವಾದ ಸರಯೂ ನದಿ ತೀರದಲ್ಲಿನ ಅದ್ದೂರಿ ದೀಪೋತ್ಸವ ಕಾರ್ಯಕ್ರಮದ ಭಾಗವಾಗಿ ಕಳೆದ ವರ್ಷ ರಾಮ್ ಕೀ ಪೈದಿಯ 51 ಘಾಟ್‌ಗಳಲ್ಲಿ ಒಟ್ಟಾರೆ 15.76 ಲಕ್ಷ ಮಣ್ಣಿನ ಹಣತೆಗಳಲ್ಲಿ ದೀಪವನ್ನು ಬೆಳಗುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿತ್ತು. ಆ ಬಳಿಕ 18.82 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸಿದ ದಾಖಲೆಯು ಉಜ್ಜಯಿನಿಯ ಹೆಸರಲ್ಲಿತ್ತು.ತ್ರೇತಾಯುಗದಲ್ಲಿ ಲಂಕಾದಲ್ಲಿ ವಿಜಯ ಸಾಧಿಸಿ ಸೀತೆಯನ್ನು ಅಯೋಧ್ಯೆಯೆ ಶ್ರೀರಾಮ ಕರೆತಂದ ವೇಳೆ ದೀಪ ಬೆಳಗುವ ಮೂಲಕ ಸ್ಥಳೀಯರು ಭರ್ಜರಿ ಸ್ವಾಗತ ಕೋರಿದ್ದರು. ಅದನ್ನು ಮರುಸೃಷ್ಟಿಸುವ ಯತ್ನ ಜನರಿಂದಲೇ ಆಗಿದೆ ಎಂದು ಉ.ಪ್ರ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಜ್ಯ
Government Office ಗಳಿಗೆ ಡಿಸಿ ದಿಢೀರ್ ಭೇಟಿ; ತಡವಾಗಿ ಬಂದ ಅಧಿಕಾರಿಗಳ ವಿರುದ್ಧ ಕಠಿಣ ಸೂಚನೆ
ಬೆಂಗಳೂರು ಗ್ರಾಮಾಂತರ: Government Office ಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯಕ್ಕೆ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ಸೋಮವಾರ ಬೆಳಗ್ಗೆ ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿದರು. ಬೆಳಗ್ಗೆ 10.30ರಿಂದ 11 ಗಂಟೆಯೊಳಗೆ ನಡೆದ ಈ ಪರಿಶೀಲನೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕ ಮೂಡಿಸಿತು.
ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ, ಭೂ ದಾಖಲೆ, ಆರೋಗ್ಯ, ಕೃಷಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸೇರಿದಂತೆ ಹಲವು ಕಚೇರಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಸಮಯಕ್ಕೆ ಕಚೇರಿಗೆ ಬಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಿದರು.
ರಾಜ್ಯ ಸರ್ಕಾರ ಇತ್ತೀಚೆಗೆ ಸರ್ಕಾರಿ ನೌಕರರಿಗೆ ‘ಕರ್ತವ್ಯ’ ಡಿಜಿಟಲ್ ಹಾಜರಾತಿ ಆಪ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿದೆ. ಇದರಂತೆ ಬೆಳಗ್ಗೆ 10 ಗಂಟೆಗೆ ಲಾಗಿನ್ ಹಾಗೂ ಸಂಜೆ 5.30ಕ್ಕೆ ಲಾಗ್‌ಔಟ್ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಪ್‌ನಲ್ಲಿ ಹಾಜರಾತಿ ದಾಖಲಿಸಿದ್ದಾರೆಯೇ, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆಯೇ ಹಾಗೂ ಫೀಲ್ಡ್ ವರ್ಕ್‌ಗೆ ತೆರಳಿದ್ದರೆ ಅದರ ವಿವರವನ್ನು ಆಪ್‌ನಲ್ಲಿ ದಾಖಲಿಸಿದ್ದಾರೆಯೇ ಎಂಬುದನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಪರಿಶೀಲನೆ ವೇಳೆ ಕೆಲವು ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿಗಳು ಖಾಲಿ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು, ಇಲ್ಲದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಈ ಅನಿರೀಕ್ಷಿತ ಭೇಟಿ ಸಿಬ್ಬಂದಿಯನ್ನು ಅಚ್ಚರಿಗೆ ದೂಡಿದ್ದು, ಇಂತಹ ಪರಿಶೀಲನೆಗಳು ನಿರಂತರವಾಗಿ ನಡೆದರೆ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚುವುದರ ಜೊತೆಗೆ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಆಗಲಿವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸುತ್ತ ಮುತ್ತ
Borivali Railway Station Viral Video ಪ್ರೇಮಿಗಳ ಹಂಗಾಮಾ? 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ ವೈರಲ್ ವಿಡಿಯೋ
ಮುಂಬೈ: Borivali Railway Station ದಲ್ಲಿ ನಡೆದಿರುವ ಎನ್ನಲಾದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಯುವಕನ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ತಿಳಿ ನೀಲಿ ಬಣ್ಣದ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿರುವ ಯುವಕನೊಬ್ಬ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿ, ಯುವತಿಯ ಕಾಲನ್ನು ಬಿಗಿಯಾಗಿ ಹಿಡಿದಿರುವುದು ಕಂಡುಬರುತ್ತದೆ. ಹಸಿರು-ಬಿಳಿ ಬಣ್ಣದ ಉಡುಪು ಧರಿಸಿರುವ ಯುವತಿ ಆತನ ಹಿಡಿತದಿಂದ ಹೊರಬರಲು ಹಲವು ಬಾರಿ ಪ್ರಯತ್ನಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಪ್ರೇಮಿಗಳಾಗಿರಬಹುದು ಎಂಬ ಹೇಳಿಕೆಗಳು ಹರಿದಾಡುತ್ತಿವೆ. ಆದರೆ ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಘಟನೆಯ ವೇಳೆ ಸ್ಥಳದಲ್ಲಿ ಜನರು ಸೇರಿ ದೃಶ್ಯ ವೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ. ಅಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಯುವಕನನ್ನು ಪ್ರಶ್ನಿಸಿರುವ ದೃಶ್ಯವೂ ವೈರಲ್ ಕ್ಲಿಪ್‌ನಲ್ಲಿ ಇದೆ. ಈ ವಿಡಿಯೋವನ್ನು “True Love at Borivali Railway Station” ಎಂಬ ಶೀರ್ಷಿಕೆಯಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದುವರೆಗೆ 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ.
ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಯುವಕನ ಪ್ರೀತಿಯನ್ನು ಸಮರ್ಥಿಸುವ ಕಾಮೆಂಟ್‌ಗಳನ್ನು ಮಾಡಿದ್ದರೆ, ಅನೇಕರು ಜನದಟ್ಟಣೆಯ ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಈ ಘಟನೆಯ ಕುರಿತು ಮುಂಬೈ ಪೊಲೀಸರು ಅಥವಾ ಭಾರತೀಯ ರೈಲ್ವೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ವಿಡಿಯೋದ ನಿಖರ ಸಂದರ್ಭ, ದಿನಾಂಕ ಹಾಗೂ ಘಟನೆಯ ಹಿನ್ನೆಲೆ ಸ್ವತಂತ್ರವಾಗಿ ದೃಢಪಟ್ಟಿಲ್ಲ.
ರಾಜ್ಯ
S Janaki ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ನಾಮಕರಣ ಮಾಡಿ: ಕೇರ್‌ಟೇಕರ್ ನವೀನ್ ಮನವಿ
ಮೈಸೂರು: S Janaki ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ಮೈಸೂರಿನ ಗದ್ದಿಗೆ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಅವರ ಕೇರ್‌ಟೇಕರ್ ನವೀನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಜಾನಕಮ್ಮನವರ ಕೊನೆಯ ದಿನಗಳ ನೆನಪುಗಳನ್ನು ಭಾವುಕರಾಗಿ ಹಂಚಿಕೊಂಡರು.
“ಜಾನಕಮ್ಮ ಯಾವಾಗಲೂ ‘ನಾನು ಕರ್ನಾಟಕದಲ್ಲೇ, ಅದರಲ್ಲೂ ಮೈಸೂರಿನಲ್ಲೇ ಇರುತ್ತೇನೆ’ ಎಂದು ಹೇಳುತ್ತಿದ್ದರು. ಹೈದರಾಬಾದ್‌ನಲ್ಲಿ ಅರಮನೆಯಂತಹ ದೊಡ್ಡ ಮನೆ ಇದ್ದರೂ ಅವರಿಗೆ ಮೈಸೂರಿನ ಮೇಲೆಯೇ ಅಪಾರ ಅಭಿಮಾನವಿತ್ತು. ಕೊನೆಯ ದಿನಗಳನ್ನು ಸಹ ಅವರು ಇಲ್ಲಿಯೇ ಕಳೆಯಲು ಬಯಸಿದ್ದರು,” ಎಂದು ನವೀನ್ ಹೇಳಿದರು.
ಮಗನ ಅಗಲಿಕೆಯ ಬಳಿಕ ಎಸ್. ಜಾನಕಿ ಮಾನಸಿಕವಾಗಿ ನೊಂದಿದ್ದು, ಕಳೆದ ಎರಡು ವರ್ಷಗಳಿಂದ ಮೈಸೂರಿನಲ್ಲಿ ನವೀನ್ ಅವರ ಮನೆಯಲ್ಲೇ ವಾಸವಿದ್ದರು ಎಂದು ಅವರು ತಿಳಿಸಿದರು. “ನಾನು ಎಲ್ಲಿಗೂ ಹೋಗುವುದಿಲ್ಲ, ನಿಮ್ಮ ಜೊತೆಯಲ್ಲೇ ಇರುತ್ತೇನೆ” ಎಂದು ಜಾನಕಮ್ಮ ಹೇಳುತ್ತಿದ್ದರು ಎಂದು ನೆನೆದು ನವೀನ್ ಕಣ್ಣೀರಿಟ್ಟರು. ಅವರ ಆರೈಕೆಯನ್ನು ಭಾಗ್ಯ ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದೂ ವಿವರಿಸಿದರು.
ನವೀನ್ ಅವರು ತಮ್ಮ ಬಾಲ್ಯದಿಂದಲೇ ಎಸ್. ಜಾನಕಿ ಅವರ ಅಭಿಮಾನಿಯಾಗಿದ್ದು, 2018ರಲ್ಲಿ ಮೈಸೂರಿನಲ್ಲಿ ನಡೆದ ಅವರ ಕೊನೆಯ ಸಾರ್ವಜನಿಕ ಸಂಗೀತ ಕಾರ್ಯಕ್ರಮವನ್ನು ನೆನಪಿಸಿಕೊಂಡರು. ಆ ಕಾರ್ಯಕ್ರಮದ ಬಳಿಕ ಅವರು ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಲು ಹೋಗುತ್ತಿರಲಿಲ್ಲ ಎಂದು ಹೇಳಿದರು.
ಎಸ್. ಜಾನಕಿ ಅವರ ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ಇಟ್ಟರೆ ಮುಂದಿನ ಪೀಳಿಗೆಗೂ ಅವರ ಸಾಧನೆ ನೆನಪಾಗುತ್ತದೆ. ಈ ಮೂಲಕ ಕನ್ನಡ ಹಾಗೂ ಭಾರತೀಯ ಸಂಗೀತ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಗೆ ಸರ್ಕಾರ ಶಾಶ್ವತ ಗೌರವ ಸಲ್ಲಿಸಬೇಕು ಎಂದು ನವೀನ್ ಮನವಿ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
-
ಅಪರಾಧ19 ಗಂಟೆಗಳು agoTelangana ‘ಇದು ನನ್ನ ಆಯ್ಕೆ’ ಎಂದ ಎಸ್ಐಗೆ ದುಬಾರಿ ಆಯಿತು; ಡಿಜಿಪಿಯಿಂದ ಅಮಾನತು ಸೂಚನೆ
-
ಕ್ರೀಡೆ20 ಗಂಟೆಗಳು agoEngland ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್? ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ
-
ಬೆಂಗಳೂರು20 ಗಂಟೆಗಳು ago₹13 Crores ವೆಚ್ಚ, 2 ವರ್ಷ ಕಾಯುವಿಕೆ! ವಿಜಯನಗರ ಅಂಡರ್ಗ್ರೌಂಡ್ ಮಾರುಕಟ್ಟೆ ಇನ್ನೂ ಬಂದ್; 80ಕ್ಕೂ ಹೆಚ್ಚು ಮಳಿಗೆಗಳು ಖಾಲಿ
-
ದೇಶ17 ಗಂಟೆಗಳು agoPM Narendra Modi ಜಕಾರ್ತಾ ಭೇಟಿ ಐತಿಹಾಸಿಕ; ಭಾರತ-ಇಂಡೋನೇಷ್ಯಾ ನಡುವೆ ಹಲವು ಮಹತ್ವದ ಒಪ್ಪಂದಗಳು
-
ದೇಶ21 ಗಂಟೆಗಳು agoThailand ಪಬ್ನಲ್ಲಿ ಭೀಕರ ಅಗ್ನಿ ಅವಘಡ; 27 ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ
-
ದೇಶ20 ಗಂಟೆಗಳು agoKadapa ದಲ್ಲಿ ಕೋವಿಡ್ ಆತಂಕ; ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ
-
ರಾಜ್ಯ20 ಗಂಟೆಗಳು agoKarnataka SIR ಅಭಿಯಾನಕ್ಕೆ ಭರ್ಜರಿ ವೇಗ; ಶೇ.92.95 ಕೆಲಸ ಪೂರ್ಣ
-
ರಾಜ್ಯ13 ಗಂಟೆಗಳು agoBakrid ವೇಳೆ ಗೋಹತ್ಯೆ ತಡೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ; ತಮಿಳುನಾಡು ಸರ್ಕಾರಕ್ಕೆ ಸದ್ಯದ ನೆಮ್ಮದಿ
