Connect with us

ದೇಶ

RBI ನೀತಿಯಿಂದ ಬ್ಯಾಂಕಿಂಗ್ ವಲಯಕ್ಕೆ ಪರಿಣಾಮ? ಫಿಚ್ ವರದಿಯಲ್ಲಿ ಪ್ರಮುಖ ಮಾಹಿತಿ

Published

on

ನವದೆಹಲಿ: ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಜಾರಿಗೆ ತಂದಿರುವ ಲಿಕ್ವಿಡಿಟಿ (ದ್ರವ್ಯತೆ) ನಿಯಂತ್ರಣ ಕ್ರಮಗಳು ಬ್ಯಾಂಕುಗಳ ಲಾಭದಾಯಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ ರೇಟಿಂಗ್ಸ್ (Fitch Ratings) ಎಚ್ಚರಿಕೆ ನೀಡಿದೆ.

ಫಿಚ್ ವರದಿ ಪ್ರಕಾರ, 2026-27ನೇ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ವಲಯದ ಲಾಭದಾಯಕತೆ (ROA) ಈಗಿನ ಅಂದಾಜಿನ ಶೇ.3.1ಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ. ಬ್ಯಾಂಕುಗಳ ಲಾಭದಲ್ಲಿ ಸುಮಾರು 20ರಿಂದ 30 ಬೇಸಿಸ್ ಪಾಯಿಂಟ್‌ಗಳ (BPS) ಇಳಿಕೆ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿನ ಭೌರಾಜಕೀಯ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ನಿಧಿ ವೆಚ್ಚ ಬ್ಯಾಂಕುಗಳ ಕಾರ್ಯಾಚರಣಾ ಲಾಭದ ಮೇಲೆ ಒತ್ತಡ ತರಲಿದ್ದು, ಸಾಲ ಮತ್ತು ಠೇವಣಿ ನಡುವಿನ ಅಸಮತೋಲನದಿಂದ ಬ್ಯಾಂಕುಗಳು ಹೆಚ್ಚಿನ ಠೇವಣಿ ಸಂಗ್ರಹಕ್ಕೆ ಒತ್ತು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.

ಆರ್‌ಬಿಐ 2024ರ ಡಿಸೆಂಬರ್‌ನಿಂದ ಇದುವರೆಗೆ ಒಟ್ಟು 125 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರವನ್ನು ಕಡಿತಗೊಳಿಸಿದ್ದರೂ, ಅದರ ಲಾಭ ಸಂಪೂರ್ಣವಾಗಿ ಠೇವಣಿದಾರರಿಗೆ ತಲುಪಿಲ್ಲ. ಜನವರಿ ವೇಳೆಗೆ ಕೇವಲ 44 ಬೇಸಿಸ್ ಪಾಯಿಂಟ್‌ಗಳಷ್ಟು ಮಾತ್ರ ಠೇವಣಿ ಬಡ್ಡಿದರದಲ್ಲಿ ಇಳಿಕೆ ಕಂಡುಬಂದಿದೆ.

ಇನ್ನೊಂದೆಡೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲಿಕ್ವಿಡಿಟಿ ಪ್ರಮಾಣವೂ ಕುಸಿಯುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕಿಂಗ್ ವ್ಯವಸ್ಥೆಯ ಹೆಚ್ಚುವರಿ ಲಿಕ್ವಿಡಿಟಿ ಒಟ್ಟು ಠೇವಣಿಗಳ ಶೇ.0.5ಕ್ಕೆ ಇಳಿದಿದ್ದು, ಫೆಬ್ರವರಿಯಲ್ಲಿ ಅದು ಶೇ.0.8ರಷ್ಟಿತ್ತು. ಇದೇ ಅವಧಿಯಲ್ಲಿ ರೂಪಾಯಿ ಮೌಲ್ಯವು ಸುಮಾರು 4.5% ಕುಸಿದಿರುವುದರಿಂದ ಸ್ಥಳೀಯ ಕರೆನ್ಸಿ ಲಿಕ್ವಿಡಿಟಿ ಮೇಲೂ ಒತ್ತಡ ಹೆಚ್ಚಾಗಿದೆ.

ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್ ಠೇವಣಿಗಳ ಮಾದರಿಯಲ್ಲೂ ಮಹತ್ವದ ಬದಲಾವಣೆ ಕಂಡುಬಂದಿದೆ. ಉಳಿತಾಯ (Savings) ಠೇವಣಿಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ದೀರ್ಘಾವಧಿಯ ಸಾವಧಿ ಠೇವಣಿಗಳ (Fixed Deposits) ಪ್ರಮಾಣ ಹೆಚ್ಚುತ್ತಿದೆ.

ಮಾರ್ಚ್ 2026ರ ವೇಳೆಗೆ ಒಟ್ಟು ಬ್ಯಾಂಕ್ ಠೇವಣಿಗಳಲ್ಲಿ ಕೌಟುಂಬಿಕ ವಲಯದ ಪಾಲು 59.3% ಆಗಿದ್ದು, ಒಂದು ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಸಾವಧಿ ಠೇವಣಿಗಳ ಪಾಲು 46.3% ತಲುಪಿದೆ.

ಇದರ ನಡುವೆ ಬ್ಯಾಂಕ್ ಸಾಲ ವಿತರಣೆಯಲ್ಲೂ ಏರಿಕೆ ದಾಖಲಾಗಿದೆ. 2025-26ರಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಸಾಲ ಬೆಳವಣಿಗೆ 14.1% ಆಗಿದ್ದು, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಸಾಲ ವಿತರಣೆಯಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

Digital Payments ₹2,000 ಮೇಲ್ಪಟ್ಟ UPI ಪಾವತಿಗೆ ಶುಲ್ಕ? ಕೇಂದ್ರ ಸರ್ಕಾರದ ಹೊಸ ಪ್ರಸ್ತಾವ ಏನು ಹೇಳುತ್ತದೆ?

Published

on

ನವದೆಹಲಿ: ದೇಶದಲ್ಲಿ ಡಿಜಿಟಲ್ ಪಾವತಿ (Digital Payments) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ. ₹2,000ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ (UPI Payments) ವ್ಯವಹಾರಗಳಿಗೆ ವ್ಯಾಪಾರಿ ರಿಯಾಯಿತಿ ದರ (Merchant Discount Rate – MDR) ವಿಧಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಆದರೆ, ವ್ಯಕ್ತಿಯಿಂದ ವ್ಯಕ್ತಿಗೆ (P2P) ಮಾಡುವ ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂಬುದು ಪ್ರಮುಖ ಅಂಶವಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆಯಲ್ಲಿ, ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ ಅಧಿಸೂಚಿತ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ ಎಂಡಿಆರ್ ವಿಧಿಸಲು ಅವಕಾಶ ಕಲ್ಪಿಸುವ ಪ್ರಸ್ತಾಪವಿದೆ. ಈ ಮಸೂದೆ ಜಾರಿಯಾದರೆ, ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ ಯುಪಿಐ ವ್ಯವಹಾರಗಳ ಮೇಲೆ 0.25% ರಿಂದ 0.40% ವರೆಗೆ ಶುಲ್ಕ ವಿಧಿಸುವ ಸಾಧ್ಯತೆ ಇದೆ.

ಸರ್ಕಾರದ ಮೂಲಗಳ ಪ್ರಕಾರ, ಈ ಪ್ರಸ್ತಾಪವನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಪ್ರಸ್ತುತ ಇದು ಪರಿಶೀಲನಾ ಹಂತದಲ್ಲಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ₹2,000ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ವ್ಯವಹಾರಗಳು ಒಟ್ಟು ವ್ಯವಹಾರಗಳ ಕೇವಲ 5% ಮಾತ್ರ ಇದ್ದರೂ, ಅವುಗಳ ಒಟ್ಟು ಮೌಲ್ಯವು ಸುಮಾರು 65% ರಷ್ಟಿದೆ. ಹೀಗಾಗಿ ಹೆಚ್ಚಿನ ಮೌಲ್ಯದ ವಾಣಿಜ್ಯ ವ್ಯವಹಾರಗಳಿಗೆ ಮಾತ್ರ ಈ ಕ್ರಮ ಅನ್ವಯವಾಗುವ ಸಾಧ್ಯತೆ ಇದೆ.

ದೈನಂದಿನ ಬಳಕೆಯ ಹಾಲು, ತರಕಾರಿ, ದಿನಸಿ ಖರೀದಿ, ಆಟೋ ಅಥವಾ ಟ್ಯಾಕ್ಸಿ ಪಾವತಿ ಸೇರಿದಂತೆ ಸಾಮಾನ್ಯ ಗ್ರಾಹಕರ ಬಹುತೇಕ ವ್ಯವಹಾರಗಳಿಗೆ ಈ ಶುಲ್ಕ ಅನ್ವಯವಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜುಲೈ ತಿಂಗಳಲ್ಲಿ ದೇಶದಲ್ಲಿ 23.7 Billion (2,370 ಕೋಟಿ) ಯುಪಿಐ ವಹಿವಾಟುಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ ₹29.9 ಲಕ್ಷ ಕೋಟಿ ತಲುಪಿದೆ. ಡಿಜಿಟಲ್ ಪಾವತಿಗಳ ವೇಗದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಬ್ಯಾಂಕುಗಳು ಮತ್ತು ಪಾವತಿ ಸೇವಾ ಸಂಸ್ಥೆಗಳ ವೆಚ್ಚವನ್ನು ಸಮತೋಲನಗೊಳಿಸಲು ಸರ್ಕಾರ ಈ ಕ್ರಮವನ್ನು ಪರಿಗಣಿಸುತ್ತಿದೆ.

ಅಧಿಕಾರಿಗಳ ಪ್ರಕಾರ, ಈ ಪ್ರಸ್ತಾವ ಜಾರಿಯಾದರೂ ದೇಶದ 95% ಯುಪಿಐ ವ್ಯವಹಾರಗಳ ಮೇಲೆ ಯಾವುದೇ ಹೆಚ್ಚುವರಿ ಶುಲ್ಕ ಬೀಳುವುದಿಲ್ಲ. ಕೆಲವೇ ಹೆಚ್ಚಿನ ಮೌಲ್ಯದ ವ್ಯಾಪಾರಿ ವ್ಯವಹಾರಗಳಿಗೆ ಮಾತ್ರ ಎಂಡಿಆರ್ ಅನ್ವಯಿಸುವ ಸಾಧ್ಯತೆ ಇದೆ.

Continue Reading

ದೇಶ

Parliament Monsoon Session ಇಂದು ಪುನರಾರಂಭ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆ ರಾಜ್ಯಸಭೆಯಲ್ಲಿ

Published

on

ನವದೆಹಲಿ: ನಿರಂತರ ಕಲಾಪ ಮುಂದೂಡಿಕೆ ಹಾಗೂ ವಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ ಸಂಸತ್ತಿನ ಮಳೆಗಾಲದ ಅಧಿವೇಶನ (Parliament Monsoon Session) ಬುಧವಾರ ಮತ್ತೆ ಪುನರಾರಂಭವಾಗುತ್ತಿದೆ. ಲೋಕಸಭೆ (Lok Sabha) ಮತ್ತು ರಾಜ್ಯಸಭೆ (Rajya Sabha) ಎರಡೂ ಸದನಗಳಲ್ಲಿ ಹಲವು ಮಹತ್ವದ ಮಸೂದೆಗಳು ಹಾಗೂ ರಾಜಕೀಯವಾಗಿ ಸೂಕ್ಷ್ಮ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

ಇಂದಿನ ಕಲಾಪದಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು **’ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳು) ತಿದ್ದುಪಡಿ ಮಸೂದೆ–2026’**ಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲು ಮುಂದಾಗಲಿದ್ದಾರೆ. ಈ ಮಸೂದೆಯ ಮೂಲಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆಯನ್ನು 38ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಈ ಮಸೂದೆಗೆ ಈಗಾಗಲೇ ಲೋಕಸಭೆಯ ಅನುಮೋದನೆ ದೊರೆತಿದೆ.

ಇನ್ನೊಂದೆಡೆ, ಜುಲೈ 20ರಂದು ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ವಿರುದ್ಧ ಭದ್ರತಾ ಪಡೆಗಳು ಬಲಪ್ರಯೋಗ ನಡೆಸಿದ ವಿಚಾರವನ್ನು ಮುಂದಿಟ್ಟು ವಿಪಕ್ಷಗಳು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ಇದರ ಜೊತೆಗೆ, ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಬಲಪ್ರಯೋಗ, ಭದ್ರತಾ ಪಡೆಗಳ ಕ್ರಮ ಹಾಗೂ ಇತರೆ ರಾಜಕೀಯ ವಿಷಯಗಳ ಕುರಿತು ತಕ್ಷಣವೇ ಚರ್ಚೆ ನಡೆಸಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಗೈರುಹಾಜರಿಯನ್ನೂ ಪ್ರಶ್ನಿಸುವ ಸಾಧ್ಯತೆ ಇದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದಿನ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳಲ್ಲಿ ಮತ್ತೆ ಗದ್ದಲದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದ್ದು, ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರ ತೀವ್ರಗೊಳ್ಳುವ ನಿರೀಕ್ಷೆಯಿದೆ.

Continue Reading

ದೇಶ

ಬೆಳಗಿನ ಉಪಾಹಾರ ಸಭೆಯಲ್ಲಿ ಹೊಸ ಸಂಸದರಿಗೆ PM Narendra Modi ಕ್ಲಾಸ್: ಪತ್ರದಿಂದ ಫೋನ್‌ವರೆಗೆ ಮಹತ್ವದ ಸಲಹೆಗಳು

Published

on

ನವದೆಹಲಿ: ಸಂಸತ್‌ ಅಧಿವೇಶನವು ಮೂರನೇ ವಾರವೂ ಸ್ಥಗಿತಗೊಂಡಿರುವ ನಡುವೆಯೇ, PM Narendra Modi ಅವರು ಎನ್‌ಡಿಎ (NDA) ಮೈತ್ರಿಕೂಟದ ಹೊಸ ರಾಜ್ಯಸಭಾ ಸದಸ್ಯರೊಂದಿಗೆ ಬುಧವಾರ ಬೆಳಗಿನ ಉಪಹಾರ ಸಭೆ ನಡೆಸಿದರು. ಈ ಸಭೆಯಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದ 30ಕ್ಕೂ ಹೆಚ್ಚು ಸಂಸದರು ಭಾಗವಹಿಸಿದ್ದರು.

ಜೂನ್‌ನಲ್ಲಿ ನಡೆದ ಚುನಾವಣೆಯ ಬಳಿಕ ರಾಜ್ಯಸಭೆಗೆ ಆಯ್ಕೆಯಾದ ಹೊಸ ಸದಸ್ಯರಿಗೆ ಪ್ರಧಾನಿ ಮೋದಿ ಸಂಸತ್ತಿನ ಕಾರ್ಯವೈಖರಿ, ಸಾರ್ವಜನಿಕ ಜೀವನದಲ್ಲಿ ಪಾಲಿಸಬೇಕಾದ ನಡವಳಿಕೆ ಹಾಗೂ ಜನಸೇವೆಯ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು.

ಮೂಲಗಳ ಪ್ರಕಾರ, ಸಂಸದರು ತಮ್ಮ ಅಧಿಕೃತ ಲೆಟರ್‌ಹೆಡ್ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಜೊತೆಗೆ, ಸಾರ್ವಜನಿಕರು ಅಥವಾ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ಎಂದಿಗೂ ಅಸಭ್ಯವಾಗಿ ವರ್ತಿಸಬಾರದು ಎಂದು ಸೂಚಿಸಿದರು.

ಪ್ರತಿಪಕ್ಷದ ಸದಸ್ಯರಿಂದಲೂ ಉತ್ತಮ ವಿಚಾರಗಳನ್ನು ಕಲಿಯುವ ಮನೋಭಾವ ಇರಬೇಕು ಎಂದು ಹೇಳಿದ ಪ್ರಧಾನಿ, ಸಂಸತ್‌ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮತ್ತು 100 ಪ್ರತಿಶತ ಹಾಜರಾತಿ ಕಾಪಾಡಿಕೊಳ್ಳಲು ಕರೆ ನೀಡಿದರು.

ಸಭೆಯಲ್ಲಿ ಕೆಲ ಸಂಸದರು ಪ್ರಧಾನಿ ಅವರ ವೈಯಕ್ತಿಕ ದಿನಚರಿಯ ಬಗ್ಗೆ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಮೋದಿ, ತಾವು ಮಲಗಲು ಹೋದ ಬಳಿಕ ಎಂಟು ಸೆಕೆಂಡುಗಳಲ್ಲಿ ನಿದ್ರಿಸುತ್ತೇನೆ ಹಾಗೂ ದಿನಕ್ಕೆ ಸುಮಾರು ಮೂರು ಗಂಟೆಗಳಷ್ಟೇ ನಿದ್ರೆ ಮಾಡುತ್ತೇನೆ ಎಂದು ತಿಳಿಸಿದರು.

ಜೆಟ್‌ ಲ್ಯಾಗ್‌ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶ ಪ್ರಯಾಣ ಮಾಡುವಾಗ ವಿಮಾನಕ್ಕೆ ಹತ್ತಿದ ತಕ್ಷಣ ತಾವು ಹೋಗುವ ದೇಶದ ಸಮಯಕ್ಕೆ ಗಡಿಯಾರವನ್ನು ಹೊಂದಿಸಿಕೊಳ್ಳುತ್ತೇನೆ. ಇದರಿಂದ ಸಮಯದ ವ್ಯತ್ಯಾಸದ ಸಮಸ್ಯೆ ಎದುರಾಗುವುದಿಲ್ಲ ಎಂದು ವಿವರಿಸಿದರು.

“ನಾನು ಯಾವ ಕ್ಷಣದಲ್ಲಿ ಇದ್ದೇನೋ, ಅದನ್ನೇ ಸಂಪೂರ್ಣವಾಗಿ ಬದುಕುತ್ತೇನೆ. ಅದೇ ಉತ್ತಮ ಫಲಿತಾಂಶ ನೀಡುತ್ತದೆ” ಎಂದು ಪ್ರಧಾನಿ ಹೊಸ ಸಂಸದರಿಗೆ ಸಲಹೆ ನೀಡಿದರು.

ಈ ಸಭೆಯಲ್ಲಿ ಇತ್ತೀಚೆಗೆ ಇತರ ಪಕ್ಷಗಳಿಂದ ಬಿಜೆಪಿ ಅಥವಾ ಎನ್‌ಡಿಎಗೆ ಸೇರ್ಪಡೆಯಾಗಿ ರಾಜ್ಯಸಭೆಗೆ ಬಂದ ಸದಸ್ಯರೂ ಭಾಗವಹಿಸಿದ್ದರು. ಹೊಸ ಸಂಸದರು ತಮ್ಮ ಸಂಸದೀಯ ಜೀವನವನ್ನು ಪರಿಣಾಮಕಾರಿಯಾಗಿ ರೂಪಿಸಿಕೊಳ್ಳಲು ಈ ಸಭೆ ಮಾರ್ಗದರ್ಶಕವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Continue Reading

Trending