Connect with us

ದೇಶ

Pralhad Joshi ಸಹೋದರನ ವಿರುದ್ಧ FIR; ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಆರೋಪ!

Published

on

ಧಾರವಾಡ: ಕೇಂದ್ರ ಸಚಿವ Pralhad Joshi ಅವರ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದಡಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಲ್ಯಾಣನಗರ ನಿವಾಸಿ ರಾಮಾ ಕುಲಕರ್ಣಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ, ಗೋಪಾಲ್ ಜೋಶಿ ಅವರು ಕಳೆದ ನಾಲ್ಕು ವರ್ಷಗಳಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ರಾಮಾ ಕುಲಕರ್ಣಿ ಆರೋಪಿಸಿದ್ದಾರೆ. 2022ರ ಮೇ 29ರಂದು ಮಾಳಮಡ್ಡಿಯ ಪೂರ್ಣ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ಫ್ಲ್ಯಾಟ್‌ಗೆ ಬಂದಿದ್ದ ಗೋಪಾಲ್ ಜೋಶಿ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಲಾಗಿತ್ತು ಎಂದು ರಾಮಾ ಕುಲಕರ್ಣಿ ಆರೋಪಿಸಿದ್ದಾರೆ. ನಿರಂತರ ಕಿರುಕುಳದಿಂದಾಗಿ ಕುಟುಂಬದವರ ಸಲಹೆಯಂತೆ ಇದೀಗ ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಗೋಪಾಲ್ ಜೋಶಿ ವಿರುದ್ಧ FIR

ರಾಮಾ ಕುಲಕರ್ಣಿ ಅವರ ದೂರಿನ ಆಧಾರದ ಮೇಲೆ ವಿದ್ಯಾಗಿರಿ ಪೊಲೀಸರು Gopal Joshi ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯ, ಕಿರುಕುಳ ಹಾಗೂ ಬೆದರಿಕೆ ಸೇರಿದಂತೆ ದೂರಿನಲ್ಲಿ ಮಾಡಲಾಗಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆದರೆ, ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಗೋಪಾಲ್ ಜೋಶಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಮ್ಮಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಹಾಗೂ ಮಾನಹಾನಿ ಮಾಡುವ ಬೆದರಿಕೆಯೊಂದಿಗೆ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಗೋಪಾಲ್ ಜೋಶಿಯಿಂದ ಪ್ರತಿದೂರು

ಈ ಬೆಳವಣಿಗೆಯ ಬೆನ್ನಲ್ಲೇ ಗೋಪಾಲ್ ಜೋಶಿ ಅವರು ಹುಬ್ಬಳ್ಳಿಯ ಕೇಶವಾಪುರ ಪೊಲೀಸ್ ಠಾಣೆಯಲ್ಲಿ ರಾಮಾ ಕುಲಕರ್ಣಿ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಹಲವು ಬಾರಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಆದರೆ ತಾವು ಹಣ ನೀಡದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಹೀಗಾಗಿ ಈ ಪ್ರಕರಣದಲ್ಲಿ ದೂರುದಾರರು ಮಾಡಿರುವ ಆರೋಪಗಳು ಹಾಗೂ ಗೋಪಾಲ್ ಜೋಶಿ ನೀಡಿರುವ ಪ್ರತಿದೂರು ಎರಡೂ ಇದೀಗ ಪೊಲೀಸರ ತನಿಖೆಯ ವ್ಯಾಪ್ತಿಗೆ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಹೇಳಿಕೆಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru ಕಂಠೀರವ ಸ್ಟುಡಿಯೋ ಬಳಿ ಭೀಕರ ದುರಂತ: ಮಣ್ಣು ಕುಸಿದು ಕಾರ್ಮಿಕ ಸಾವು, ಹಲವರು ಸಿಲುಕು

Published

on

ಬೆಂಗಳೂರು: ರಾಜಧಾನಿ Bengaluru ರಿನ Kanteerava Studio ಮುಂಭಾಗ ಹಾಗೂ ಡಾ. ರಾಜ್‌ಕುಮಾರ್ ಪುಣ್ಯಭೂಮಿ ಸಮೀಪ ನಡೆಯುತ್ತಿದ್ದ ಅಂಡರ್‌ಪಾಸ್ ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ಕಾಮಗಾರಿಗಾಗಿ ತೋಡಲಾಗಿದ್ದ ಬೃಹತ್ ಗುಂಡಿಯ ಮಣ್ಣಿನ ತಡೆಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ನಡೆದಿದೆ.

ಅಂಡರ್‌ಪಾಸ್ ನಿರ್ಮಾಣಕ್ಕಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣು ತೆರವುಗೊಳಿಸಿ ಗುಂಡಿ ತೋಡಲಾಗಿತ್ತು. ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಮೇಲ್ಭಾಗದಲ್ಲಿದ್ದ ಮಣ್ಣಿನ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಕ್ಷಣಾರ್ಧದಲ್ಲಿ ಭಾರಿ ಪ್ರಮಾಣದ ಮಣ್ಣು ಕಾರ್ಮಿಕರ ಮೇಲೆ ಬಿದ್ದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ವೇಳೆ ಕಾಮಗಾರಿ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರು ಉಸಿರಾಡಲು ಸಾಧ್ಯವಾಗದೆ ಪರದಾಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಮೂವರು ಕಾರ್ಮಿಕರ ರಕ್ಷಣೆ

ಸಿಬ್ಬಂದಿ ಮತ್ತು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಆದರೆ, ಇನ್ನೂ ಓರ್ವ ಕಾರ್ಮಿಕ ಮಣ್ಣಿನಡಿ ಸಿಲುಕಿರುವ ಶಂಕೆ ಇದ್ದು, ಅವರನ್ನು ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ದೌಡು

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಮಣ್ಣಿನಡಿ ಇನ್ನಷ್ಟು ಕಾರ್ಮಿಕರು ಸಿಲುಕಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಜೆಸಿಬಿ ಸೇರಿದಂತೆ ಅಗತ್ಯ ಉಪಕರಣಗಳ ನೆರವಿನಿಂದ ಮಣ್ಣನ್ನು ತೆರವುಗೊಳಿಸಿ ಸಿಲುಕಿರುವ ಕಾರ್ಮಿಕರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿವೆ.

ಅಂಡರ್‌ಪಾಸ್ ಕಾಮಗಾರಿ ವೇಳೆ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿತ್ತೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ. ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುವ ಸಾಧ್ಯತೆಯಿದೆ.

Continue Reading

ದೇಶ

YouTube Monetization Rules 2027: ಹೊಸ ಕ್ರಿಯೇಟರ್‌ಗಳಿಗೆ ಶಾಕ್! ಹಣ ಗಳಿಸಲು ಇನ್ನು ಕಠಿಣ ನಿಯಮ

Published

on

ನವದೆಹಲಿ: YouTubeನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಹಣ ಸಂಪಾದಿಸಲು ಬಯಸುತ್ತಿರುವ ಹೊಸ ಕಂಟೆಂಟ್ ಕ್ರಿಯೇಟರ್‌ಗಳಿಗೆ ದೊಡ್ಡ ಸವಾಲು ಎದುರಾಗಲಿದೆ. YouTube Monetization Rules 2027ರಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಹೊಸ ಕ್ರಿಯೇಟರ್‌ಗಳಿಗೆ YouTube Partner Program (YPP) ಮೂಲಕ ಆದಾಯ ಗಳಿಸುವ ಮಾನದಂಡಗಳು ಮತ್ತಷ್ಟು ಕಠಿಣವಾಗಲಿವೆ ಎನ್ನಲಾಗಿದೆ.

ಹೊಸ ನಿಯಮಗಳ ಪ್ರಕಾರ, ಚಾನೆಲ್‌ವೊಂದು Monetization ಪಡೆಯಲು 1,000 subscribers ಹೊಂದಿರುವುದರ ಜೊತೆಗೆ ಕಳೆದ 12 ತಿಂಗಳಲ್ಲಿ ಕನಿಷ್ಠ 8,000 ಗಂಟೆಗಳ watch time ಗಳಿಸಬೇಕಾಗುತ್ತದೆ. ಪರ್ಯಾಯವಾಗಿ, ಕಳೆದ 90 ದಿನಗಳಲ್ಲಿ 2 ಕೋಟಿ (20 million) YouTube Shorts views ಗಳಿಸಿದರೂ ಅರ್ಹತೆ ಪಡೆಯಬಹುದು ಎನ್ನಲಾಗಿದೆ.

ಈ ಬದಲಾವಣೆಯಿಂದ ಹೊಸದಾಗಿ YouTube ಚಾನೆಲ್ ಆರಂಭಿಸುವವರಿಗೆ ಆದಾಯ ಗಳಿಸುವ ಗುರಿ ತಲುಪುವುದು ಹಿಂದಿಗಿಂತ ಕಷ್ಟವಾಗಲಿದೆ. ವಿಶೇಷವಾಗಿ Shorts ಮೂಲಕ ವೇಗವಾಗಿ ಬೆಳೆಯಲು ಪ್ರಯತ್ನಿಸುತ್ತಿರುವ ಕ್ರಿಯೇಟರ್‌ಗಳಿಗೆ ಹೆಚ್ಚಿನ ವೀಕ್ಷಣೆಗಳನ್ನು ನಿರಂತರವಾಗಿ ತಂದುಕೊಡುವ ಒತ್ತಡ ಎದುರಾಗಲಿದೆ.

ಹಳೆಯ YouTube Creatorsಗೆ ವಿನಾಯಿತಿ?

ಈಗಾಗಲೇ **YouTube Partner Program (YPP)**ನಲ್ಲಿ ಸೇರಿ ಆದಾಯ ಗಳಿಸುತ್ತಿರುವ ಹಳೆಯ ಕ್ರಿಯೇಟರ್‌ಗಳಿಗೆ ಹೊಸ ಮಾನದಂಡಗಳು ನೇರವಾಗಿ ಅನ್ವಯಿಸುವುದಿಲ್ಲ ಎನ್ನಲಾಗಿದೆ. ಹೀಗಾಗಿ ಈಗಾಗಲೇ Monetization ಪಡೆದಿರುವ ಚಾನೆಲ್‌ಗಳಿಗೆ ತಕ್ಷಣದ ಪರಿಣಾಮ ಕಡಿಮೆ ಇರಲಿದೆ.

ಇದರ ಜೊತೆಗೆ Shorts ಮೂಲಕ ನಿರಂತರವಾಗಿ ಆದಾಯ ಪಡೆಯಲು ಪ್ರತಿ 90 ದಿನಗಳ ಅವಧಿಯಲ್ಲಿ ಕನಿಷ್ಠ 1 ಕೋಟಿ (10 million) Shorts views ಕಾಯ್ದುಕೊಳ್ಳಬೇಕಾಗುತ್ತದೆ ಎನ್ನಲಾಗಿದೆ. ವೀಕ್ಷಣೆಗಳು ಈ ಮಿತಿಗಿಂತ ಕಡಿಮೆಯಾದರೆ Shorts ಆದಾಯ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು. ಆದರೆ Long-form videos ಮೂಲಕದ ಆದಾಯ ಮುಂದುವರಿಯಲಿದೆ ಎನ್ನಲಾಗಿದೆ.

ವೀಕ್ಷಣೆಗಳು ಮತ್ತೆ ನಿಗದಿತ ಮಿತಿಯನ್ನು ತಲುಪಿದ ಬಳಿಕ Shorts ಆದಾಯ ಮರುಸ್ಥಾಪನೆಯಾಗಲಿದೆ ಎಂದು ತಿಳಿಸಲಾಗಿದೆ.

Premium Lite ಮೂಲಕವೂ ಕ್ರಿಯೇಟರ್‌ಗಳಿಗೆ ಆದಾಯ

YouTube ತನ್ನ Premium Lite ಚಂದಾದಾರಿಕೆ ಸೇವೆಯನ್ನು ಮತ್ತಷ್ಟು ದೇಶಗಳಿಗೆ ವಿಸ್ತರಿಸುವ ಯೋಜನೆಯನ್ನೂ ಪ್ರಕಟಿಸಿದೆ. ಈ ಸೇವೆಯಿಂದ ಬರುವ ಆದಾಯದಲ್ಲಿಯೂ ಅರ್ಹ ಕ್ರಿಯೇಟರ್‌ಗಳಿಗೆ ಪಾಲು ಸಿಗಲಿದೆ.

YouTubeನಲ್ಲಿ Shorts ಮತ್ತು Long-form content ಎರಡಕ್ಕೂ ಪ್ರತ್ಯೇಕ ಆದಾಯ ಹಂಚಿಕೆ ವ್ಯವಸ್ಥೆ ಮುಂದುವರಿಯಲಿದೆ. ಹೊಸ ನಿಯಮಗಳಿಂದಾಗಿ, ಭವಿಷ್ಯದಲ್ಲಿ ಕೇವಲ subscribers ಹೆಚ್ಚಿಸುವುದಕ್ಕಿಂತ watch time, engagement ಮತ್ತು consistent views ಗಳಿಸುವುದು ಕ್ರಿಯೇಟರ್‌ಗಳಿಗೆ ಹೆಚ್ಚು ಮುಖ್ಯವಾಗಲಿದೆ.

ಹೀಗಾಗಿ YouTube ಮೂಲಕ ವೃತ್ತಿಪರವಾಗಿ ಆದಾಯ ಗಳಿಸಲು ಬಯಸುವ ಹೊಸಬರು ಗುಣಮಟ್ಟದ original content ಸೃಷ್ಟಿಸುವುದರ ಜೊತೆಗೆ ಪ್ರೇಕ್ಷಕರನ್ನು ನಿರಂತರವಾಗಿ ಸೆಳೆಯುವ ತಂತ್ರ ರೂಪಿಸಬೇಕಾದ ಅಗತ್ಯ ಎದುರಾಗಿದೆ.

Continue Reading

ದೇಶ

Sansad ಗದ್ದಲದಿಂದ ಸರ್ಕಾರಕ್ಕಿಂತ ಪ್ರತಿಪಕ್ಷಕ್ಕೇ ಹೆಚ್ಚು ನಷ್ಟವೇ? ಅಸಲಿ ಲೆಕ್ಕಾಚಾರ ಇಲ್ಲಿದೆ!

Published

on

ನವದೆಹಲಿ: Sansad ತ್ತಿನ ಮುಂಗಾರು ಅಧಿವೇಶನದಲ್ಲಿ ನಿರಂತರ ಗದ್ದಲ, ಪ್ರತಿಭಟನೆ ಮತ್ತು ಧರಣಿಯಿಂದಾಗಿ ಹಲವು ಬಾರಿ ಕಲಾಪ ಮುಂದೂಡಿಕೆಯಾಗುತ್ತಿದೆ. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರಿಂದ ಪ್ರಶ್ನೋತ್ತರ ಅವಧಿ, ಮಸೂದೆಗಳ ಚರ್ಚೆ ಸೇರಿದಂತೆ ಪ್ರಮುಖ ಕಲಾಪಗಳಿಗೆ ಅಡ್ಡಿಯಾಗುತ್ತಿದೆ. ಆದರೆ ಸಂಸತ್ ಕಲಾಪ ಸ್ಥಗಿತಗೊಂಡಾಗ ಅದರ ರಾಜಕೀಯ ನಷ್ಟ ಸರ್ಕಾರಕ್ಕಿಂತ ಪ್ರತಿಪಕ್ಷಗಳಿಗೇ ಹೆಚ್ಚಾಗುತ್ತದೆ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಇತ್ತೀಚೆಗೆ IIMUN ವೇದಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ವಿಚಾರಕ್ಕೆ ಮತ್ತಷ್ಟು ಮಹತ್ವ ನೀಡಿವೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು ಪ್ರತಿಪಕ್ಷಗಳ ಪ್ರಜಾಸತ್ತಾತ್ಮಕ ಹಕ್ಕು. ಆದರೆ ಸಂಸತ್ತು ಕೇವಲ ಪ್ರತಿಭಟನೆ ನಡೆಸುವ ಸ್ಥಳವಲ್ಲ. ಸರ್ಕಾರವನ್ನು ಪ್ರಶ್ನಿಸುವುದು, ಅದರ ನಿರ್ಧಾರಗಳನ್ನು ಪರಿಶೀಲಿಸುವುದು ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಚರ್ಚಿಸುವುದು ಸಂಸತ್ತಿನ ಪ್ರಮುಖ ಉದ್ದೇಶವಾಗಿದೆ.

ಸರ್ಕಾರದ ಬಳಿ ಸಂಖ್ಯಾಬಲ, ಪ್ರತಿಪಕ್ಷದ ಬಳಿ ಪ್ರಶ್ನಿಸುವ ಅವಕಾಶ

ಬಹುಮತ ಹೊಂದಿರುವ ಸರ್ಕಾರಕ್ಕೆ ಮಸೂದೆಗಳನ್ನು ಅಂಗೀಕರಿಸುವಲ್ಲಿ ಸಂಖ್ಯಾಬಲದ ಅನುಕೂಲವಿರುತ್ತದೆ. ಕಲಾಪದಲ್ಲಿ ಗದ್ದಲ ಉಂಟಾದರೂ ಅಥವಾ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದರೂ ಸರ್ಕಾರ ತನ್ನ ಸಂಖ್ಯಾಬಲದ ಮೂಲಕ ಶಾಸನಾತ್ಮಕ ಪ್ರಕ್ರಿಯೆ ಮುಂದುವರಿಸಬಹುದು.

ಆದರೆ ಪ್ರತಿಪಕ್ಷಗಳ ಪ್ರಮುಖ ಅಸ್ತ್ರವೇ ಸಂಸತ್ತಿನ ಚರ್ಚೆ. Question Hour ಮೂಲಕ ಸಚಿವರಿಂದ ನೇರವಾಗಿ ಮಾಹಿತಿ ಪಡೆಯಬಹುದು. Zero Hour ಹಾಗೂ Rule 377 ಮೂಲಕ ತುರ್ತು ಸಾರ್ವಜನಿಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬಹುದು. ಸದನವೇ ನಡೆಯದಿದ್ದರೆ ಈ ಅವಕಾಶಗಳನ್ನು ಪ್ರತಿಪಕ್ಷಗಳೇ ಕಳೆದುಕೊಳ್ಳಬೇಕಾಗುತ್ತದೆ.

ಮಸೂದೆಗಳ ಚರ್ಚೆ ಏಕೆ ಮುಖ್ಯ?

ಮಸೂದೆ ಕಾಯಿದೆಯಾಗುವ ಮುನ್ನ ನಡೆಯುವ ಚರ್ಚೆ, ಸಮಿತಿ ಪರಿಶೀಲನೆ ಮತ್ತು ತಿದ್ದುಪಡಿಗಳು ಶಾಸನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಪಕ್ಷಗಳು ಮಸೂದೆಯಲ್ಲಿನ ಲೋಪಗಳನ್ನು ಎತ್ತಿಹಿಡಿದು ತಿದ್ದುಪಡಿಗಳನ್ನು ಸೂಚಿಸಬಹುದು. ಸರ್ಕಾರ ಅವುಗಳನ್ನು ತಿರಸ್ಕರಿಸಿದರೂ, ಸದನದಲ್ಲಿ ನಡೆದ ಚರ್ಚೆಗಳು ಅಧಿಕೃತ ಸಂಸದೀಯ ದಾಖಲೆಯಾಗಿ ಉಳಿಯುತ್ತವೆ.

ಮುಂದೆ ಯಾವುದೇ ಕಾನೂನಿನ ಉದ್ದೇಶ ಅಥವಾ ಅರ್ಥದ ಕುರಿತು ನ್ಯಾಯಾಲಯಗಳಲ್ಲಿ ಪ್ರಶ್ನೆ ಎದುರಾದಾಗ ಸಂಸತ್ ಚರ್ಚೆಗಳು ಪ್ರಮುಖ ದಾಖಲೆಗಳಾಗಬಹುದು. ಹೀಗಾಗಿ ಚರ್ಚೆಯಿಲ್ಲದೆ ಮಸೂದೆ ಅಂಗೀಕಾರಗೊಳ್ಳುವುದು ಶಾಸನ ರಚನೆಯ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು.

‘ನಿಮ್ಮ ಬಳಿ ಮತಗಳಿವೆ, ನಮ್ಮ ಬಳಿ ತರ್ಕವಿದೆ’

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ದೃಷ್ಟಿಕೋನವೂ ಇಲ್ಲಿ ಪ್ರಸ್ತುತವಾಗುತ್ತದೆ. ಸರ್ಕಾರದ ಶಕ್ತಿ ಸಂಖ್ಯಾಬಲವಾದರೆ, ಪ್ರತಿಪಕ್ಷದ ಶಕ್ತಿ ಅದರ ತರ್ಕ, ವಾದ ಮತ್ತು ಪ್ರಶ್ನಿಸುವ ಸಾಮರ್ಥ್ಯವಾಗಿದೆ.

ಪ್ರತಿಪಕ್ಷಗಳು ಮೈಕ್ರೋಫೋನ್‌ಗಳನ್ನು ಆಫ್ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದರೆ, ಬಿಜೆಪಿ ಪ್ರತಿಪಕ್ಷಗಳು ಚರ್ಚೆಯಿಂದ ತಪ್ಪಿಸಿಕೊಳ್ಳಲು ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸುತ್ತಿದೆ. ಆರೋಪ-ಪ್ರತ್ಯಾರೋಪಗಳ ನಡುವೆಯೇ ಸಂಸತ್ತು ಸ್ತಬ್ಧವಾದರೆ, ಅಂತಿಮವಾಗಿ ಸರ್ಕಾರವನ್ನು ಪ್ರಶ್ನಿಸುವ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿಹಿಡಿಯುವ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ದುರ್ಬಲವಾಗುತ್ತದೆ.

ಆದ್ದರಿಂದ, ಸರ್ಕಾರದ ವಿರುದ್ಧ ಪರಿಣಾಮಕಾರಿ ರಾಜಕೀಯ ಹೋರಾಟ ನಡೆಸಲು ಪ್ರತಿಪಕ್ಷಗಳಿಗೆ ಸಂಸತ್ತಿನ ಕಲಾಪವೇ ಅತ್ಯಂತ ಪ್ರಮುಖ ವೇದಿಕೆಯಾಗಿದೆ.

Continue Reading

Trending