Connect with us

ಬೆಂಗಳೂರು

ಶ್ರೀಗಳ ಪರ್ಯಾಯೋತ್ಸವಕ್ಕೆ ಪೂರ್ವಸಿದ್ದತೆ

ಶ್ರೀಗಳ ಪರ್ಯಾಯೋತ್ಸವಕ್ಕೆ ಪೂರ್ವಸಿದ್ದತೆ
ಶ್ರೀಗಳ ಪರ್ಯಾಯೋತ್ಸವಕ್ಕೆ ಪೂರ್ವಸಿದ್ದತೆ

ಉಡುಪಿ: ಶ್ರೀ ಪುತ್ತಿಗೆ ಮಠದಲ್ಲಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಸಮಕ್ಷದಲ್ಲಿ ಉಡುಪಿ ಜಿಲ್ಲಾಧಿಕಾರಿ ಶ್ರಿಮತಿ ಡಾ. ವಿದ್ಯಾಕುಮಾರಿ, ಎಸ್‌ಪಿ ಶ್ರೀ ಅರುಣ್, ಹಾಗೂ ಸಿಇಒ ಶ್ರೀ ಪ್ರಸನ್ನ ರವರು ಪರ್ಯಾಯ ಪೂರ್ವಸಿದ್ದತೆಗೆ ಸರ್ಕಾರದಿಂದ ಕೈಗೊಳ್ಳುವ ಕರ್ತವ್ಯಗಳ ಬಗ್ಗೆ ಚೆರ್ಚಿಸಿದರು, ಶ್ರೀಗಳ ಪರ್ಯಾಯೋತ್ಸವಕ್ಕೆ ಬರುವ ಹೊರ ದೇಶದ ಗಣ್ಯರಿಗೆ, ಭಕ್ತಾದಿಗಳಿಗೆ ಸರ್ಕಾರದಿಂದ ಸೂಕ್ತ ರಕ್ಷಣೆ, ಸಕಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಶ್ರೀ ಕೃಷ್ಣನ ಸೇವೆ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ತಿಳಿಸಿ ಕೋಟಿ ಗೀತಾಲೇಖನ ದೀಕ್ಷೆ ನೀಡುವ ಮೂಲಕ ಅನುಗ್ರಹ ಮಂತ್ರಾಕ್ಷತೆ ನೀಡಿದರು, ಸಮತಿಯ ಕಾರ್ಯಧ್ಯಕ್ಷರಾದ ಶ್ರೀ ರಘುಪತಿ ಭಟ್, ಮಠದ ದಿವಾನರಾದ ಶ್ರೀ ನಾಗರಾಜ ಅಚಾರ್ಯ, ಕೋಶಾಧಿಕಾರಿ ಶ್ರೀ ರಂಜನ್ ಕಲ್ಕೂರ, ಸಹ ಸಂಚಾಲಕರಾದ ರಮೇಶ್ ಭಟ್‌ಕೆ, ಶ್ರೀ ಹರಿಕೃಷ್ಣ ಶಿವಾತ್ತಾಯ, ಶ್ರೀ ರವೀಂದ್ರ ಅಚಾರ್ಯರು ಉಪಸ್ಧಿತರಿದ್ದರು,

ಕ್ರೀಡೆ

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್: ಜೈನ್ ವಿಶ್ವವಿದ್ಯಾಲಯ ಚಾಂಪಿಯನ್

ಬೆಂಗಳೂರು, ಫೆಬ್ರವರಿ 14, 2026: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ Jain University ತಂಡವು ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿದೆ. ಕನಕಪುರ ರಸ್ತೆದಲ್ಲಿರುವ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಜೈನ್ ತಂಡವು Panjab University ವಿರುದ್ಧ 74-51 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

ಫೈನಲ್ ಪಂದ್ಯ ಫಲಿತಾಂಶ

ಜೈನ್ ವಿಶ್ವವಿದ್ಯಾಲಯ 74 (ಸಿಯಾ 17, ನಯೋಮಿ 16)
ಪಂಜಾಬ್ ವಿಶ್ವವಿದ್ಯಾಲಯ 51 (ಪೂಜಾ 19, ನಾದರ್ ಕೌರ್ 13)
ಅರ್ಧಾವಧಿ: 40-28

ಆರಂಭದಿಂದಲೇ ಮುನ್ನಡೆ ಸಾಧಿಸಿದ ಜೈನ್ ತಂಡ ಅಂತಿಮ ಕ್ಷಣದವರೆಗೂ ಮೇಲುಗೈ ಕಾಯ್ದುಕೊಂಡಿತು.


3ನೇ ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯ

SRM University 82 (ಜೀವಿಕಾ 18, ಹೇಮಲತಾ 12)
Lakshmibai National Institute of Physical Education 58 (ತಿತಿಕ್ಷಾ 14, ಸೋನಲ್ ನಹಾಲಾ 12)
ಅರ್ಧಾವಧಿ: 24-36

ಎರಡನೇಾರ್ಧದಲ್ಲಿ ದಿಟ್ಟ ಪ್ರದರ್ಶನ ನೀಡಿದ ಎಸ್‌ಆರ್‌ಎಂ ವಿಶ್ವವಿದ್ಯಾಲಯ ಮೂರನೇ ಸ್ಥಾನ ಪಡೆದಿತು.


ಅಂತಿಮ ಸ್ಥಾನಮಾನ

  1. ಜೈನ್ ವಿಶ್ವವಿದ್ಯಾಲಯ
  2. ಪಂಜಾಬ್ ವಿಶ್ವವಿದ್ಯಾಲಯ
  3. ಎಸ್‌ಆರ್‌ಎಂ ವಿಶ್ವವಿದ್ಯಾಲಯ
  4. ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್‌ಎನ್‌ಐಪಿಇ)

ಜೈನ್ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿಯರಾದ ಆದ್ಯ ಗೌಡಾ, ಅಂಜು, ಖುಷಿ, ಆಹಾನಾ, ನೇತ್ರಾ, ಸಿಯಾ ದಿಯೋಧ್ಯರ್ ಸೇರಿದಂತೆ ತಂಡದ ಸದಸ್ಯರು ಮತ್ತು ಕೋಚ್ ಪುನೀತ್ ಅವರ ಮಾರ್ಗದರ್ಶನದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದರು. ಕ್ರೀಡಾ ನಿರ್ದೇಶಕ ಡಾ. ಯು.ವಿ. ಶಂಕರ್ ಮತ್ತು ಮ್ಯಾನೇಜರ್ ಲೋಕೇಶ್ ಉಪಸ್ಥಿತರಿದ್ದರು.

ಬೆಂಗಳೂರುನಲ್ಲಿ ನಡೆದ ಈ ಚಾಂಪಿಯನ್‌ಶಿಪ್ ಮಹಿಳಾ ವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.

Continue Reading

ಕ್ರೀಡೆ

TCS WORLD 10K ಬೆಂಗಳೂರು ಏಪ್ರಿಲ್ 26ರಂದು: ನೋಂದಣಿ ಆರಂಭ, USD 2.1 ಲಕ್ಷ ಬಹುಮಾನ

ಬೆಂಗಳೂರು: ವಿಶ್ವದ ಪ್ರಮುಖ 10K ಮ್ಯಾರಥಾನ್‌ಗಳಲ್ಲಿ ಒಂದಾದ TCS World 10K Bengaluru 18ನೇ ಆವೃತ್ತಿ ಏಪ್ರಿಲ್ 26, 2026ರಂದು ನಡೆಯಲಿದೆ. ಫೆಬ್ರವರಿ 13ರಿಂದ ಆನ್-ಗ್ರೌಂಡ್ ಮತ್ತು ವರ್ಚುವಲ್ ವಿಭಾಗಗಳಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಪ್ರತಿಷ್ಠಿತ ಓಟಕ್ಕೆ ಒಟ್ಟು USD 210,000 (ಸುಮಾರು ₹2.1 ಲಕ್ಷ ಅಮೆರಿಕನ್ ಡಾಲರ್) ಬಹುಮಾನ ಮೊತ್ತ ನಿಗದಿಯಾಗಿದೆ. ವಿಶ್ವದ ಖ್ಯಾತ ಅಥ್ಲೀಟ್‌ಗಳು ಹಾಗೂ ಸಾವಿರಾರು ಹವ್ಯಾಸಿ ಓಟಗಾರರು ಭಾಗವಹಿಸಲಿದ್ದಾರೆ. ಮ್ಯಾರಥಾನ್ ಕಬ್ಬನ್ ರಸ್ತೆಯ ಆರ್‌ಎಸ್‌ಎಒಐ ಗೇಟ್ ನಂ.5ರ ಎದುರು ಪ್ರಾರಂಭವಾಗಿ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್‌ಶಾ ಪೆರೇಡ್ ಮೈದಾನದ ಹೊರಭಾಗದಲ್ಲಿ ಮುಕ್ತಾಯಗೊಳ್ಳಲಿದೆ.


ಅರ್ಹತಾ ಮಾನದಂಡ ಮೊದಲ ಬಾರಿಗೆ

ಓಟಗಾರರ ಸುರಕ್ಷತೆ ಹಾಗೂ ಉತ್ತಮ ಅನುಭವದ ದೃಷ್ಟಿಯಿಂದ 2026ರ ಓಪನ್ 10K ವಿಭಾಗಕ್ಕೆ ಮೊದಲ ಬಾರಿಗೆ ಅರ್ಹತಾ ಮಾನದಂಡಗಳನ್ನು ಪರಿಚಯಿಸಲಾಗಿದೆ. ಮಾನ್ಯ ಸಮಯದ ಪ್ರಮಾಣಪತ್ರ ಸಲ್ಲಿಸಿದವರಿಗೆ ಮಾತ್ರ ನೋಂದಣಿ ಮಾನ್ಯವಾಗಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.


ಆರ್ಥಿಕ ಪರಿಣಾಮದ ಅಂಕಿ-ಅಂಶಗಳು

  • ಹಿಂದಿನ ಆವೃತ್ತಿಗಳಲ್ಲಿ ಓಟಗಾರರು ತರಬೇತಿ, ಬೂಟು, ಉಡುಪು, ತಂತ್ರಜ್ಞಾನ, ಆಹಾರ ಹಾಗೂ ವಸತಿಗೆ ₹179.91 ಕೋಟಿ ಖರ್ಚು.
  • ಪೌಷ್ಠಿಕಾಂಶ ಹಾಗೂ ಆರೋಗ್ಯ ರಕ್ಷಣೆಗೆ ₹78.69 ಕೋಟಿ ಹೂಡಿಕೆ.
  • 85.45% ಮಂದಿ ತಂತ್ರಜ್ಞಾನ ಆಧಾರಿತ ಫಿಟ್ನೆಸ್ ಪರಿಹಾರಗಳ ಬಳಕೆ.
  • ಒಟ್ಟು ಆರ್ಥಿಕ ಪರಿಣಾಮದಲ್ಲಿ 40% ಕೊಡುಗೆ ವಿಶಾಲ ಪರಿಸರ ವ್ಯವಸ್ಥೆಗೆ ಬೆಂಬಲ.

ಆರೋಗ್ಯದ ಮೇಲೆ ಪರಿಣಾಮ

  • 54.21% ಮಂದಿ ಉತ್ತಮ ಆರೋಗ್ಯಕ್ಕಾಗಿ ಓಟ.
  • 70.12% ಮಂದಿ ಪೂರ್ಣ ದೇಹ ತಪಾಸಣೆ ಮಾಡಿಸಿಕೊಂಡಿದ್ದಾರೆ.
  • 53.07% ಮಂದಿ ದೂರದ ಓಟದಿಂದ ಮಾನಸಿಕ ಯೋಗಕ್ಷೇಮ ಹೆಚ್ಚಾಗಿದೆ ಎಂದು ಅಭಿಪ್ರಾಯ.
  • 22.5% ಮಂದಿ ಔಷಧಿ ಬಳಕೆ ಕಡಿಮೆ ಮಾಡಿರುವ ವರದಿ.
  • 85% ಮಂದಿ ಶಕ್ತಿ ತರಬೇತಿ (ಸ್ಟ್ರೆಂಗ್ತ್ ಟ್ರೈನಿಂಗ್) ಅಳವಡಿಸಿಕೊಂಡಿದ್ದಾರೆ.
  • 47.94% ಮಂದಿ ಒತ್ತಡ ನಿರ್ವಹಣೆಗೆ ನಿಯಮಿತ ವ್ಯಾಯಾಮ.

📝 ನೋಂದಣಿ ವಿವರಗಳು

ಆನ್-ಗ್ರೌಂಡ್ ವಿಭಾಗಗಳು:

  • ಓಪನ್ 10K
  • ಮಜ್ಜಾ ರನ್ (4.2 ಕಿ.ಮೀ)
  • ಹಿರಿಯ ನಾಗರಿಕರ ಓಟ
  • ಅಂಗವಿಕಲ (ವಿಶೇಷ) ಚಾಂಪಿಯನ್ಸ್ (3 ಕಿ.ಮೀ)

ಎಲ್ಲಾ ವಿಭಾಗಗಳ ನೋಂದಣಿ ಫೆಬ್ರವರಿ 13ರಿಂದ ಆರಂಭವಾಗಿದ್ದು, ಮಾರ್ಚ್ 20, 2026ರ ರಾತ್ರಿ 11:59ರವರೆಗೆ ಅಥವಾ ಸೀಟುಗಳು ಭರ್ತಿಯಾಗುವವರೆಗೆ ಮುಕ್ತವಾಗಿರುತ್ತದೆ.

Continue Reading

ದೇಶ

ಕೋಡಿಮಠದ ಭವಿಷ್ಯ: ‘ಬಜೆಟ್ ನಂತರವೇ ಬದಲಾವಣೆ’

ಬೆಂಗಳೂರು: ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು Siddaramaiah ನೇತೃತ್ವದ ಸರ್ಕಾರ ಕೈಗೊಂಡಿದೆ. ಅದರಲ್ಲಿ ಪ್ರಮುಖವಾದುದು 2026ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿ ಮಾಡಿರುವುದು. ಮಾರ್ಚ್ 6ರ ಶುಕ್ರವಾರ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.

ಈ ಮಧ್ಯೆ, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯ Kodimath ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ‘ಪವರ್ ಶೇರಿಂಗ್’ ಭವಿಷ್ಯ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ.


‘ಬಜೆಟ್ ನಂತರವೇ ಬದಲಾವಣೆ?’

ಮಕರ ಸಂಕ್ರಾಂತಿ ಸಂದರ್ಭ ಬೆಳಗಾವಿಯಲ್ಲಿ ಮಾತನಾಡಿದ್ದ ಸ್ವಾಮೀಜಿಗಳು, “ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಸಿದ್ದರಾಮಯ್ಯನವರಿಗೆ ಬಲವಾದ ಆಶೀರ್ವಾದವಿದೆ. ಅವರಾಗಿಯೇ ಅಧಿಕಾರದಿಂದ ಕೆಳಗಿಳಿಯಬೇಕೇ ಹೊರತು, ಅವರನ್ನು ಬಲವಂತದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಅದೇನಿದ್ದರೂ ಬಜೆಟ್ ನಂತರ” ಎಂದು ಹೇಳಿದ್ದರು.

ರಾಜ್ಯ ಖಜಾನೆಯ ಲೆಕ್ಕ (ಬಜೆಟ್) ಮಂಡನೆಯಾದ ಬಳಿಕವೇ ಯಾವುದೇ ಮಹತ್ವದ ರಾಜಕೀಯ ಬದಲಾವಣೆ ಸಾಧ್ಯತೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಹೀಗಾಗಿ, ಬಜೆಟ್ ದಿನಾಂಕ ನಿಗದಿಯಾದ ಹಿನ್ನೆಲೆ ‘ಅಧಿಕಾರ ಹಸ್ತಾಂತರ’ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.


ರಾಜಕೀಯ ಬೆಳವಣಿಗೆಗಳು ವೇಗ

ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಉಪ ಮುಖ್ಯಮಂತ್ರಿ D. K. Shivakumar ಹಾಗೂ ಮಾಜಿ ಸಂಸದ D. K. Suresh ದೆಹಲಿಯಲ್ಲಿ ಹೈಕಮಾಂಡ್‌ನ್ನು ಭೇಟಿ ಮಾಡಿ ರಾಜ್ಯಕ್ಕೆ ಮರಳಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ, ಮುಖ್ಯಮಂತ್ರಿಗಳ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ “ನಮ್ಮ ತಂದೆಯೇ ಪೂರ್ಣಾವಧಿಗೆ ಮುಖ್ಯಮಂತ್ರಿ. ಇದು ಚರ್ಚೆಯ ವಿಷಯವಲ್ಲ” ಎಂದು ಹೇಳಿರುವುದು ಪವರ್ ಶೇರಿಂಗ್ ಊಹಾಪೋಹಗಳಿಗೆ ಮತ್ತಷ್ಟು ಇಂಧನ ನೀಡಿದೆ.


ರಾಜಕೀಯ ಚರ್ಚೆಗೆ ಇಂಧನ

ಕೋಡಿಮಠದ ಸ್ವಾಮೀಜಿಗಳ ಭವಿಷ್ಯವಾಣಿ ಹಾಗೂ ಬಜೆಟ್ ಮಂಡನೆ ದಿನಾಂಕ ಒಂದೇ ಸಮಯದಲ್ಲಿ ಚರ್ಚೆಗೆ ಬಂದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಬಜೆಟ್ ಬಳಿಕ ಅಧಿಕಾರ ಹಸ್ತಾಂತರವಾಗುತ್ತದೆಯೇ ಅಥವಾ ಸಿದ್ದರಾಮಯ್ಯ ಪೂರ್ಣಾವಧಿಗೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಕ್ಕಾಗಿ ರಾಜಕೀಯ ವಲಯ ಕಾದು ನೋಡುತ್ತಿದೆ.

Continue Reading

Trending