ಆರೋಗ್ಯ
ಚಳಿಗಾಲದಲ್ಲಿ ಚರ್ಮದ ಆರೈಕೆ
ಈಗ ಚಳಿಗಾಲ ಬಂದಾಗಿದೆ. ಚಳಿಗಾಲ ನಮ್ಮನ್ನು ನಡುಗಿಸುವುದು ಮಾತ್ರವಲ್ಲದೆ ನಮ್ಮ ಚರ್ಮದ ಆರೋಗ್ಯಕ್ಕೂ ಕೂಡ ತೊಂದರೆ ಕೊಡುತ್ತದೆ. ಮೊದಲಿನಂತೆ ನಮ್ಮ ತ್ವಚೆ ಆರೋಗ್ಯಕರವಾಗಿ ಇರುತ್ತದೆ ಎನ್ನಲಾಗುವುದಿಲ್ಲ. ನಮ್ಮ ತ್ವಚೆಯ ಭಾಗದಲ್ಲಿ ಒಡಕುಗಳು ಮೂಡುತ್ತವೆ. ಸೋಪು ಹಾಕಿಕೊಂಡು ತೊಳೆದರೆ ಅಲ್ಲಲ್ಲಿ ಬಿಳಿ ಬಣ್ಣ ಹಾಗೆ ನಿಂತುಕೊಳ್ಳುತ್ತದೆ. ವಿಶೇಷವಾಗಿ ತುಟಿಗಳು, ಅಂಗೈ, ಪಾದಗಳು ಬಿರುಕು ಬಿಡುತ್ತವೆ. ಹೀಗಾಗಿ ಚಳಿಗಾಲದ ಆರಂಭದಿಂದಲೂ ನಾವು ನಮ್ಮ ಚರ್ಮದ ಆರೈಕೆ ಕಡೆಗೆ ಗಮನ ಹೆಚ್ಚು ಕೊಟ್ಟರೆ ನಮ್ಮ ತ್ವಚೆಯನ್ನು ಮೊದಲಿನಂತೆ ಕಾಪಾಡಿಕೊಳ್ಳಬಹುದು. ಸೌಂದರ್ಯ ಎಲ್ಲರಿಗೂ ಬಹಳ ಮುಖ್ಯ, ನಾವು ಸುಂದರವಾಗಿ ಕಾಣಬೇಕೆಂದರೆ ನಮ್ಮ ಸೌಂದರ್ಯದ ಬಗ್ಗೆ ಬಹಳ ಕಾಳಜಿ ವಹಿಸಬೇಕು. ಕಾಲ ಕಾಲಕ್ಕೆ ತಕ್ಕಂತೆ ಆರೈಕೆ ಮಾಡಬೇಕು. ಬೇಸಿಗೆ, ಚಳಿ ಒಂದೊಂದು ಕಾಲದಲ್ಲೂ ಚರ್ಮಕ್ಕೆ ಅದರದ್ದೇ ಆದ ಆರೈಕೆ ಇದೆ.ಮಲಗುವಾಗ ಚಳಿ ಆಗದಂತೆ ಹೇಗೆ ಬೆಡ್‌ಶೀಟ್ ಹೊದ್ದು ಮಲಗುತ್ತೇವೋ, ಚರ್ಮಕ್ಕೆ ಪ್ರತ್ಯೇಕ ಆರೈಕೆ ಬಹಳ ಮುಖ್ಯ. ಇಲ್ಲವಾದರೆ ನೀವು ಚರ್ಮದ ಸಮಸ್ಯೆಯಿಂದ ಬಳಲಬೇಕಾಗುತ್ತದೆ.ಚಳಿಗಾದಲ್ಲಿ ಶೀತ ಹಾಗೂ ತಣ್ಣನೆ ವಾತಾವರಣದಿಂದ ಚರ್ಮ ಕಳೆಗುಂದುತ್ತದೆ. ಡ್ರೈನೆಸ್, ಕಿರಿಕಿರಿಯಂತಹ ಸಮಸ್ಯೆ ನಿಮ್ಮನ್ನು ಕಾಡಬಹುದು.
⦁ ವರ್ಷದ ಎಲ್ಲಾ ಋತುವಿನಲ್ಲೂ ನಿಮ್ಮ ಚರ್ಮದ ಮಾಯಿಶ್ಚರೈಸರ್ ಬಹಳ ಅಗತ್ಯ. ಚರ್ಮವನ್ನು ಒಣಗಲು ಬಿಡದೆ ಯಾವಾಗಲೂ ತೇವಾಂಶ ಇರುವಂತೆ ನೋಡಿಕೊಳ್ಳಿ.
⦁ ಚಳಿಗಾಲವಿದ್ದರೂ ಹೊರಗೆ ಸೂರ್ಯನ ಕಿರಣಗಳು ಇದ್ದೇ ಇರುತ್ತದೆ. ನಿಮ್ಮ ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಚಳಿಗಾಲದ ಸೂರ್ಯನ ಕಿರಣದಿಂದ ಕೂಡಾ ನಿಮ್ಮ ಚರ್ಮಕ್ಕೆ ಹಾನಿಯುಂಟಾಗಬಹುದು. ಆದ್ದರಿಂದ ತಪ್ಪದೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಬಳಸಿ.
⦁ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುವುದು ಕೂಡಾ ಬಹಳ ಮುಖ್ಯ. ಹೀಗೆ ಮಾಡುವುದರಿಂದ ಚರ್ಮದ ಮೇಲಿನ ಕೊಳೆ, ಬ್ಲಾಕ್ ಹೆಡ್, ವೈಟ್ ಹೆಡ್, ಸತ್ತ ಚರ್ಮದ ಕೋಶಗಳು ತೊಲಗುತ್ತವೆ. ವಾರಕ್ಕೆ ಒಮ್ಮೆ ತಪ್ಪದೆ ಎಕ್ಸ್‌ಫೋಲಿಯೇಟ್ ಮಾಡಿ. ಆದರೆ ಚರ್ಮವನ್ನು ಬಹಳ ಒರಟಾಗಿ ಉಜ್ಜಬೇಡಿ.
⦁ ಚಳಿಗಾಲದಲ್ಲಿ ಕೂಡಾ ನೀವು ಹೆಚ್ಚು ನೀರು ಸೇವಿಸುವುದು ಬಹಳ ಮುಖ್ಯ. ಇದರಿಂದ ನಿಮ್ಮ ಚರ್ಮ ಹೊರಭಾಗದಿಂದ ಮಾತ್ರವಲ್ಲದೆ, ಒಳಭಾಗದಿಂದ ಕೂಡಾ ಸುಂದರವಾಗಿರುತ್ತದೆ. ದೇಹದ ಕಲ್ಮಷ, ಬೆವರು ಮೂತ್ರದ ಮೂಲಕ ಹೊರ ಬರುತ್ತದೆ.
⦁ ಚಳಿಗಾಲದಲ್ಲಿ ತುಟಿ ಕೂಡಾ ಬೇಗ ಒಣಗುತ್ತದೆ. ಕೆಲವರಿಗಂತೂ ಬಹಳ ಒಡೆದಂತೆ ಆಗುತ್ತದೆ. ಆದ್ದರಿಂದ ತುಟಿಗೆ ಪ್ರತಿ ರಾತ್ರಿ ಲಿಪ್ ಬಾಮ್ ಹಚ್ಚುವುದನ್ನು ಮರೆಯಬೇಡಿ.
⦁ ಚಳಿಗಾಲದಲ್ಲಿ ಆದಷ್ಟು ನಿಮ್ಮ ಚರ್ಮವನ್ನು ಬಟ್ಟೆಯಿಂದ ಕವರ್ ಮಾಡಿ. ನಿಮ್ಮ ದೇಹವನ್ನು ಬೆಚ್ಚಗೆ ಇಡಿ.
⦁ ಅತಿಯಾದ ಬಿಸಿ ನೀರು, ಚರ್ಮದಿಂದ ನೈಸರ್ಗಿಕ ತೈಲದ ನಾಶಕ್ಕೆ ಕಾರಣವಾಗಬಹುದು. ಅತಿಯಾದ ಶುಷ್ಕತೆಯನ್ನು ತಡೆಗಟ್ಟಲು ಅತಿ ಬಿಸಿಯೋ ಅಲ್ಲದ, ತಣ್ಣನೆಯೂ ಅಲ್ಲದ ನೀರಿನಲ್ಲಿ ಸ್ನಾನ ಮಾಡಿ.
⦁ ನಿಮ್ಮ ಚರ್ಮ ಡ್ರೈ ಆಗುವುದನ್ನು ತಪ್ಪಿಸಲು ಮೃದುವಾದ , ಚರ್ಮಕ್ಕೆ ತೇವಾಂಶ ನೀಡುವ ಕ್ಲೆನ್ಸರ್ ಬಳಸಿ.
⦁ ಚಳಿಗಾದಲ್ಲಿ ಕೆಲವರಿಗೆ ಚರ್ಮದ ಇತರ ಸಮಸ್ಯೆಗಳು ಆರಂಭವಾಗುತ್ತದೆ.ವೈಧ್ಯೊನ್ನು ಭೇಡಿ ಮಾಡಿ, ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ.
ಆರೋಗ್ಯ
LIFE STYLE ನಿಂತುಕೊಂಡು ನೀರು ಕುಡಿಯುವುದರಿಂದ ಏನಾಗುತ್ತದೆ?
ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ನಾವು ಅನೇಕ ಸಣ್ಣ ಅಭ್ಯಾಸಗಳನ್ನು ಗಮನಿಸದೆ ನಿರ್ಲಕ್ಷಿಸುತ್ತೇವೆ. ಅದರಲ್ಲಿ ಪ್ರಮುಖವಾದುದು ನಿಂತುಕೊಂಡು ನೀರು ಕುಡಿಯುವ ಅಭ್ಯಾಸ. ಕಚೇರಿಯಾಗಲಿ, ಮನೆಯಲ್ಲಾಗಲಿ ಅಥವಾ ಹೊರಗಡೆ ಇದ್ದಾಗಲೂ ಜನರು ನಿಂತೆಯೇ ನೀರು ಕುಡಿಯುತ್ತಾರೆ. ಆದರೆ ಈ ಸಣ್ಣ ಅಭ್ಯಾಸವೇ ಭವಿಷ್ಯದಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಆಯುರ್ವೇದದ ಎಚ್ಚರಿಕೆ.
ನಾವು ಕುಳಿತುಕೊಂಡು ನೀರು ಕುಡಿದಾಗ ದೇಹವು ಅದನ್ನು ನಿಧಾನವಾಗಿ ಹೀರಿಕೊಳ್ಳಲು ಅವಕಾಶ ದೊರಕುತ್ತದೆ. ಇದರಿಂದ ನೀರು ದೇಹದ ಅಂಗಾಂಗಗಳಿಗೆ ಸಮರ್ಪಕವಾಗಿ ವಿತರಣೆ ಆಗುತ್ತದೆ. ಆದರೆ ನಿಂತುಕೊಂಡು ನೀರು ಕುಡಿಯುವಾಗ ನೀರು ವೇಗವಾಗಿ ಹೊಟ್ಟೆಗೆ ಸೇರುತ್ತದೆ. ಇದರಿಂದ ದೇಹವು ಅದನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದೆ, ಜೀರ್ಣಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಆಯುರ್ವೇದದ ಪ್ರಕಾರ, ನಿಂತು ನೀರು ಕುಡಿಯುವುದರಿಂದ ದೇಹದ ನೀರಿನ ಸಮತೋಲನ ಹಾಳಾಗುತ್ತದೆ. ಪರಿಣಾಮವಾಗಿ ನೀರು ಕೀಲುಗಳು ಮತ್ತು ಮೊಣಕಾಲುಗಳ ಸುತ್ತ ಸಂಗ್ರಹವಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮೊಣಕಾಲು ನೋವು, ಕೀಲು ಬಿಗಿತ ಮತ್ತು ಸಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಇನ್ನೂ, ನಿಂತು ನೀರು ಕುಡಿಯುವುದರಿಂದ ನೀರು ಸರಿಯಾಗಿ ಶೋಧನೆ ಆಗದೆ ನೇರವಾಗಿ ಮೂತ್ರಪಿಂಡಗಳಿಗೆ ತಲುಪುತ್ತದೆ. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.
ಜೀರ್ಣಕ್ರಿಯೆ ಹದಗೆಡುವುದರಿಂದ ಗ್ಯಾಸ್, ಆಮ್ಲೀಯತೆ, ಎದೆಯುರಿ, ಮಲಬದ್ಧತೆ ಹಾಗೂ ಹೊಟ್ಟೆ ಭಾರವಾದ ಅನುಭವ ಉಂಟಾಗುತ್ತದೆ. ದೇಹವು ನೀರನ್ನು ಸರಿಯಾಗಿ ಬಳಸಿಕೊಳ್ಳದಾಗ ಶಕ್ತಿ ಕುಂಠಿತವಾಗುತ್ತದೆ ಮತ್ತು ವ್ಯಕ್ತಿಗೆ ನಿರಂತರ ದಣಿವು ಹಾಗೂ ಆಲಸ್ಯ ಕಾಣಿಸಿಕೊಳ್ಳುತ್ತದೆ.
ಆರೋಗ್ಯವಾಗಿರಲು ಬಯಸಿದರೆ ಯಾವಾಗಲೂ ಆರಾಮವಾಗಿ ಕುಳಿತು, ನಿಧಾನವಾಗಿ ನೀರು ಕುಡಿಯಬೇಕು. ತುಂಬಾ ತಣ್ಣನೆಯ ನೀರನ್ನು ತಪ್ಪಿಸಿ, ಕೋಣೆಯ ಉಷ್ಣಾಂಶದ ನೀರನ್ನು ಗಾಜು ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
Blog
ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಗೆ ಯುವಕ ಬಲಿ
ಶಿವಮೊಗ್ಗ, ಜನವರಿ 29: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಸಿ ತೋಟ ಗ್ರಾಮದಲ್ಲಿ ಮಂಗನ ಕಾಯಿಲೆ (KFD – Kyasanur Forest Disease) ಸೋಂಕಿಗೆ ಮತ್ತೊಂದು ಬಲಿ ಬಿದ್ದಿದೆ. 29 ವರ್ಷದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ಸಸಿ ತೋಟ ನಿವಾಸಿ ಕಿಶೋರ್ ಎಂದು ಗುರುತಿಸಲಾಗಿದೆ. ಜನವರಿ 20ರಿಂದ ಕಿಶೋರ್ ಅವರಿಗೆ ತೀವ್ರ ಜ್ವರ, ತಲೆನೋವು, ದೇಹದ ನೋವು ಸೇರಿದಂತೆ ಮಂಗನ ಕಾಯಿಲೆಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಜ್ವರ ತಗ್ಗದೆ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.
ರೋಗಲಕ್ಷಣಗಳು ಉಲ್ಬಣಗೊಂಡ ಹಿನ್ನೆಲೆ ಜನವರಿ 25ರಂದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತಜ್ಞ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡಿದರೂ, ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಕಿಶೋರ್ ಚಿಕಿತ್ಸೆಗೇ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಘಟನೆ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ತೀರ್ಥಹಳ್ಳಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಮಂಗನ ಕಾಯಿಲೆ ಟಿಕ್ (Tick) ಮೂಲಕ ಹರಡುವ ಸೋಂಕಾಗಿರುವುದರಿಂದ ಅರಣ್ಯ ಪ್ರದೇಶಕ್ಕೆ ತೆರಳುವವರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕಳೆದ ಕೆಲ ತಿಂಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅರಣ್ಯ ಅಂಚಿನ ಗ್ರಾಮಗಳಲ್ಲಿ ವಾಸಿಸುವ ಜನರು ಮತ್ತು ಅರಣ್ಯಕ್ಕೆ ಹೋಗುವ ಕೂಲಿ ಕಾರ್ಮಿಕರು ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಜ್ವರ, ತಲೆನೋವು, ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಆರೋಗ್ಯ
EGG HEALTH BENIFITS : ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಏನು ಲಾಭ?
ಆರೋಗ್ಯ ಡೆಸ್ಕ್: ಮೊಟ್ಟೆ (Egg) ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಲಭ್ಯವಿರುವ ಆಹಾರಗಳಲ್ಲಿ ಒಂದಾಗಿದೆ. ಆದರೆ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು ಎಂಬ ಗೊಂದಲ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಅತಿಯಾದ ಮೊಟ್ಟೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ್ದರಿಂದ ಸರಿಯಾದ ಪ್ರಮಾಣ ತಿಳಿದುಕೊಳ್ಳುವುದು ಬಹಳ ಮುಖ್ಯ.
ಹಾರ್ವರ್ಡ್ ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳೊಂದಿಗೆ ಕಾರ್ಯನಿರ್ವಹಿಸುವ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಮೊಟ್ಟೆಗಳು ಸಂಪೂರ್ಣ ಪ್ರೋಟೀನ್ ಅನ್ನು ಹೊಂದಿದ್ದು, ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿವೆ. ಇದರಿಂದ ಸ್ನಾಯುಗಳ ನಿರ್ಮಾಣ ಮತ್ತು ಪುನರ್ ನಿರ್ಮಾಣಕ್ಕೆ ಸಹಾಯವಾಗುತ್ತದೆ. ಜಿಮ್‌ಗೆ ಹೋಗುವವರಿಗೆ ಇದು ಅತ್ಯುತ್ತಮ ಮತ್ತು ಕಡಿಮೆ ವೆಚ್ಚದ ಆಹಾರವಾಗಿದೆ.
ಡಾ. ಸೇಥಿ ಅವರು ಹಸಿ ಮೊಟ್ಟೆ ಸೇವನೆ ತಪ್ಪಿಸಬೇಕು ಎಂದು ಎಚ್ಚರಿಸಿದ್ದಾರೆ. ಹಸಿ ಮೊಟ್ಟೆಗಳಿಂದ ಸಾಲ್ಮೊನೆಲ್ಲಾ ಸೋಂಕಿನ ಅಪಾಯವಿದ್ದು, ಬೇಯಿಸಿದ ಮೊಟ್ಟೆಗಳಲ್ಲಿ ಇರುವ ಪ್ರೋಟೀನ್ ದೇಹಕ್ಕೆ ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಮೊಟ್ಟೆಗಳು ವಿಟಮಿನ್ ಎ, ಡಿ, ಇ, ಬಿ12 ಹಾಗೂ ಕಬ್ಬಿಣ, ಸೆಲೆನಿಯಮ್, ರಂಜಕದಂತಹ ಖನಿಜಗಳಲ್ಲಿ ಸಮೃದ್ಧವಾಗಿವೆ. ಮೊಟ್ಟೆಯ ಹಳದಿ ಭಾಗದಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣುಗಳ ಆರೋಗ್ಯಕ್ಕೆ ಉಪಯುಕ್ತವಾಗಿದ್ದು, ವಯಸ್ಸಿನ ಪರಿಣಾಮದಿಂದ ಉಂಟಾಗುವ ದೃಷ್ಟಿ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಸಾಮಾನ್ಯವಾಗಿ, ಪ್ರತಿದಿನ 1 ರಿಂದ 2 ಮೊಟ್ಟೆಗಳನ್ನು ಸೇವಿಸುವುದು ಹೆಚ್ಚಿನ ಜನರಿಗೆ ಸುರಕ್ಷಿತ ಎಂದು ಡಾ. ಸೌರಭ್ ಸೇಥಿ ಹೇಳಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಸೇವಿಸಿದರೆ ತೂಕ ನಿಯಂತ್ರಣ, ಹೃದಯ ಆರೋಗ್ಯ ಮತ್ತು ಒಟ್ಟಾರೆ ದೈಹಿಕ ಕ್ಷೇಮಕ್ಕೆ ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
-
ಬೆಂಗಳೂರು18 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ17 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ದೇಶ14 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ಕ್ರೀಡೆ12 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ15 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ಅಪರಾಧ17 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ12 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
-
ದೇಶ16 hours agoBHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ
