ರಾಜಕೀಯ
ಮೊದಲ ಕೆಡಿಪಿಯಲ್ಲೇ ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ!
ಕಲಬುರಗಿ: ಅಧಿಕಾರಿಗಳ ತಪ್ಪು ಮಾಹಿತಿಗೆ ಕೆಂಡ ಮಂಡಲವಾದ ಸಚಿವರು… ಕೃಷಿ ವಿಮೆಯ ಕಟಿಂಗ್ ಸರ್ವೆ ಪಾರದರ್ಶಕತೆಗೆ ಸೂಚನೆ… ಕಳೆದು ಹೋದ ಜಾನುವಾರುಗಳ ಬಗ್ಗೆ ಸುಧೀರ್ಘ ಚರ್ಚೆ. ಸರಕಾರ ಯೋಜನೆ ಹಣ ಸಾಲಕ್ಕೆ ಹೊಂದಿಕೆ ಮಾಡದಿರಿ ಎಂದು ಬ್ಯಾಂಕ್‌ಗಳಿಗೆ ಖಡಕ್ ಎಚ್ಚರಿಕೆ… ಭ್ರಷ್ಟ ಅಧಿಕಾರಿಯನ್ನು ಹುದ್ದೆಯಿಂದ ರಿಲೀವ್‌ಗೆ ಸ್ಥಳದಲ್ಲಿಯೇ ನಿರ್ದೇಶನ…ಹೊರ ರಾಜ್ಯದ ಕಳಪೆ ಹಾಲು ತಡೆಯಲು ಕ್ರಮ ಕೈಗೊಳ್ಳದ ಅಧಿಕಾರಿಗೆ ಕತ್ತೆ ಕಾಯಲು ಬರ್ತೀರಾ ಎಂದು ತರಾಟೆ..ಒರೊಬ್ಬರಿ 11 ತಿಂಗಳ ನಂತರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಬುಧವಾರ ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿನಡೆದ ಜಿಲ್ಲಾಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ( ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಕಂಡು ಬಂದ ನೋಟಗಳಿವು.ಸರಕಾರ ಯೋಜನೆಯಲ್ಲಿಫಲಾನುಭವಿಗಳಿಗೆ ನೀಡಿದ ಹಣವನ್ನು ಸಾಲಕ್ಕೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನಾಲವಾರದ ಕೆಜಿಬಿ ಮ್ಯಾನೇಜರ್‌ಗೆ ಪ್ರಶ್ನೆ ಮಾಡಿದರೆ ಉದ್ಧಟತನ ಉತ್ತರ ನೀಡುತ್ತಾನೆ ಎಂದು ಸಚಿವರು ಗರಂ ಆದರು. ಇಂತಹ ವಿಚಾರಗಳು ನಮ್ಮ ಗಮನಕ್ಕೆ ಬಂದಿಲ್ಲ, ಯಾರಾದರೂ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು. ಮುಂದೆ ಈ ರೀತಿ ಆಗದಂತೆ ಎಲ್ಲಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗುವುದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ರಾತ್ರಿಕರ್ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು, ಸರಕಾರ ಯೋಜನೆಯ ಹಣವನ್ನು ಫಲಾನುಭವಿಗಳಿಗೆ ನೀಡದ ಬ್ಯಾಂಕ್‌ಗಳಲ್ಲಿಸರಕಾರ ನಾನಾ ನಿಗಮದ ಹಣ ಡಿಪಾಸಿಟ್ ಮಾಡುವುದು ಬೇಡ ಎಂದು ಸೂಚನೆ ನೀಡಿದರು.ಎಂಎಲ್‌ಸಿ ತಿಪ್ಪಣಪ್ಪ ಕಮಕನೂರ ಮಾತನಾಡಿ, ಗ್ಯಾರಂಟಿ ಜತೆ, ಸರಕಾರದದಿಂದ ನೀಡಲಾಗುವ ವಿವಿಧ ಪರಿಹಾರ, ರೈತರ ಆತ್ಮಹತ್ಯೆ ಪರಿಹಾರದಲ್ಲೂಬ್ಯಾಂಕ್ ಅಧಿಕಾರಿಗಳು ಅಮಾನವೀಯ ವರ್ತನೆ ತೋರಿದ್ದಾರೆ. ಹೆಬ್ಬಾಳ ಹಾಗೂ ಕಾಳಗಿ ಬ್ಯಾಂಕ್‌ನಲ್ಲೂಇಂತಹ ಘಟನೆ ನಡೆದಿವೆ ಎಂದು ಸಚಿವರ ಗಮನಕ್ಕೆ ತಂದರು.
ದೇಶ
ಸಾಧನಾ ಸಮಾವೇಶದಲ್ಲಿ ಸಿಎಂ ಗರ್ಜನೆ: ಕರ್ನಾಟಕ ಜಿಡಿಪಿ ದೇಶದಲ್ಲೇ ನಂಬರ್ ಒನ್
ಹಾವೇರಿ, ಫೆ.14: ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ. ಈಗಾಗಲೇ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ದಾಖಲೆ ನಿರ್ಮಿಸಿದ್ದೇವೆ ಎಂದು ಮುಖ್ಯಮಂತ್ರಿ Siddaramaiah ಘೋಷಿಸಿದರು.
ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ನಡೆದ ಸರ್ಕಾರದ ಸಹಸ್ರ ದಿನಾಚರಣೆ ಹಾಗೂ ಸಾಧನಾ ಸಮಾವೇಶದಲ್ಲಿ 1 ಲಕ್ಷ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೇಳಿದರು.
ಕಂದಾಯ ಸಚಿವ Krishna Byre Gowda ನೇತೃತ್ವದಲ್ಲಿ ಇಲಾಖೆಯಲ್ಲಿ ಕ್ರಾಂತಿಕಾರಿ ಪ್ರಗತಿ ಕಂಡಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಎಸ್‌ಟಿ ಸಂಗ್ರಹದಲ್ಲೂ ರಾಜ್ಯ ವೇಗವಾಗಿ ಮುನ್ನಡೆಯುತ್ತಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದರು.
ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಮಾಜಿ ಮುಖ್ಯಮಂತ್ರಿ Basavaraj Bommai ಹಾಗೂ ಕೇಂದ್ರ ಸಚಿವ Pralhad Joshi ಸೇರಿದಂತೆ ಬಿಜೆಪಿ ನಾಯಕರು ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 9 ತಿಂಗಳು ಕಳೆದಿದ್ದು, 243 ಭರವಸೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ₹1,18,000 ಕೋಟಿ ನೇರವಾಗಿ ಜನರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು.
ಆರ್ಥಿಕ ತಜ್ಞರಾದ Amartya Sen ಮತ್ತು Abhijit Banerjee ಸೇರಿದಂತೆ ಹಲವರು ರಾಜ್ಯದ ಜನಪರ ಯೋಜನೆಗಳಿಗೆ ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಹೇಳಿದರು.
ಕೇಂದ್ರದಿಂದ ಜಿಎಸ್‌ಟಿ ಪಾಲಿನಲ್ಲಿ 12–15 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಜಲ ಜೀವನ್ ಮಿಷನ್ (JJM) ಅನುದಾನದಲ್ಲೂ ಸುಮಾರು 15 ಸಾವಿರ ಕೋಟಿ ಬಾಕಿ ಇದೆ. ನ್ಯಾಯಯುತ ಪಾಲು ದೊರೆತರೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.
“ನುಡಿದಂತೆ ನಡೆದು” ಆಡಳಿತ ನೀಡಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಎಲ್ಲ ಜಾತಿ, ಧರ್ಮ, ಭಾಷೆಯ ಜನರನ್ನು ಒಳಗೊಂಡ ಸಮಾನತೆಯ ಅಭಿವೃದ್ಧಿಗೆ ನಮ್ಮ ಬದ್ಧತೆ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ದೇಶ
“ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ” – B. Y. Vijayendra
ಬೆಂಗಳೂರು: ರಾಜ್ಯ ಸರ್ಕಾರ ತನ್ನ ಸಾವಿರ ದಿನಗಳ ಸಂಭ್ರಮಾಚರಣೆಗೆ ಸಜ್ಜಾಗಿರುವ ಸಂದರ್ಭದಲ್ಲಿ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಇದು ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ” ಎಂದು ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra ಆರೋಪಿಸಿದರು. ನಗರದಲ್ಲಿನ ಪಕ್ಷ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ Ashwath Narayan ಹಾಗೂ Govind Karjol ಉಪಸ್ಥಿತರಿದ್ದರು.
ವಿಜಯೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಬಡವರ ಬದುಕು ಸುಧಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದರೂ, ರಾಜ್ಯ ಸರ್ಕಾರ ಜನರ ನಿರೀಕ್ಷೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು. “ಕಾಯಕವೇ ಕೈಲಾಸ ಎಂಬ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಮೇಲಿನ ವಿಶೇಷ ಆಸಕ್ತಿ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಿದೆ,” ಎಂದರು.
ಮಹಿಳೆಯರು, ಬಡವರು, ಯುವಜನತೆ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು. ಜಾತಿಗಣತಿ ವಿಚಾರದಲ್ಲಿ 170 ಕೋಟಿ ವೆಚ್ಚದ ವರದಿಯನ್ನು ಕಡೆಗಣಿಸಿ, ಮತ್ತೆ 450 ಕೋಟಿ ವೆಚ್ಚದಲ್ಲಿ ರಿಸರ್ವೇ ನಡೆಸಲಾಗಿದೆ ಎಂದು ಪ್ರಶ್ನಿಸಿದರು. “ಇದು ಜನರ ಹಣದ ದುರ್ಬಳಕೆ,” ಎಂದು ಟೀಕಿಸಿದರು.
ಮುಡಾ, ಗೃಹ ಲಕ್ಷ್ಮೀ, ಅಬಕಾರಿ ಹಾಗೂ ಸ್ಮಾರ್ಟ್ ಮೀಟರ್ ಹಗರಣಗಳ ಆರೋಪಗಳನ್ನೂ ಅವರು ಉಲ್ಲೇಖಿಸಿದರು. ಪಂಚ ಗ್ಯಾರಂಟಿ ಯೋಜನೆಗಳು ‘ಪಂಚರ್’ ಆಗಿವೆ. ಹತ್ತು ಕೆಜಿ ಅಕ್ಕಿ ಹೇಳಿ ಐದು ಕೆಜಿ ಮಾತ್ರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯವಾಗುತ್ತಿದೆ. ನೀರಾವರಿ, ಉದ್ಯೋಗ, ಹುದ್ದೆ ಭರ್ತಿ, ಗೌರವಧನ ಹೆಚ್ಚಳ ಸೇರಿದಂತೆ ಹಲವು ಭರವಸೆಗಳು ಈಡೇರಿಲ್ಲ. “ಇದು ಸಂಭ್ರಮದ ದಿನವಲ್ಲ, ಆತ್ಮಪರಿಶೀಲನೆಯ ದಿನ,” ಎಂದು ವಿಜಯೇಂದ್ರ ಹೇಳಿದರು.
ದೇಶ
ಕೋಡಿಮಠದ ಭವಿಷ್ಯ: ‘ಬಜೆಟ್ ನಂತರವೇ ಬದಲಾವಣೆ’
ಬೆಂಗಳೂರು: ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು Siddaramaiah ನೇತೃತ್ವದ ಸರ್ಕಾರ ಕೈಗೊಂಡಿದೆ. ಅದರಲ್ಲಿ ಪ್ರಮುಖವಾದುದು 2026ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿ ಮಾಡಿರುವುದು. ಮಾರ್ಚ್ 6ರ ಶುಕ್ರವಾರ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಈ ಮಧ್ಯೆ, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯ Kodimath ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ‘ಪವರ್ ಶೇರಿಂಗ್’ ಭವಿಷ್ಯ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ.
‘ಬಜೆಟ್ ನಂತರವೇ ಬದಲಾವಣೆ?’
ಮಕರ ಸಂಕ್ರಾಂತಿ ಸಂದರ್ಭ ಬೆಳಗಾವಿಯಲ್ಲಿ ಮಾತನಾಡಿದ್ದ ಸ್ವಾಮೀಜಿಗಳು, “ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಸಿದ್ದರಾಮಯ್ಯನವರಿಗೆ ಬಲವಾದ ಆಶೀರ್ವಾದವಿದೆ. ಅವರಾಗಿಯೇ ಅಧಿಕಾರದಿಂದ ಕೆಳಗಿಳಿಯಬೇಕೇ ಹೊರತು, ಅವರನ್ನು ಬಲವಂತದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಅದೇನಿದ್ದರೂ ಬಜೆಟ್ ನಂತರ” ಎಂದು ಹೇಳಿದ್ದರು.
ರಾಜ್ಯ ಖಜಾನೆಯ ಲೆಕ್ಕ (ಬಜೆಟ್) ಮಂಡನೆಯಾದ ಬಳಿಕವೇ ಯಾವುದೇ ಮಹತ್ವದ ರಾಜಕೀಯ ಬದಲಾವಣೆ ಸಾಧ್ಯತೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಹೀಗಾಗಿ, ಬಜೆಟ್ ದಿನಾಂಕ ನಿಗದಿಯಾದ ಹಿನ್ನೆಲೆ ‘ಅಧಿಕಾರ ಹಸ್ತಾಂತರ’ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ರಾಜಕೀಯ ಬೆಳವಣಿಗೆಗಳು ವೇಗ
ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಉಪ ಮುಖ್ಯಮಂತ್ರಿ D. K. Shivakumar ಹಾಗೂ ಮಾಜಿ ಸಂಸದ D. K. Suresh ದೆಹಲಿಯಲ್ಲಿ ಹೈಕಮಾಂಡ್‌ನ್ನು ಭೇಟಿ ಮಾಡಿ ರಾಜ್ಯಕ್ಕೆ ಮರಳಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇನ್ನೊಂದೆಡೆ, ಮುಖ್ಯಮಂತ್ರಿಗಳ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ “ನಮ್ಮ ತಂದೆಯೇ ಪೂರ್ಣಾವಧಿಗೆ ಮುಖ್ಯಮಂತ್ರಿ. ಇದು ಚರ್ಚೆಯ ವಿಷಯವಲ್ಲ” ಎಂದು ಹೇಳಿರುವುದು ಪವರ್ ಶೇರಿಂಗ್ ಊಹಾಪೋಹಗಳಿಗೆ ಮತ್ತಷ್ಟು ಇಂಧನ ನೀಡಿದೆ.
ರಾಜಕೀಯ ಚರ್ಚೆಗೆ ಇಂಧನ
ಕೋಡಿಮಠದ ಸ್ವಾಮೀಜಿಗಳ ಭವಿಷ್ಯವಾಣಿ ಹಾಗೂ ಬಜೆಟ್ ಮಂಡನೆ ದಿನಾಂಕ ಒಂದೇ ಸಮಯದಲ್ಲಿ ಚರ್ಚೆಗೆ ಬಂದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಬಜೆಟ್ ಬಳಿಕ ಅಧಿಕಾರ ಹಸ್ತಾಂತರವಾಗುತ್ತದೆಯೇ ಅಥವಾ ಸಿದ್ದರಾಮಯ್ಯ ಪೂರ್ಣಾವಧಿಗೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಕ್ಕಾಗಿ ರಾಜಕೀಯ ವಲಯ ಕಾದು ನೋಡುತ್ತಿದೆ.
-
ಅಪರಾಧ6 hours agoಚಿಕ್ಕಬಳ್ಳಾಪುರದಲ್ಲಿ ಆರ್ಟಿಓ ಇನ್ಸ್ಪೆಕ್ಟರ್ ಎಡವಟ್ಟು: ಅಧಿಕಾರ ವ್ಯಾಪ್ತಿ ಮೀರಿ ಪರಿಶೀಲನಾ ವರದಿ?
-
ದೇಶ6 hours agoPM Narendra Modi ಉದ್ಘಾಟಿಸಿದ ದೇಶದ ಮೊದಲ ಹೆದ್ದಾರಿ ತುರ್ತು ಲ್ಯಾಂಡಿಂಗ್ ಸೌಲಭ್ಯ
-
ದೇಶ6 hours agoImran Khan ಜೈಲು ವಿವಾದ: ದೃಷ್ಟಿ ಕಳೆದುಕೊಂಡರೆಂಬ ಆರೋಪ, ಸ್ಥಳಾಂತರಕ್ಕೆ ಘೋಷಣೆ
-
ಕ್ರೀಡೆ6 hours agoTCS WORLD 10K ಬೆಂಗಳೂರು ಏಪ್ರಿಲ್ 26ರಂದು: ನೋಂದಣಿ ಆರಂಭ, USD 2.1 ಲಕ್ಷ ಬಹುಮಾನ
-
ಕ್ರೀಡೆ6 hours agoಕರ್ನಾಟಕ ಗ್ರಾಮೀಣ ಲೀಗ್ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್: ಮರಿಯನ್ಸ್ ಬಿಸಿ ಚಿಕ್ಕಮಗಳೂರು ಚಾಂಪಿಯನ್
-
ಅಪರಾಧ7 hours ago‘ನಾನ್ ರುದ್ರನ್’ ವಿವಾದ: ಧನುಷ್ಗೆ ₹20 ಕೋಟಿ ಪರಿಹಾರ ಬೇಡಿಕೆ, ತೆನಾಂಡಲ್ ಫಿಲ್ಮ್ಸ್ ಕಾನೂನು ನೋಟಿಸ್
-
ಕ್ರೀಡೆ6 hours agoಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್: ಜೈನ್ ವಿಶ್ವವಿದ್ಯಾಲಯ ಚಾಂಪಿಯನ್
-
ದೇಶ2 hours agoBJP : ಮಹದೇಶ್ವರನ ಆಶೀರ್ವಾದಕ್ಕೆ ಹೆಜ್ಜೆ: ಶಶಿ ಕುಮಾರ್ ಕರೆ – ಯಶವಂತಪುರದಿಂದ ನೂರಾರು ಕಾರ್ಯಕರ್ತರು
