Connect with us

ರಾಜಕೀಯ

ಬೆಂಗಳೂರು ಮತದಾರ ಪಟ್ಟಿ ಪರಿಷ್ಕರಣೆ: ಚುನಾವಣಾಧಿಕಾರಿಗಳು ಮನೆ ಮನೆಗೆ ಭೇಟಿ

ಬೆಂಗಳೂರು ಮತದಾರ ಪಟ್ಟಿ ಪರಿಷ್ಕರಣೆ: ಚುನಾವಣಾಧಿಕಾರಿಗಳು ಮನೆ ಮನೆಗೆ ಭೇಟಿ

ಬೆಂಗಳೂರು, ಡಿಸೆಂಬರ್ 21: ಲೋಕಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇವೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಈಗಾಗಲೇ ಕರಡು ಮತದಾರರು ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಮುಂದಿನ ತಿಂಗಳು ಅಂತಿಮ ಪಟ್ಟಿ ಪ್ರಕಟವಾಗಲಿದೆ. ಈ ಮಧ್ಯೆ ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ ನಗರ ಜಿಲ್ಲಾ ಚುನಾವಣಾಧಿಕಾರಿಗಳು ಮನೆ ಮನೆ ಭೇಟಿ ಕೊಡುತ್ತಿದ್ದಾರೆ.ಹೌದು, ಪ್ರತಿ ವರ್ಷವೂ ಮತದಾರ ಪಟ್ಟಿ ಪರಿಷ್ಕರಣೆಯನ್ನು ಮಾಡಲಾಗುತ್ತದೆ. ಈ ಪೈಕಿ ಭಾರತ ಚುಣಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ಶುದ್ಧೀಕರಣವನ್ನು ಅಧಿಕಾರಿಗಳು ಸರಿಯಾಗಿ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಮನೆ ಮನೆಗೆ ಜಿಲ್ಲಾ ಚುನಾವಣಾಧಿಕಾರಿಗಳ ಜೊತೆಗೆ ಬಿಬಿಎಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪರಿಶೀಲನೆ ಆರಂಬಿಸಿದ್ದಾರೆ.ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ಟೋಬರ್ 27 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸದರಿ ಆ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಅವಕಾಶ ನೀಡಲಾಗಿತ್ತು.ಆಕ್ಷೇಪಣೆ ಸಲ್ಲಿಕೆ ಸಮಯ ಅಂತ್ಯ ಆಕ್ಷೇಪಣೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ದಿನಾಂಕ ಇದೇ ಡಿಸೆಂಬರ್ 09ರವರೆಗೆ ಅವಕಾಶ ನೀಡಿತ್ತು. ಈ ವೇಳೆ ಎಲ್ಲಾ ಬಿ.ಎಲ್.ಓ ಮತ್ತು ಬಿ.ಎಲ್.ಓ ಮೇಲ್ವಿಚಾರಕರುಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಶುದ್ಧೀಕರಿಸುವ ಕಾರ್ಯ ಮಾಡಿರುತ್ತಾರೆ.ಭಾರತ ಚುನಾವಣಾ ಆಯೋಗದ ನಿದೇರ್ಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವುದನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳು ಕೆಲ ಮನೆಗಳಿಗಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಬಗ್ಗೆ ಸೂಪರ್ ಚೆಕ್ಕಿಂಗ್ ಮಾಡಲಾಗುತ್ತದೆ. ಅದರಂತೆ ಇಂದು ಕೆಲ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.

ಅರ್ಜಿದಾರರಿಗೆ ಮಾರ್ಗದರ್ಶನ ನೀಡಿ ಶಾಂತಿನಗರದ ಹಾಗೂ ಶಿವಾಜಿನಗರರದ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ-6, ನಮೂನೆ-7 ಹಾಗೂ ನಮೂನೆ-8 ಅನ್ನು ಪರಿಶೀಲಿಸಿ ಅಧಿಕಾರಿಗಳು ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ ಮಾರ್ಗದರ್ಶನ ಒದಗಿಸಲು ಮುಖ್ಯ ಆಯುಕ್ತರು ಸೂಚಿಸಿದರು.ಹೆಬ್ಬಾಳ ವಿಧಾನಸಭಾ ಕ್ಷೆತ್ರದ ಸಂಜಯನಗರದ ಅಮರ ಜ್ಯೋತಿ ಲೇಔಟ್ ನಲ್ಲಿ ನಮೂನೆ 06ರ ಮೂಲಕ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ನಾಗಶೆಟ್ಟಿಹಳ್ಳಿಯ ಟೀಚರ್ಸ್ ಕಾಲೋನಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಮೊದಲ ಮತದಾರ ಮನೆಗೆ ಭೆಟಿ ನೀಡಿ ನಮೂನೆಯನ್ನು ಪರಿಶೀಲಿಸಿದರು. ಯಲಹಂಕ ವಿಧಾನ ಸಭಾ ಕ್ಷೇತ್ರದ ಪೂರ್ವಾಂಕರ ಅಪಾರ್ಟ್ಮೆಂಟ್ ನಲ್ಲಿ ನಮೂನೆಯನ್ನು ಪರಿಶೀಲಿಸಿ, ಮತದಾರ ಸ್ಥಳಾಂತರ ಮಾಡಿಕೊಂಡಿರುವುದಾಗಿ ನಮೂನೆ-7ರ ಮೂಲಕ ಅರ್ಜಿ ಸಲ್ಲಿಸಿರುವ ಪ್ರಕಾರ ತಿರಸ್ಕರಿಸಲಾಗಿರುತ್ತದೆ‌. ಮತ್ತೊಮ್ಮೆ ನಮೂನೆ ಸಲ್ಲಿಸಿದ್ದ ಪರಿಣಾಮ ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಯಲಹಂಕದ ರೈಲ್ವೆ ವೀಲ್ ಪ್ಯಾಕ್ಟರಿ ಕ್ವಾಟ್ರಸ್ ನಲ್ಲಿ ನಮೂನೆ ಪರಿಶೀಲಿಸಿ ಮತದಾರ ಬೇರೆ ಸ್ಥಳಾಂತರಗೊಂಡಿರುವ ಕಾರಣ ನಮೂನೆಯನ್ನು ತಿರಸ್ಕರಿಸಲಾಗಿದೆ. ಮನೆ-ಮನೆಗೆ ಭೇಟಿ ನೀಡಿ ನಮೂನೆಗಳನ್ನು ಸೂಪರ್ ಚೆಕ್ಕಿಂಗ್ ಮಾಡಿ ಎಲ್ಲವೂ ಸರಿ ಇದೆ. ಮನೆಯವರ ಹೆಸರು, ವಿಳಾಸ, ಸಹಿ ಪರಿಶೀಲನೆಯ ಜೊತೆಗೆ ಎರಡು ಕಡೆ ಹೆಸರಿದ್ದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಯ ಜೊತೆ ಮಾತನಾಡಿ ಒಂದು ಕಡೆ ಹೆಸರನ್ನು ತೆಗೆಸಬೇಕೆಂದು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ನಿರ್ದೇಶಿಸಿದರು.

Continue Reading

ದೇಶ

“ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ” – B. Y. Vijayendra

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಸಾವಿರ ದಿನಗಳ ಸಂಭ್ರಮಾಚರಣೆಗೆ ಸಜ್ಜಾಗಿರುವ ಸಂದರ್ಭದಲ್ಲಿ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಇದು ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ” ಎಂದು ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra ಆರೋಪಿಸಿದರು. ನಗರದಲ್ಲಿನ ಪಕ್ಷ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ Ashwath Narayan ಹಾಗೂ Govind Karjol ಉಪಸ್ಥಿತರಿದ್ದರು.

ವಿಜಯೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಬಡವರ ಬದುಕು ಸುಧಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದರೂ, ರಾಜ್ಯ ಸರ್ಕಾರ ಜನರ ನಿರೀಕ್ಷೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು. “ಕಾಯಕವೇ ಕೈಲಾಸ ಎಂಬ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಮೇಲಿನ ವಿಶೇಷ ಆಸಕ್ತಿ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಿದೆ,” ಎಂದರು.

ಮಹಿಳೆಯರು, ಬಡವರು, ಯುವಜನತೆ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು. ಜಾತಿಗಣತಿ ವಿಚಾರದಲ್ಲಿ 170 ಕೋಟಿ ವೆಚ್ಚದ ವರದಿಯನ್ನು ಕಡೆಗಣಿಸಿ, ಮತ್ತೆ 450 ಕೋಟಿ ವೆಚ್ಚದಲ್ಲಿ ರಿಸರ್ವೇ ನಡೆಸಲಾಗಿದೆ ಎಂದು ಪ್ರಶ್ನಿಸಿದರು. “ಇದು ಜನರ ಹಣದ ದುರ್ಬಳಕೆ,” ಎಂದು ಟೀಕಿಸಿದರು.

ಮುಡಾ, ಗೃಹ ಲಕ್ಷ್ಮೀ, ಅಬಕಾರಿ ಹಾಗೂ ಸ್ಮಾರ್ಟ್ ಮೀಟರ್ ಹಗರಣಗಳ ಆರೋಪಗಳನ್ನೂ ಅವರು ಉಲ್ಲೇಖಿಸಿದರು. ಪಂಚ ಗ್ಯಾರಂಟಿ ಯೋಜನೆಗಳು ‘ಪಂಚರ್’ ಆಗಿವೆ. ಹತ್ತು ಕೆಜಿ ಅಕ್ಕಿ ಹೇಳಿ ಐದು ಕೆಜಿ ಮಾತ್ರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯವಾಗುತ್ತಿದೆ. ನೀರಾವರಿ, ಉದ್ಯೋಗ, ಹುದ್ದೆ ಭರ್ತಿ, ಗೌರವಧನ ಹೆಚ್ಚಳ ಸೇರಿದಂತೆ ಹಲವು ಭರವಸೆಗಳು ಈಡೇರಿಲ್ಲ. “ಇದು ಸಂಭ್ರಮದ ದಿನವಲ್ಲ, ಆತ್ಮಪರಿಶೀಲನೆಯ ದಿನ,” ಎಂದು ವಿಜಯೇಂದ್ರ ಹೇಳಿದರು.

Continue Reading

ದೇಶ

ಕೋಡಿಮಠದ ಭವಿಷ್ಯ: ‘ಬಜೆಟ್ ನಂತರವೇ ಬದಲಾವಣೆ’

ಬೆಂಗಳೂರು: ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು Siddaramaiah ನೇತೃತ್ವದ ಸರ್ಕಾರ ಕೈಗೊಂಡಿದೆ. ಅದರಲ್ಲಿ ಪ್ರಮುಖವಾದುದು 2026ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿ ಮಾಡಿರುವುದು. ಮಾರ್ಚ್ 6ರ ಶುಕ್ರವಾರ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.

ಈ ಮಧ್ಯೆ, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯ Kodimath ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ‘ಪವರ್ ಶೇರಿಂಗ್’ ಭವಿಷ್ಯ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ.


‘ಬಜೆಟ್ ನಂತರವೇ ಬದಲಾವಣೆ?’

ಮಕರ ಸಂಕ್ರಾಂತಿ ಸಂದರ್ಭ ಬೆಳಗಾವಿಯಲ್ಲಿ ಮಾತನಾಡಿದ್ದ ಸ್ವಾಮೀಜಿಗಳು, “ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಸಿದ್ದರಾಮಯ್ಯನವರಿಗೆ ಬಲವಾದ ಆಶೀರ್ವಾದವಿದೆ. ಅವರಾಗಿಯೇ ಅಧಿಕಾರದಿಂದ ಕೆಳಗಿಳಿಯಬೇಕೇ ಹೊರತು, ಅವರನ್ನು ಬಲವಂತದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಅದೇನಿದ್ದರೂ ಬಜೆಟ್ ನಂತರ” ಎಂದು ಹೇಳಿದ್ದರು.

ರಾಜ್ಯ ಖಜಾನೆಯ ಲೆಕ್ಕ (ಬಜೆಟ್) ಮಂಡನೆಯಾದ ಬಳಿಕವೇ ಯಾವುದೇ ಮಹತ್ವದ ರಾಜಕೀಯ ಬದಲಾವಣೆ ಸಾಧ್ಯತೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಹೀಗಾಗಿ, ಬಜೆಟ್ ದಿನಾಂಕ ನಿಗದಿಯಾದ ಹಿನ್ನೆಲೆ ‘ಅಧಿಕಾರ ಹಸ್ತಾಂತರ’ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.


ರಾಜಕೀಯ ಬೆಳವಣಿಗೆಗಳು ವೇಗ

ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಉಪ ಮುಖ್ಯಮಂತ್ರಿ D. K. Shivakumar ಹಾಗೂ ಮಾಜಿ ಸಂಸದ D. K. Suresh ದೆಹಲಿಯಲ್ಲಿ ಹೈಕಮಾಂಡ್‌ನ್ನು ಭೇಟಿ ಮಾಡಿ ರಾಜ್ಯಕ್ಕೆ ಮರಳಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ, ಮುಖ್ಯಮಂತ್ರಿಗಳ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ “ನಮ್ಮ ತಂದೆಯೇ ಪೂರ್ಣಾವಧಿಗೆ ಮುಖ್ಯಮಂತ್ರಿ. ಇದು ಚರ್ಚೆಯ ವಿಷಯವಲ್ಲ” ಎಂದು ಹೇಳಿರುವುದು ಪವರ್ ಶೇರಿಂಗ್ ಊಹಾಪೋಹಗಳಿಗೆ ಮತ್ತಷ್ಟು ಇಂಧನ ನೀಡಿದೆ.


ರಾಜಕೀಯ ಚರ್ಚೆಗೆ ಇಂಧನ

ಕೋಡಿಮಠದ ಸ್ವಾಮೀಜಿಗಳ ಭವಿಷ್ಯವಾಣಿ ಹಾಗೂ ಬಜೆಟ್ ಮಂಡನೆ ದಿನಾಂಕ ಒಂದೇ ಸಮಯದಲ್ಲಿ ಚರ್ಚೆಗೆ ಬಂದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಬಜೆಟ್ ಬಳಿಕ ಅಧಿಕಾರ ಹಸ್ತಾಂತರವಾಗುತ್ತದೆಯೇ ಅಥವಾ ಸಿದ್ದರಾಮಯ್ಯ ಪೂರ್ಣಾವಧಿಗೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಕ್ಕಾಗಿ ರಾಜಕೀಯ ವಲಯ ಕಾದು ನೋಡುತ್ತಿದೆ.

Continue Reading

ಚುನಾವಣೆ

ತಮಿಳುನಾಡು ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರಿಗೆ ₹5,000 ಜಮೆ: ಡಿಎಂಕೆ ಸರ್ಕಾರದ ಘೋಷಣೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ Dravida Munnetra Kazhagam (DMK) ಸರ್ಕಾರ ಮಹಿಳಾ ಫಲಾನುಭವಿಗಳಿಗೆ ₹5,000 ಹಣ ಜಮೆ ಮಾಡಿದೆ.

Kalaignar Magalir Urimai Thogai Scheme ಯೋಜನೆಯಡಿ ರಾಜ್ಯದ 1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ₹5,000 ಜಮೆಯಾಗಿದೆ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಹಣದ ಜೊತೆಗೆ ಬೇಸಿಗೆ ಸಮಯದ ನೆರವಿಗಾಗಿ ಹೆಚ್ಚುವರಿಯಾಗಿ ₹2,000 ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

‘ದ್ರಾವಿಡ 2.0’ ಭರವಸೆ

ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ‘ದ್ರಾವಿಡ 2.0’ ಸರ್ಕಾರದ ಅಡಿಯಲ್ಲಿ ತಿಂಗಳಿಗೆ ನೀಡುವ ಮೊತ್ತವನ್ನು ₹2,000ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ M. K. Stalin ಭರವಸೆ ನೀಡಿದ್ದಾರೆ.

ಯೋಜನೆಯ ಹಿನ್ನೆಲೆ

ಈ ಯೋಜನೆಯನ್ನು ಸೆಪ್ಟೆಂಬರ್ 2023ರಲ್ಲಿ ಆರಂಭಿಸಲಾಗಿತ್ತು. ಆರಂಭದಲ್ಲಿ 1.13 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹1,000 ನೀಡಲಾಗುತ್ತಿತ್ತು. ಈಗ ಫಲಾನುಭವಿಗಳ ಸಂಖ್ಯೆಯನ್ನು 1.31 ಕೋಟಿಗೆ ವಿಸ್ತರಿಸಲಾಗಿದೆ.

ಎಐಎಡಿಎಂಕೆ ಪ್ರತಿಕ್ರಿಯೆ

ಇದೇ ರೀತಿಯ ಭರವಸೆಯನ್ನು ಕಳೆದ ತಿಂಗಳು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ All India Anna Dravida Munnetra Kazhagam ಪ್ರಧಾನ ಕಾರ್ಯದರ್ಶಿ Edappadi K. Palaniswami ನೀಡಿದ್ದರು.

ರಾಜಕೀಯ ವಲಯದಲ್ಲಿ ಈ ಘೋಷಣೆ ಚುನಾವಣಾ ಪೂರ್ವ ತಂತ್ರವೆಂದು ಚರ್ಚೆ ನಡೆಯುತ್ತಿದೆ.

Continue Reading

Trending