Connect with us

ದೇಶ

ನೀನೇ ಗಾಂಡು, ನೀನು Seedless: ಸಿ.ಟಿ ರವಿ, ಶಾಸಕ ನರೇಂದ್ರ ಸ್ವಾಮಿ ಮಧ್ಯೆ ಅವಾಚ್ಯ ವಾರ್

Published

on

ನೀನೇ ಗಾಂಡು, ನೀನು Seedless: ಸಿ.ಟಿ ರವಿ, ಶಾಸಕ ನರೇಂದ್ರ ಸ್ವಾಮಿ ಮಧ್ಯೆ ಅವಾಚ್ಯ ವಾರ್
ನೀನೇ ಗಾಂಡು, ನೀನು Seedless: ಸಿ.ಟಿ ರವಿ, ಶಾಸಕ ನರೇಂದ್ರ ಸ್ವಾಮಿ ಮಧ್ಯೆ ಅವಾಚ್ಯ ವಾರ್

ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ವಿವಾದ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿರುವ ಜತೆಗೇ ರಾಜಕಾರಣಿಗಳ ನಡುವೆ ತೀವ್ರ ಮತ್ತು ಅಸಭ್ಯ ಪದ ಬಳಕೆಯ ವಾಗ್ವಾದಕ್ಕೂ ಕಾರಣವಾಗಿದೆ. ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿ ಸೋಮವಾರ ನಡೆದ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ಸಿ.ಟಿ. ರವಿ ಅವರು ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದು ಹೇಳಿದ್ದಾರೆ ಎಂದು ಮಳವಳ್ಳಿ ಶಾಸಕ ಪಿಎಂ ನರೇಂದ್ರ ಸ್ವಾಮಿ ಆರೋಪಿಸಿದ್ದಲ್ಲದೆ, ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಸಿ.ಟಿ. ರವಿ ಅವರ ಮೇಲೆ ಕಿಡಿ ಕಾರಿದ್ದಾರೆ. ʻಅಯೋಗ್ಯ ಸಿ.ಟಿ ರವಿ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಅಂದಿದ್ದಾನೆ. ಇವರು ರಾಷ್ಟ್ರ ಧ್ವಜ, ಹೆತ್ತ ತಾಯಿಗೆ ಅವಮಾನ ಮಾಡ್ತಾರೆ. ಸಿ.ಟಿ ರವಿ ವಿರುದ್ದ ನಾನು ಇವತ್ತೆ ದೂರು ನೀಡ್ತಿದ್ದೇನೆ. ಸಿಟಿ ರವಿ ತಾಲೀಬಾನ್ ಧ್ವಜ ಎಂದಿರುವ ಬಗ್ಗೆ ಸಾಕ್ಷಿ ಸಮೇತ ಹೋಗಿ ದೂರು ನೀಡ್ತೇನೆʼʼ ಎಂದು ಹೇಳಿದ ನರೇಂದ್ರ ಸ್ವಾಮಿ ಅವರು ಮಾತಿನ ಭರದಲ್ಲಿ ಸಿಟಿ ರವಿಗೆ ಗಾಂಡು ಎಂದು ಕರೆದಿದ್ದಾರೆ.
ʻʻಸಿ.ಟಿ ರವಿ ನನಗೂ ಸ್ನೇಹಿತ. ಆದರೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಸಹಿಸಲಾಗುವುದಿಲ್ಲ. ಆತ ರಾಷ್ಟ್ರಧ್ವಜದ ಕುರಿತ ಹೇಳಿಕೆ ವಾಪಸ್ ಪಡೆದುಕೊಂಡರೆ ಆತನ ವಿರುದ್ಧ ಹೇಳಿರುವ ನನ್ನ ಹೇಳಿಕೆ ವಾಪಸ್ಸು ಪಡೆಯುತ್ತೇನೆʼʼ ಎಂದು ಅವಾಚ್ಯ ಶಬ್ದದಿಂದ ಸಿಟಿ ರವಿ ಅವರನ್ನು ನಿಂದಿಸಿದ ಪಿಎಂ ನರೇಂದ್ರ ಸ್ವಾಮಿ ಹೇಳಿದರು.
ಗಾಂಡು ಹೇಳಿಕೆಗೆ ಸಿ.ಟಿ. ರವಿ ಪ್ರತಿಕ್ರಿಯೆ
ಚಿಕ್ಕಮಗಳೂರು: ತಮ್ಮನ್ನು ಅಯೋಗ್ಯ, ಗಾಂಡು ಎಂಬ ಪದ ಬಳಸಿ ನಿಂದಿರುವ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರ ಹೇಳಿಕೆ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಓoತಿ he is Seedless (ಅವರು ಈಗ ಬೀಜರಹಿತ) ಎಂದು ಸಿ.ಟಿ ರವಿ ಅವರು ನರೇಂದ್ರ ಸ್ವಾಮಿಯನ್ನು ಲೇವಡಿ ಮಾಡಿದ್ದಾರೆ. ನರೇಂದ್ರ ಸ್ವಾಮಿ ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿ, ಈಗ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾರು ಅದೇ ರೀತಿ ಇರ್ತಾರೋ, ಅವರು ಮಾತ್ರ ಅಂತಹ ಪದ ಬಳಕೆ ಮಾಡುತ್ತಾರೆ. ಅವರ ಮಾತಿನ ದಾಟಿ ನೋಡಿದ್ರೆ ಟಿoತಿ he is seeಜಟess. ಆ ಕಾರಣಕ್ಕೆ ಅವರ ಬಾಯಿಂದ ಅಂತಹಾ ಮಾತು ಬಂದಿದೆʼʼ ಎಂದು ಸಿ.ಟಿ. ರವಿ ಹೇಳಿದರು.
ʻʻಸೀಡ್ ಲೆಸ್ ಅಂದ್ರೆ ಗೊತ್ತಲ್ಲಾ… ಅದರಲ್ಲಿ ಬೀಜ ಇರಲ್ಲ… ಏನೂ ಹುಟ್ಟಲ್ಲ. ರಾಜಕೀಯವಾಗಿ ಟಿoತಿ he is seeಜಟess. ಅದಕ್ಕೆ ಅವರು ಆ ಪದ ಬಳಸಿದ್ದಾರೆʼʼ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ

ಅಪರಾಧ

ಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ

Published

on

ಬೆಂಗಳೂರು: ರಾಜ್ಯ ರಾಜಧಾನಿಯ ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಧಾನಸೌಧ ಲೇಔಟ್‌ ಸಮೀಪದ ಯರಪ್ಪನಹಳ್ಳಿ ಗ್ರಾಮದ ಕ್ವಾರಿ ಮೇಲೆ ದಾಳಿ ನಡೆಸಿದ ಪೊಲೀಸರು ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್‌ಗಳನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರ ಪ್ರಕಾರ, ವೆಂಕಟೇಶ್ವರ ಗ್ರಾನೈಟ್ಸ್ ಕ್ರಶರ್‌ಗೆ ಸೇರಿದ ಕ್ವಾರಿಯಲ್ಲಿ ಕಲ್ಲುಬಂಡೆಗಳನ್ನು ಸ್ಫೋಟಿಸಲು ಬಳಸುವ 225 ಜಿಲೆಟಿನ್ ಕಡ್ಡಿಗಳು ಹಾಗೂ 50 ಡಿಟೊನೇಟರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಸ್ಥಳೀಯರಿಂದ ಬಂದ ಮಾಹಿತಿಯ ಆಧಾರದ ಮೇಲೆ ಆವಲಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ಈ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಕ್ವಾರಿ ಮಾಲೀಕರಾದ ವೆಂಕಟರಮಣರೆಡ್ಡಿ ಹಾಗೂ ಉಸ್ತುವಾರಿ ಲೋಕೇಶ್‌ರೆಡ್ಡಿ ಅವರು ಸರ್ಕಾರದಿಂದ ಅಗತ್ಯವಾದ ಪರವಾನಗಿ ಪಡೆಯದೇ ಈ ಸ್ಪೋಟಕಗಳನ್ನು ಸಂಗ್ರಹಿಸಿ ಬಳಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಜೊತೆಗೆ, ಸುರಕ್ಷತಾ ನಿಯಮಗಳನ್ನು ಪಾಲಿಸದೇ ರಾತ್ರಿ ವೇಳೆ ಕಲ್ಲುಬಂಡೆಗಳನ್ನು ಸ್ಫೋಟಿಸುತ್ತಿದ್ದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಶರ್ ಮಾಲೀಕರು, ಉಸ್ತುವಾರಿ ಹಾಗೂ ಕ್ವಾರಿಯಲ್ಲಿ ಸ್ಫೋಟಕ ಬಳಕೆಯಲ್ಲಿ ತೊಡಗಿದ್ದ ವಿಕಾಸ್, ತೋಹಿದ್ ಮತ್ತು ಸಂದೀಪ್ ವಿರುದ್ಧ ನಿರ್ಲಕ್ಷ್ಯ ಆರೋಪ ಹಾಗೂ ಸ್ಫೋಟಕಗಳ ಕಾಯಿದೆ 1884 ಅಡಿ ಪ್ರಕರಣ ದಾಖಲಿಸಿದ್ದಾರೆ.

ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಸ್ಪೋಟಕಗಳನ್ನು ಕೇವಲ ಕಲ್ಲುಬಂಡೆ ಸ್ಫೋಟಕ್ಕೆ ಮಾತ್ರ ಬಳಸಲಾಗಿತ್ತೇ ಅಥವಾ ಬೇರೆ ದುರುದ್ದೇಶವಿದೆಯೇ ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ. ಈ ನಡುವೆ, ವೈಟ್‌ಫೀಲ್ಡ್ ಉಪ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಸ್ಥಳೀಯ ಪ್ರದೇಶದಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಭದ್ರತಾ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

Continue Reading

ದೇಶ

ಅಣ್ವಸ್ತ್ರ ಶಕ್ತಿಯಲ್ಲಿ ಭಾರತ ಹೊಸ ಮೈಲಿಗಲ್ಲು? ಅಂತಾರಾಷ್ಟ್ರೀಯ ವರದಿ ಬಹಿರಂಗ

Published

on

ನವದೆಹಲಿ: ಜಾಗತಿಕ ಅಣ್ವಸ್ತ್ರ ಶಕ್ತಿಯ ಕುರಿತ ಹೊಸ ವರದಿಯೊಂದು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (Stockholm International Peace Research Institute) ನೀಡಿರುವ ಅಂದಾಜಿನ ಪ್ರಕಾರ, ಭಾರತ ಇದೇ ಮೊದಲ ಬಾರಿ 12 ನಿಯೋಜಿತ ಪರಮಾಣು ಸಿಡಿತಲೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಭಾರತ ಒಟ್ಟು ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ನಿರ್ವಹಿಸುತ್ತಿದ್ದು, ಅದರಲ್ಲಿ 12 ಸಿಡಿತಲೆಗಳನ್ನು ಈಗಾಗಲೇ ನಿಯೋಜಿತ (deployed) ಸ್ಥಿತಿಯಲ್ಲಿ ಇರಿಸಿದೆ ಎಂದು ಹೇಳಲಾಗಿದೆ. ಈ ನಿಯೋಜಿತ ಸಿಡಿತಲೆಗಳು ತಕ್ಷಣವೇ ಶತ್ರುಗಳ ಮೇಲೆ ದಾಳಿ ಮಾಡಲು ಸಿದ್ಧ ಸ್ಥಿತಿಯಲ್ಲಿ ಇರುತ್ತವೆ ಎಂಬುದು ವರದಿಯ ಪ್ರಮುಖ ಅಂಶವಾಗಿದೆ.

ಇದಕ್ಕೆ ವಿರುದ್ಧವಾಗಿ ಚೀನಾದ ಅಣ್ವಸ್ತ್ರ ಶಕ್ತಿ ಕೂಡ ವೇಗವಾಗಿ ವೃದ್ಧಿಯಾಗಿದೆ. 2024ರಲ್ಲಿ ಚೀನಾ ಸುಮಾರು 24 ಸಿಡಿತಲೆಗಳನ್ನು ಹೊಂದಿದ್ದರೆ, ಈಗ ಆ ಸಂಖ್ಯೆ 34ಕ್ಕೆ ಏರಿಕೆಯಾಗಿದೆ ಎಂದು ವರದಿ ಸೂಚಿಸುತ್ತದೆ. ಈ ಬೆಳವಣಿಗೆ ಜಾಗತಿಕ ಭದ್ರತಾ ಸಮತೋಲನದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

ವರದಿಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಸಂಗ್ರಹಿತ (stored) ಅಣ್ವಸ್ತ್ರಗಳು ಮತ್ತು ನಿಯೋಜಿತ (deployed) ಅಣ್ವಸ್ತ್ರಗಳ ನಡುವಿನ ವ್ಯತ್ಯಾಸ. ಸಂಗ್ರಹಿತ ಶಸ್ತ್ರಾಸ್ತ್ರಗಳನ್ನು ತಕ್ಷಣ ಬಳಕೆ ಮಾಡಲು ಸಾಧ್ಯವಿಲ್ಲ; ಅವುಗಳನ್ನು ನಿರ್ದಿಷ್ಟ ವ್ಯವಸ್ಥೆಗೆ ತರಬೇಕಾಗುತ್ತದೆ. ಆದರೆ ನಿಯೋಜಿತ ಸಿಡಿತಲೆಗಳು ಈಗಾಗಲೇ ಕ್ಷಿಪಣಿ ವ್ಯವಸ್ಥೆಯಲ್ಲಿ ಅಳವಡಿಸಲ್ಪಟ್ಟಿದ್ದು, ತಕ್ಷಣ ಬಳಕೆ ಸಾಧ್ಯವಾಗುವ ಸ್ಥಿತಿಯಲ್ಲಿ ಇರುತ್ತವೆ.

ಈ ಹಿನ್ನೆಲೆಯಲ್ಲಿ, ಭಾರತವು ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುತ್ತಿದೆ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಜಾಗತಿಕ ಶಾಂತಿ ಮತ್ತು ಅಣ್ವಸ್ತ್ರ ನಿಯಂತ್ರಣದ ಕುರಿತು ಚರ್ಚೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯೂ ಇದೆ.

ಈ ವರದಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ದಕ್ಷಿಣ ಏಷ್ಯಾದ ಭದ್ರತಾ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading

ಅಪರಾಧ

ಬಿಟ್‌ಕಾಯಿನ್ ಹಗರಣ: ನಲಪಾಡ್‌ಗೆ ಎಸ್‌ಐಟಿ ಚಾರ್ಜ್‌ಶೀಟ್ ಶಾಕ್

Published

on

ಬೆಂಗಳೂರು: 6 ವರ್ಷಗಳ ಹಿಂದಿನ ಬಿಟ್‌ಕಾಯಿನ್ ಹಗರಣವು (Karnataka Bitcoin Scam) ಮತ್ತೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ಮುಖಂಡ Mohammed Nalapad ಅವರಿಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿವೆ.

ವಿಶೇಷ ತನಿಖಾ ದಳ (SIT) ಇದೀಗ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ನಲಪಾಡ್ ಕೂಡ ಈ ಹಗರಣದಲ್ಲಿ ಪಾಲುದಾರರಾಗಿದ್ದು ಹಣದ ಲಾಭ ಪಡೆದಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ. ಹಗರಣದ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿರುವ ಹ್ಯಾಕರ್ ಶ್ರೀಕೃಷ್ಣ @ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರೊಂದಿಗೆ ನಲಪಾಡ್ ನಂಟು ಹೊಂದಿದ್ದರೆಂಬ ಅಂಶವೂ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ.

ಎಸ್‌ಐಟಿ ಆರೋಪಗಳ ಪ್ರಕಾರ, ಬಿಟ್‌ಕಾಯಿನ್ ನಗದೀಕರಣಕ್ಕಾಗಿ ನಲಪಾಡ್ ಅವರು ಹ್ಯಾಕರ್ ಶ್ರೀಕಿಯನ್ನು ಸಂಪರ್ಕಿಸಿದ್ದರೆಂದು ತಿಳಿದುಬಂದಿದೆ. ಮುಂಬೈ ಮೂಲದ ಸ್ನೇಹಿತ ಹಾಗೂ ಖಂಡೇವಾಲ ಮೂಲಕ ಹವಾಲಾ ಜಾಲದ ಮೂಲಕ ಹಣವನ್ನು ನಗದೀಕರಿಸಿರುವ ಆರೋಪವೂ ಇದೆ. ಈ ಪ್ರಕ್ರಿಯೆಯಲ್ಲಿ ಕಮಿಷನ್ ರೂಪದಲ್ಲಿ ನಲಪಾಡ್‌ಗೂ ಹಣ ಸಂದಾಯವಾಗಿರುವುದಾಗಿ ತನಿಖಾ ವರದಿಯಲ್ಲಿ ಹೇಳಲಾಗಿದೆ.

ಇದೀಗ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಕೂಡ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಮೂರನೇ ನೋಟಿಸ್ ಜಾರಿಗೊಳಿಸಿದೆ. ಇದಕ್ಕೂ ಮುನ್ನ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುನೀಶ್ ಹೆಗ್ಡೆ ಅವರನ್ನು ಇಡಿ ಸುಮಾರು 16 ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಈ ನಡುವೆ, Enforcement Directorate ಹಾಗೂ Special Investigation Team Karnataka ತನಿಖೆ ಮುಂದುವರೆಸುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

Continue Reading

Trending