Connect with us

ಬೆಂಗಳೂರು

ಎಸ್‌ಎಸ್‌ಎಲ್‌ಸಿ & ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಾಂಕ ಪ್ರಕಟ

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ದ್ವಿತೀಯ ಪರೀಕ್ಷೆಗೆ ದಿನಾಂಕ ಪ್ರಕಟವಾಗಿದೆ, ಮಾರ್ಚ್ 1 ರಿಂದ 22ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 25ರಿಂದ ಜೂನ್ 06ರ ವರೆಗೆ ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2747 ಪರೀಕ್ಷ ಕೇಂದ್ರಗಳಿದ್ದು 8,96,271 ವಿದ್ಯಾರ್ಥಿಗಳ ನೋಂದಣಿ ಮಾಡಿಸಿಕೊಂಡಿದ್ದಾರೆ, ಅದೇ ರೀತಿ ಪಿಯುಸಿ ಪರೀಕ್ಷೆಯಲ್ಲಿ 1124 ಕೇಂದ್ರಗಳನ್ನು ನಿಗದಿ ಮಾಡಲಾಗಿದ್ದು ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ, ಎಲ್ಲಾ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲೇಬೇಕು, ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಮೂರರಲ್ಲಿ ಯಾವುದಾದರು ಒಂದು ಪರೀಕ್ಷೆಗೆ ಹಾಜರಾಗಬೇಕು, ಮೂರು ಎಕ್ಸಾಂನಲ್ಲಿ ಮೊದಲ ಆಥವಾ ಎರಡು ಯಾವ ಪರೀಕ್ಷೆಯನ್ನು ಬೇಕಾದರೂ ಆಯ್ಕೆ ಮಾಡಬಹುದು, ಮೂರು ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಟಾಪ್ ಮಾರ್ಕ್ಸ್ ಪರಿಗಣನೆ ಮಾಡಲಾಗುತ್ತದೆ, ಹೆಚ್ಚು ಅಂಕ ಪಡೆದಿರುವ ಮಾರ್ಕ್ಸ್ ಮಾತ್ರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ,

ಬೆಂಗಳೂರು

Greater Bengaluru Authority ಉಗ್ರ ಸ್ವಭಾವದ ನಾಯಿಗಳಿಗೆ ನಿಷೇಧ ಸಾಧ್ಯತೆ

ರಾಜಧಾನಿಯಲ್ಲಿ ಬೀದಿನಾಯಿ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆ, Greater Bengaluru Authority (ಜಿಬಿಎ) ಸಾಕು ನಾಯಿಗಳ ನಿಯಂತ್ರಣಕ್ಕಾಗಿ ಹೊಸ ನಿಯಮ ಜಾರಿಗೆ ತರುವ ಸಿದ್ಧತೆ ನಡೆಸಿದೆ.

ಸಾರ್ವಜನಿಕರು ಹಾಗೂ ಮಕ್ಕಳಿಗೆ ಸಾಕು ನಾಯಿಗಳಿಂದ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ, ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಐದು ಪಾಲಿಕೆ ಆಯುಕ್ತರಿಗೆ ಹೊಸ ಮಾನದಂಡ ರೂಪಿಸುವಂತೆ ಸೂಚನೆ ನೀಡಿದ್ದಾರೆ.

ಈಗಾಗಲೇ Supreme Court of India ಕೂಡ ಬೀದಿನಾಯಿ ಸಮಸ್ಯೆ ತಡೆಯಲು ಸ್ಥಳೀಯ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಸೂಚನೆ ನೀಡಿತ್ತು.


ಪರವಾನಗಿ ಕಡ್ಡಾಯ – ವಾರ್ಷಿಕ ನವೀಕರಣ

ಜಿಬಿಎ ಪಶುಪಾಲನೆ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ ನಗರದಲ್ಲಿ ಸುಮಾರು 1.15 ಲಕ್ಷ ಸಾಕು ನಾಯಿಗಳ ಮಾಹಿತಿ ಸಂಗ್ರಹಿಸಲಾಗಿದೆ.

ಹೊಸ ಕಾಯ್ದೆಯ ಪ್ರಕಾರ:

  • ಸಾಕು ನಾಯಿಗಳಿಗೆ ಜಿಬಿಎ ಪಶುಪಾಲನೆ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ
  • ವಾರ್ಷಿಕ ಶುಲ್ಕ ಪಾವತಿ ಮಾಡಿ ಪರವಾನಗಿ ನವೀಕರಣ
  • ಕ್ರೂರ ಸ್ವಭಾವದ ನಾಯಿಗಳನ್ನು ಸಾಕುವುದಕ್ಕೆ ನಿರ್ಬಂಧ

ಸಂಭಾವ್ಯ ನಿಯಮಗಳ ಪಟ್ಟಿ

  • ಎಲ್ಲ ಸಾಕು ನಾಯಿಗಳಿಗೆ ರೇಬೀಸ್ ಲಸಿಕೆ ಕಡ್ಡಾಯ
  • ಲಸಿಕೆ ಪಡೆದ ಬಗ್ಗೆ ನೊಂದಾಯಿತ ಪಶುವೈದ್ಯರಿಂದ ದೃಢೀಕರಣ
  • 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಕಡ್ಡಾಯ
  • ಮಾಲೀಕರು ತಮ್ಮ ಖರ್ಚಿನಲ್ಲಿ ಮೈಕ್ರೋಚಿಪ್ ಅಳವಡಿಕೆ
  • ನೆರೆಹೊರೆಯವರಿಗೆ ತೊಂದರೆ ಆಗದಂತೆ ಸಾಕುವುದು
  • ಮೂರು ನಾಯಿಗಳಿಗಿಂತ ಹೆಚ್ಚು ಸಾಕಿದರೆ ವಶಕ್ಕೆ ಪಡೆದು ಪ್ರಾಣಿ ಕೇಂದ್ರಕ್ಕೆ ಕಳುಹಿಸುವುದು
  • ನಗರ ಪಾಲಿಕೆ ಬೈಲಾಗಳ ಪ್ರಕಾರ ಸಾಕಣೆ
  • ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ
  • ತಪ್ಪಿಸಿಕೊಂಡ ನಾಯಿ ವಶಕ್ಕೆ ಪಡೆದರೆ ದಂಡ ಪಾವತಿ ಬಳಿಕ ಬಿಡುಗಡೆ
    • 72 ಗಂಟೆಯೊಳಗೆ ಬಿಡಿಸಿಕೊಂಡರೆ ₹1000
    • ನಂತರ ಪ್ರತಿ ದಿನ ₹200 ದಂಡ
  • ಬಿಡಿಸಿಕೊಳ್ಳದಿದ್ದರೆ ಪ್ರಾಣಿ ದಯಾ ಸಂಘಕ್ಕೆ ಹಸ್ತಾಂತರ
  • ವಾಕಿಂಗ್ ವೇಳೆ ಕಡ್ಡಾಯವಾಗಿ ಹಗ್ಗ/ಚೈನ್ ಬಳಕೆ
  • ನಾಯಿ ರಸ್ತೆಯಲ್ಲಿ ಗಲೀಜು ಮಾಡಿದರೆ ಮಾಲೀಕರೇ ಸ್ವಚ್ಛಗೊಳಿಸಬೇಕು
  • ಅಪಾರ್ಟ್‌ಮೆಂಟ್‌ಗಳಲ್ಲಿ ಉಗ್ರ ಸ್ವಭಾವದ ನಾಯಿಗಳಿಗೆ ನಿಷೇಧ

ಕೆಲವು ಜಾತಿಗಳ ಮೇಲೆ ನಿರ್ಬಂಧ?

ಜರ್ಮನ್ ಶೆಪರ್ಡ್, ರೊಟ್ವೈಲರ್, ಡೋಬರ್ಮನ್, ಹೌಂಡ್ ಸೇರಿದಂತೆ ಕೆಲವು ಉಗ್ರ ಸ್ವಭಾವದ ನಾಯಿಗಳನ್ನು ಸಾಕುವುದಕ್ಕೆ ನಿಷೇಧ ಹೇರುವ ಕುರಿತು ಚರ್ಚೆ ನಡೆಯುತ್ತಿದೆ. ನಿಷೇಧಿತ ಜಾತಿಯ ನಾಯಿಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರವೇಶಿಸಲು ಅವಕಾಶ ಇರದು ಎಂಬ ಪ್ರಸ್ತಾವನೆಯೂ ಇದೆ.

Continue Reading

ದೇಶ

SHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ

ಬೆಂಗಳೂರು, ಫೆಬ್ರವರಿ 13: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ Shakti Scheme ಅಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಇನ್ನುಮುಂದೆ ಆಧಾರ್ ಕಾರ್ಡ್ ಬದಲಾಗಿ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಲಿದೆ. ಈ ಕುರಿತು ಮುಖ್ಯಮಂತ್ರಿ Siddaramaiah ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಮಹಿಳೆಯರಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲಿವೆ. ಈ ಕಾರ್ಡ್ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರೊಂದಿಗೆ ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.


ಬೆಂಗಳೂರು ರೇಸ್ ಕೋರ್ಸ್ ಕುಣಿಗಲ್‌ಗೆ ಶಿಫ್ಟ್

ಬೆಂಗಳೂರಿನ ಪ್ರಸಿದ್ಧ Bangalore Turf Club (ರೇಸ್ ಕೋರ್ಸ್) ಅನ್ನು ತುಮಕೂರು ಜಿಲ್ಲೆಯ ಕುಣಿಗಲ್‌ನ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಲೀಸ್ ಅವಧಿ ಮುಕ್ತಾಯವಾಗಿರುವುದು ಹಾಗೂ ಬಾಡಿಗೆ ಪರಿಷ್ಕರಣೆ ಆಗಿರದ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಕ್ಲಬ್‌ನ ಜಾಗವನ್ನು ಹಾಗೆಯೇ ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.


ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ–ಸಾಕ್ಸ್

1ರಿಂದ 10ನೇ ತರಗತಿ ತನಕ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾವಿಕಾಸ ಯೋಜನೆಯಡಿ 2026-27ನೇ ಸಾಲಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ಉಚಿತವಾಗಿ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ.


ಇತರೆ ಪ್ರಮುಖ ನಿರ್ಧಾರಗಳು

  • ಬಳ್ಳಾರಿ ವಿಮ್ಸ್ ಆವರಣದಲ್ಲಿ 200 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ
  • ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಭೂಮಿಯನ್ನು ‘ಶಾಶ್ವತ ವಿಶೇಷ ಕೃಷಿವಲಯ’ವಾಗಿ ಘೋಷಣೆ
  • ತಿಕೋಟಾದಲ್ಲಿ ದ್ರಾಕ್ಷಾರಸ ಶೀತಲೀಕರಣ ಘಟಕ ಸ್ಥಾಪನೆ
  • ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ಶಿಷ್ಟಾಚಾರ ನಿಯಮ ಜಾರಿಗೆ ಅನುಮೋದನೆ
  • ನ್ಯಾಯಾಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮಗಳಿಗೆ ಶಿಷ್ಟಾಚಾರ ಅನುಮತಿ

ವಿಪಕ್ಷಗಳ ಟೀಕೆಗೆ ಗುರಿಯಾಗಿರುವ SIR ವಿಷಯದಲ್ಲಿಯೂ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆದಿದೆ. ಕಾನೂನು ಇಲಾಖೆ ಸಮಗ್ರ ಅಧ್ಯಯನ ನಡೆಸಿ ಮುಂದಿನ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

Continue Reading

ದೇಶ

ದೇವನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: 7 ಮಂದಿ ದುರ್ಮರಣ

ದೇವನಹಳ್ಳಿ, ಫೆಬ್ರವರಿ 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟಿದ್ದಾರೆ.

ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್, ಬೈಕ್ ಮತ್ತು ಎಕ್ಸ್‌ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಅತಿವೇಗವೇ ಕಾರಣ?

ಪ್ರಾಥಮಿಕ ತನಿಖೆಯ ಪ್ರಕಾರ, ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಕ್ಸ್‌ಯುವಿ ಕಾರು ಮೊದಲು ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ತಿಳಿದುಬಂದಿದೆ.


ಪೊಲೀಸ್ ಪರಿಶೀಲನೆ

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಮೃತದೇಹಗಳನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.


‘ಅವೈಜ್ಞಾನಿಕ ರಸ್ತೆ’ ಆರೋಪ

ಅಪಘಾತ ನಡೆದ ಸ್ಥಳದ ರಸ್ತೆ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಸಾಧುಪ್ಪನಹಳ್ಳಿಯಿಂದ ಕಮಳಿಪುರ ಬ್ರಿಡ್ಜ್ ವರೆಗಿನ ಹೆದ್ದಾರಿ ಸರಿಯಾದ ವಿನ್ಯಾಸ ಹೊಂದಿಲ್ಲ ಎಂದು ಅವರು ದೂರಿದ್ದಾರೆ.

ಸ್ಥಳೀಯ ನಿವಾಸಿ ಮಂಜುನಾಥ್ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದೆ ಎಂದು ಆರೋಪಿಸಿದ್ದಾರೆ. ಕಾಮಗಾರಿ ಸಂದರ್ಭದಲ್ಲೇ ಎಂಜಿನಿಯರ್ ಒಬ್ಬರು ವಿನ್ಯಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಅದನ್ನು ಪರಿಗಣಿಸಲಿಲ್ಲ ಎಂದು ಹೇಳಿದ್ದಾರೆ.

ಸರ್ವೀಸ್ ರಸ್ತೆಗಳು ಕನಿಷ್ಠ 18 ಅಡಿ ಅಗಲ ಇರಬೇಕಿದ್ದರೂ, ಕೆಲವೆಡೆ ಮೂರೂವರೆ ಅಥವಾ ಎರಡೂವರೆ ಅಡಿ ಮಾತ್ರ ಇರುವುದಾಗಿ ಅವರು ತಿಳಿಸಿದ್ದಾರೆ. 2010ರಲ್ಲಿ ರೈತರು ಜಮೀನುಗಳನ್ನು ಹೆದ್ದಾರಿ ಯೋಜನೆಗೆ ನೀಡಿದ್ದರೂ, ಸಮರ್ಪಕ ಪರಿಹಾರವೂ ಸಿಗಲಿಲ್ಲ ಮತ್ತು ರಸ್ತೆ ಗುಣಮಟ್ಟವೂ ಸಮರ್ಪಕವಾಗಿಲ್ಲ ಎಂದು ಆರೋಪಿಸಲಾಗಿದೆ.

Continue Reading

Trending