Connect with us

ಆರೋಗ್ಯ

ಕರ್ನಾಟಕದಲ್ಲೂ ಕಾಟನ್ ಕ್ಯಾಂಡಿ ಬ್ಯಾನ್, ಗೋಬಿ ಮಂಚೂರಿಗೆ ಬಣ್ಣ ನಿಷೇಧ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ

Published

on

ಮಕ್ಕಳು, ದೊಡ್ಡವರು ಸೇರಿ ಎಲ್ಲರೂ ಇಷ್ಟಪಡುವ ಗೋಬಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ (ಬಟ್ಟೆಗೆ ಬಳಸುವ ಡೈ) ಪತ್ತೆಯಾಗಿದೆ. ಹೀಗಾಗಿ ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳ ಬಳಿಕ ರಾಜ್ಯ ಸರ್ಕಾರವೂ ಅಸುರಕ್ಷಿತ ಕಾಟನ್‌ ಕ್ಯಾಂಡಿ, ಗೋಬಿಗೆ ನಿಯಂತ್ರಣ ಹೇರಲು ಮುಂದಾಗಿದೆ. ಆದರೆ, ವೈಟ್ ಕ್ಯಾಂಡಿ ಮಾರಾಟಕ್ಕೆ ಅವಕಾಶವಿದೆ. ಇನ್ನು ಗೋಬಿ ಮಂಚೂರಿ ನಿಷೇಧ ಮಾಡದಿದ್ದರೂ, ಕೃತಕ ಬಣ್ಣ ಮಿಶ್ರಣ ನಿಷೇಧಿಸಲಾಗಿದೆ. ಒಂದು ವೇಳೆ ಸರ್ಕಾರದ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಜನ ಇತ್ತೀಚೆಗೆ ಬೀದಿ ಬದಿಯಲ್ಲಿ ಆಹಾರ ಸೇವನೆ‌ ಮಾಡ್ತಿರೋದು ಜಾಸ್ತಿಯಾಗ್ತಿದೆ. ಈ ಆಹಾರದಿಂದ ದುಷ್ಪರಿಣಾಮ ಇದೆ ಅನ್ನೋದು ಗೊತ್ತಿದೆ. ಹೆಚ್ಚು ಉಪ್ಪಿನಾಂಶ, ಕೊಬ್ಬಿನಾಂಶ ಇರೋದು ತಿಳಿದುಬಂದಿದೆ. ಜೊತೆಗೆ, ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಿರುವುದು ಕೂಡ ಪತ್ತೆಯಾಗಿದೆ.ಇದು ಆರೋಗ್ಯಕ್ಕೆ ಹಾನಿಕಾರಕ. ಹಾನಿಕಾರಕ ಆಹಾರದ ಬಗ್ಗೆ ಆಹಾರ ಇಲಾಖೆ ಜೊತೆ ಸರ್ವೆ ಮಾಡಲಾಗಿದೆ. ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಸ್ಯಾಂಪಲ್ ಕಲೆಕ್ಟ್ ಮಾಡಲಾಯ್ತು.

ರೋಡಮೈನ್‌-ಬಿ ಪರಿಣಾಮ
ರೋಡಮೈನ್‌-ಬಿ ಅಥವಾ ಆರ್‌ಎಚ್‌ಬಿ ಎಂದು ಕರೆಯುವ ರಾಸಾಯನಿಕವನ್ನು ಜವಳಿ, ಕಾಗದ, ಚರ್ಮ ಮತ್ತು ಬಣ್ಣಗಳ ಉದ್ಯಮದಲ್ಲಿಕೆಂಪು ಮತ್ತು ಗುಲಾಬಿ ಬಣ್ಣಕ್ಕಾಗಿ ಬಳಸಲಾಗುತ್ತದೆ. ಈ ರಾಸಾಯನಿಕವು ಆಹಾರದ ಮೂಲಕ ದೇಹ ಸೇರಿದರೆ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಕೇವಲ ಹತ್ತಿ ಕ್ಯಾಂಡಿಯಲ್ಲಿಮಾತ್ರವಲ್ಲ; ಸಿಹಿ ತಿಂಡಿಗಳು, ಬಣ್ಣದ ಮಿಠಾಯಿಗಳು, ಕೆಂಪು ಮೆಣಸಿನಕಾಯಿಗಳು, ಮೆಣಸಿನ ಪುಡಿ ಇನ್ನೂ ಅನೇಕ ಸಂಸ್ಕರಿಸಿದ ಆಹಾರಗಳಲ್ಲಿಕಂಡುಬರುತ್ತದೆ. ”ರೋಡಮೈನ್‌-ಬಿ ನಿಯಮಿತವಾಗಿ ಸೇವಿಸಿದರೆ ಮೆದುಳಿನಲ್ಲಿರುವ ಸೆರೆಬೆಲ್ಲಮ್‌ ಅಂಗಾಂಶಕ್ಕೆ ಮತ್ತು ಮಿದುಳನ್ನು ಬೆನ್ನು ಹುರಿಗೆ ಸಂಪರ್ಕಿಸುವ ಮೆದುಳಿನ ಕಾಂಡಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ,” ಎನ್ನುತ್ತಾರೆ ತಜ್ಞರು.

ರಾಜ್ಯದ ವಿವಿಧ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ 71 ಕಡೆಗಳಿಂದ ಕಾಟನ್ ಕ್ಯಾಂಡಿ ಹಾಗೂ 25 ಕಡೆಗಳಿಂದ ಗೋಬಿ ಮಂಚೂರಿ ಸ್ಯಾಂಪಲ್ ಸಂಗ್ರಹ ಮಾಡಲಾಯಿತು. ಸಂಗ್ರಹಿಸಲಾದ 25 ಮಾದರಿಗಳಲ್ಲಿ ಬರೋಬ್ಬರಿ 15 ಮಾದರಿಗಳಲ್ಲಿ ಕೃತಕ ಹಾಗೂ ಹಾನಿಕಾರಕ ಬಣ್ಣ ಮಿಶ್ರಣ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.ಕಾಟನ್ ಕ್ಯಾಂಡಿ ಟಾರ್ ಟ್ರಾಸೈನ್, ಸನ್ ಸೆಟ್ ಯೆಲ್ಲೋ ಹಾಗೂ ರೋಡಮೈನ್-ಬಿ ಅಂಶ ಪತ್ತೆಯಾಗಿದೆ. ಇದರಲ್ಲಿ ರೋಡಮೈನ್-ಬಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ, ಕಾಟನ್ ಕ್ಯಾಂಡಿ ಮಾರಾಟ ನಿಷೇಧಿಸಲಾಗುತ್ತಿದೆ. ಇನ್ನು ಗೋಬಿ ಮಂಚೂರಿಯಲ್ಲಿ ಟಾರ್ ಟ್ರಾಸೈನ್, ಸನ್ ಸೆಟ್ ಯೆಲ್ಲೋ ಹಾಗೂ ಕಾರ್ಮೊಸಿನ್ ಅಂಶ ಪತ್ತೆಯಾಗಿದೆ. ಆದರೆ, ಗೋಬಿ ಮಂಚೂರಿ ಮಾರಾಟವನ್ನು‌ ಬ್ಯಾನ್ ಮಾಡುವುದಿಲ್ಲ. ಇದಕ್ಕೆ ಕೃತಕ ಬಣ್ಣ ಮಿಶ್ರಣ ಮಾಡುವಂತಿಲ್ಲ. ಒಂದು ವೇಳೆ ಬಣ್ಣ ಬೆರಕೆ ಮಾಡಿದರೆ 10 ಲಕ್ಷ ರೂ. ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.ರಾಜ್ಯದಲ್ಲಿ ಇನ್ನುಮುಂದೆ ರೊಡೊಮೈನ್ ಬಿ, ಟಾರ್ ಟ್ರಾಸೈನ್ ಅನ್ನು ಯಾವುದೇ ಆಹಾರ ಪದಾರ್ಥಗಳಲ್ಲಿ ಬಳಸುವಂತಿಲ್ಲ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಸಂಪೂರ್ಣ ಕಾನೂನು ಬಾಹಿರವಾಗಿದ್ದು, ಪಿಂಕ್ ಕಲರ್ ಬರಲು ರೋಡಮೈನ್-ಬಿ ಬಳಸುತ್ತಾರೆ. ಒಂದು ವೇಳೆ ತೀರಾ ಅಗತ್ಯವಿದ್ದಲ್ಲಿ ಲೀಗಲ್ ಸ್ಯಾಂಪಲ್ ಪಡೆಯಬೇಕು. ಇನ್ನುಮುಂದೆ ಕಾಟನ್ ಕ್ಯಾಂಡಿಯಲ್ಲಿ ಪಿಂಕ್ ಕಲರ್ ಬರಲು ಕೃತಕ ಬಣ್ಣ ಬೆರಕೆ ಮಾಡೋದು ಕಾನೂನು ಬಾಹಿರವಾಗಿದೆ. ಈ ನಿಯಮ ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರಡಿ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Continue Reading

ಆರೋಗ್ಯ

ಹಣ್ಣುಗಳ ರಾಣಿ ಮ್ಯಾಂಗೋಸ್ಟೀನ್‌ನ ಆರೋಗ್ಯಕರ ಲಾಭಗಳು

Published

on

By

ಮ್ಯಾಂಗೋಸ್ಟೀನ್ ಹಣ್ಣು (Mangosteen) – ಆರೋಗ್ಯಕ್ಕೆ ಅಮೂಲ್ಯವಾದ ಉಷ್ಣವಲಯದ ಹಣ್ಣು
ಮ್ಯಾಂಗೋಸ್ಟೀನ್ ಹಣ್ಣಿನ ಪ್ರಮುಖ ಪ್ರಯೋಜನಗಳು:

  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:
    ವಿಟಮಿನ್ C ಮತ್ತು ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳ ಸಮೃದ್ಧಿಯಿಂದ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
  • ಜೀರ್ಣಕ್ರಿಯೆಗೆ ಸಹಕಾರಿ:
    ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ ಕಡಿಮೆ ಮಾಡಿ, ಜೀರ್ಣಾಂಗದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
  • ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ನೆರವು:
    ನೈಸರ್ಗಿಕ ಸಂಯುಕ್ತಗಳು ಮತ್ತು ಫೈಬರ್ ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ.
  • ಉರಿಯೂತ ಮತ್ತು ನೋವು ಕಡಿಮೆ ಮಾಡುತ್ತದೆ:
    ದೇಹದ ವಿವಿಧ ಭಾಗಗಳಲ್ಲಿ ಉಂಟಾಗುವ ಉರಿಯೂತ ಮತ್ತು ಊತವನ್ನು ತಗ್ಗಿಸಲು ನೆರವಾಗುತ್ತದೆ.
  • ಚರ್ಮದ ಆರೋಗ್ಯ ಕಾಪಾಡುತ್ತದೆ:
    ಚರ್ಮಕ್ಕೆ ಹೊಳಪು ನೀಡುವ ಜೊತೆಗೆ, ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸಲು ಸಹಕಾರಿ.
  • ಹೃದಯದ ಆರೋಗ್ಯಕ್ಕೆ ಒಳ್ಳೆಯದು:
    ರಕ್ತಸಂಚಾರವನ್ನು ಸುಧಾರಿಸಿ, ಹೃದಯದ ಕಾರ್ಯಕ್ಷಮತೆಯನ್ನು ಬೆಂಬಲಿಸುತ್ತದೆ.
  • ತೂಕ ನಿಯಂತ್ರಣಕ್ಕೆ ಸಹಾಯ:
    ಕಡಿಮೆ ಕ್ಯಾಲೊರಿ ಮತ್ತು ಹೆಚ್ಚು ನಾರಿನಂಶ ಹೊಂದಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
  • ದೇಹದ ದಣಿವು ಕಡಿಮೆ ಮಾಡುತ್ತದೆ:
    ನೈಸರ್ಗಿಕ ಪೋಷಕಾಂಶಗಳು ದೇಹಕ್ಕೆ ಚೈತನ್ಯ ಮತ್ತು ಶಕ್ತಿ ನೀಡುತ್ತವೆ.
    ತಿನ್ನುವ ವಿಧಾನ:
  • ಹಣ್ಣಿನ ದಪ್ಪ ನೇರಳೆ ಬಣ್ಣದ ಸಿಪ್ಪೆಯನ್ನು ಎಚ್ಚರಿಕೆಯಿಂದ ತೆಗೆಯಿರಿ.
  • ಒಳಗಿರುವ ಬಿಳಿ ಬಣ್ಣದ ಮೃದುವಾದ ತಿರುಳನ್ನು ಮಾತ್ರ ಸೇವಿಸಬೇಕು.
  • ತಾಜಾ ಹಣ್ಣಾಗಿ ಅಥವಾ ಹಣ್ಣಿನ ಸಲಾಡ್‌ಗಳಲ್ಲಿ ಸೇರಿಸಿ ತಿನ್ನಬಹುದು.
    ಎಚ್ಚರಿಕೆ:
  • ರಕ್ತ ತೆಳುವಾಗಿಸುವ ಔಷಧಿಗಳನ್ನು ಸೇವಿಸುತ್ತಿರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ.
  • ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಮುನ್ನೆಚ್ಚರಿಕೆಯಿಂದ ಬಳಸಬೇಕು.
  • ಯಾವುದೇ ಆಹಾರಕ್ಕೆ ಅಲರ್ಜಿ ಇರುವವರು ಮೊದಲ ಬಾರಿ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ.
    ಸೂಚನೆ:
    ಮ್ಯಾಂಗೋಸ್ಟೀನ್ ಅನ್ನು “ಹಣ್ಣುಗಳ ರಾಣಿ” ಎಂದು ಕರೆಯಲಾಗುತ್ತದೆ. ಇದರ ಸಿಹಿ-ಹುಳಿ ರುಚಿ ಮತ್ತು ಆರೋಗ್ಯಕರ ಗುಣಗಳಿಂದ ಇದು ವಿಶ್ವದಾದ್ಯಂತ ಜನಪ್ರಿಯವಾಗಿದೆ. 🍈✨
Continue Reading

ಆರೋಗ್ಯ

ನೇರಳೆ ಹಣ್ಣು: ಆರೋಗ್ಯ ಕಾಪಾಡುವ ನೈಸರ್ಗಿಕ ಅಮೃತ

Published

on

By


🍇 ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
🍇 ಮಧುಮೇಹ ನಿಯಂತ್ರಣಕ್ಕೆ ನೆರವು:
ನೇರಳೆ ಹಣ್ಣು ಮತ್ತು ಅದರ ಬೀಜಗಳಲ್ಲಿ ಇರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತವೆ.
🍇 ಜೀರ್ಣಕ್ರಿಯೆ ಸುಧಾರಣೆ:
ಇದು ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
🍇 ರಕ್ತ ಶುದ್ಧೀಕರಣ ಮತ್ತು ರಕ್ತಹೀನತೆ ನಿವಾರಣೆ:
ನೇರಳೆಯಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಲು ಹಾಗೂ ರಕ್ತದ ಗುಣಮಟ್ಟವನ್ನು ಸುಧಾರಿಸಲು ಸಹಾಯಕವಾಗಿದೆ.
🍇 ಹೃದಯದ ಆರೋಗ್ಯ ಕಾಪಾಡುತ್ತದೆ:
ಇದು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
🍇 ಚರ್ಮ ಮತ್ತು ಕೂದಲಿನ ಆರೈಕೆ:
ನೇರಳೆಯಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.
🍇 ತೂಕ ನಿಯಂತ್ರಣಕ್ಕೆ ಸಹಕಾರಿ:
ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ನೇರಳೆ ಹಣ್ಣು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಉತ್ತಮ ಆಯ್ಕೆಯಾಗಿದೆ.
🍇 ಎಲುಬುಗಳ ಬಲವರ್ಧನೆ:
ಇದರಲ್ಲಿರುವ ಖನಿಜಾಂಶಗಳು ಎಲುಬುಗಳನ್ನು ಗಟ್ಟಿಗೊಳಿಸಿ ದೇಹದ ಸಮಗ್ರ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.
ಸೂಚನೆ: ನೇರಳೆ ಹಣ್ಣು ಆರೋಗ್ಯಕ್ಕೆ ಉತ್ತಮವಾದರೂ, ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಉತ್ತಮ.

Continue Reading

ಆರೋಗ್ಯ

ಕೆಮ್ಮಿನ ಸಿರಪ್ ಬೇಕೇ? ಮೊದಲು ವೈದ್ಯರನ್ನು ಭೇಟಿ ಮಾಡಿ

Published

on

ನವದೆಹಲಿ: ಔಷಧಿಗಳ ಮಾರಾಟದ ಮೇಲೆ ನಿಯಂತ್ರಣ ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಿರಪ್‌ಗಳ ಮಾರಾಟಕ್ಕೆ ಹೊಸ ನಿಯಮ ಜಾರಿಗೆ ತಂದಿದೆ. ಇದರ ಅನ್ವಯ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿರಪ್ ಆಧಾರಿತ ಔಷಧಿಗಳನ್ನು ಖರೀದಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಕೇಂದ್ರ ಸರ್ಕಾರವು 1945ರ ಔಷಧ ಮತ್ತು ಸೌಂದರ್ಯವರ್ಧಕ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಿದ್ದು, ವೇಳಾಪಟ್ಟಿ K ಅಡಿಯಲ್ಲಿ ವಿನಾಯಿತಿ ಪಡೆದಿದ್ದ ಔಷಧಿಗಳ ಪಟ್ಟಿಯಿಂದ ‘ಸಿರಪ್‌ಗಳು’ ಎಂಬ ವರ್ಗವನ್ನು ತೆಗೆದುಹಾಕಿದೆ. ಈ ಮೂಲಕ ಸಿರಪ್ ರೂಪದ ಔಷಧಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಾಗಲಿದೆ.

ಇದುವರೆಗೆ ಅನೇಕ ಕೆಮ್ಮು, ಶೀತ, ಜ್ವರ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಬಳಸುವ ಸಿರಪ್‌ಗಳನ್ನು ಜನರು ವೈದ್ಯರ ಸಲಹೆ ಇಲ್ಲದೆ ನೇರವಾಗಿ ಮೆಡಿಕಲ್ ಶಾಪ್‌ಗಳಿಂದ ಖರೀದಿಸುತ್ತಿದ್ದರು. ಆದರೆ ಹೊಸ ನಿಯಮ ಜಾರಿಗೆ ಬಂದ ಬಳಿಕ ನೋಂದಾಯಿತ ವೈದ್ಯರಿಂದ ನೀಡಲಾದ ಪ್ರಿಸ್ಕ್ರಿಪ್ಷನ್ ಇದ್ದರೆ ಮಾತ್ರ ಇಂತಹ ಸಿರಪ್‌ಗಳನ್ನು ಖರೀದಿಸಲು ಸಾಧ್ಯವಾಗಲಿದೆ.

ಏಕೆ ಈ ನಿರ್ಧಾರ?

ಸಿರಪ್‌ಗಳ ದುರ್ಬಳಕೆ, ಸ್ವಯಂ ಔಷಧ ಸೇವನೆ (Self Medication) ಹಾಗೂ ಔಷಧಿಗಳ ಅತಿಯಾದ ಬಳಕೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ವಿಶೇಷವಾಗಿ ಮಕ್ಕಳಿಗೆ ಮತ್ತು ಯುವಕರಲ್ಲಿ ಕೆಲವು ಕೆಮ್ಮಿನ ಸಿರಪ್‌ಗಳ ದುರ್ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಅಗತ್ಯವಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜನರಿಗೆ ಏನು ಪರಿಣಾಮ?

ಕೆಮ್ಮು, ಶೀತ, ಜ್ವರ ಅಥವಾ ಇತರೆ ಆರೋಗ್ಯ ಸಮಸ್ಯೆಗಳಿಗಾಗಿ ಸಿರಪ್ ಅಗತ್ಯವಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ ಪ್ರಿಸ್ಕ್ರಿಪ್ಷನ್ ಪಡೆಯಬೇಕು. ಬಳಿಕವೇ ಔಷಧ ಅಂಗಡಿಗಳಲ್ಲಿ ಸಿರಪ್ ಖರೀದಿಸಲು ಅವಕಾಶ ಇರಲಿದೆ.

ಈ ಹೊಸ ನಿಯಮದಿಂದ ಔಷಧಿಗಳ ಸುರಕ್ಷಿತ ಬಳಕೆ ಹೆಚ್ಚಾಗುವ ನಿರೀಕ್ಷೆಯಿದ್ದು, ಅನಗತ್ಯ ಔಷಧ ಸೇವನೆಗೆ ಕಡಿವಾಣ ಬೀಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Continue Reading

Trending