Connect with us

ಚುನಾವಣೆ

ಕಾಂಗ್ರೆಸ್‌ ಬಿಟ್ಟು ತಪ್ಪು ಮಾಡಿದೆ, ಬಿಜೆಪಿ ಉಸಿರುಗಟ್ಟಿಸುತ್ತಿದೆ : ಎಸ್‌.ಟಿ.ಸೋಮಶೇಖರ್‌ ಪಶ್ಚಾತ್ತಾಪ

Published

on

ಬೆಂಗಳೂರು : ನಾನು ಕಾಂಗ್ರೆಸ್‌ ಪಕ್ಷವನ್ನು ತೊರೆದು ಅತಿ ದೊಡ್ಡ ತಪ್ಪು ಮಾಡಿದೆ ಎಂದು ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಹೇಳಿದರು. ಶನಿವಾರ ಕೆಂಗೇರಿ ಉಪನಗರದ ಬಂಡೆಮಠದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಸೇರ್ಪೆಡೆಯಾಗುವ ಸಂದರ್ಭದಲ್ಲಿ ಜಾಮೂನ್ ಕೊಡುತ್ತಾರೆ. ಆದರೆ ಕೆಲಸ ಆದಮೇಲೆ ಉಸಿರು ಕಟ್ಟುವ ವಾತಾವರಣ ನಿರ್ಮಾಣ ಮಾಡುತ್ತಾರೆ ಎಂದು ಸ್ವಪಕ್ಷದ ವಿರುದ್ದವೇ ಹರಿಹಾಯ್ದರು.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರಕ್ಕೆ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿಯನ್ನು ಚಿಕ್ಕಮಗಳೂರು ಕ್ಷೇತ್ರದ ಜನತೆ ಗೋ ಬ್ಯಾಕ್ ಎಂದು ತಿರಸ್ಕರಿಸಿದ್ದಾರೆ.ಅಂಥವರನ್ನು ನಾವು ನಮ್ಮ ಅಭ್ಯರ್ಥಿ ಎಂದು ಒಪ್ಪಬೇಕೇ ಎಂದು ಪ್ರಶ್ನಿಸಿದರು.
ರಾಜ್ಯಸಭೆಯಲ್ಲಿ ಅಡ್ಡ ಮತದಾನದ ವಿಚಾರವನ್ನು ದೊಡ್ಡದು ಮಾಡಿ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದವರೊಂದಿಗೆ ನಾನು ಹೇಗೆ ಹೋಗಲಿ ಎಂದು ಪ್ರಶ್ನಿಸಿದ ಎಸ್‌.ಟಿ. ಸೋಮಶೇಖರ್‌, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ಪುಕ್ಸಟ್ಟೆ ಬಿದ್ದಿಲ್ಲ. ಕ್ಷೇತ್ರದ ಜನತೆಗಾಗಿ ಹಾಗೂ ಅಭಿವೃದ್ಧಿಗಾಗಿ ನಾನು ಯಾವ ತ್ಯಾಗ ಮಾಡಲೂ ಸಿದ್ಧ ಎಂದರು.

ಯಶವಂತಪುರ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿದ್ದೇನೆ ಎರಡು ಬಾರಿ ಸೋತಿದ್ದೇನೆ. ಮಸಲತ್ತು ಮಾಡಿ ನನ್ನನ್ನು ಸೋಲಿಸಲು ಪ್ರಯತ್ನ ಮಾಡಿದವರೊಂದಿಗೆ ಹೆಜ್ಜೆ ಹಾಕಿ ಈಗ ಗಂಡಸುತನದ ಬಗ್ಗೆ ಮಾತನಾಡುತ್ತಿರುವ ಜೆಡಿಎಸ್ ಪಕ್ಷದ ಜವರಾಯಿಗೌಡರಿಗೆ ಯಾವ ನೈತಿಕತೆ ಇದೆ ಎಂದು ಟೀಕಿಸಿದ ಎಸ್‌ಟಿಎಸ್‌, ಸರಳ ಸಜ್ಜನಿಕೆಯ ವಿದ್ಯಾವಂತ ಹಾಗೂ ಅಭಿವೃದ್ಧಿಗಾಗಿ ಸಹಕಾರ ನೀಡಲು ಭರವಸೆ ನೀಡಿರುವ ರಾಜೇವ್ ಗೌಡರವರಿಗೆ ನಮ್ಮ ಕಾರ್ಯಕರ್ತರ ಆಪೇಕ್ಷೆಯಂತೆ ನಾನು ಬೆಂಬಲ ನೀಡುತ್ತಿದ್ದೇನೆ ಎಂದು ಘೋಷಿಸಿದರು. ನಾನು ಕಾಂಗ್ರೆಸ್ ಪಕ್ಷದ ಮೂಲಕ ರಾಜಕಾರಣಕ್ಕೆ ಕಾಲಿಟ್ಟೆ. ನಾನು ಈ ಪಕ್ಷದಲ್ಲಿ ಸೋಲು ಹಾಗೂ ಗೆಲುವು ಎರಡನ್ನೂ ನೋಡಿದ್ದೇನೆ. ಬಿಜೆಪಿ ಪಕ್ಷದಲ್ಲಿ ರಾಷ್ಟ, ರಾಜ್ಯ ಮಟ್ಟದಲ್ಲಿ ಯಾವುದೇ ರೀತಿಯ ತೊಂದರೆ ಆಗಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಸ್ಧಳೀಯ ಬಿಜೆಪಿ ನಾಯಕರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ನನ್ನನ್ನೂ ಸೋಲಿಸಲು ಪ್ರಯತ್ನಿಸಿದರು. ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲು ಸಾಧ್ಯವಿಲ್ಲದ ಒಬ್ಬ ಬಿಜೆಪಿ ನಾಯಕ ನನ್ನನ್ನು ಸೋಲಿಸಲು ಶತ ಪ್ರಯತ್ನ ಮಾಡಿದ್ದರು. ಅದರೆ ಅವರ ಪ್ರಯತ್ನ ಫಲಿಸಲಿಲ್ಲ. ಇದಕ್ಕೆ ಮುಖ್ಯ ಕಾರಣ ಕ್ಷೇತ್ರದ ಜನ ಹಾಗೂ ನಾನು ಮಾಡಿರುವ ಕೆಲಸ ಎಂದರು.
ಇಂದು ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಘೋಷಣೆ ಆದ ನಂತರ ಈ ಕ್ಷೇತ್ರದ ಶಾಸಕನನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿಲ್ಲ. ಅವರಿಗೆ ನನ್ನ ಅವಶ್ಯಕತೆ ಇಲ್ಲ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ನುಡಿದ ಎಸ್‌ಟಿಎಸ್‌, ಯಶವಂತಪುರ ಕ್ಷೇತ್ರದಲ್ಲಿ ಸದಾನಂದ ಗೌಡ ಯಾವುದೇ ವಿವಾದವನ್ನು ಸೃಷ್ಟಿಸಿಲ್ಲ. ಬಿಜೆಪಿಯವರ ಬೋಗಸ್ ಮಾತುಗಳನ್ನು ಯಾರೂ ನಂಬಬಾರದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜೀವ ಗೌಡ, ಸಚಿವ ಕೃಷ್ಣಬೈರೇಗೌಡ, ಪಶ್ಚಿಮ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಮಾಜಿ ಬಿಬಿಎಂಪಿ ಸದಸ್ಯ ಆರ್ಯ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಚುನಾವಣೆ

ಅಸ್ಸಾಂ-ಕೇರಳ-ಪುದುಚೇರಿ ಚುನಾವಣೆ: ಮತದಾನ ಆರಂಭ, ಕರ್ನಾಟಕದಲ್ಲಿ ಮಿನಿ ಸಮರ

Published

on

By

ನವದೆಹಲಿ/ಬೆಂಗಳೂರು: ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗೆ ಗುರುವಾರ ಬೆಳಗ್ಗೆ ಮತದಾನ ಪ್ರಾರಂಭವಾಗಿದ್ದು, ರಾಷ್ಟ್ರ ರಾಜಕೀಯದ ದೃಷ್ಟಿಯಿಂದ ಇದು ನಿರ್ಣಾಯಕ ಘಟ್ಟವಾಗಿ ಪರಿಣಮಿಸಿದೆ. ಜೊತೆಗೆ ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳ ಉಪಚುನಾವಣೆಗೂ ಮತದಾನ ನಡೆಯುತ್ತಿದೆ.

ಅಸ್ಸಾಂನಲ್ಲಿ Himanta Biswa Sarma ನೇತೃತ್ವದ Bharatiya Janata Party ಹ್ಯಾಟ್ರಿಕ್ ಗೆಲುವಿನತ್ತ ಗಮನ ಹರಿಸಿದ್ದರೆ, ಕಾಂಗ್ರೆಸ್ ಬಣ ಪ್ರಬಲ ಪೈಪೋಟಿ ನೀಡುತ್ತಿದೆ. 126 ಕ್ಷೇತ್ರಗಳಲ್ಲಿ 2.5 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಕೇರಳದಲ್ಲಿ Pinarayi Vijayan ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 140 ಕ್ಷೇತ್ರಗಳಲ್ಲಿ 2.71 ಕೋಟಿ ಮತದಾರರು ಮತದಾನ ಮಾಡುತ್ತಿದ್ದಾರೆ.

ಪುದುಚೇರಿಯಲ್ಲಿ N. Rangaswamy ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದ್ದು, ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಸವಾಲು ಹಾಕುತ್ತಿದೆ.

ಇದೇ ವೇಳೆ ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯುತ್ತಿದ್ದು, ಇದು ರಾಜ್ಯ ರಾಜಕೀಯದ “ಮಿನಿ ಸಮರ” ಎಂದೇ ಪರಿಗಣಿಸಲಾಗಿದೆ.

ಮತದಾನ ಪ್ರಕ್ರಿಯೆ ಸರಾಗವಾಗಿ ನಡೆಯಲು ವೆಬ್‌ಕಾಸ್ಟಿಂಗ್, ಬಿಗಿ ಪೊಲೀಸ್ ಭದ್ರತೆ ಮತ್ತು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಹೈ-ವೋಲ್ಟೇಜ್ ಚುನಾವಣೆಯ ಫಲಿತಾಂಶ ಮೇ 4 ರಂದು ಪ್ರಕಟವಾಗಲಿದೆ.

Continue Reading

ಚುನಾವಣೆ

ತಮಿಳುನಾಡು ರಾಜಕೀಯಕ್ಕೆ ವಿಜಯ್ ಎಂಟ್ರಿ: ‘ಟಿವಿಕೆ’ ಭವಿಷ್ಯ ಏನು?

Published

on

By

ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಮತ್ತು ಚಿತ್ರರಂಗದ ನಡುವಿನ ಬಾಂಧವ್ಯ ದಶಕಗಳ ಇತಿಹಾಸ ಹೊಂದಿದೆ. M. G. Ramachandran ಮತ್ತು J. Jayalalithaa ಮೊದಲಾದವರು ಚಿತ್ರರಂಗದಿಂದಲೇ ರಾಜಕೀಯಕ್ಕೆ ಬಂದು ರಾಜ್ಯವನ್ನು ಆಳಿದ ಉದಾಹರಣೆಗಳಾಗಿದ್ದಾರೆ.

ಇದೇ ಹಾದಿಯಲ್ಲಿ ಇದೀಗ ನಟ Vijay ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ಆದರೆ, ಅವರ ಮುಂದೆ ಇರುವ ರಾಜಕೀಯ ಪಯಣ ಸುಲಭವಲ್ಲ. ತಮಿಳುನಾಡಿನ ರಾಜಕೀಯದಲ್ಲಿ DMK ಮತ್ತು AIADMK ಎಂಬ ಬಲಿಷ್ಠ ಪಕ್ಷಗಳ ಪ್ರಭಾವ ಗಟ್ಟಿಯಾಗಿ ನೆಲೆಸಿದೆ.

ವಿಜಯ್ ಅವರಿಗೆ ಅಪಾರ ಅಭಿಮಾನಿ ಬಳಗವಿದ್ದರೂ, ಆ ಶಿಳ್ಳೆ-ಚಪ್ಪಾಳೆಗಳು ಮತಗಳಾಗಿ ಪರಿವರ್ತನೆಯಾಗುತ್ತವೆಯೇ ಎಂಬುದು ಪ್ರಮುಖ ಪ್ರಶ್ನೆ. ರಾಜಕೀಯ ಅನುಭವವಿಲ್ಲದಿರುವುದು ಅವರ ಸವಾಲು. ಮತ್ತೊಂದೆಡೆ M. K. Stalin ಮತ್ತು ಎಐಎಡಿಎಂಕೆಯ ನಾಯಕರ ಅನುಭವದ ಎದುರು ನಿಲ್ಲಬೇಕಿದೆ.

ಆದರೆ, ಯುವ ಮತದಾರರು ಮತ್ತು ಮಹಿಳಾ ವಲಯದಲ್ಲಿ ವಿಜಯ್ ಅವರಿಗೆ ಬೆಂಬಲ ಸಿಗುವ ಸಾಧ್ಯತೆ ಇದೆ. ಸಾಮಾಜಿಕ ನ್ಯಾಯ, ನಿರುದ್ಯೋಗ, ಬೆಲೆ ಏರಿಕೆ ಮುಂತಾದ ಸಮಸ್ಯೆಗಳ ಬಗ್ಗೆ ಸ್ಪಷ್ಟ ಯೋಜನೆಗಳನ್ನು ಘೋಷಿಸಿದಲ್ಲಿ ಅವರ ರಾಜಕೀಯ ಪಯಣ ಗಟ್ಟಿಯಾಗಬಹುದು.

ಸಮೀಕ್ಷೆಗಳ ಪ್ರಕಾರ, TVK ಪಕ್ಷವು ಶೇ.15ರಿಂದ 30ರವರೆಗೆ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಇದರಿಂದ ಸರ್ಕಾರ ರಚನೆಗೆ ‘ಕಿಂಗ್‌ಮೇಕರ್’ ಪಾತ್ರ ವಹಿಸುವ ಅವಕಾಶವೂ ಇದೆ.

ಒಟ್ಟಿನಲ್ಲಿ, ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ಪ್ರವೇಶ ಹೊಸ ಚೈತನ್ಯ ತಂದಿದ್ದು, ಮುಂದಿನ ದಿನಗಳಲ್ಲಿ ಅವರ ರಾಜಕೀಯ ಪಥ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ಚುನಾವಣೆ

ಕೇರಳದಲ್ಲಿ ಭರ್ಜರಿ ಮತದಾನ ಆರಂಭ: ಪ್ರಮುಖ ನಾಯಕರು, ನಟರು ಮತ ಚಲಾಯಿಸಿದ ಕ್ಷಣಗಳು

Published

on

By

ತಿರುವನಂತಪುರಂ: ಕೇರಳದಾದ್ಯಂತ ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಭರ್ಜರಿಯಾಗಿ ಆರಂಭವಾಗಿದೆ. ರಾಜ್ಯದ ಹೊಸ ಸರ್ಕಾರ ಆಯ್ಕೆಗಾಗಿ 2.71 ಕೋಟಿಗೂ ಅಧಿಕ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ. ಮತದಾನ ಆರಂಭಕ್ಕೂ ಮುನ್ನವೇ ಪ್ರಮುಖ ನಾಯಕರು ಮತ್ತು ಅಭ್ಯರ್ಥಿಗಳು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು.

ಮುಖ್ಯಮಂತ್ರಿ Pinarayi Vijayan ಅವರು ತಮ್ಮ ಕುಟುಂಬದೊಂದಿಗೆ ಕಣ್ಣೂರು ಜಿಲ್ಲೆಯ ಪಿಣರಾಯಿಯಲ್ಲಿರುವ ಮತಗಟ್ಟೆಗೆ ನಡೆದುಕೊಂಡೇ ಹೋಗಿ ಮತ ಹಾಕಿದರು. ಈ ಚುನಾವಣೆ ಕೇರಳದ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಹಂತ ಎಂದು ಅವರು ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿ ಸಾಧನೆಯಾಗಿದೆ, ಅದು ಮುಂದುವರಿಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವಿರೋಧ ಪಕ್ಷದ ನಾಯಕ V. D. Satheesan ಕೂಡ ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬರಬೇಕು ಎಂದು ಕರೆ ನೀಡಿದರು. ಯುಡಿಎಫ್ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ Suresh Gopi ಅವರು ಗುರುವಾಯೂರಿನ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತು ಮತ ಹಾಕಿದರು. ಬಿಜೆಪಿ ರಾಜ್ಯಾಧ್ಯಕ್ಷ Rajeev Chandrasekhar ಸಹ ಮತ ಚಲಾಯಿಸಿ, ಕೇರಳದಲ್ಲಿ ಅಭಿವೃದ್ಧಿಗಾಗಿ ಜನರಿಂದ ಅವಕಾಶ ಕೋರುತ್ತಿದ್ದೇವೆ ಎಂದರು.

ಖ್ಯಾತ ನಟ Mohanlal ತಿರುವನಂತಪುರಂನಲ್ಲಿ ಮತ ಹಾಕಿ, “ನಾನು ನನ್ನ ಕರ್ತವ್ಯ ಮಾಡಿದೆ, ಈಗ ನಿಮ್ಮ ಸರದಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ಎನ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ಸೇರಿದಂತೆ ಅನೇಕ ಗಣ್ಯರು ತಮ್ಮ ಹಕ್ಕು ಚಲಾಯಿಸಿದರು. ರಾಜ್ಯದಾದ್ಯಂತ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.

Continue Reading

Trending