Connect with us

ಕ್ರೀಡೆ

ನಾನು ಕೋಪಗೊಂಡಿದ್ದೆ’; ವಿಲ್ ಜಾಕ್ಸ್ ಜೊತೆ ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿ ಹೇಳಿದ್ದೇನು?

https://twitter.com/hashtag/PlayBold?src=hashtag_click

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ನೇ ಆವೃತ್ತಿಯ 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ವಿಲ್ ಜಾಕ್ಸ್ ಅವರ ಆಕರ್ಷಕ ಶತಕವು ಗುಜರಾತ್ ಟೈಟಾನ್ಸ್ ನೀಡಿದ 201 ರನ್ ಗುರಿ ಬೆನ್ನತ್ತಲು, ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಲು ನೆರವಾಯಿತು. ಜಾಕ್ಸ್ 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ಅಲ್ಲಿಂದ ಕೇವಲ 10 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಸಿಡಿಸಿದರು. 41 ಎಸೆತಗಳಲ್ಲಿ 5 ಬೌಂಡರಿ ಮತ್ತು 10 ಭರ್ಜರಿ ಸಿಕ್ಸರ್ ಮೂಲಕ ಅಜೇಯ 100 ರನ್ ಗಳಿಸಿದರು. 44 ಎಸೆತಗಳಲ್ಲಿ ಔಟಾಗದೆ 70 ರನ್ ಗಳಿಸಿದ ವಿರಾಟ್ ಕೊಹ್ಲಿಯೊಂದಿಗೆ ಜಾಕ್ಸ್ RCB ಸುಲಭವಾಗಿ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿದರು. ಗುಜರಾತ್ ಟೈಟಾನ್ಸ್ ವಿರುದ್ಧದ ರೋಚಕ ಜಯದ ನಂತರ ಆರ್‌ಸಿಬಿ ಬ್ಯಾಟರ್‌ಗಳ ನಡುವಿನ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರ್‌ಸಿಬಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಕೊಹ್ಲಿ ಜ್ಯಾಕ್ಸ್‌ಗೆ ಹೀಗೆ ಹೇಳುವುದನ್ನು ಕೇಳಬಹುದು. ‘ಮೊದಲ ಬಾಲ್ ಅನ್ನು ಸಿಕ್ಸ್ ಹೊಡೆಯಲಿಲ್ಲ ಎಂದು ನಾನು ಕೋಪಗೊಂಡಿದ್ದೆ. ಆದರೆ, 94 ರನ್ ಗಳಿಸಿದ್ದ ನಿಮ್ಮನ್ನು ನೋಡಿದಾಗ, ನಾನು ಮೊದಲ ಬಾಲನ್ನು ಹೊಡೆಯದಿರುವುದೇ ಒಳ್ಳೆಯದಾಯಿತು ಎಂದುಕೊಂಡೆ’ ಎಂದಿದ್ದಾರೆ.

ಟೀಕಾಕಾರರಿಗೆ ಕೊಹ್ಲಿ ಖಡಕ್ ಉತ್ತರ

ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಆಡಿರುವ 10 ಪಂದ್ಯಗಳಲ್ಲಿ 71.43 ಸರಾಸರಿಯಲ್ಲಿ 500 ರನ್ ಗಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಬ್ಯಾಟಿನಿಂದ ನಾಲ್ಕು ಅರ್ಧಶತಕ, ಒಂದು ಶತಕ ಕೂಡ ಬಂದಿದೆ.

ಕೊಹ್ಲಿ ಸತತವಾಗಿ ರನ್ ಗಳಿಸುತ್ತಿದ್ದರೂ ಟೀಕೆಗಳು ಮಾತ್ರ ನಿಂತಿಲ್ಲ. ಸದ್ಯ 147.49 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೂ, ಟಿ20 ಕ್ರಿಕೆಟ್‌ನಲ್ಲಿ ಇದು ಕೆಟ್ಟ ಸ್ಟ್ರೈಕ್‌ರೇಟ್ ಎನ್ನುವ ಮಾತುಗಳು ಕೇಳಿಬಂದಿವೆ. ಕೆಲವು ಮಾಜಿ ಕ್ರಿಕೆಟಿಗರೂ ಕೂಡ ಕೊಹ್ಲಿ ಸ್ಟ್ರೈಕ್‌ರೇಟ್ ಬಗ್ಗೆ ಟೀಕಿಸಿದ್ದರು. ತಮ್ಮ ವಿರುದ್ಧದ ಟೀಕೆಗಳಿಗೆ ವಿರಾಟ್ ಕೊಹ್ಲಿ ಇದೀಗ ಉತ್ತರ ಕೊಟ್ಟಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ‘ನನ್ನ ಸ್ಟ್ರೈಕ್-ರೇಟ್‌ ಬಗ್ಗೆ ಮಾತನಾಡುವ ಮತ್ತು ಸ್ಪಿನ್ ಬೌಲಿಂಗ್‌ಗೆ ಚೆನ್ನಾಗಿ ಆಡುವುದಿಲ್ಲ ಎನ್ನುವ ಎಲ್ಲರಿಗೂ ಇಂದು ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. 15 ವರ್ಷಗಳಿಂದ ತಂಡದ ಗೆಲುವಿಗಾಗಿ ನಾನು ಆಡುತ್ತಿದ್ದೇನೆ. ಅಂತಿಮವಾಗಿ ನಿಮ್ಮ ತಂಡ ಗೆದ್ದಿದೆ ಎನ್ನುವುದು ಸಾಕು. ಬಾಕ್ಸ್‌ನಲ್ಲಿ ಕೂತು ಮಾತನಾಡುವವರು ಏನು ಬೇಕಾದರು ಮಾತನಾಡಲಿ. ಜನರು ಅವರವರ ಊಹೆಗಳ ಆಧಾರದಲ್ಲಿ ದಿನನಿತ್ಯ ಮಾತನಾಡುತ್ತಿರುತ್ತಾರೆ. ಆದರೆ, ತಂಡಕ್ಕಾಗಿ ಆಡುವವರಿಗೆ ಮಾತ್ರ ಏನಾಗುತ್ತಿದೆ ಎಂಬುದು ತಿಳಿದಿರುತ್ತದೆ’ ಎಂದು ಹೇಳಿದರು.

ಕ್ರೀಡೆ

ನಾನು ಹುಚ್ಚ ಅಲ್ಲ, ರಾಯಲ್ ಚಾಲೆಂಜ್ ಕೂಡಾ ಕುಡಿಯುವುದಿಲ್ಲ’: RCB ಖರೀದಿ ಕುರಿತ ವದಂತಿಗೆ ಡಿಕೆಶಿ ಪ್ರತಿಕ್ರಿಯೆ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿಯ ಭಾಗವಾಗಲು ನನಗೆ ಆಫರ್‌ಗಳು ಬಂದಿವೆ. ಆದರೆ ನನಗೆ ಸಮಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸುವ ಕುರಿತ ಊಹಾಪೋಹಗಳ ಪ್ರಶ್ನೆಗೆ, “ನಾನು ಹುಚ್ಚನಲ್ಲ. ನಾನು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ (ಕೆಎಸ್ ಸಿಎ)ನ ಸದಸ್ಯ ಮಾತ್ರ” ಎಂದರು.

ಇದಕ್ಕೆಲ್ಲ ನನಗೆ ಸಮಯವಿಲ್ಲ. ಅಷ್ಟಕ್ಕೂ ನನಗೆ ಆರ್‌ಸಿಬಿ ಏಕೆ ಬೇಕು?. ನಾನು ರಾಯಲ್ ಚಾಲೆಂಜ್ ಕೂಡಾ ಕುಡಿಯುವುದಿಲ್ಲ. ಆದರೆ, ಆಡಳಿತ ಮಂಡಳಿಯ ಭಾಗವಾಗಲು ನನಗೆ ಆಫರ್‌ಗಳು ಬಂದಿವೆ” ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಭೀಕರ ಕಾಲ್ತುಳಿತ: ಐಪಿಎಲ್ ಚಾಂಪಿಯನ್ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ (ಜೂನ್ 4ರಂದು) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಕ್ರಿಕೆಟ್ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರಂತದ ನಂತರ ಮರುದಿನ (ಜೂನ್ 5ರಂದು) ಕರ್ನಾಟಕ ಸರ್ಕಾರ ನಗರ ಪೊಲೀಸ್ ಆಯುಕ್ತರೂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಘಟನೆಯ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿದೆ.

ರಾಜಕೀಯ ಕೆಸರೆರಚಾಟ: ಈ ಘಟನೆಯನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಮಹಾ ಕುಂಭಮೇಳದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಬಿಜೆಪಿ ಏಕೆ ಒತ್ತಾಯಿಸಲಿಲ್ಲ ಎಂದು ಮರು ಪ್ರಶ್ನಿಸಿದ್ದಾರೆ.

ನಾಳೆ ಮಧ್ಯಾಹ್ನ ಹೈಕೋರ್ಟ್ ಆದೇಶ: ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮ್ಮ ಬಂಧನ ಕಾನೂನುಬಾಹಿರ ಎಂದು ಮಧ್ಯಂತರ ಪರಿಹಾರ ಕೋರಿ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ಹೈಕೋರ್ಟ್ ನಾಳೆ ಮಧ್ಯಾಹ್ನ 2.30ಕ್ಕೆ ಕಾಯ್ದಿರಿಸಿದೆ.

Continue Reading

ಕ್ರೀಡೆ

ಟೀಂ ಇಂಡಿಯಾ ಆಯ್ಕೆ, BCCI ವಿರುದ್ಧ ದಾದಾ ಕೆಂಗಣ್ಣು

ಮುಂಬೈ: ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಡುವ ಬಗ್ಗೆ ಮಾಜಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಕಳೆದ ವರ್ಷದಿಂದ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಶ್ರೇಯಸ್ ಅವರನ್ನು ಮಧ್ಯಮ ಕ್ರಮಾಂಕದ ಅಗ್ರ ಸ್ಪರ್ಧಿಯಾಗಿ ಸೂಚಿಸಲಾಗಿತ್ತು ಆದರೆ ಅವರಿಗೆ ಅಂತಿಮ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಶ್ರೇಯಸ್ ಅವರನ್ನು ಅವರ ಪ್ರಸ್ತುತ ಫಾರ್ಮ್ ಆಧರಿಸಿ ಆಯ್ಕೆ ಮಾಡಬೇಕಿತ್ತು ಮತ್ತು ಅವರು “ಹೊರಗುಳಿಯುವ ಆಟಗಾರ” ಅಲ್ಲ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಕಳೆದ ಒಂದು ವರ್ಷದಿಂದ ತಮ್ಮ ಅತ್ಯುತ್ತಮ ಆಟವಾಡುತ್ತಿದ್ದಾರೆ ಮತ್ತು ಈ ತಂಡದಲ್ಲಿ ಶ್ರೇಯಸ್ ಇರಬೇಕಿತ್ತು. ಕಳೆದ ಒಂದು ವರ್ಷ ಅವರಿಗೆ ಅದ್ಭುತವಾಗಿದೆ. ಅವರು ಹೊರಗುಳಿದ ಆಟಗಾರನಲ್ಲ. ಅವರು ಈಗ ಒತ್ತಡದಲ್ಲಿ ಸ್ಕೋರ್ ಮಾಡುತ್ತಿದ್ದಾರೆ, ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ, ಶಾರ್ಟ್ ಬಾಲ್ ನ್ನು ಚೆನ್ನಾಗಿ ಆಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ವಿಭಿನ್ನವಾಗಿದ್ದರೂ, ಅವರು ಏನು ಮಾಡಬಹುದು ಎಂದು ನೋಡಲು ಈ ಸರಣಿಯಲ್ಲಿ ಅವರನ್ನು ತಂಡದಲ್ಲಿ ನೋಡಲು ಬಯಸುತ್ತೇನೆ” ಎಂದು ಗಂಗೂಲಿ ರೆವ್‌ಸ್ಪೋರ್ಟ್ಜ್‌ಗೆ ತಿಳಿಸಿದ್ದಾರೆ.

ಜೂನ್ 20 ರಿಂದ ಹೆಡಿಂಗ್ಲೆಯಲ್ಲಿ ಮೊದಲ ಪಂದ್ಯದಿಂದ ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ತನ್ನ ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯನ್ನು ಪ್ರಾರಂಭಿಸುತ್ತದೆ.

Continue Reading

ಕ್ರೀಡೆ

ಒಂದೇ ತಿಂಗಳಲ್ಲಿ 6 ಕ್ರಿಕೆಟಿಗರು ನಿವೃತ್ತಿ-ಲಿಸ್ಟ್ ನಲ್ಲಿದ್ದಾರೆ ಭಾರತದ ದಿಗ್ಗಜರು!

ನವದೆಹಲಿ: ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯೊಂದಿಗೆ ಶುರುವಾದ ಸ್ಟಾರ್ ಆಟಗಾರರ ಗುಡ್ ಬೈ ಪರ್ವ ಮುಂದುವರೆದಿದೆ, ಅದರಲ್ಲೂ ಮೇ ಮತ್ತು ಜೂನ್ ತಿಂಗಳ ನಡುವೆ ಒಟ್ಟು 6 ಆಟಗಾರರು ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ,
ರೋಹಿತ್ ಶರ್ಮಾ: ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಳೆದ ತಿಂಗಳು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು, ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಹಿಟ್ ಮ್ಯಾನ್ ಇನ್ಮುಂದೆ ಏಕದಿನದಲ್ಲಿ ಮಾತ್ರ ಟೀಮ್ ಇಂಡಿಯಾ ಪ್ರತಿನಿಧಿಸಲಿದ್ದಾರೆ,
ವಿರಾಟ್ ಕೊಹ್ಲಿ: ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿನ ಕೂಡ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ, ಮೇ 12 ರಂದು ಟೆಸ್ಟ್ ಗೆ ನಿವೃತ್ತಿ ಪ್ರಕಟಿಸಿದ್ರು, ಕಿಂಗ್ ಕೊಹ್ಲಿ ಇನ್ನು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ಏಂಜೆಲೊ ಮ್ಯಾಥ್ಯೂಸ್: ಶ್ರೀಲಂಕಾ ತಂಡದ ಸ್ಟಾರ್ ಆಲ್‍ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ, ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ,
ಆದರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರೆ,
ಹೆನ್ರಿಕ್ ಕ್ಲಾಸೆನ್: ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಹೆನ್ರಿಕ್ ಕ್ಲಾಸೆನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಕೇವಲ 33 ವರ್ಷದ ಕ್ಲಾಸೆನ್, ಮುಂಬರುವ ದಿನಗಳಲ್ಲಿ ಟಿ20 ಲೀಗ್ ಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಅದು ಕೂಡ 29 ನೇ ವಯಸ್ಸಿನಲ್ಲಿ ಎಂಬುದು ಅಚ್ಚರಿ.

Continue Reading

Trending