ದೇಶ
ವೇಗವಾಗಿ ಚಲಿಸುವ ಮುನ್ನ ಎಚ್ಚರ ಎಕ್ಸ್ ಪ್ರೆಸ್ ವೇನಲ್ಲಿ ವಿಶೇಷ ಕ್ಯಾಮೆರಾ!
ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು ಹಾಗೂ ಸಾವು ನೋವು ಕಡಿಮೆ ಮಾಡಲು ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರವು ಕೃತಕ ಬುದ್ದಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ,
ಮಿತಿ ಮೀರಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲು ಕೃತಕ ಬುದ್ದಿಮತ್ತೆ ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಬೆಂಗಳೂರು ನಿಡಘಟ್ಟ ಹಾಗೂ ನಿಡಘಟ್ಟ ಮೈಸೂರು ಮಾರ್ಗಗಳ ಆಯಕಟ್ಟಿನ ಸ್ಧಳಗಳಲ್ಲಿ ಅಳವಡಿಸಲಾಗುತ್ತಿದೆ,
ಮೊದಲಿಗೆ 118 ಕಿಲೋ ಮೀಟರ್ ಉದ್ದಕ್ಕೂ 10 ಕಿಲೋಮೀಟರ್ ದೂರಕ್ಕೆ ಒಂದು ಕ್ಯಾಮೆರಾವನ್ನು ಅಳವಡಿಸಲು ಯೋಜಿಸಲಾಗಿತ್ತು, ಇದೀಗ ಪ್ರತಿ 2 ಕಿಲೋಮೀರ‍್ಗೆ ಒಂದರೆAತೆ 60ಕ್ಕೂ ಹೆಚ್ಚು ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ, ರಾಷ್ಟಿçÃಯ ಹೆದ್ದಾರಿಯು ಸಂಚಾರಕ್ಕೆ ಮುಕ್ತವಾದ 9 ತಿಂಗಳಲ್ಲಿ ಅಪಘಾತದಿಂದ 185 ಜನರು ಮೃತಪಟ್ಟಿದ್ದರು, ಹೆದ್ದಾರಿಯ ಸುರಕ್ಷತೆ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದರು, ಈ ಹಿನ್ನಲೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ,
ಕ್ರೀಡೆ
ICC Men’s T20 World Cup: ಸಲ್ಮಾನ್ ಆಘಾ ನಿಗೂಢ ಉತ್ತರ: ಕೈಕುಲುಕುವರಾ ಆಟಗಾರರು?
ಕೊಲೊಂಬೋ: ಮಹಾಶಿವರಾತ್ರಿಯ ದಿನ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್ ಲೀಗ್ ಹಂತದ ಮಹತ್ವದ ಪಂದ್ಯ ನಡೆಯಲಿದೆ. R. Premadasa Stadium ನಲ್ಲಿ ನಡೆಯಲಿರುವ ಈ ಹೈವೊಲ್ಟೇಜ್ ಸಮರಕ್ಕೂ ಮುನ್ನ, ಎರಡು ತಂಡಗಳ ಆಟಗಾರರು ಹ್ಯಾಂಡ್‌ಶೇಕ್ ಮಾಡುತ್ತಾರೆಯೇ ಎಂಬ ಪ್ರಶ್ನೆ ಕುತೂಹಲ ಹುಟ್ಟಿಸಿದೆ.
ಪ್ರೀಮ್ಯಾಚ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ Salman Ali Agha, ಹ್ಯಾಂಡ್‌ಶೇಕ್ ವಿಚಾರಕ್ಕೆ ಸ್ಪಷ್ಟ ಉತ್ತರ ನೀಡಲಿಲ್ಲ. “ನಾಳೆಯ ಪಂದ್ಯವನ್ನು ಕ್ರೀಡಾಸ್ಫೂರ್ತಿಯಿಂದ ಆಡುತ್ತೇವೆ. ವೈಯಕ್ತಿಕ ವಿಚಾರ ಮುಖ್ಯವಲ್ಲ” ಎಂದು ಹೇಳುವ ಮೂಲಕ ಅವರು ನಿಗೂಢ ಉತ್ತರ ನೀಡಿದ್ದಾರೆ.
ಭಾರತ–ಪಾಕಿಸ್ತಾನ ಪಂದ್ಯವೆಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ, ಭಾವನೆಗಳ ಹೋರಾಟವೂ ಹೌದು. ಹೀಗಾಗಿ ಹ್ಯಾಂಡ್‌ಶೇಕ್‌ನಂತಹ ಸಣ್ಣ ವಿಷಯವೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ.
ಇದಕ್ಕೂ ಮುನ್ನ ನಡೆದ Asia Cup ವೇಳೆ, ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರೆಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಪಿಸಿಬಿ ಅಧ್ಯಕ್ಷ Mohsin Naqvi ಅವರಿಂದ ಟ್ರೋಫಿ ಸ್ವೀಕರಿಸದ ಘಟನೆಗೂ ವಿವಾದ ಸೃಷ್ಟಿಯಾಗಿತ್ತು.
ಇದೀಗ ಕೊಲೊಂಬೋದಲ್ಲಿ ಎರಡು ತಂಡಗಳ ಅಭ್ಯಾಸ ವೇಳಾಪಟ್ಟಿಯೂ ಪ್ರಕಟವಾಗಿದೆ. ಮಧ್ಯಾಹ್ನ 2ರಿಂದ 5ರವರೆಗೆ ಪಾಕಿಸ್ತಾನ ತಂಡ ಅಭ್ಯಾಸ ನಡೆಸಲಿದ್ದು, ಸಂಜೆ 6ರಿಂದ 9ರವರೆಗೆ ಭಾರತ ತಂಡ ಅಭ್ಯಾಸ ನಡೆಸಲಿದೆ. ಭಾರತ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಲಭಿಸಿದ್ದು, ಅಭಿಮಾನಿಗಳ ಉತ್ಸಾಹ ಗಮನ ಸೆಳೆದಿದೆ.
ಹ್ಯಾಂಡ್‌ಶೇಕ್ ಆಗುತ್ತದೆಯೇ ಎಂಬುದಕ್ಕಿಂತ ಮೈದಾನದಲ್ಲಿನ ಪ್ರದರ್ಶನವೇ ಅಂತಿಮ ಉತ್ತರ ನೀಡಲಿದೆ
ದೇಶ
ಸಾಧನಾ ಸಮಾವೇಶದಲ್ಲಿ ಸಿಎಂ ಗರ್ಜನೆ: ಕರ್ನಾಟಕ ಜಿಡಿಪಿ ದೇಶದಲ್ಲೇ ನಂಬರ್ ಒನ್
ಹಾವೇರಿ, ಫೆ.14: ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ. ಈಗಾಗಲೇ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ದಾಖಲೆ ನಿರ್ಮಿಸಿದ್ದೇವೆ ಎಂದು ಮುಖ್ಯಮಂತ್ರಿ Siddaramaiah ಘೋಷಿಸಿದರು.
ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ನಡೆದ ಸರ್ಕಾರದ ಸಹಸ್ರ ದಿನಾಚರಣೆ ಹಾಗೂ ಸಾಧನಾ ಸಮಾವೇಶದಲ್ಲಿ 1 ಲಕ್ಷ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೇಳಿದರು.
ಕಂದಾಯ ಸಚಿವ Krishna Byre Gowda ನೇತೃತ್ವದಲ್ಲಿ ಇಲಾಖೆಯಲ್ಲಿ ಕ್ರಾಂತಿಕಾರಿ ಪ್ರಗತಿ ಕಂಡಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಎಸ್‌ಟಿ ಸಂಗ್ರಹದಲ್ಲೂ ರಾಜ್ಯ ವೇಗವಾಗಿ ಮುನ್ನಡೆಯುತ್ತಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದರು.
ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಮಾಜಿ ಮುಖ್ಯಮಂತ್ರಿ Basavaraj Bommai ಹಾಗೂ ಕೇಂದ್ರ ಸಚಿವ Pralhad Joshi ಸೇರಿದಂತೆ ಬಿಜೆಪಿ ನಾಯಕರು ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 9 ತಿಂಗಳು ಕಳೆದಿದ್ದು, 243 ಭರವಸೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ₹1,18,000 ಕೋಟಿ ನೇರವಾಗಿ ಜನರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು.
ಆರ್ಥಿಕ ತಜ್ಞರಾದ Amartya Sen ಮತ್ತು Abhijit Banerjee ಸೇರಿದಂತೆ ಹಲವರು ರಾಜ್ಯದ ಜನಪರ ಯೋಜನೆಗಳಿಗೆ ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಹೇಳಿದರು.
ಕೇಂದ್ರದಿಂದ ಜಿಎಸ್‌ಟಿ ಪಾಲಿನಲ್ಲಿ 12–15 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಜಲ ಜೀವನ್ ಮಿಷನ್ (JJM) ಅನುದಾನದಲ್ಲೂ ಸುಮಾರು 15 ಸಾವಿರ ಕೋಟಿ ಬಾಕಿ ಇದೆ. ನ್ಯಾಯಯುತ ಪಾಲು ದೊರೆತರೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.
“ನುಡಿದಂತೆ ನಡೆದು” ಆಡಳಿತ ನೀಡಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಎಲ್ಲ ಜಾತಿ, ಧರ್ಮ, ಭಾಷೆಯ ಜನರನ್ನು ಒಳಗೊಂಡ ಸಮಾನತೆಯ ಅಭಿವೃದ್ಧಿಗೆ ನಮ್ಮ ಬದ್ಧತೆ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ದೇಶ
ಹಂಪಿ ಉತ್ಸವದಲ್ಲಿ ಮಕ್ಕಳ ಕನಸು ನನಸು: Zameer Ahmed Khan ಉಚಿತ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ
ಬಳ್ಳಾರಿ: ವಿಶ್ವ ಪ್ರಸಿದ್ಧ Hampi Utsav ವೇಳೆ ಸರ್ಕಾರಿ ಶಾಲಾ ಮಕ್ಕಳಿಗೆ ಅಚ್ಚರಿ ಉಡುಗೊರೆಯಾಗಿ ಜಿಲ್ಲಾ ಉಸ್ತುವಾರಿ ಸಚಿವ Zameer Ahmed Khan ಉಚಿತ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಿದರು. 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಲಿಕಾಪ್ಟರ್ ಪ್ರಯಾಣದ ಕನಸು ಈ ಮೂಲಕ ಸಾಕಾರವಾಯಿತು.
ಕಮಲಾಪುರದ Mayura Hotel ಆವರಣದಲ್ಲಿ ‘ಬೈ ಸ್ಕೈ’ ವೀಕ್ಷಣೆಗೆ ಬಂದಿದ್ದ ಮಕ್ಕಳ ಆಸೆ ಗಮನಿಸಿದ ಸಚಿವರು, “ನೀವೂ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಾ?” ಎಂದು ಪ್ರಶ್ನಿಸಿದರು. ಮಕ್ಕಳು ಉತ್ಸಾಹದಿಂದ “ಹೌದು ಸರ್” ಎಂದು ಪ್ರತಿಕ್ರಿಯಿಸಿದರು.
ತಕ್ಷಣವೇ ತಮ್ಮ ಸ್ವಂತ ಖರ್ಚಿನಲ್ಲಿ ಯೂನಿಫಾರ್ಮ್‌ನಲ್ಲಿದ್ದ ಎಲ್ಲಾ ಮಕ್ಕಳಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಿಸಿದರು. ಆಕಾಶಕ್ಕೆ ಹಾರಿದ ಮಕ್ಕಳ ಸಂಭ್ರಮ, ಕೆಳಗಡೆ ನಿಂತಿದ್ದ ಪೋಷಕರ ಕಣ್ಣೀರಿನ ಸಂತೋಷ ಕ್ಷಣಗಳನ್ನು ಸೃಷ್ಟಿಸಿತು.
ಹಂಪಿ ಉತ್ಸವದ ಸಾಂಸ್ಕೃತಿಕ ವೈಭವದ ನಡುವೆ ನಡೆದ ಈ ಮಾನವೀಯ ಕೃತ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
-
ಅಪರಾಧ8 hours agoಚಿಕ್ಕಬಳ್ಳಾಪುರದಲ್ಲಿ ಆರ್ಟಿಓ ಇನ್ಸ್ಪೆಕ್ಟರ್ ಎಡವಟ್ಟು: ಅಧಿಕಾರ ವ್ಯಾಪ್ತಿ ಮೀರಿ ಪರಿಶೀಲನಾ ವರದಿ?
-
ದೇಶ7 hours agoPM Narendra Modi ಉದ್ಘಾಟಿಸಿದ ದೇಶದ ಮೊದಲ ಹೆದ್ದಾರಿ ತುರ್ತು ಲ್ಯಾಂಡಿಂಗ್ ಸೌಲಭ್ಯ
-
ದೇಶ7 hours agoImran Khan ಜೈಲು ವಿವಾದ: ದೃಷ್ಟಿ ಕಳೆದುಕೊಂಡರೆಂಬ ಆರೋಪ, ಸ್ಥಳಾಂತರಕ್ಕೆ ಘೋಷಣೆ
-
ಕ್ರೀಡೆ8 hours agoTCS WORLD 10K ಬೆಂಗಳೂರು ಏಪ್ರಿಲ್ 26ರಂದು: ನೋಂದಣಿ ಆರಂಭ, USD 2.1 ಲಕ್ಷ ಬಹುಮಾನ
-
ಕ್ರೀಡೆ8 hours agoಕರ್ನಾಟಕ ಗ್ರಾಮೀಣ ಲೀಗ್ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್: ಮರಿಯನ್ಸ್ ಬಿಸಿ ಚಿಕ್ಕಮಗಳೂರು ಚಾಂಪಿಯನ್
-
ದೇಶ3 hours agoBJP : ಮಹದೇಶ್ವರನ ಆಶೀರ್ವಾದಕ್ಕೆ ಹೆಜ್ಜೆ: ಶಶಿ ಕುಮಾರ್ ಕರೆ – ಯಶವಂತಪುರದಿಂದ ನೂರಾರು ಕಾರ್ಯಕರ್ತರು
-
ಅಪರಾಧ8 hours ago‘ನಾನ್ ರುದ್ರನ್’ ವಿವಾದ: ಧನುಷ್ಗೆ ₹20 ಕೋಟಿ ಪರಿಹಾರ ಬೇಡಿಕೆ, ತೆನಾಂಡಲ್ ಫಿಲ್ಮ್ಸ್ ಕಾನೂನು ನೋಟಿಸ್
-
ಕ್ರೀಡೆ7 hours agoಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್: ಜೈನ್ ವಿಶ್ವವಿದ್ಯಾಲಯ ಚಾಂಪಿಯನ್
