Connect with us

ದೇಶ

Pushpa 2: ಕಲರ್‌ಫುಲ್‌ ಪೋಸ್ಟರ್‌ ರಿಲೀಸ್‌ ಮಾಡಿ ಸಿಹಿಸುದ್ದಿ ಕೊಟ್ಟ ರಶ್ಮಿಕಾ ಮಂದಣ್ಣ

Published

on

ಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾ ಇದೀಗ ಕಲರ್‌ಫುಲ್ ಪೋಸ್ಟರ್‌ವೊಂದು ಹೊರಬಿದ್ದಿದೆ. ಅಲ್ಲು ಅರ್ಜುನ್ (Allu Arjun) ಜೊತೆ ಸ್ಟೈಲ್‌ ಆಗಿ ಪೋಸ್ ಕೊಡುತ್ತಾ ನಟಿ ಸಿಹಿಸುದ್ದಿಯೊಂದು ನೀಡಿದ್ದಾರೆ. ಪುಷ್ಪ 2 ಬಗ್ಗೆ ನಟಿ ಮಾಹಿತಿ ನೀಡಿದ್ದಾರೆ, ಅಲ್ಲು ಅರ್ಜುನ್ ಸ್ಟೈಲೀಶ್ ಆಗಿ ಕೈಚಾಚಿ ನಿಂತು ಕೊಂಡಿದ್ದಾರೆ. ಅವರ ಜೊತೆ ಮಸ್ತ್ ಆಗಿ ನಟಿ ಪೋಸ್ ನೀಡಿದ್ದಾರೆ. ನಿಮ್ಮ ಪುಷ್ಪ ಮತ್ತು ಶ್ರೀವಲ್ಲಿ ಎಂದು ನಟಿ ಅಡಿಬರಹ ನೀಡಿದ್ದಾರೆ. ಐಕಾನ್ ಸ್ಟಾರ್ ಜೊತೆ ರಶ್ಮಿಕಾ (Rashmika Mandanna) ಹೆಜ್ಜೆ ಹಾಕಿರುವ ‘ಪುಷ್ಪ 2’ ಕಪಲ್ ಸಾಂಗ್ ನಾಳೆ (ಮೇ 29) ಬೆಳಿಗ್ಗೆ 11:07ಕ್ಕೆ ರಿಲೀಸ್ ಮಾಡುವುದಾಗಿ ನಟಿ ತಿಳಿಸಿದ್ದಾರೆ. ಇದೀಗ ನಟಿ ಶೇರ್ ಮಾಡಿರುವ ನಯಾ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.‌ ಅಂದಹಾಗೆ, ಈ ಹಾಡು ತೆಲುಗು, ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಪುಷ್ಪ 2 ಸಾಂಗ್‌ ರಿಲೀಸ್‌ ಆಗುತ್ತಿದೆ. ‘ಪುಷ್ಪ’ ಪಾರ್ಟ್ ಒಂದರಲ್ಲಿ ಒಂದಕ್ಕಿಂತ ಒಂದು ಸಾಂಗ್ ಅದ್ಭುತವಾಗಿ ಮೂಡಿ ಬಂದಿತ್ತು. ಆ ಹಾಡುಗಳು ಯೂಟ್ಯೂಬ್‌ನಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿತ್ತು. ಹಾಗಾಗಿ ಇದರ ಸೀಕ್ವೆಲ್‌ನಲ್ಲಿ ಆ್ಯಕ್ಷನ್ ಸೀನ್‌ಗಳಿಗೆ ಮಹತ್ವ ಕೊಡುವ ಹಾಗೇ ಹಾಡಿಗಳಿಗೂ ಪ್ರಾಮುಖ್ಯತೆ ನೀಡಿದೆ ಚಿತ್ರತಂಡ. ಹಾಗಾದ್ರೆ ಆ ಕಲರ್‌ಫುಲ್ ಕಪಲ್ ಸಾಂಗ್ ಹೇಗಿರಲಿದೆ ಎಂಬುದನ್ನು ಮೇ 29ರವರೆಗೆ ಕಾದುನೋಡಬೇಕಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ. ಜೊತೆಗೆ ಅನಸೂಯ, ಡಾಲಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಇದೇ ಆಗಸ್ಟ್ 15ಕ್ಕೆ ‘ಪುಷ್ಪ 2’ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

ರಾಜ್ಯ

Udupi ಶ್ರೀಕೃಷ್ಣ ಮಠದಲ್ಲಿ ಹರಿಕಥೆ ವಿವಾದ: ಆದಿ ಶಂಕರಾಚಾರ್ಯರ ಹೇಳಿಕೆಗೆ ಕ್ಷಮೆ

Published

on

ಉಡುಪಿ: Udupi ವಿಶ್ವಪ್ರಸಿದ್ಧ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಕುರಿತು ಮಾಡಲಾದ ಆಕ್ಷೇಪಾರ್ಹ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಂಬಂಧಿತ ಹರಿಕಥೆ ಕಲಾವಿದೆ ವಿಡಿಯೋ ಸಂದೇಶದ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ ಕಲಾವಿದೆ, ಈ ವಿವಾದಕ್ಕೂ ಉಡುಪಿ ಮಠ ಅಥವಾ ಶಿರೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಯಾರನ್ನೂ ಅವಹೇಳನ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ. ಮಧ್ವ ಮಠದವರು ಈ ರೀತಿಯ ಹೇಳಿಕೆ ನೀಡುವಂತೆ ಸೂಚಿಸಿಲ್ಲ. ಪುಸ್ತಕವೊಂದರ ಉಲ್ಲೇಖದ ಆಧಾರದ ಮೇಲೆ ಮಾತನಾಡಿದ್ದೇವೆ. ನಮ್ಮ ಮಾತಿನಿಂದ ಯಾವುದೇ ಮಠದವರಿಗೆ ಅಥವಾ ಭಕ್ತರಿಗೆ ನೋವಾಗಿದ್ದರೆ ಹೃತ್ಪೂರ್ವಕವಾಗಿ ಕ್ಷಮೆ ಕೋರುತ್ತೇವೆ” ಎಂದು ತಿಳಿಸಿದ್ದಾರೆ.

ಹರಿಕಥೆ ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯರ ಜೀವನ ಚರಿತ್ರೆ ಹೇಳುವ ವೇಳೆ ಆದಿ ಶಂಕರಾಚಾರ್ಯರನ್ನು ಏಕವಚನದಲ್ಲಿ ಸಂಬೋಧಿಸಿ ಅವಹೇಳನಕಾರಿ ಕಟ್ಟುಕಥೆ ಹೇಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ಶಂಕರಾಚಾರ್ಯರ ಅನುಯಾಯಿಗಳು ಹಾಗೂ ಹಿಂದೂ ಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪರ್ಯಾಯ ಶಿರೂರು ಮಠ ಅಧಿಕೃತ ಪ್ರಕಟಣೆ ಹೊರಡಿಸಿದೆ. ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಅವರ ಪ್ರಕಾರ, ಅಂಕಿತಾ ನಾಯಕ್ ಮತ್ತು ಗೌರಿ ಪಾಂಡುರಂಗಿ ಅವರು ಭರತನಾಟ್ಯ ಕಾರ್ಯಕ್ರಮಕ್ಕೆ ಅನುಮತಿ ಕೋರಿದ್ದರು. ಆದರೆ ಕಾರ್ಯಕ್ರಮದ ವೇಳೆ ಹರಿಕಥೆ ನಡೆಸಲಾಗಿದೆ. ಹರಿಕಥೆಯಲ್ಲಿ ಆದಿ ಶಂಕರಾಚಾರ್ಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದ ತಕ್ಷಣವೇ ಸಂಬಂಧಿತ ಕಲಾವಿದೆಯರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿದ್ದು, ಅವರು ಕ್ಷಮೆ ಕೋರಿದ್ದಾರೆ ಎಂದು ತಿಳಿಸಲಾಗಿದೆ.

ಮಠದ ಆವರಣದಲ್ಲಿ ನಡೆದ ಈ ಅನಪೇಕ್ಷಿತ ಘಟನೆಯ ಬಗ್ಗೆ ಶಿರೂರು ಮಠ ವಿಷಾದ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ದೇಶ

Waynad ಭೂಕುಸಿತ: ರಾಹುಲ್-ಪ್ರಿಯಾಂಕ ಗೈರು ಹಾಜರಿ ಬಗ್ಗೆ ಬಿಜೆಪಿ ವಾಗ್ದಾಳಿ

Published

on

ತಿರುವನಂತಪುರಂ: Waynad ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಬಳಿಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಅವರ ಗೈರು ಹಾಜರಿ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಗಾಂಧಿ ಸಹೋದರ-ಸಹೋದರಿಯರನ್ನು “ರಾಜಕೀಯ ಪ್ರವಾಸಿಗರು” ಎಂದು ಟೀಕಿಸಿದೆ.

ಕಳೆದ ವಾರ ವಯನಾಡ್ ಜಿಲ್ಲೆಯ ಕಲ್ಲಾಡಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವು ಮಂದಿ ಮೃತಪಟ್ಟಿದ್ದು, ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಘಟನೆ ನಡೆದು ಒಂದು ವಾರ ಕಳೆದರೂ ಕ್ಷೇತ್ರದ ಸಂಸದೆಯಾಗಿರುವ ಪ್ರಿಯಾಂಕ ಗಾಂಧಿ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ. ಸದ್ಯ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸಂಸದ ಹಾಗೂ ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, 2019ರಲ್ಲಿ ಅಮೇಥಿಯಲ್ಲಿ ಸೋತ ಬಳಿಕ ವಯನಾಡ್ ಕ್ಷೇತ್ರವೇ ರಾಹುಲ್ ಗಾಂಧಿಗೆ ರಾಜಕೀಯ ಆಶ್ರಯ ನೀಡಿತ್ತು. 2024ರ ಲೋಕಸಭಾ ಚುನಾವಣೆಯ ಬಳಿಕ ರಾಹುಲ್ ಗಾಂಧಿ ಕ್ಷೇತ್ರವನ್ನು ಪ್ರಿಯಾಂಕ ಗಾಂಧಿಗೆ ಬಿಟ್ಟುಕೊಟ್ಟರು. ಕ್ಷೇತ್ರದ ಜನರು ಗಾಂಧಿ ಕುಟುಂಬವನ್ನು ಬೆಂಬಲಿಸಿದರೂ, ಸಂಕಷ್ಟದ ಸಮಯದಲ್ಲಿ ಇಬ್ಬರೂ ಜನರೊಂದಿಗೆ ನಿಲ್ಲುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ವೇಳೆ ವಿಐಪಿ ಭೇಟಿಗಳು ರಕ್ಷಣಾ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಯಾಗಬಹುದು ಎಂದು ಸಮರ್ಥಿಸಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಇಬ್ಬರೂ ನಾಯಕರು ವೈಯಕ್ತಿಕವಾಗಿ ಭೇಟಿ ನೀಡದಿದ್ದರೂ ಜಿಲ್ಲಾಡಳಿತ ಹಾಗೂ ಕೇರಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಈ ವಿಚಾರ ಕೇರಳ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಬಳಿಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಅವರ ಗೈರು ಹಾಜರಿ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಗಾಂಧಿ ಸಹೋದರ-ಸಹೋದರಿಯರನ್ನು “ರಾಜಕೀಯ ಪ್ರವಾಸಿಗರು” ಎಂದು ಟೀಕಿಸಿದೆ.

ಕಳೆದ ವಾರ ವಯನಾಡ್ ಜಿಲ್ಲೆಯ ಕಲ್ಲಾಡಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವು ಮಂದಿ ಮೃತಪಟ್ಟಿದ್ದು, ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಘಟನೆ ನಡೆದು ಒಂದು ವಾರ ಕಳೆದರೂ ಕ್ಷೇತ್ರದ ಸಂಸದೆಯಾಗಿರುವ ಪ್ರಿಯಾಂಕ ಗಾಂಧಿ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ. ಸದ್ಯ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸಂಸದ ಹಾಗೂ ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, 2019ರಲ್ಲಿ ಅಮೇಥಿಯಲ್ಲಿ ಸೋತ ಬಳಿಕ ವಯನಾಡ್ ಕ್ಷೇತ್ರವೇ ರಾಹುಲ್ ಗಾಂಧಿಗೆ ರಾಜಕೀಯ ಆಶ್ರಯ ನೀಡಿತ್ತು. 2024ರ ಲೋಕಸಭಾ ಚುನಾವಣೆಯ ಬಳಿಕ ರಾಹುಲ್ ಗಾಂಧಿ ಕ್ಷೇತ್ರವನ್ನು ಪ್ರಿಯಾಂಕ ಗಾಂಧಿಗೆ ಬಿಟ್ಟುಕೊಟ್ಟರು. ಕ್ಷೇತ್ರದ ಜನರು ಗಾಂಧಿ ಕುಟುಂಬವನ್ನು ಬೆಂಬಲಿಸಿದರೂ, ಸಂಕಷ್ಟದ ಸಮಯದಲ್ಲಿ ಇಬ್ಬರೂ ಜನರೊಂದಿಗೆ ನಿಲ್ಲುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ವೇಳೆ ವಿಐಪಿ ಭೇಟಿಗಳು ರಕ್ಷಣಾ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಯಾಗಬಹುದು ಎಂದು ಸಮರ್ಥಿಸಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಇಬ್ಬರೂ ನಾಯಕರು ವೈಯಕ್ತಿಕವಾಗಿ ಭೇಟಿ ನೀಡದಿದ್ದರೂ ಜಿಲ್ಲಾಡಳಿತ ಹಾಗೂ ಕೇರಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಈ ವಿಚಾರ ಕೇರಳ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Continue Reading

ಕ್ರೀಡೆ

Abhishek Sharma ಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್: AI ನಕಲಿ ವಿಡಿಯೋಗಳಿಗೆ ಬ್ರೇಕ್

Published

on

ನವದೆಹಲಿ: Abhishek Sharma ಅವರಿಗೆ ದೆಹಲಿ ಹೈಕೋರ್ಟ್‌ನಿಂದ ಮಹತ್ವದ ರಿಲೀಫ್ ಸಿಕ್ಕಿದೆ. ಅವರ ಅನುಮತಿಯಿಲ್ಲದೆ ಹೆಸರು, ಚಿತ್ರ ಹಾಗೂ ಮುಖವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳು ಮತ್ತು ಇ-ಕಾಮರ್ಸ್ ವೇದಿಕೆಗಳಲ್ಲಿ ನಡೆಸಲಾಗುತ್ತಿದ್ದ ವಾಣಿಜ್ಯ ಚಟುವಟಿಕೆಗಳು, AI ಮೂಲಕ ಸೃಷ್ಟಿಸಲಾದ ನಕಲಿ ವಿಷಯಗಳು ಹಾಗೂ ಅಶ್ಲೀಲ ಪ್ರಚಾರಗಳಿಗೆ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.

ಅಭಿಷೇಕ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅವರ ಒಪ್ಪಿಗೆಯಿಲ್ಲದೆ ಹೆಸರು, ಫೋಟೋ ಅಥವಾ ವ್ಯಕ್ತಿತ್ವವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು ಎಂದು ಆದೇಶಿಸಿದೆ. ಜೊತೆಗೆ ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್) ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳು ಹಾಗೂ ಇ-ಕಾಮರ್ಸ್ ತಾಣಗಳಲ್ಲಿ ಪ್ರಕಟವಾಗಿರುವ ಆಕ್ಷೇಪಾರ್ಹ ಲಿಂಕ್‌ಗಳು ಮತ್ತು ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ಸೂಚಿಸಿದೆ.

ಅರ್ಜಿಯ ಪ್ರಕಾರ, ಕೆಲವರು ಕೃತಕ ಬುದ್ಧಿಮತ್ತೆ (AI) ಬಳಸಿ ಅಭಿಷೇಕ್ ಶರ್ಮಾ ಅವರ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದರು. ಅವರ ಚಿತ್ರಗಳನ್ನು ಮಾರ್ಫ್ ಮಾಡಿ ಅಶ್ಲೀಲ ಹಾಗೂ ಸಮಾಜವಿರೋಧಿ ಬರಹಗಳೊಂದಿಗೆ ಪೋಸ್ಟ್ ಮಾಡಲಾಗುತ್ತಿತ್ತು. ಅಲ್ಲದೆ, ಅವರ ಅನುಮತಿಯಿಲ್ಲದೆ ಹೆಸರು ಮತ್ತು ಫೋಟೋ ಹೊಂದಿರುವ ಟಿ-ಶರ್ಟ್‌ಗಳು ಹಾಗೂ ಇತರ ಮರ್ಚಂಡೈಸ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಈ ಕುರಿತು ಕೋರ್ಟ್, ಒಬ್ಬ ವ್ಯಕ್ತಿಯ Personality Rights ಕಾನೂನಿನಡಿ ರಕ್ಷಿಸಲ್ಪಟ್ಟಿರುವುದರಿಂದ, ಅವರ ಅನುಮತಿಯಿಲ್ಲದೆ ಗುರುತು ಅಥವಾ ಖ್ಯಾತಿಯನ್ನು ದುರ್ಬಳಕೆ ಮಾಡುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿದೆ. ಇದೇ ರೀತಿಯ ಪ್ರಕರಣಗಳಲ್ಲಿ ಈ ಹಿಂದೆ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್, ಶ್ರೀ ಶ್ರೀ ರವಿಶಂಕರ್, ಸುಧೀರ್ ಚೌಧರಿ, ರಾಜ್ ಶಮಾನಿ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ದೆಹಲಿ ಹೈಕೋರ್ಟ್‌ನಿಂದ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ಮಧ್ಯಂತರ ಪರಿಹಾರ ಪಡೆದಿದ್ದರು.

Continue Reading

Trending