ಬೆಂಗಳೂರು
ಕಮಲದೋಳ್ ತೆನೆ ಸೇರಿರಲು : ರಿಸಲ್ಟ್ ನಂತರ ಏನಾಗುವುದೋ ಜೆಡಿಎಸ್ ಭವಿಷ್ಯ?
ಬೆಂಗಳೂರು: ಲೋಕಸಭಾ ಚುನಾವಣೆ ಈ ಬಾರಿ ಜೆಡಿಎಸ್ ಪಾಲಿಗೆ ಅತೀ ಮುಖ್ಯವಾದ ಚುನಾವಣೆ, ಕಳದೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು, ಆಗ ಜೆಡಿಎಸ್ ಸ್ಪರ್ಧಿಸಿದ್ದ ಮೂರು ಕ್ಷೇತ್ರಗಳಲ್ಲಿ ಹಾಸನದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿತ್ತು, ಜೊತೆಗೆ ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಐತಿಹಾಸಿಕ ಸೋಲು ಅನುಭವಿಸಬೇಕಾಯ್ತು,
ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಜೆಡಿಎಸ್ ಹೀನಾಯವಾಗಿ ಮುಖಭಂಗ ಅನುಭವಿಸಿ ಕೆಲವೇ ಕ್ಷೇತ್ರಗಳಲ್ಲಿ ಗೆದ್ದು, ಅಸ್ತಿತ್ವಕ್ಕಾಗಿ ಪರದಾಡುವಂತಾಯ್ತು, ನಂತರ ಜೆಡಿಎಸ್ ಕೈಗೊಂಡ ನಿರ್ಧಾರವೇ ಬಿಜೆಪಿಯೊಂದಿಗಿನ ಮೈತ್ರಿ, ಬಿಜೆಪಿ ಅದರ ವೈಚಾರಿಕತೆ ಹಾಗೂ ಪ್ರಧಾನಿ ಮೋದಿಯವರನ್ನು ವಾಚಾಮಗೋಚರ ಬೈಯ್ಯುತ್ತಿದ್ದ ಇದೇ ಜೆಡಿಎಸ್ ಅದೇ ಬಿಜೆಪಿಯ ಮನೆ ಬಾಗಿಲು ತಟ್ಟಿ ಸಣ್ಣದೊಂದು ಜಾಗ ಗಿಟ್ಟಿಸಿಕೊಂಡಿದೆ, ಇನ್ನು ಮುಂದೆ ಜೆಡಿಎಸ್ ಪಕ್ಷದ ಅಳಿವು ಉಳಿವನ್ನು ಬಿಜೆಪಿ ನಿರ್ಧರಿಸಲಿದೆ ಎಂಬ ಆರೋಪವು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವನ್ನೂ ಉಂಟುಮಾಡಿದೆ,
ಮೈತ್ರಿಯೋನೋ ಆಗಿದೆ, ಈ ಮೈತ್ರಿಯಿಂದ ಆದ ಲಾಭ ಚುನಾವಣಾ ಫಲಿತಾಂಶದ ನಂತರವಷ್ಟೇ ತಿಳಿಯಲಿದೆ, ಈ ಮೈತ್ರಿಗೆ ಕೈಜೋಡಿಸಿದ್ದ ನಿರ್ಧಾರದಿಂದ ಅಸಮಧಾನಗೊಂಡ ಹಲವು ಮುಖಂಡರು ಜೆಡಿಎಸ್ ನಿಂದ ಶಾಶ್ವತವಾಗಿ ದೂರಾದರು,
ಇದರ ನಡುವೆ ಜೆಡಿಎಸ್ ಪಾಲಿಗೆ ಅತಿದೊಡ್ಡ ಹೊಡೆತ ನೀಡಿದ್ದು ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳು, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿಗೆ ಪಾತ್ರವಾದರೆ, ಮಾಜಿ ಸಚಿವ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಬೇಕಾಯಿತು, ಇನ್ನು ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ವಿರುದ್ಧವೊ ಅಪಹರಣ ಆರೋಪ ಕೇಳಿಬಂದಿದ್ದು ಇವೆಲ್ಲವೊ ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಗಿದೆ,
ತಮ್ಮ ಭದ್ರಕೋಟಿ ಎನಿಸಿಕೊಂಡಿದ್ದ ಹಳೇ ಮೈಸೂರು ಭಾಗ, ಮಂಡ್ಯ ಹಾಸನ ಜಿಲ್ಲೆಗಳಲ್ಲಿಯೇ ಜೆಡಿಎಸ್ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಾ ಸಾಗಿರುವುದು ಜೆಡಿಎಸ್ ನಾಯಕರಲ್ಲೂ ಸಹ ಅತಂಕ ಮೂಡಿಸಿದೆ,
ಈ ಬಾರಿ ಸ್ಪರ್ಧಿಸಿದ ಮೂರು ಸೀಟ್ ಗೆದ್ದರೇ ಓಕೆ, ಒಂದು ವೇಳೆ ಸೋತರೆ ಬಿಜೆಪಿಯವರೂ ಕೂಡ ಜೆಡಿಎಸ್ ಪಕ್ಷವನ್ನು ಜೊತೆಗಿಟ್ಟುಕೊಳ್ಳಬೇಕೇ ಬೇಡವೇ ಎಂಬ ವಿಚಾರವನ್ನು ಗಂಭೀರವಾಗಿ ಪರಾಮರ್ಷೆ ಮಾಡುವುದಂತೂ ನಿಜ.
ಲೋಕಸಭಾ ಚುನಾಣೆಯ ಫಲಿತಾಂಶ ಜೆಡಿಸ್ ಅಸ್ತಿತ್ವವನ್ನು ನಿರ್ಧರಿಸಲಿದೆ ಎಂಬುದನ್ನು ಜೆಡಿಎಸ್‍ನವರು ಒಪ್ಪುವುದಿಲ್ಲವಾದರೂ ಇದು ಸತ್ಯ.
ದೇಶ
Grama Panchayat Election ಬಿಗ್ ಅಪ್‌ಡೇಟ್! ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಆದೇಶ
ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಕ್ರಿಯೆಗೆ ಅಧಿಕೃತವಾಗಿ ವೇಗ ಸಿಕ್ಕಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಲು ಆರಂಭಿಸಿವೆ.
2027ರ ಮಾರ್ಚ್ ಅಂತ್ಯದೊಳಗೆ ಅವಧಿ ಮುಕ್ತಾಯಗೊಳ್ಳಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಹೊಸದಾಗಿ ಪುನರ್ರಚನೆಯಾಗಿರುವ 42 ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಸೂಚಿಸಿದೆ.
ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳ ನಿಯೋಜನೆಗೆ ಹೊಸ ಮಾರ್ಗಸೂಚಿಯನ್ನೂ ರೂಪಿಸಲಾಗಿದೆ. ಇದರ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಗ್ರೂಪ್-ಬಿ ಅಧಿಕಾರಿ ಚುನಾವಣಾಧಿಕಾರಿಯಾಗಿ ನೇಮಕವಾಗಲಿದ್ದಾರೆ. ಇವರಿಗೆ ನೆರವಾಗಲು ಶಿರಸ್ತೇದಾರ್, ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ ಹುದ್ದೆಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜಿಸಲು ಸೂಚಿಸಲಾಗಿದೆ.
ಯಾವುದೇ ಅಧಿಕಾರಿಯನ್ನು ಅವರ ಸ್ವಂತ ಊರು ಅಥವಾ ತವರು ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ. ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಆಧರಿಸಿ ಅಧಿಕಾರಿಗಳ ನಿಯೋಜನೆಯ ಪ್ರಮಾಣವೂ ನಿಗದಿಯಾಗಿದೆ. 25 ಸದಸ್ಯ ಸ್ಥಾನಗಳವರೆಗೆ ಇರುವ ಪಂಚಾಯಿತಿಗಳಿಗೆ ಒಬ್ಬ ಚುನಾವಣಾಧಿಕಾರಿ ಹಾಗೂ ಒಬ್ಬ ಸಹಾಯಕ ಚುನಾವಣಾಧಿಕಾರಿ, 25ರಿಂದ 35 ಸ್ಥಾನಗಳಿರುವ ಪಂಚಾಯಿತಿಗಳಿಗೆ ಒಬ್ಬ ಚುನಾವಣಾಧಿಕಾರಿ ಮತ್ತು ಇಬ್ಬರು ಸಹಾಯಕರು, 35ಕ್ಕಿಂತ ಹೆಚ್ಚು ಸ್ಥಾನಗಳಿರುವ ದೊಡ್ಡ ಪಂಚಾಯಿತಿಗಳಿಗೆ ಇಬ್ಬರು ಚುನಾವಣಾಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗುತ್ತದೆ.
ಇದರ ಜೊತೆಗೆ, 2027ರ ಏಪ್ರಿಲ್ ನಂತರ ಅವಧಿ ಮುಕ್ತಾಯಗೊಳ್ಳಲಿರುವ 56 ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನೂ ಆಯೋಗ ಸುತ್ತೋಲೆಯೊಂದಿಗೆ ಲಗತ್ತಿಸಿದೆ. ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಅಪರಾಧ
ಬೆಂ-ಮೈ ಹೆದ್ದಾರಿ ಸೇಫ್ ಅಲ್ಲವೇ? ಮದ್ದೂರು ಫ್ಲೈಓವರ್‌ನಲ್ಲಿ ಕುಟುಂಬದ ಮೇಲೆ ರೌಡಿಗಳ ದಾಳಿ
ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರಸ್ತೆ ರೌಡಿಗಳ ಅಟ್ಟಹಾಸ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಓವರ್‌ಟೇಕ್ ವಿಚಾರಕ್ಕೆ ಆರಂಭವಾದ ಸಣ್ಣ ಮಾತಿನ ಚಕಮಕಿಯು ಇಡೀ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆಯಾಗಿ ಮಾರ್ಪಟ್ಟಿರುವ ಘಟನೆ ಮದ್ದೂರು ಫ್ಲೈಓವರ್‌ನಲ್ಲಿ ಜುಲೈ 5ರ ರಾತ್ರಿ ನಡೆದಿದೆ. ಘಟನೆಯ ಭಯಾನಕ ದೃಶ್ಯ ಹಿಂಬದಿಯ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು ಮೂಲದ ಸಾಗರ್ ಅವರು ತಮ್ಮ ಪತ್ನಿ, ತಾಯಿ ಹಾಗೂ ಮಕ್ಕಳೊಂದಿಗೆ ಮೈಸೂರಿನಿಂದ ಬೆಂಗಳೂರಿನತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಶ್ರೀರಂಗಪಟ್ಟಣದ ಸರ್ವಿಸ್ ರಸ್ತೆಯಲ್ಲಿ ಸಾಗುವ ವೇಳೆ ಓವರ್‌ಟೇಕ್ ವಿಚಾರಕ್ಕೆ ಮತ್ತೊಂದು ಕಾರಿನಲ್ಲಿದ್ದ ಕೆಲವರು ಸಾಗರ್ ಕುಟುಂಬದೊಂದಿಗೆ ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ಸಾಗರ್ ಅಲ್ಲಿಂದ ಮುಂದಕ್ಕೆ ತೆರಳಿದ್ದಾರೆ.
ಆದರೆ, ಅದಕ್ಕೆಲ್ಲ ಸುಮ್ಮನಾಗದ ಪುಂಡರ ಗುಂಪು ಎರಡು ಕಾರುಗಳಲ್ಲಿ ಸಾಗರ್ ಅವರ ವಾಹನವನ್ನು ಬೆನ್ನಟ್ಟಿ ಬಂದಿದೆ. ಮದ್ದೂರು ಫ್ಲೈಓವರ್ ತಲುಪುತ್ತಿದ್ದಂತೆ ಸಿನಿಮಾ ಶೈಲಿಯಲ್ಲಿ ಕಾರನ್ನು ಅಡ್ಡಗಟ್ಟಿ, ಸಾಗರ್ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ಆರೋಪಿಗಳು ಜಾಕ್ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವೇಳೆ ಸಾಗರ್ ಅವರ ಪತ್ನಿ ಮತ್ತು ತಾಯಿ ಕೈಮುಗಿದು ಬೇಡಿಕೊಂಡರೂ ಆರೋಪಿಗಳು ಹಲ್ಲೆ ನಿಲ್ಲಿಸಲಿಲ್ಲ. ತಂದೆಯನ್ನು ರಕ್ಷಿಸಲು ಬಂದ ಎಂಟು ವರ್ಷದ ಮಗುವಿನ ಕೈಯನ್ನೂ ಆರೋಪಿಗಳು ಕ್ರೂರವಾಗಿ ತಿರುಚಿದ್ದಾರೆ ಎನ್ನಲಾಗಿದೆ. ಈ ಘಟನೆ ಕುಟುಂಬದ ಸದಸ್ಯರನ್ನು ತೀವ್ರ ಆತಂಕಕ್ಕೀಡು ಮಾಡಿದೆ.
ಮಾಹಿತಿ ತಿಳಿದ ತಕ್ಷಣ ಮದ್ದೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ, ಗಾಯಾಳುಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರಸ್ತೆ ರೇಜ್, ಗುಂಡಿನ ದಾಳಿ ಹಾಗೂ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹೆದ್ದಾರಿಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ದೇಶ
GBA ELECTION : ಮಹಿಳೆಯರಿಗೆ ಹೆಚ್ಚಿನ ಟಿಕೆಟ್: GBA ಚುನಾವಣೆಗೂ ಮುನ್ನ ಕುಮಾರಸ್ವಾಮಿ ದೊಡ್ಡ ಘೋಷಣೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ (GBA) ಚುನಾವಣೆಯ ಸಿದ್ಧತೆಗಳು ರಾಜಕೀಯ ವಲಯದಲ್ಲಿ ಜೋರಾಗುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ತಮ್ಮ ವಾರ್ಡ್‌ಗಳಲ್ಲಿ ಸಂಘಟನೆ ಬಲಪಡಿಸುವ ಕೆಲಸ ಆರಂಭಿಸಬೇಕು ಎಂದು ಸೂಚಿಸಿದ್ದಾರೆ.
ನಗರದ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ ಇದುವರೆಗೆ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ. ಆದರೆ ಇನ್ನು ಮುಂದೆ ಅದಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಚುನಾವಣೆಗೆ ಈಗಿನಿಂದಲೇ ಸಂಪೂರ್ಣ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಟಿಕೆಟ್ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದ ಅವರು, “ಸುಮ್ಮನೆ ಟಿಕೆಟ್ ಕೇಳಿದರೆ ಸಿಗುವುದಿಲ್ಲ. ನಿಮ್ಮ ವಾರ್ಡ್‌ನಲ್ಲಿ ಪಕ್ಷದ ಬಲವನ್ನು ಹೆಚ್ಚಿಸಿ, ಜೆಡಿಎಸ್ ಯೋಜನೆಗಳು ಪ್ರತಿಯೊಬ್ಬರ ಮನೆ ತಲುಪುವಂತೆ ಕಾರ್ಯನಿರ್ವಹಿಸಿ” ಎಂದು ಸಲಹೆ ನೀಡಿದರು.
ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆಶಯದಂತೆ ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಹೆಚ್ಚಿನ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಉದ್ದೇಶವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಈ ಬಾರಿ ಗ್ರೇಟರ್ ಬೆಂಗಳೂರು ಆಡಳಿತದ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಇದೇ ವೇಳೆ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಅಕ್ರಮ ಮತದಾರರ ಸೇರ್ಪಡೆ ನಡೆಯದಂತೆ ಕಾರ್ಯಕರ್ತರು ಎಚ್ಚರಿಕೆಯಿಂದ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಸೂಚನೆ: ಮೇಲಿನ ಆರೋಪಗಳು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಭೆಯಲ್ಲಿ ಮಾಡಿದ ಹೇಳಿಕೆಗಳನ್ನು ಆಧರಿಸಿವೆ. ಈ ಕುರಿತು ಸಂಬಂಧಿತ ಅಧಿಕಾರಿಗಳು ಅಥವಾ ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆ ಈ ವರದಿಯಲ್ಲಿ ಲಭ್ಯವಿಲ್ಲ.
-
ದೇಶ22 hours agoಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತೆಹ್ರಾನ್ ಬೀದಿಗಳಲ್ಲಿ ಲಕ್ಷಾಂತರ ಜನರ ಅಂತಿಮ ನಮನ
-
ದೇಶ23 hours ago‘ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ SIR’ – ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ-ಜೆಡಿಎಸ್
-
ದೇಶ23 hours agoಚೀನಾ-ಪಾಕ್ ಜಲಾಂತರ್ಗಾಮಿಗಳಿಗೆ ಭಾರತದ ಹೈಟೆಕ್ ಬ್ರಹ್ಮಾಸ್ತ್ರ! ಸಮುದ್ರದಾಳದಲ್ಲಿ ‘ಸೀಕ್ರೆಟ್ ಸೆನ್ಸಾರ್ ನೆಟ್ವರ್ಕ್’
-
ದೇಶ2 hours agoPetrol Diesel Price: ಜುಲೈ 20ರೊಳಗೆ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ? ಗ್ರಾಹಕರಿಗೆ ಸಿಗುತ್ತಾ ಸಿಹಿಸುದ್ದಿ
-
ಕ್ರೀಡೆ3 hours agoಸಂಜು ಸ್ಯಾಮ್ಸನ್ ಕೈಬಿಟ್ಟಿದ್ದೇಕೆ? ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಅಶ್ವಿನ್ ಸ್ಫೋಟಕ ಹೇಳಿಕೆ
-
ದೇಶ3 hours agoಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಕರ್ನಾಟಕ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದ ಬೆಳವಣಿಗೆ
-
ದೇಶ3 hours agoಟೇಲರ್ ಸ್ವಿಫ್ಟ್-ಟ್ರೇವಿಸ್ ಕೆಲ್ಸಿ ಮದುವೆ: ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆದ ಶತಮಾನದ ಸೆಲೆಬ್ರಿಟಿ ಮದುವೆಯ ಒಳಗಿನ ಕಥೆ
-
ದೇಶ3 hours ago‘ಆ್ಯಕ್ಟ್ ಈಸ್ಟ್’ ನೀತಿಗೆ ಹೊಸ ಶಕ್ತಿ: ಇಂಡೋನೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸದಲ್ಲಿ ಪ್ರಧಾನಿ ಮೋದಿ
