ದೇಶ
Modi 3.0 Cabinet: 81 ಮಂದಿಗೆ ಸಿಗುತ್ತಾ ಕೇಂದ್ರ ಸಚಿವ ಸ್ಥಾನ; ಕರ್ನಾಟಕಕ್ಕೆ ಎಷ್ಟು? ಏನಿದರ ಲೆಕ್ಕಾಚಾರ?
ನವದೆಹಲಿ: ಸತತ 3ನೇ ಬಾರಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಲು ನರೇಂದ್ರ ಮೋದಿ ಸಜ್ಜಾಗುತ್ತಿದ್ದಾರೆ. ಇದೇ ಭಾನುವಾರ ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಮೋದಿ ಪದಗ್ರಹಣದ ಜೊತೆಗೆ ಎಷ್ಟು ಮಂದಿಗೆ ಕೇಂದ್ರ ಸಚಿವರಾಗೋ ಅವಕಾಶ ಸಿಗುತ್ತೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಒಟ್ಟು 81 ಮಂದಿ ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ. ಕಳೆದ ಬಾರಿ ನರೇಂದ್ರ ಮೋದಿ ಸರ್ಕಾರದಲ್ಲಿ 29 ಕ್ಯಾಬಿನೆಟ್ ಮಂತ್ರಿಗಳು, 3 ಸ್ವತಂತ್ರ ಖಾತೆ ಸಚಿವರು, 47 ಮಂದಿ ರಾಜ್ಯ ಖಾತೆ ಸಚಿವರು ಸೇರಿ ಒಟ್ಟು 79 ಮಂದಿ ಇದ್ದರು. ಕ್ಯಾಬಿನೆಟ್, ಸ್ವತಂತ್ರ ಖಾತೆ, ರಾಜ್ಯ ಖಾತೆ ಸೇರಿದಂತೆ 81 ಮಂದಿ ಸಂಸದರಿಗೆ ಈಗ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನದ ಅವಕಾಶ ಸಿಗಲಿದೆ.
ಉತ್ತರ ಪ್ರದೇಶಕ್ಕೆ ಸಿಂಹಪಾಲು!
81 ಸಚಿವ ಸ್ಥಾನದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ ನೀಡಬೇಕು ಅನ್ನೋದು ಪ್ರಧಾನಿ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳಿರುವ ರಾಜ್ಯಕ್ಕೆ ಹೆಚ್ಚಿನ ಕೇಂದ್ರ ಸಚಿವ ಸ್ಥಾನ ನೀಡಲಾಗುತ್ತೆ. 80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಿಂದ ಬಿಜೆಪಿಯ 33 ಮಂದಿ ಸಂಸತ್ತಿಗೆ ಆಯ್ಕೆ ಆಗಿದ್ದಾರೆ. ಹೀಗಾಗಿ ಉತ್ತರ ಪ್ರದೇಶಕ್ಕೆ ಆರೇಳು ಸಚಿವ ಸ್ಥಾನ ಸಿಗಬಹುದು.
ಉತ್ತರಪ್ರದೇಶ ಹೊರೆತುಪಡಿಸಿದರೆ ಮುಂದಿನ ದಿನಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಹೆಚ್ಚಿನ ಸಚಿವ ಸ್ಥಾನ ನೀಡಲಾಗುತ್ತೆ. ಈ ವರ್ಷ ಅಂತ್ಯಕ್ಕೆ ಮಹಾರಾಷ್ಟ್ರದಲ್ಲಿ ಅಸೆಂಬ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸ್ಥಾನ ನೀಡುವ ಮನಸು ಮಾಡಬಹುದು. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಎನ್‌ಡಿಎ ಗೆದ್ದಿರೋದೇ ಕೇವಲ 17 ಕ್ಷೇತ್ರಗಳು ಮಾತ್ರ. ಹೀಗಾಗಿ ಮಹಾರಾಷ್ಟ್ರಕ್ಕೂ 5-6 ಸಚಿವ ಸ್ಥಾನ ಮೈತ್ರಿಯ ಕಾರಣದಿಂದ ಸಿಗಬಹುದು. ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ರಾಜ್ಯಸಭಾ ಸದಸ್ಯರಿಗೆ ಸಚಿವ ಸ್ಥಾನ ನೀಡಬಹುದು.
ಬಿಜೆಪಿ ಮಿತ್ರಪಕ್ಷ ಟಿಡಿಪಿ, ಜೆಡಿಯು, ಶಿಂಧೆ ಶಿವಸೇನಾ, ಎಲ್‌ಜೆಪಿ ಪಕ್ಷಗಳ ಬೇಡಿಕೆ ಈಡೇರಿಸುವುದು ಎನ್‌ಡಿಎಗೆ ಅನಿವಾರ್ಯವಾಗಿದೆ. ಕರ್ನಾಟಕದಿಂದ 19 ಮಂದಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ಜಾತಿ, ಪ್ರದೇಶವಾರು ಲೆಕ್ಕಾಚಾರ ಹಾಕಿ ಮೂರರಿಂದ ನಾಲ್ಕು ಸಚಿವ ಸ್ಥಾನ ಕರ್ನಾಟಕಕ್ಕೂ ಸಿಗುವ ಸಾಧ್ಯತೆ ಇದೆ.
ಚುನಾವಣೆ
“ಟ್ರಂಪ್ ಅನುಮತಿ ಇಲ್ಲದೆ ತೈಲ ಖರೀದಿ ಸಾಧ್ಯವಿಲ್ಲ”: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಅಸ್ಸಾಂ ರಾಜ್ಯದ ಗೋಲಾಘಾಟ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಉಲ್ಲೇಖಿಸಿದ ಅವರು, “ಟ್ರಂಪ್ ಅನುಮತಿ ಇಲ್ಲದೆ ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.
ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಟ್ರಂಪ್ ಬಹಿರಂಗವಾಗಿ ಮೋದಿ ಬಗ್ಗೆ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿ ಭಾರತದ ಇಂಧನ ಭದ್ರತೆ ಮತ್ತು ಪ್ರಮುಖ ಮಾಹಿತಿಯನ್ನು ಅಮೆರಿಕದ ಕೈಗೆ ಒಪ್ಪಿಸಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಅವರು ಎಪ್ಸ್ಟೀನ್ ಫೈಲ್ ಕುರಿತು ಉಲ್ಲೇಖಿಸಿ, ಟ್ರಂಪ್ ಬಳಿ ಮೋದಿ ಬಗ್ಗೆ ಮಾಹಿತಿಯಿದೆ ಎಂದು ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ, ಉದ್ಯಮಿ ಅದಾನಿ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾಗಿರುವುದನ್ನೂ ಅವರು ಪ್ರಸ್ತಾಪಿಸಿದರು.
ಈ ನಡುವೆ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆ ಸನ್ನಾಹಗಳು ಜೋರಾಗಿದ್ದು, ಅಸ್ಸಾಂ ಸೇರಿದಂತೆ ಹಲವೆಡೆ ರಾಜಕೀಯ ತಾಪಮಾನ ಏರಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಪ್ರಚಾರ ತೀವ್ರಗೊಳಿಸಿದ್ದು, ಬಿಜೆಪಿ ಕೂಡ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ತೀವ್ರ ಪ್ರಚಾರ ನಡೆಸುತ್ತಿದೆ.
ಒಟ್ಟಿನಲ್ಲಿ, ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ-ಕಾಂಗ್ರೆಸ್ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ನೀಡಿದೆ.
ಕ್ರೀಡೆ
ಐಪಿಎಲ್ ಟಿಕೆಟ್ ದುರ್ಬಳಕೆ: ಶಾಸಕರ ಪಾಸ್ ಸ್ನೇಹಿತರ ಕೈಗೆ!
ಬೆಂಗಳೂರುದಲ್ಲಿ ಐಪಿಎಲ್ ಕ್ರೇಜ್ ಗರಿಷ್ಠ ಮಟ್ಟಕ್ಕೆ ಏರಿರುವ ನಡುವೆಯೇ, ಶಾಸಕರಿಗೆ ನೀಡಲಾದ ಉಚಿತ ಟಿಕೆಟ್ ಪಾಸ್‌ಗಳ ದುರ್ಬಳಕೆಯ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗಿದೆ. Indian Premier League ಪಂದ್ಯಗಳಿಗೆ ಸಂಬಂಧಿಸಿದ ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೆಲವು ಶಾಸಕರು ತಮ್ಮ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ Karnataka State Cricket Association ವಿಶೇಷ ಅಕ್ರೆಡೆಷನ್ ಕಾರ್ಡ್ ಮಾದರಿಯ ಪಾಸ್‌ಗಳನ್ನು ವಿತರಿಸಿತ್ತು.
ಆದರೆ, ಈ ಪಾಸ್‌ಗಳು ಈಗ ಶಾಸಕರ ಕುಟುಂಬದವರಿಗಷ್ಟೇ ಸೀಮಿತವಾಗದೆ, ಅವರ ಮಕ್ಕಳ ಸ್ನೇಹಿತರ ಕೈಗೆ ಸೇರಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ, ಶಾಸಕರ ಕುಟುಂಬದ ಹೆಸರಿನ ಪಾಸ್ ಹಿಡಿದು ಬಂದಿದ್ದ ಕೆಲ ಯುವಕರ ಮೇಲೆ ಅನುಮಾನ ಮೂಡಿದೆ.
ಪರಿಶೀಲನೆ ವೇಳೆ ಯುವಕರು ತಡಬಡಾಯಿಸಿದ್ದು, ಕೊನೆಯಲ್ಲಿ ತಾವು ಶಾಸಕರ ಮಗನ ಸ್ನೇಹಿತರು ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಅವರನ್ನು ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಈ ಘಟನೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಜನಪ್ರತಿನಿಧಿಗಳಿಗಾಗಿ ನೀಡಲಾದ ಸೌಲಭ್ಯವನ್ನು ಅನರ್ಹರು ಬಳಸುವುದು ಸರಿಯೇ? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಸಾಮಾನ್ಯ ಜನರು ಟಿಕೆಟ್‌ಗಾಗಿ ಪರದಾಡುತ್ತಿರುವಾಗ, ಉಚಿತ ಪಾಸ್‌ಗಳು ದುರ್ಬಳಕೆಯಾಗುತ್ತಿರುವುದು ಜನರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ KSCA ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.
ದೇಶ
ಎನ್‌ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್
ಮುಂಬೈನಲ್ಲಿ ನಡೆದ NMACC third anniversary ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ತಮ್ಮ ವೈಭವಶಾಲಿ ಸೀರೆ ಲುಕ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕತೆಗೆ ಪ್ರತೀಕವಾಗಿರುವ ಅವರ ಶೈಲಿ ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ವಿಶೇಷ ಕಾರ್ಯಕ್ರಮಕ್ಕೆ ಪತಿ ಮುಕೇಶ್ ಅಂಬಾನಿ ಅವರೊಂದಿಗೆ ಆಗಮಿಸಿದ ನೀತಾ, ಐವರಿ-ಗೋಲ್ಡ್ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಹೊನ್ನಿನ ನೂಲುಗಳಿಂದ ನೇಯ್ದ ಈ ಸೀರೆಗೆ ಮರೂನ್ ಕೆಂಪು ಅಂಚು ಹೆಚ್ಚುವರಿ ಶೋಭೆ ನೀಡಿತು.
ಈ ಸೀರೆ ಕೈಮಗ್ಗದಲ್ಲಿ ಪರಿಣಿತ ಕಲಾವಿದ ಆರ್. ವರಧನ್ ಅವರ ಕೈಚಳಕದಿಂದ ಮೂಡಿಬಂದಿದ್ದು, ಇದನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳು ಸಮಯ ತೆಗೆದುಕೊಂಡಿದೆ. ಜರಿ ಕಸೂತಿ ಮತ್ತು ನಯವಾದ ಮೇಲ್ಮೈ ಈ ಸೀರೆಗೆ ವಿಶೇಷ ಮೌಲ್ಯ ನೀಡಿದೆ.
ಆಭರಣಗಳ ವಿಷಯದಲ್ಲಿ ನೀತಾ ಅಂಬಾನಿ ಬರ್ಮಾ ರೂಬಿ ಅಲಂಕೃತ ಚಿನ್ನದ ಮಾವಿನ ಸರ ಹಾಗೂ ಬಸ್ರಾ ಮುತ್ತಿನ ಕರ್ಣಾಭರಣ ಧರಿಸಿ ಸಾಂಪ್ರದಾಯಿಕತೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ.
ಕಾರ್ಯಕ್ರಮದ ವೇಳೆ ಅವರು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಒತ್ತಿ ಹೇಳಿ, “ಸಂಖ್ಯೆ 3”ರ ಸಾಂಸ್ಕೃತಿಕ ಅರ್ಥವನ್ನು ತ್ರಿಮೂರ್ತಿ, ತ್ರಿದೇವಿ ಮತ್ತು ತ್ರಿವೇಣಿ ಸಂಗಮದ ಉದಾಹರಣೆಗಳ ಮೂಲಕ ವಿವರಿಸಿದರು.
ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಭಾರತೀಯ ಹಸ್ತಕುಶಲತೆ ಮತ್ತು ಕಾಂಜೀವರಂ ಸೀರೆಗಳಿಗೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತವಾಗಿದೆ.
-
ದೇಶ1 hour ago“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್ ಟಾಂಗ್, ದಾವಣಗೆರೆ ರಾಜಕೀಯ ಕುತೂಹಲ
-
ದೇಶ1 hour agoಕಾಗದ-ಇಂಕ್ ಬೆಲೆ ಏರಿಕೆ: ಪ್ರಿಂಟಿಂಗ್ ಪ್ರೆಸ್ಗಳಿಗೆ ಶಾಕ್
-
ದೇಶ42 minutes agoಎನ್‌ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್
-
ದೇಶ1 hour agoIndian Railways: ರೈಲಲ್ಲೇ ಮದುವೆ ಸಂಭ್ರಮ: Indian Railwaysನಲ್ಲಿ ಹೊಸ ಟ್ರೆಂಡ್!
-
ದೇಶ1 hour ago‘I Love My Daughter’ ಟೀ ಶರ್ಟ್ನಲ್ಲಿ ಸಂಭ್ರಮ: ವಿಚ್ಛೇದನಕ್ಕೆ ಹೊಸ ಅರ್ಥ ನೀಡಿದ ಕುಟುಂಬ
-
ದೇಶ1 hour agoಟ್ರಂಪ್ ದೇಶದಲ್ಲಿ ಭಾರತೀಯರ ಸದ್ದು: ಮೇಯರ್ ರೇಸ್ನಲ್ಲಿ ತಮಿಳುನಾಡಿನ ಕುವರಿ
-
ಚುನಾವಣೆ4 minutes ago“ಟ್ರಂಪ್ ಅನುಮತಿ ಇಲ್ಲದೆ ತೈಲ ಖರೀದಿ ಸಾಧ್ಯವಿಲ್ಲ”: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
-
ಕ್ರೀಡೆ28 minutes agoಐಪಿಎಲ್ ಟಿಕೆಟ್ ದುರ್ಬಳಕೆ: ಶಾಸಕರ ಪಾಸ್ ಸ್ನೇಹಿತರ ಕೈಗೆ!
