ಅಪರಾಧ
ನಟ ದರ್ಶನ್ಗೆ ಸಾಲು ಸಾಲು ಸಂಕಷ್ಟ: ರಾಜಕಾಲುವೆ ಒತ್ತುವರಿ ಕೇಸ್ಗೆ ಮರುಜೀವ, ತೂಗುದೀಪ ನಿವಾಸಕ್ಕೂ ಸಂಚಕಾರ!
ಬೆಂಗಳೂರು: ಹಿಂಸೆ ಮತ್ತು ಕೊಲೆ ಪ್ರಕರಣದಲ್ಲಷ್ಟೇ ನಟ ದರ್ಶನ್ ಅವರಿಗೆ ಸಂಕಷ್ಟ ಎದುರಾಗಿಲ್ಲ ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಕೇಸ್ ಹಾಗೂ ರಾಜಕಾಲುವೆ ಒತ್ತುವರಿ ಪ್ರಕರಣದಲ್ಲೂ ಸಂಕಷ್ಟ ಎದುರಾಗಿದೆ.
ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ್ದ ಪ್ರಕರಣದಲ್ಲಿ ನಟ ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಅವರಿಗೂ ಕೂಡ ಸಂಕಷ್ಟ ಎದುರಾಗಿದೆ.
ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಕೇಸ್ಗೆ ಸಂಬಂಧಿಸಿದ್ದಂತೆ ಎಫ್ಐಆಪ್ ದಾಖಲಾಗಿ, ಅಧಿಕಾರಿಗಳು ನೋಟಿಸ್ ಕೂಡ ನೀಡಿದ್ದರು. ಆದರೆ, ನಟ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ.
ಒಂದಲ್ಲಾ ಎರಡಲ್ಲಾ ಒಟ್ಟು ಐದು ನೋಟಿಸ್ ನೀಡಿದ್ದರೂ ನಟ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಈ ಕೇಸ್ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ A1, ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ A2 ಹಾಗೂ ನಟ ದರ್ಶನ್ A3 ಸ್ಥಾನದಲ್ಲಿದ್ದಾರೆ. ನಟ ದರ್ಶನ್ ತೋಟವು ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಇದೆ. ಈ ಪ್ರಕರಣದಲ್ಲಿ ದರ್ಶನ್ರನ್ನು ಬಂಧಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ನಿಯಮಗಳ ಪ್ರಕಾರ ಬಾರ್ ಹೆಡೆಡ್ ಗೂಸ್ ಸಾಕುವುದು ಕಾನೂನು ಬಾಹಿರವಾಗಿದೆ. ಆದರೆ, ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ್ದರಿಂದ ನಟ ದರ್ಶನ್ನನ್ನು ಬಂಧನಕ್ಕೊಳಪಡಿಸಬೇಕಿತ್ತು. ಆದರೆ, ಸೆಲೆಬ್ರಿಟಿ ಆಗಿದ್ದರಿಂದ ವಿಚಾರಣೆಗೆ ಅವಕಾಶ ನೀಡಲಾಗಿತ್ತು. ನಟ ದರ್ಶನ್ ತಲೆಮರೆಸಿಕೊಳ್ಳದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಬಲವಂತವಾಗಿ ಬಂಧಿಸಿರಲಿಲ್ಲ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಕೇಸ್ ಅನ್ನು ಚುರುಕುಗೊಳಿದೆ. ಜೊತೆಗೆ ಚಾರ್ಜ್ ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ರಾಜಾಕಾಲುವೆ ಒತ್ತುವರಿ ಕೇಸ್ ಕೂಡ ಮರುಜೀವಕೊಂಡಿದ್ದು, ಅಕ್ರಮವಾಗಿ ರಾಜಕಾಲುವೆ ಮೇಲೆ ನಿರ್ಮಿಸಿರುವ ಬಂಗಲೆಗೂ ಸಂಚಕಾರ ಬಂದಿರುವ ಹಾಗಿದೆ.
ಬೆಂಗಳೂರಿನಲ್ಲಿ 2016ರ ಬೃಹತ್ ಮಳೆಗೆ ನೀರು ಬಂದು ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾದಾಗ ರಾಜ ಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಂದಿನ ಸರಕಾರ ಮತ್ತು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ತೀರ್ಮಾನಿಸಿದ್ದವು.
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಲ್ಲಿ ರಾಜ ಕಾಲುವೆ ಮೇಲೆ ಕಟ್ಟಲಾಗಿರುವ ದರ್ಶನ್ ಅವರ ತೂಗುದೀಪ ನಿವಾಸ, ಶಾಸಕ, ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್ ಎಸ್ ಆಸ್ಪತ್ರೆ ಸೇರಿಂದತೆ 67 ಕಟ್ಟಡಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ, ಹಣ ಮತ್ತು ಅಧಿಕಾರದ ಪ್ರಭಾವದಿಂದಾಗಿ ಇವರೆಲ್ಲರೂ ತಮ್ಮ ತಮ್ಮ ಮನೆಗಳನ್ನು ಉಳಿಸಿಕೊಂಡಿದ್ದರು. ಕಟ್ಟಡಗಳನ್ನು ಕೆಡವದಂತೆ ತಡೆಯಾಜ್ಞೆ ತರಲು ಇವರಿಗೆ ಸರ್ಕಾರವೇ ಪರೋಕ್ಷವಾಗಿ ನೆರವಾಗಿತ್ತು. ತಡೆಯಾಜ್ಞೆ ತಂದು 8 ವರ್ಷಗಳಾಗಿದ್ದು, ಇದುವರೆಗೂ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.
ಇದೀಗ ಬಿಬಿಎಂಪಿ ದರ್ಶನ್ ಸೇರಿದಂತೆ ಅನೇಕ ಮಂದಿ ಹೈಕೋರ್ಟ್ ನಿಂದ ತಂದಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಸರ್ಕಾರ ಮುಂದಾಗಿದೆ. ಇದುವರೆಗೂ ತಡೆಯಾಜ್ಞೆ ನೀಡಿದ್ದ ಅವಧಿ ಎಷ್ಟು ಎಂದು ಯಾರಿಗೂ ತಿಳಿದಿರಲಿಲ್ಲ. ಈಗ ಮತ್ತೆ ಪರಿಶೀಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಈ ಕಟ್ಟಡಗಳನ್ನು ಧ್ವಂಸಗೊಳಿಸಲು ಬಿಬಿಎಂಪಿ ಪ್ರಯತ್ನ ನಡೆಸಲಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಪ್ರಾಥಮಿಕ ಕಾಲುವೆ, ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಕಟ್ಟಡಗಳ ಪಟ್ಟಿ ಮಾಡಿಕೊಂಡಿತ್ತು. ಸರಕಾರದ ಭೂ ದಾಖಲೆಗಳ ಪ್ರಕಾರ ಆರ್ ಆರ್ ನಗರದ ದರ್ಶನ್ ಅವರ ನಿವಾಸ ಪ್ರಾಥಮಿಕ ಕಾಲುವೆಯ ಬಫರ್ ಝೋನ್ ಮೇಲೆ ನಿರ್ಮಿಸಿರುವುದು ಪತ್ತೆಯಾಗಿತ್ತು.
ಐಡಿಯಲ್ ಹೋಮ್ಸ್, ದರ್ಶನ್, ಶಾಮನೂರು ಅವರ ಆಸ್ಪತ್ರೆ ಸೇರಿದಂತೆ 67 ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಸರ್ಕಾರ ನೋಟಿಸ್ ನೀಡುತ್ತಿದ್ದಂತೆ ದರ್ಶನ್ ಮತ್ತಿತರರು ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ನಂತರ 2016 ಅಕ್ಟೋಬರ್ ನಲ್ಲಿ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು.
ಅಲ್ಲಿಗೆ ಮಳೆಗಾಲವೂ ಮುಗಿದಿತ್ತು. ಸರಕಾರ ಮತ್ತು ಸಾರ್ವಜನಿಕರೆಲ್ಲರೂ ಈ ವಿಷಯವನ್ನು ಮರೆತೇ ಬಿಟ್ಟಿದ್ದರು. ಆದರೆ, ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಇದೇ ರೀತಿ ನಿರ್ಮಿಸಲಾಗಿದ್ದ ಬಡ ಮಧ್ಯಮ ವರ್ಗದ ಜನರ ಮನೆಗಳನ್ನು ನಿರ್ದಾಕ್ಷಿಣಾಗಿ ಕೆಡವಲಾಗಿತ್ತು. ಸರ್ಕಾರದ ಈ ಧೋರಣೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ನಂತರದ ವರ್ಷಗಳಲ್ಲಿ ಅತಿಯಾದ ಮಳೆಯೂ ಸುರಿಯಲಿಲ್ಲ. ಕೆಲವು ವರ್ಷ ಬರಗಾಲ ಆವರಿಸಿತ್ತು. ಹಾಗಾಗಿ ಇವರೆಲ್ಲರೂ ಬಚಾವ್ ಆಗಿದ್ದರು.
ಅಪರಾಧ
ಹಸಿ–ಒಣ ಕಸ ಬೇರ್ಪಡಿಸಲು ಸೂಚನೆ: ದಾವಣಗೆರೆಯಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ
ದಾವಣಗೆರೆ: ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ನೀಡಲು ತಿಳಿಸಿದ್ದ ಕಾರಣಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮೆಹಬೂಬ್ ನಗರದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೊಳಗಾದವರು ಕರಿಬಸಪ್ಪ ಎಂಬ ಪೌರ ಕಾರ್ಮಿಕ ಹಾಗೂ ವಾಹನ ಚಾಲಕ ಎಂದು ತಿಳಿದುಬಂದಿದೆ. ಪ್ರತಿದಿನ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮಾಡುವ ವೇಳೆ ಸ್ಥಳೀಯ ನಿವಾಸಿಯೊಬ್ಬರೊಂದಿಗೆ ವಾಗ್ವಾದ ಉಂಟಾಗಿ, ಅದು ಹಲ್ಲೆಗೆ ತಿರುಗಿದೆ.
ಘಟನೆ ಹೇಗೆ ನಡೆದಿದೆ?
ಪೌರ ಕಾರ್ಮಿಕರು ಬೆಳಗ್ಗೆ ಕಸ ಸಂಗ್ರಹಣೆಗೆ ಮೆಹಬೂಬ್ ನಗರಕ್ಕೆ ತೆರಳಿದ್ದರು. ಈ ವೇಳೆ ಒಬ್ಬ ನಿವಾಸಿ ಹಸಿ ಕಸ ಮತ್ತು ಒಣ ಕಸವನ್ನು ಒಂದೇ ಬಕೆಟ್ನಲ್ಲಿ ನೀಡಿದ್ದಾನೆ. ಜೊತೆಗೆ ಮಗುವಿನ ಡೈಪರ್ ಕೂಡ ಸೇರಿಸಿದ್ದಾನೆ.
“ಡೈಪರ್ ಅನ್ನು ಪ್ರತ್ಯೇಕವಾಗಿ ಕೊಡಿ” ಎಂದು ಪೌರ ಕಾರ್ಮಿಕರು ತಿಳಿಸಿದಾಗ ಮಾತಿನ ಚಕಮಕಿ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಸ್ಥಳೀಯರು ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಠಾಣೆ ಎದುರು ಪ್ರತಿಭಟನೆ
ಘಟನೆ ಖಂಡಿಸಿ ಪೌರ ಕಾರ್ಮಿಕರು ಮತ್ತು ಕಸ ಸಂಗ್ರಹಿಸುವ ವಾಹನ ಚಾಲಕರು Azad Nagar Police Station ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
“ನಮ್ಮ ಮೇಲೆ ಪದೇಪದೇ ಹಲ್ಲೆ ನಡೆಯುತ್ತಿದೆ. ಕೆಲಸ ಮಾಡಲು ಭಯವಾಗುತ್ತಿದೆ. ನಮಗೆ ಭದ್ರತೆ ಒದಗಿಸಬೇಕು” ಎಂದು ಕಾರ್ಮಿಕರು ಆಗ್ರಹಿಸಿದರು.
ಮೆಹಬೂಬ್ ನಗರ, ಅಜಾದ್ ನಗರ, ಶಿವನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಕೆಲಸ ಮಾಡಲು ಆತಂಕವಿದೆ ಎಂದು ತಿಳಿಸಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಪರಾಧ
KANPUR ಲ್ಯಾಂಬೋರ್ಗಿನಿ ಅಪಘಾತ: ಕೆಕೆ ಮಿಶ್ರಾ ಪುತ್ರ ಶಿವಂ ಬಂಧನ
ಲಕ್ನೋ: ಕಾನ್ಪುರದಲ್ಲಿ ಇತ್ತೀಚೆಗೆ ನಡೆದ ಲ್ಯಾಂಬೋರ್ಗಿನಿ (Lamborghini Revuelto) ಕಾರು ಅಪಘಾತ ಪ್ರಕರಣದಲ್ಲಿ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಪುರದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ರೆವೆಲ್ಟೊ ಕಾರು ಪಾದಚಾರಿಗಳು ಹಾಗೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಿವಂ ಮಿಶ್ರಾ ಕುಡಿದ ಮತ್ತಿನಲ್ಲಿ ಅತಿ ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.
ವೇಗವಾಗಿ ಬಂದ ಕಾರು ಮೊದಲು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು, ಬಳಿಕ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ಗೆ ಗುದ್ದಿತ್ತು. ಬೈಕ್ ಕಾರಿನ ಕೆಳಗೆ ಸಿಲುಕಿ ಕೆಲ ಅಂತರ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತ್ತು. ಗಾಯಗೊಂಡವರಲ್ಲಿ ತೌಫಿಕ್ ಅಹ್ಮದ್ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಇತರರಿಗೆ ಮೂಳೆ ಮುರಿತ ಉಂಟಾಗಿದೆ.
ಪ್ರಾರಂಭದಲ್ಲಿ ಕುಟುಂಬದ ವಕೀಲರು ಡ್ರೈವರ್ ಮೋಹನ್ ಕಾರು ಚಲಾಯಿಸುತ್ತಿದ್ದರೆಂದು ಹೇಳಿದ್ದರೂ, ಸಿಸಿಟಿವಿ ದೃಶ್ಯಾವಳಿ ಚಾಲಕನ ಸೀಟಿನಲ್ಲಿ ಶಿವಂ ಮಿಶ್ರಾ ಇದ್ದುದನ್ನು ಸ್ಪಷ್ಟಪಡಿಸಿದೆ. ಇ-ರಿಕ್ಷಾ ಚಾಲಕ ಮೊಹಮ್ಮದ್ ತೌಫೀಕ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಪರಾಧ
BAIRATHI BASAVARJU BREAKING NEWS : ಸಿಐಡಿ ಲುಕ್ಔಟ್ ನೋಟಿಸ್ ಜಾರಿ, ತನಿಖೆ ತೀವ್ರ
ಬೆಂಗಳೂರು: ರೌಡಿಶೀಟರ್ ಬಿಲ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರಿಗೆ ಮತ್ತೊಂದು ಕಾನೂನು ಹಿನ್ನಡೆ ಎದುರಾಗಿದೆ. ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅವರ ಬಂಧನದ ಭೀತಿ ಮತ್ತಷ್ಟು ಗಟ್ಟಿಯಾಗಿದೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಹೈಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದರ ನಂತರ ಬೈರತಿ ಬಸವರಾಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಸಹ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ವಿಚಾರಣೆ ವೇಳೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ಗಮನಾರ್ಹ.
ಈ ಬೆಳವಣಿಗೆಯೊಂದಿಗೆ ತನಿಖಾ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಈಗಾಗಲೇ ಸಿಐಡಿ ಪೊಲೀಸರು ಬೈರತಿ ಬಸವರಾಜ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮಗಳು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಗಳಿವೆ.
ರಾಜಕೀಯ ವಲಯದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪ್ರಕರಣ ಹೊಸ ತಿರುವು ಪಡೆದಿದೆ.
-
ಚುನಾವಣೆ15 hours agoGBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
-
ದೇಶ20 hours agoಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
-
ದೇಶ19 hours agoRBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
-
ದೇಶ21 hours agoBangladesh Election 2026: ಬಿಎನ್ಪಿ ಭರ್ಜರಿ ಗೆಲುವು, ತಾರಿಖ್ ರೆಹಮಾನ್ ಮುಂದಿನ ಪ್ರಧಾನಿ
-
ದೇಶ20 hours agoSHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ
-
ಕ್ರೀಡೆ18 hours agoBENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
-
ದೇಶ16 hours agoBENGALURU : ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ
-
ದೇಶ18 hours agoಶಾಂಘೈನಲ್ಲಿ ದೈತ್ಯ ಸಿಂಕ್ಹೋಲ್: ರಸ್ತೆ ಕುಸಿದು ವಾಹನಗಳು ಒಳಗೆ, ಭಯಾನಕ ವಿಡಿಯೋ ವೈರಲ್
