ಆರೋಗ್ಯ
ಮಧುಮೇಹಿಗಳಿಗೆ ಯಾವ ಚಹಾ ಬೆಸ್ಟ್:ಆರೋಗ್ಯಕ್ಕೆ ಬ್ಲ್ಯಾಕ್ ಟೀ ಉತ್ತಮವೇ ಹಾಲು ಹಾಕಿದ ಚಹಾವೇ?: ಇಲ್ಲಿವೆ ಬೆಸ್ಟ್ ಟಿಪ್ಸ್
TEA HELPFUL TO CONTROL BLOOD SUGAR: ಇತ್ತೀಚಿನ ದಿನಮಾನಗಳಲ್ಲಿ ಜೀವನಶೈಲಿ ಬದಲಾವಣೆಯಿಂದ ಮಧುಮೇಹ ಎಂಬ ಮಹಾಮಾರಿ ಕಾಟ ಕಾಮನ್ ಎಂಬಂತಾಗಿದೆ. ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ತುಂಬಾ ಹೆಚ್ಚಾದಾಗ ಅದನ್ನು ಮಧುಮೇಹ ಒಂದು ಸ್ಥಿತಿ ಎಂದು ಕರೆಯಲಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದರಿಂದ ರಕ್ತನಾಳಗಳಿಗೆ ಹಾನಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯ ಸಂಬಂಧಿ ಕಾಯಿಲೆಯೂ ಬರಬಹುದು.
ಮಧುಮೇಹವುಳ್ಳ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮತ್ತು ವಹಿಸಬೇಕಾಗುತ್ತದೆ. ವಿಶೇಷವಾಗಿ ಅವರು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕಾಗುತ್ತದೆ. ಆದರೆ, ಅನೇಕರಿಗೆ ಟೀ ಕುಡಿಯುವ ಅಭ್ಯಾಸವಿರುತ್ತದೆ. ಅದನ್ನು ಬಿಡಲು ಬಹಳ ಕಷ್ಟವಾಗುತ್ತಿರುತ್ತದೆ. ಮಧುಮೇಹದ ನಂತರವೂ ಇವರು ಚಹಾ ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು ಹಾಲಿನ ಚಹಾ ಸೇವನೆ ಮಾಡುವುದು ತುಸು ಅಪಾಯಕಾರಿಯೇ ಸರಿ.
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಧುಮೇಹಿಗಳು ಸಕ್ಕರೆಯೊಂದಿಗೆ ಮಾಡಿದ ಹಾಲಿನ ಚಹಾವನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ದೇಹದಲ್ಲಿ ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಾಲು ಸೇರಿಸಿದ ಚಹಾವನ್ನು ಮಧುಮೇಹ ಹೊಂದಿರುವವರು ಕುಡಿಯಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಾಲು ಮತ್ತು ಚಹಾದ ಮಿಶ್ರಣವು ದೇಹಕ್ಕೆ ಹಾನಿಕರ.
ಗಿಡಮೂಲಿಕೆ ಚಹಾದಿಂದಾಗುವ ಪ್ರಯೋಜನಗಳು: ಮಧುಮೇಹ ನಿಯಂತ್ರಣಕ್ಕೆ ಗಿಡಮೂಲಿಕೆ ಚಹಾದ ಸೇವನೆಯು ಪ್ರಯೋಜನಕಾರಿಯಾಗಿದೆ, ಮಧುಮೇಹ ರೋಗಿಗಳಿಗೆ ಚಹಾವನ್ನು ತಪ್ಪಿಸಲು ಸಾಧ್ಯವಾಗದಿದ್ದರೆ ಅವರು ಗಿಡಮೂಲಿಕೆ ಚಹಾವನ್ನು ಸೇವಿಸಬೇಕು, ಏಕೆಂದರೆ ಅದರಿಂದ ಯಾವುದೇ ಹಾನಿಯಾಗುವ ಅಪಾಯವಿಲ್ಲ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಎ ಜೊತೆಗೆ, ಆಂಟಿ – ಆಕ್ಸಿಡೆಂಟ್ಗಳು, ಆಂಟಿಮೈಕ್ರೊಬಿಯಲ್ಗಳು ಗಿಡಮೂಲಿಕೆ ಚಹಾದಲ್ಲಿ ಕಂಡು ಬರುತ್ತವೆ. ಹೀಗಾಗಿ ಗಿಡಮೂಲಿಕೆ ಚಹಾ ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.
ದಾಲ್ಚಿನ್ನಿ ಚಹಾ: ಈ ಚಹಾಗಳೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹದ ಸಂದರ್ಭದಲ್ಲಿ, ದಾಲ್ಚಿನ್ನಿಯಿಂದ ತಯಾರಿಸಿದ ಚಹಾವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಏಕೆಂದರೆ ಇದು ದೇಹದಲ್ಲಿ ಇನ್ಸುಲಿನ್ ಅನ್ನು ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಮಧುಮೇಹ ರೋಗಿಗಳು ಕಪ್ಪು ಚಹಾ ಸೇವನೆ ಮಾಡಬೇಕು. ಇದರಲ್ಲಿರುವ ಉರಿಯೂತ ಕಡಿಮೆ ಅಂಶಗಳು ಊತವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ದಾಸವಾಳದ ಚಹಾವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ವಿಟಮಿನ್ ಸಿ ಅಂಶಗಳು ಹಲವು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಮಾಡುತ್ತದೆ ಮಾತ್ರವಲ್ಲದೇ ಮಧುಮೇಹ ನಿಯಂತ್ರಣ ಮಾಡುತ್ತದೆ.
ನಿಮ್ಮ ಗಮನಕ್ಕೆ: ಇಲ್ಲಿ ನೀಡಲಾದ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ಆರೋಗ್ಯ ವೃತ್ತಿಪರರ ಅಧ್ಯಯನ ಮತ್ತು ಸಲಹೆಯ ಆಧಾರದ ಮೇಲೆ ಹಂಚಿಕೊಳ್ಳುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ಆರೋಗ್ಯ
10 ವರ್ಷಗಳ ಸಂಶೋಧನೆಗೆ ಫಲ! Wockhardt ಔಷಧಿಗೆ ಅಮೆರಿಕದ ಗ್ರೀನ್ ಸಿಗ್ನಲ್
ನವದೆಹಲಿ: ವಿಶ್ವದ ಔಷಧಾಲಯ (Pharmacy of the World) ಎಂದೇ ಗುರುತಿಸಿಕೊಂಡಿರುವ ಭಾರತವು ಇದೀಗ ಔಷಧ ಸಂಶೋಧನಾ ಕ್ಷೇತ್ರದಲ್ಲೂ ಹೊಸ ಇತಿಹಾಸ ನಿರ್ಮಿಸಿದೆ. ಮುಂಬೈ ಮೂಲದ Wockhardt ಅಭಿವೃದ್ಧಿಪಡಿಸಿರುವ ‘ಜೈನಿಚ್’ (Zaynich) ಎಂಬ ಹೊಸ ಆ್ಯಂಟಿಬಯಾಟಿಕ್ಗೆ ಅಮೆರಿಕದ ಕಠಿಣ ಔಷಧ ನಿಯಂತ್ರಣ ಸಂಸ್ಥೆಯಾದ U.S. Food and Drug Administration ಅನುಮೋದನೆ ನೀಡಿದೆ.
ಭಾರತೀಯ ಔಷಧ ಕಂಪನಿಯೊಂದು ಸಂಪೂರ್ಣವಾಗಿ ಸಂಶೋಧಿಸಿ, ಅಭಿವೃದ್ಧಿಪಡಿಸಿ, ಜಾಗತಿಕ ಮಾರುಕಟ್ಟೆಗೆ ತಂದ ಮೊದಲ New Chemical Entity (NCE) ಎಂಬ ಹೆಗ್ಗಳಿಕೆಗೆ ಜೈನಿಚ್ ಪಾತ್ರವಾಗಿದೆ. ಈ ಔಷಧಿ ಔಷಧ ನಿರೋಧಕ (Drug-Resistant) ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಂಕೀರ್ಣ ಮೂತ್ರನಾಳದ ಸೋಂಕುಗಳ (UTI) ಚಿಕಿತ್ಸೆಗೆ ಬಳಸಲಾಗುತ್ತದೆ.
ಜೈನಿಚ್ ವಿಶೇಷತೆ ಏನು?
ಸಾಮಾನ್ಯ ಆ್ಯಂಟಿಬಯಾಟಿಕ್ಗಳಿಗಿಂತ ಭಿನ್ನವಾಗಿ, ಜೈನಿಚ್ ಎರಡು ಪ್ರಮುಖ ಅಂಶಗಳ ಸಂಯೋಜನೆಯಾಗಿದೆ. ಈಗಾಗಲೇ ಬಳಕೆಯಲ್ಲಿರುವ Cefepime ಮತ್ತು ವಾಕ್ಹಾರ್ಡ್ ಕಂಡುಹಿಡಿದ ಹೊಸ ಅಣು Zidebactam ಸೇರಿ ಬ್ಯಾಕ್ಟೀರಿಯಾದ ಜೀವಕೋಶ ಗೋಡೆಯ ನಿರ್ಮಾಣವನ್ನು ಎರಡು ಹಂತಗಳಲ್ಲಿ ತಡೆಯುತ್ತವೆ. ಇದರಿಂದ ಔಷಧ ನಿರೋಧಕ ಬ್ಯಾಕ್ಟೀರಿಯಾಗಳನ್ನೂ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.
ಕ್ಲಿನಿಕಲ್ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು
530 ರೋಗಿಗಳ ಮೇಲೆ ನಡೆಸಿದ ಮೂರನೇ ಹಂತದ ಪರೀಕ್ಷೆಯಲ್ಲಿ ಜೈನಿಚ್ ಪಡೆದ ರೋಗಿಗಳಲ್ಲಿ 89% ಮಂದಿಗೆ ಸೋಂಕು ಸಂಪೂರ್ಣ ಗುಣಮುಖವಾಗಿದೆ. ಹೋಲಿಕೆಗೆ, ಸಾಮಾನ್ಯವಾಗಿ ಬಳಸುವ ಆ್ಯಂಟಿಬಯಾಟಿಕ್ Meropenem ಬಳಕೆ ಮಾಡಿದವರಲ್ಲಿ ಈ ಪ್ರಮಾಣ 68.4% ಮಾತ್ರ ದಾಖಲಾಗಿದೆ.
ಭಾರತಕ್ಕೆ ಏಕೆ ಮಹತ್ವ?
ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR) ವಿಶ್ವದ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಪ್ರತಿವರ್ಷ ಜಾಗತಿಕವಾಗಿ ಸುಮಾರು 12.7 ಲಕ್ಷ ಸಾವುಗಳಿಗೆ ಇದು ನೇರ ಕಾರಣವಾಗುತ್ತಿದೆ. ಭಾರತದಲ್ಲಿಯೂ ಲಕ್ಷಾಂತರ ಜನರು ಔಷಧ ನಿರೋಧಕ ಸೋಂಕುಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಜೈನಿಚ್ ಅಭಿವೃದ್ಧಿಯು ಭಾರತೀಯ ವಿಜ್ಞಾನಿಗಳ ಸಂಶೋಧನಾ ಸಾಮರ್ಥ್ಯಕ್ಕೆ ಜಾಗತಿಕ ಮಾನ್ಯತೆ ತಂದುಕೊಟ್ಟಿದ್ದು, ದೇಶವನ್ನು ಕೇವಲ ಜೆನೆರಿಕ್ ಔಷಧ ತಯಾರಕ ರಾಷ್ಟ್ರವಲ್ಲ, ಹೊಸ ಔಷಧ ಕಂಡುಹಿಡಿಯುವ ರಾಷ್ಟ್ರವಾಗಿಯೂ ಗುರುತಿಸುವಂತೆ ಮಾಡಿದೆ.
ಸವಾಲು ಇನ್ನೂ ಉಳಿದಿದೆ
ತಜ್ಞರ ಪ್ರಕಾರ, ಔಷಧ ಕಂಡುಹಿಡಿಯುವುದು ಒಂದು ಹಂತವಾದರೆ, ಅದು ಸಾಮಾನ್ಯ ರೋಗಿಗಳಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುವುದು ಮತ್ತೊಂದು ದೊಡ್ಡ ಸವಾಲಾಗಿದೆ. ಜೈನಿಚ್ ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ರೋಗಿಗಳಿಗೆ ಶೀಘ್ರ ಲಭ್ಯವಾಗಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಆರೋಗ್ಯ
ಬೇಸಿಗೆಯ ಬಿಸಿಗೆ ರಾಮಬಾಣ: ಮೋದಿ ಮೆಚ್ಚಿದ ಸಾಂಪ್ರದಾಯಿಕ ಭಾರತೀಯ ಪಾನೀಯಗಳು
ಬೇಸಿಗೆಯ ಉರಿ ಬಿಸಿಯನ್ನು ಎದುರಿಸಲು ಭಾರತೀಯರು ತಲೆಮಾರುಗಳಿಂದ ಸಾಂಪ್ರದಾಯಿಕ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ Narendra Modi ಅವರು ದೇಶದ ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಬೇಸಿಗೆ ಪಾನೀಯಗಳ ಮಹತ್ವವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಇವು ಕೇವಲ ಪಾನೀಯಗಳಲ್ಲ, ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದು ಅವರು ಹೇಳಿದರು.
ಬೇಸಿಗೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಪಾನೀಯಗಳಲ್ಲಿ ಆಮ್ ಪನ್ನಾ ಪ್ರಮುಖವಾಗಿದೆ. ಕಚ್ಚಾ ಮಾವು, ಬೆಲ್ಲ ಅಥವಾ ಸಕ್ಕರೆ, ಪುದೀನ, ಜೀರಿಗೆ ಹಾಗೂ ಕಪ್ಪು ಉಪ್ಪಿನಿಂದ ತಯಾರಾಗುವ ಈ ಪಾನೀಯ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹೈಡ್ರೇಶನ್ ಕಾಪಾಡಲು ಸಹಕಾರಿ.
ಲಸ್ಸಿ ಮತ್ತು ಮಜ್ಜಿಗೆ (ಚಾಸ್) ಕೂಡ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯಕರ ಪಾನೀಯಗಳಾಗಿವೆ. ಮೊಸರು ಆಧಾರಿತ ಈ ಪಾನೀಯಗಳು ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ದೇಹವನ್ನು ತಂಪಾಗಿರಿಸುತ್ತವೆ.
ಪಶ್ಚಿಮ ಭಾರತದ ಕರಾವಳಿ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಕೋಕಂ ಶರಬತ್ ದೇಹಕ್ಕೆ ತಂಪು ನೀಡುವ ಗುಣ ಹೊಂದಿದ್ದು, ಅದರ ವಿಶಿಷ್ಟ ಸಿಹಿ-ಹುಳಿ ರುಚಿಗೆ ಹೆಸರುವಾಸಿಯಾಗಿದೆ.
ಬಿಹಾರ ಮತ್ತು ಜಾರ್ಖಂಡ್ ಭಾಗಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಸಟ್ಟು ಶರಬತ್ ಪ್ರೋಟೀನ್, ಫೈಬರ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದು ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ದಕ್ಷಿಣ ಭಾರತದ ಪಾನಕಂ ಮತ್ತು ನೀರ್ ಮೋರ್ ಕೂಡ ಬೇಸಿಗೆಯ ಜನಪ್ರಿಯ ಪಾನೀಯಗಳಾಗಿವೆ. ಬೆಲ್ಲ, ಶುಂಠಿ ಹಾಗೂ ನಿಂಬೆರಸದಿಂದ ತಯಾರಾಗುವ ಪಾನಕಂ ಶಕ್ತಿದಾಯಕವಾಗಿದ್ದರೆ, ಮಜ್ಜಿಗೆ ಆಧಾರಿತ ನೀರ್ ಮೋರ್ ಜೀರ್ಣಕ್ರಿಯೆಗೆ ನೆರವಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಈ ಸಾಂಪ್ರದಾಯಿಕ ಪಾನೀಯಗಳು ದೇಹದಲ್ಲಿ ನೀರಿನ ಪ್ರಮಾಣ ಕಾಪಾಡಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಬೇಸಿಗೆಯ ಉಷ್ಣತೆಯಿಂದ ರಕ್ಷಿಸಲು ಸಹಕಾರಿ. ಆದ್ದರಿಂದ ಮಾರುಕಟ್ಟೆಯ ಕೃತಕ ಪಾನೀಯಗಳಿಗಿಂತ ದೇಶಿ ಪಾನೀಯಗಳೇ ಆರೋಗ್ಯಕ್ಕೆ ಹೆಚ್ಚು ಲಾಭದಾಯಕವೆಂದು ಅಭಿಪ್ರಾಯ ವ್ಯಕ್ತವಾಗಿದೆ.
ಆರೋಗ್ಯ
Meditation Benefits : ಮಾನಸಿಕ ಆರೋಗ್ಯ ಕಾಪಾಡಲು ಧ್ಯಾನ ಯಾಕೆ ಅಗತ್ಯ ಗೊತ್ತಾ?
ಧ್ಯಾನ (Meditation) ಇತ್ತೀಚಿನ ದಿನಗಳಲ್ಲಿ ಕೇವಲ ಆಧ್ಯಾತ್ಮಿಕ ಅಭ್ಯಾಸವಾಗಿಯೇ ಉಳಿದಿಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವಿಧಾನವಾಗಿಯೂ ಪರಿಗಣಿಸಲಾಗುತ್ತಿದೆ. ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಮತ್ತು ಹಣಕಾಸಿನ ಚಿಂತೆಗಳಿಂದ ಅನೇಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕೇವಲ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಉತ್ತಮಗೊಳ್ಳುತ್ತದೆ.
ನಿತ್ಯ ಧ್ಯಾನ ಮಾಡುವವರು ಭಾವನಾತ್ಮಕವಾಗಿ ಹೆಚ್ಚು ಸಮತೋಲನದಲ್ಲಿರುತ್ತಾರೆ. ಮನೆಯ ಸಮಸ್ಯೆಗಳು, ಕೆಲಸದ ಒತ್ತಡ ಅಥವಾ ಹಣಕಾಸಿನ ಗೊಂದಲಗಳ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಧ್ಯಾನ ಸಹಕಾರಿಯಾಗುತ್ತದೆ. ಕೋಪ ಕಡಿಮೆಯಾಗುವುದರ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ.
ಆರೋಗ್ಯದ ದೃಷ್ಟಿಯಿಂದಲೂ ಧ್ಯಾನ ಬಹಳ ಪ್ರಯೋಜನಕಾರಿ. ನಿಯಮಿತ ಧ್ಯಾನದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಹೃದಯದ ರಕ್ತಪರಿಚಲನೆ ಸುಧಾರಿಸಿ ದೇಹದ ಶಕ್ತಿ ಕುಂದುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಕೆಲ ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
-
ದೇಶ23 hours agoBig News : ಸಂಪುಟದಲ್ಲಿ ಮೊದಲ ವಿಕೆಟ್ ಪತನ? ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಣೆ
-
ದೇಶ20 hours agoಡಿಕೆಶಿ ಸರ್ಕಾರಕ್ಕೆ ಮತ್ತೊಂದು ಶಾಕ್! ರಾಮಲಿಂಗಾ ರೆಡ್ಡಿ ಬಳಿಕ ಕೆ.ಹೆಚ್. ಮುನಿಯಪ್ಪ ಅಸಮಾಧಾನ ಸ್ಫೋಟ
-
ಬೆಂಗಳೂರು21 hours agoವಾಹನ ಸವಾರರಿಗೆ ಬಂಪರ್ ಆಫರ್! ಟ್ರಾಫಿಕ್ ಫೈನ್ಗೆ 50% ರಿಯಾಯಿತಿ
-
ಕ್ರೀಡೆ19 hours agoಮುಂಬೈ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಎಬಿ ಡಿ ವಿಲಿಯರ್ಸ್! ಅಭಿಮಾನಿಗಳ ಹೃದಯ ಗೆದ್ದ RCB ದಿಗ್ಗಜ
-
ದೇಶ20 hours agoಹೊಸ ಪಕ್ಷ, ಹೊಸ ಹೋರಾಟ! ತಮಿಳುನಾಡಿನಲ್ಲಿ ಅಣ್ಣಾಮಲೈ ರಾಜಕೀಯ ಕ್ರಾಂತಿ
-
ದೇಶ16 hours agoಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ
-
ದೇಶ21 hours agoರಾಮಲಿಂಗಾರೆಡ್ಡಿ ರಾಜೀನಾಮೆ: ಕಾರಿನ ಚಕ್ರದಡಿ ಮಲಗಿ ಅಭಿಮಾನಿಗಳ ಕಣ್ಣೀರು!
-
ದೇಶ21 hours agoತಮಿಳುನಾಡು ಬಿಜೆಪಿಯಲ್ಲಿ ಭೂಕಂಪ: ಕೆ. ಅಣ್ಣಾಮಲೈ ಪಕ್ಷಕ್ಕೆ ಗುಡ್ಬೈ
