ರಾಜ್ಯ
ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು
ಚಿತ್ರದುರ್ಗ: ನಟ ದರ್ಶನ್ ಗ್ಯಾಂಗ್ನಲ್ಲಿ ಜೈಲು ಪಾಲಾಗಿರುವ ಎ8 ಆರೋಪಿ ರವಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದು ನ್ಯೂಸ್ಫಸ್ಟ್ ವರದಿ ಮಾಡಿತ್ತು. ಇದರ ಬೆನ್ನಲ್ಲೇ ನೆರವಿನ ಹಸ್ತ ಹರಿದು ಬಂದಿದ್ದು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮ ಮಹಾಸ್ವಾಮೀಜಿ ತಿಳಿಸಿದ್ದಾರೆ ಎಂದು ರವಿ ಪತ್ನಿ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ನಲ್ಲಿ ಆರೋಪಿ ರವಿ ಕೂಡ ಜೈಲು ಪಾಲಾಗಿದ್ದಾನೆ. ಇದರಿಂದ ಸ್ಕೂಲ್ ಫೀಸು ಕಟ್ಟಲಾಗದೇ ಪತ್ನಿ ಕವಿತಾ ಅವರು ಮಕ್ಕಳನ್ನು ಶಾಲೆ ಬಿಡಿದ್ದರು.
ಈ ಮಾಧ್ಯಮಗಳ ವರದಿ ಬೆನ್ನಲ್ಲೇ ಮಕ್ಕಳು ಓದುತ್ತಿದ್ದ ಭೋವಿ ಗುರುಪೀಠದ ಶಾಲೆಯಲ್ಲಿ ಮಕ್ಕಳು ಉಚಿತವಾಗಿ ಈ ವರ್ಷ ಓದಲಿ ಎಂದು ಸ್ವಾಮೀಜಿ ಹೇಳಿದ್ದಾರೆ. ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮ ಮಹಾಸ್ವಾಮೀಜಿ ಅವರು ನಿಮ್ಮ ಮಕ್ಕಳು ಈ ವರ್ಷ ನಮ್ಮ ಶಾಲೆಯಲ್ಲಿ ಉಚಿತವಾಗಿ ಓದಲಿ ಎಂದು ತಾಯಿಗೆ ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಪೇರೆಂಟ್ಸ್ ಅಸೋಸಿಯೇಷನ್, ಕರುನಾಡ ಸೇನೆ ಕೂಡ ನೆರವಿಗೆ ಬಂದಿದೆ.
ಈ ಸಂಬಂಧ ಮಾತನಾಡಿರುವ ಆರೋಪಿ ರವಿ ಪತ್ನಿ ಕವಿತಾ ಅವರು, ಮೊದಲು ಕನ್ನಡದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಶಾಲೆಯಿಂದ ಫೋನ್ ಬಂದಿತ್ತು. ಸ್ವಾಮೀಜಿಯವರು ಮಾತನಾಡಿ, ಇಲ್ಲಮ್ಮ ಈ ವರ್ಷ ನಿಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಿ. ನ್ಯೂಸ್ನಲ್ಲಿ ನೋಡಿದೆವು. ಡೊನೆಷನ್ ಏನು ಕೊಡಬೇಡ ಮಕ್ಕಳನ್ನ ಶಾಲೆಗೆ ಕಳುಹಿಸಿ ಅಂತ ಹೇಳಿದರು. ಹೀಗಾಗಿ ಇವತ್ತು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದೆ. ಒಬ್ಬ 3ನೇ ತರಗತಿ, ಇನ್ನೊಬ್ಬ ಎಲ್ಕೆಜಿ ಇದ್ದಾನೆ. ಮಕ್ಕಳು ಶಾಲೆಗೆ ಹೋಗಿದ್ದಕ್ಕೆ ಸಂತಸ ಆಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಎಜುಕೇಷನ್ ಟ್ರಸ್ಟ್ನಿಂದ ಯೋಗಾನಂದ ಎನ್ನುವರು ಫೋನ್ ಮಾಡಿ ಮಕ್ಕಳ ಬುಕ್, ಪೆನ್ನು, ಬ್ಯಾಗ್ ಬೇಕಾದರೆ ಕೇಳಿ ಎಂದು ಪೋನ್ ನಂಬರ್ ಕೊಟ್ಟಿದ್ದಾರೆ. ನನ್ನ ಗಂಡ ಬಂದಿದ್ದರೆ ಇದನ್ನೆಲ್ಲ ನಾವೇ ಮಾಡಿಕೊಂಡು ಹೋಗಬಹುದಿತ್ತು. ಆದರೆ ಇನ್ನೊಬ್ಬರಿಂದ ಇದನ್ನೆಲ್ಲ ತಗೊಂತ್ತಿದ್ದನಲ್ಲ ಎಂಬುದು ಬೇಜಾರು ಇದೆ. ನಾವು ಇನ್ನೊಬ್ಬರಿಗೆ ಕೊಡುವ ತರ ಇದ್ದೀವಿ. ಈಗ ಬೇರೆಯವರಿಂದ ನಾವು ತಗೋತರ ಆದೇವು. ಯಾರದರು ಲಾಯರ್ ನನ್ನ ಗಂಡನನ್ನ ಬಿಡಿಸಿಕೊಂಡು ಬನ್ನಿ ಸರ್. ಬೇಗ ಕರ್ಕೊಂಡು ಬನ್ನಿ. ಕನ್ನಡ ಜನತೆಯಲ್ಲಿ ಇದೊಂದೆ ಕೇಳುವುದು ನಾನು.
ಬೆಂಗಳೂರು
Bengaluru ನಲ್ಲಿ ಕುಡಿದು ನೀರಿನ ಟ್ಯಾಂಕರ್ ಚಲಾಯಿಸುತ್ತಿದ್ದ 40 ಚಾಲಕರ ಬಂಧನ; ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಅಲರ್ಟ್!
ಬೆಂಗಳೂರು: ರಾಜಧಾನಿ Bengaluru ನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ (Drink And Drive) ಚಾಲಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಸಮರ ಸಾರಿದ್ದು, ಕುಡಿದು ನೀರಿನ ಟ್ಯಾಂಕರ್ ಚಲಾಯಿಸುತ್ತಿದ್ದ 40 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಗಿನ ಜಾವ 6 ಗಂಟೆಯಿಂದ 9 ಗಂಟೆಯವರೆಗೆ ನಗರಾದ್ಯಂತ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಟ್ಟು 1,476 ನೀರಿನ ಟ್ಯಾಂಕರ್‌ಗಳನ್ನು ತಡೆದು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಮದ್ಯಪಾನ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ 40 ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಚಾಲಕರ ಈ ಬೇಜವಾಬ್ದಾರಿ ಚಾಲನೆಯು ರಸ್ತೆ ಸುರಕ್ಷತೆಗೆ ಮತ್ತು ಸಾರ್ವಜನಿಕರ ಜೀವಕ್ಕೆ ಕಂಟಕವಾಗುವ ಕಾರಣಕ್ಕಾಗಿ, ಅವರ ಚಾಲನಾ ಪರವಾನಗಿಯನ್ನು (DL) ಅಮಾನತುಗೊಳಿಸುವಂತೆ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಶಿಫಾರಸು ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಇಂತಹ ದಿಢೀರ್ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಮುನ್ನೆಚ್ಚರಿಕೆ:
ಇನ್ನೊಂದೆಡೆ, ನಗರದಲ್ಲಿ ವಿಐಪಿ ವಾಹನಗಳ ಸಂಚಾರವಿರುವ ಹಿನ್ನೆಲೆಯಲ್ಲಿ ಆಗಸ್ಟ್ 29ರ ಮಧ್ಯಾಹ್ನ 2:30 ರಿಂದ ಸಂಜೆ 4:30 ರವರೆಗೆ ಹಾಗೂ ಆಗಸ್ಟ್ 30ರ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಸುರಂಜನ್‌ದಾಸ್ ರಸ್ತೆ ಮತ್ತು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಸಂಚಾರ ಮಾರ್ಗಗಳಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿರುವುದಿಲ್ಲ. ಸಾರ್ವಜನಿಕರು ಹಾಗೂ ಸವಾರರು ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಂಡು ಸಹಕರಿಸಬೇಕಾಗಿ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ರಾಜಕೀಯ
Ramakrishna Hegde ಜನ್ಮಶತಮಾನೋತ್ಸವ: ಬಿಜೆಪಿ ಗೆಲುವನ್ನು ಮೊದಲೇ ಊಹಿಸಿದ್ದ ಕರ್ನಾಟಕದ ಧೀಮಂತ ನಾಯಕ!
ಬೆಂಗಳೂರು: ಮೌಲ್ಯಾಧಾರಿತ ರಾಜಕಾರಣ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜನಪರ ಚಿಂತನೆಗಳಿಗೆ ಒತ್ತು ನೀಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ Ramakrishna Hegde ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಅವರ ರಾಜಕೀಯ ಪಯಣ ಮತ್ತೆ ನೆನಪಾಗುತ್ತಿದೆ. ಅಧಿಕಾರಕ್ಕಿಂತ ತತ್ವಗಳಿಗೆ ಹೆಚ್ಚಿನ ಆದ್ಯತೆ ನೀಡಿದ ನಾಯಕರೆಂದೇ ಗುರುತಿಸಿಕೊಂಡಿದ್ದ ಹೆಗಡೆ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ರಾಮಕೃಷ್ಣ ಹೆಗಡೆ ಅವರು ಕೇವಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಮಾತ್ರವಲ್ಲದೆ, ರಾಷ್ಟ್ರಮಟ್ಟದ ರಾಜಕೀಯದಲ್ಲೂ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದರು. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅರ್ಥೈಸುವ ಸಾಮರ್ಥ್ಯ ಹೊಂದಿದ್ದ ಅವರು, ಭವಿಷ್ಯದ ರಾಜಕೀಯ ಪರಿಸ್ಥಿತಿಗಳನ್ನು ಮೊದಲೇ ಊಹಿಸುವಲ್ಲಿಯೂ ನಿಪುಣರಾಗಿದ್ದರು.
BJP ಗೆಲುವಿನ ಬಗ್ಗೆ ಹೆಗಡೆ ಭವಿಷ್ಯ
1995ರಲ್ಲಿ ರಾಮಕೃಷ್ಣ ಹೆಗಡೆಯವರು ಜನತಾದಳ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಬಹಿರಂಗ ಪತ್ರ ಬರೆದಿದ್ದರು. 1996ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ದೊಡ್ಡ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಅವರು ಆಗಲೇ ಅಭಿಪ್ರಾಯಪಟ್ಟಿದ್ದರು. ಬಿಜೆಪಿಯ ಬೆಳವಣಿಗೆಯನ್ನು ತಡೆಯಲು ಕಾಂಗ್ರೆಸ್ ವಿರುದ್ಧ ಇತರ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂಬ ರಾಜಕೀಯ ತಂತ್ರವನ್ನೂ ಅವರು ಪ್ರತಿಪಾದಿಸಿದ್ದರು.
ಆದರೆ, ಹೆಗಡೆಯವರ ಈ ಸಲಹೆಗೆ ಅಂದಿನ ಜನತಾದಳದ ಹಲವು ಪ್ರಮುಖ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಲಾಲು ಪ್ರಸಾದ್ ಯಾದವ್, ಮಧು ದಂಡವತೆ ಸೇರಿದಂತೆ ಹಲವು ನಾಯಕರು ಹೆಗಡೆಯವರ ನಿಲುವನ್ನು ಒಪ್ಪಿರಲಿಲ್ಲ. ಆದರೆ ನಂತರ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಹೆಗಡೆಯವರ ರಾಜಕೀಯ ಅಂದಾಜಿಗೆ ಸಾಕ್ಷಿಯಾಯಿತು. ಬಿಜೆಪಿ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದು ರಾಷ್ಟ್ರಮಟ್ಟದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಿತು.
ದೇವೇಗೌಡರು ಪ್ರಧಾನಿಯಾದಾಗ ಬದಲಾದ ರಾಜಕೀಯ ಸಮೀಕರಣ
ನಂತರ ಕಾಂಗ್ರೆಸ್ ಸಹಕಾರದೊಂದಿಗೆ ಎಚ್.ಡಿ. ದೇವೇಗೌಡರು ದೇಶದ ಪ್ರಧಾನಮಂತ್ರಿಯಾದರು. ಆದರೆ ಹೆಗಡೆಯವರ ರಾಜಕೀಯ ಸಲಹೆಯನ್ನು ವಿರೋಧಿಸಿದ್ದ ಹಲವು ನಾಯಕರು ಅಧಿಕಾರದ ಪ್ರಮುಖ ಸ್ಥಾನಗಳನ್ನು ಪಡೆದರು. ದೇವೇಗೌಡರು ಪ್ರಧಾನಿಯಾದ ನಂತರ ಹೆಗಡೆಯವರನ್ನು ಜನತಾದಳದಿಂದ ಉಚ್ಛಾಟಿಸಲಾಯಿತು.
ಈ ಬೆಳವಣಿಗೆಯ ಬಳಿಕ ಹೆಗಡೆಯವರು ತಮ್ಮದೇ ಆದ ರಾಜಕೀಯ ಹಾದಿಯನ್ನು ರೂಪಿಸಿಕೊಂಡರು. ಮೊದಲು ‘ನವನಿರ್ಮಾಣ ವೇದಿಕೆ’ ಸ್ಥಾಪಿಸಿ, ನಂತರ ‘ಲೋಕಶಕ್ತಿ’ ಪಕ್ಷವನ್ನು ಕಟ್ಟಿದರು. ಕರ್ನಾಟಕದ ರಾಜಕೀಯದಲ್ಲಿ ಹೊಸ ಪರ್ಯಾಯವನ್ನು ನಿರ್ಮಿಸುವ ಪ್ರಯತ್ನಕ್ಕೆ ಅವರು ಮುಂದಾದರು.
ಲೋಕಶಕ್ತಿ-ಬಿಜೆಪಿ ಮೈತ್ರಿ
ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಲೋಕಶಕ್ತಿ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿಯಿತು. ಈ ಮೈತ್ರಿಯ ಮೂಲಕ ಲೋಕಶಕ್ತಿ ಪಕ್ಷವು 10 ಸ್ಥಾನಗಳನ್ನು ಗೆದ್ದುಕೊಂಡಿತು. ಬಳಿಕ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆಯವರು ವಾಣಿಜ್ಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು.
ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿಯೂ ಆಡಳಿತಾತ್ಮಕ ಅನುಭವ ಮತ್ತು ನೀತಿ ರೂಪಿಸುವ ಸಾಮರ್ಥ್ಯವನ್ನು ಹೆಗಡೆಯವರು ಪ್ರದರ್ಶಿಸಿದ್ದರು. ಕರ್ನಾಟಕದ ರಾಜಕೀಯದಿಂದ ರಾಷ್ಟ್ರಮಟ್ಟದ ರಾಜಕೀಯದವರೆಗೆ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದರು.
ಅಧಿಕಾರಕ್ಕಿಂತ ಸ್ವಾಭಿಮಾನವೇ ಮುಖ್ಯ
ರಾಮಕೃಷ್ಣ ಹೆಗಡೆಯವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮತ್ತೊಂದು ಪ್ರಮುಖ ಘಟನೆ ಅವರ ರಾಜ್ಯಸಭಾ ಸದಸ್ಯತ್ವದ ಸಂದರ್ಭದಲ್ಲಿ ನಡೆದಿದೆ. ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿದ ಬಳಿಕ ಜಮ್ಮು ಮತ್ತು ಕಾಶ್ಮೀರದಿಂದ ಫಾರೂಕ್ ಅಬ್ದುಲ್ಲಾ ಹಾಗೂ ಒಡಿಶಾದಿಂದ ಬಿಜು ಪಟ್ನಾಯಕ್ ಅವರು ಹೆಗಡೆಯವರನ್ನು ತಮ್ಮ ರಾಜ್ಯಗಳಿಂದ ರಾಜ್ಯಸಭೆಗೆ ಕಳುಹಿಸಲು ಸಿದ್ಧರಿದ್ದರು ಎನ್ನಲಾಗಿದೆ.
ಆದರೆ, ಕರ್ನಾಟಕದ ಜನತೆ ತಮ್ಮನ್ನು ತಿರಸ್ಕರಿಸಿದ್ದಾರೆ ಎಂಬ ಭಾವನೆಯೊಂದಿಗೆ ಹೆಗಡೆಯವರು ಆ ಅವಕಾಶವನ್ನು ನಿರಾಕರಿಸಿದ್ದರು. ಅಧಿಕಾರದ ಸ್ಥಾನವನ್ನು ಪಡೆಯುವುದಕ್ಕಿಂತ ಜನರ ತೀರ್ಪಿಗೆ ಗೌರವ ನೀಡುವುದು ಮುಖ್ಯ ಎಂಬ ಅವರ ನಿಲುವು ಈ ಘಟನೆಯಿಂದ ಸ್ಪಷ್ಟವಾಗುತ್ತದೆ.
ಗ್ರಾಮಸ್ವರಾಜ್ಯಕ್ಕೆ ಒತ್ತು
ರಾಮಕೃಷ್ಣ ಹೆಗಡೆಯವರ ರಾಜಕೀಯ ಚಿಂತನೆಯ ಪ್ರಮುಖ ಅಂಶಗಳಲ್ಲಿ ‘ಗ್ರಾಮಸ್ವರಾಜ್ಯ’ ಮತ್ತು ‘ವಿಕೇಂದ್ರೀಕರಣ’ ಪ್ರಮುಖವಾಗಿದ್ದವು. ಆಡಳಿತದ ಅಧಿಕಾರ ಕೇವಲ ರಾಜಧಾನಿ ಅಥವಾ ಮೇಲ್ಮಟ್ಟದಲ್ಲೇ ಕೇಂದ್ರೀಕೃತವಾಗದೆ, ಗ್ರಾಮ ಹಾಗೂ ಸ್ಥಳೀಯ ಸಂಸ್ಥೆಗಳಿಗೂ ಹೆಚ್ಚಿನ ಅಧಿಕಾರ ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು.
ಸ್ಥಳೀಯ ಆಡಳಿತವನ್ನು ಬಲಪಡಿಸುವುದು, ಜನರನ್ನು ಆಡಳಿತದ ಭಾಗವನ್ನಾಗಿಸುವುದು ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕೆ ಒತ್ತು ನೀಡುವುದು ಅವರ ರಾಜಕೀಯ ಚಿಂತನೆಯ ಪ್ರಮುಖ ಭಾಗವಾಗಿತ್ತು. ಇಂದಿನ ಆಡಳಿತ ವ್ಯವಸ್ಥೆಯಲ್ಲಿಯೂ ಈ ವಿಚಾರಗಳು ಮಹತ್ವ ಪಡೆದುಕೊಂಡಿವೆ.
ಮೌಲ್ಯಾಧಾರಿತ ರಾಜಕಾರಣ, ರಾಜಕೀಯ ದೂರದೃಷ್ಟಿ, ಸ್ವಾಭಿಮಾನ ಹಾಗೂ ಗ್ರಾಮಸ್ವರಾಜ್ಯದ ಪರಿಕಲ್ಪನೆಯ ಮೂಲಕ ರಾಮಕೃಷ್ಣ ಹೆಗಡೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಅವರ ರಾಜಕೀಯ ಪಯಣ ಮತ್ತು ಚಿಂತನೆಗಳು ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಕೇಂದ್ರವಾಗಿರುವುದು ಗಮನಾರ್ಹ.
ದೇಶ
Guru Raghavendra Swamy ಆರಾಧನೆಗೆ ಭಕ್ತರ ಮಹಾಪೂರ: ಮಂತ್ರಾಲಯದಲ್ಲಿ ಪೂರ್ವಾರಾಧನೆ ಅದ್ಧೂರಿ ಆಚರಣೆ
ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯದ Guru Raghavendra Swamy ಗಳು ವೃಂದಾವನಸ್ಥರಾಗಿ 355 ವರ್ಷಗಳು ಸಂದಿರುವ ಹಿನ್ನೆಲೆ ದೇಶಾದ್ಯಂತ ಆರಾಧನಾ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಅದರಂತೆ ಮಂತ್ರಾಲಯದಲ್ಲೂ ಸಪ್ತರಾತ್ರೋತ್ಸವದ ಸಂಭ್ರಮ ಮನೆಮಾಡಿದ್ದು, ಇಂದು ಪೂರ್ವಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿವೆ.
ಮಂತ್ರಾಲಯದಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಪೂರ್ವಾರಾಧನೆಯ ಅಂಗವಾಗಿ ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಠದ ಪ್ರಾಕಾರದಲ್ಲಿ ರಜತ ಸಿಂಹ, ಗಜ ವಾಹನೋತ್ಸವ ಹಾಗೂ ಪಲ್ಲಕ್ಕಿ ಸೇವೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಶ್ರೀರಂಗದ ರಂಗನಾಥ ಸ್ವಾಮಿ ಹಾಗೂ ಕಂಚಿಯ ವರದರಾಜ ದೇವರ ವಸ್ತ್ರ ಪ್ರಸಾದವನ್ನು ರಾಯರ ವೃಂದಾವನಕ್ಕೆ ಸಮರ್ಪಿಸಲಾಗುವುದು.
ಬೆಳ್ಳಿ, ಚಿನ್ನದ ರಥೋತ್ಸವ
ಸಂಜೆಯ ವೇಳೆಯಲ್ಲಿ ಜ್ಞಾನಯೋಗ, ಸ್ವಸ್ತಿ ವಾಚನ, ಹಗಲು ದೀವಟಿಗೆ ಹಾಗೂ ಪ್ರಾಕಾರ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳ್ಳಿ ಹಾಗೂ ಚಿನ್ನದ ರಥೋತ್ಸವವೂ ಆರಾಧನಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.
ವಿಶೇಷವಾಗಿ ಗುರು ರಾಘವೇಂದ್ರ ಸ್ವಾಮಿಗಳು ರಚಿಸಿರುವ ‘ಪರಿಮಳ’ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಳ್ಳಲಿದ್ದಾರೆ.
ಗಣ್ಯರಿಗೆ ಗುರು ಅನುಗ್ರಹ ಪ್ರಶಸ್ತಿ
ಸಾಯಂಕಾಲ ಸಭಾ ಮಂಟಪದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಗುರು ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಸಪ್ತರಾತ್ರೋತ್ಸವದ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಮಂತ್ರಾಲಯಕ್ಕೆ ಹರಿದುಬಂದ ಭಕ್ತಸಾಗರ
ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದಾರೆ. ಬೆಳಗ್ಗಿನಿಂದಲೇ ಮಠದ ಸುತ್ತಮುತ್ತ ಭಕ್ತರ ಸಂಚಾರ ಹೆಚ್ಚಾಗಿದ್ದು, ಎಲ್ಲೆಡೆ ರಾಯರ ನಾಮಸ್ಮರಣೆ ಮೊಳಗುತ್ತಿದೆ.
355ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಧಾರ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಸಪ್ತರಾತ್ರೋತ್ಸವದ ಪ್ರತಿದಿನವೂ ವಿವಿಧ ಪೂಜೆ, ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆಯುತ್ತಿವೆ
-
ರಾಜಕೀಯ22 ಗಂಟೆಗಳು agoYathindra Siddaramaiah ಸದ್ದಿಲ್ಲದೆ ಶುರು ಮಾಡಿದ್ರಾ ಹೊಸ ರಾಜಕೀಯ ಲೆಕ್ಕಾಚಾರ? ಜಮೀರ್ ಭೇಟಿಗೆ ಹೆಚ್ಚಿದ ಕುತೂಹಲ
-
ದೇಶ22 ಗಂಟೆಗಳು agoIndian Army ಗೆ ಅಮೆರಿಕದ ಜಾವೆಲಿನ್ ಕ್ಷಿಪಣಿ! ಚೀನಾ-ಪಾಕ್ ಗಡಿಗೆ ಮತ್ತಷ್ಟು ಬಲ; ದೊಡ್ಡ ಘೋಷಣೆ
-
ರಾಜ್ಯ3 ಗಂಟೆಗಳು agoB Nagendra ರಾಜೀನಾಮೆ: ಡಿಕೆ ಶಿವಕುಮಾರ್ ಹೇಳಿದ್ದೇನು? ಬಿಜೆಪಿ ವಿರುದ್ಧ ಸಿಎಂ ಗರಂ, ‘ನಾಗೇಂದ್ರ ನಿರಪರಾಧಿ’ ಎಂದ ಡಿಸಿಎಂ
-
ಬೆಂಗಳೂರು2 ಗಂಟೆಗಳು agoBengaluru ನಲ್ಲಿ ಕುಡಿದು ನೀರಿನ ಟ್ಯಾಂಕರ್ ಚಲಾಯಿಸುತ್ತಿದ್ದ 40 ಚಾಲಕರ ಬಂಧನ; ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಅಲರ್ಟ್!
-
ದೇಶ3 ಗಂಟೆಗಳು agoGuru Raghavendra Swamy ಆರಾಧನೆಗೆ ಭಕ್ತರ ಮಹಾಪೂರ: ಮಂತ್ರಾಲಯದಲ್ಲಿ ಪೂರ್ವಾರಾಧನೆ ಅದ್ಧೂರಿ ಆಚರಣೆ
-
ದೇಶ2 ಗಂಟೆಗಳು agoNepal-Tibet ಪ್ರವಾಹದ ಭೀಕರ ದೃಶ್ಯ ಚೀನಾದಲ್ಲಿ ಕಾಣೆಯಾಗಿದ್ದೇಕೆ? ವೈರಲ್ ವಿಡಿಯೋಗೆ ಸೆನ್ಸಾರ್!
-
ರಾಜಕೀಯ3 ಗಂಟೆಗಳು agoRamakrishna Hegde ಜನ್ಮಶತಮಾನೋತ್ಸವ: ಬಿಜೆಪಿ ಗೆಲುವನ್ನು ಮೊದಲೇ ಊಹಿಸಿದ್ದ ಕರ್ನಾಟಕದ ಧೀಮಂತ ನಾಯಕ!
-
Blog3 ಗಂಟೆಗಳು agoKarnataka ಮತದಾರರಿಗೆ ಗುಡ್ನ್ಯೂಸ್; ವಿಶೇಷ SIR ಕ್ಯಾಂಪ್ನಲ್ಲಿ ಮತ್ತೆ ಮತದಾರರ ಪಟ್ಟಿಗೆ ಸೇರುವ ಅವಕಾಶ
