Connect with us

ದೇಶ

ಬೆಂಗಳೂರಿಗೆ ಆಘಾತ, ಹೊಸೂರಿನ 2000 ಎಕರೆಯಲ್ಲಿ ತಮಿಳುನಾಡು ಸರ್ಕಾರದಿಂದ ಏರ್‌ಪೋರ್ಟ್‌ ನಿರ್ಮಾಣದ ಘೋಷಣೆ

Published

on

ಚೆನ್ನೈ: ಬೆಂಗಳೂರಿಗೆ ಮತ್ತು ಕನ್ನಡಿಗರಿಗೆ ತಮಿಳುನಾಡು ಸರ್ಕಾರ ದೊಡ್ಡ ಆಘಾತಕಾರಿ ಹೊಡೆತ ನೀಡಿದೆ. ಹೊಸೂರಿನಲ್ಲಿ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರ (Tamil Nadu Government) ಘೋಷಿಸಿದೆ. 2,000 ಎಕರೆಗಳಷ್ಟು ವ್ಯಾಪಿಸಿರುವ ವಿಮಾನ ನಿಲ್ದಾಣವು ವರ್ಷಕ್ಕೆ 30 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರಲಿದೆ. ಹೊಸೂರು ಪ್ರದೇಶಕ್ಕೆ ಪ್ರಮುಖ ಮೂಲಸೌಕರ್ಯ ಯೋಜನೆಯನ್ನು ಸಹ ಈ ಅಂತರಾಷ್ಟ್ರೀಯ ವಿಮಾನ (Hosur Airport) ನಿಲ್ದಾಣವು ಕಲ್ಪಿಸಲಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಇಂದು ವಿಧಾನಸಭೆಯಲ್ಲಿ ಹೊಸೂರಿನಲ್ಲಿ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.  ಹೊಸೂರು ಮತ್ತು ಸುತ್ತಮುತ್ತಲಿನ ಹಲವಾರು ಉತ್ಪಾದನಾ ಮತ್ತು ಕೈಗಾರಿಕಾ ಘಟಕಗಳಿಗೆ ಸಂಪರ್ಕವನ್ನು ಹೆಚ್ಚಿಸುವ ಅಗತ್ಯವನ್ನು ಅವರು ಈ ವೇಳೆ ವಿವರಿಸಿದ್ದಾರೆ.

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಮಸ್ಯೆ!
ಆದರೆ ಬೆಂಗಳೂರಿನ ದೇವನಹಳ್ಳಿಯಲ್ಲೇ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಿದೆ. ಕರ್ನಾಟಕದ ಗಡಿಯಲ್ಲಿರುವ ತಮಿಳುನಾಡಿಗೆ ಸೇರುವ ಹೊಸೂರಿನಲ್ಲಿ ಇನ್ನೊಂದು ಅಂತರಾಷ್ಟ್ರಿಯ ವಿಮಾನ ನಿಲ್ದಾಣ ನಿರ್ಮಿಸಿದರೆ ದೇವನಹಳ್ಳಿ ವಿಮಾನ ನಿಲ್ದಾಣದ ಆಕರ್ಷಣೆ ಕಳೆಗುಂದುವ ಅಪಾಯ ಎದುರಾಗಿದೆ. ಬೆಂಗಳೂರಿನ ಅವಿಭಾಜ್ಯ ಅಂಗಗಳಾದ ಎಲೆಕ್ಟ್ರಾನಿಕ್ ಸಿಟಿ ಸೇರಿ ಆ ಭಾಗದ ಜನತೆಗೆ ದೇವನಹಳ್ಳಿ ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕಿಂತ ಹೊಸೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಸಹಜವಾಗಿ ಹತ್ತಿರವಾಗಲಿದೆ. ಇದು ಕರ್ನಾಟಕದ ದೇವನಹಳ್ಳಿ ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ನಕಾರಾತ್ಮಕ ಪರಿಣಾಮ ಬೀರಲಿದೆ.

ಬೆಂಗಳೂರಲ್ಲಿ ಇನ್ನೊಂದು ವಿಮಾನ ನಿಲ್ದಾಣ ಕರ್ನಾಟಕದ ಕನಸು
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕಾಗಿ ಕರ್ನಾಟಕ ಸರ್ಕಾರ ಭೂಮಿ ಶೋಧನೆ ಆರಂಭಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ತುಮಕೂರು ರಸ್ತೆಯಲ್ಲಿ ಇನ್ನೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವ ಉತ್ಸಾಹದಲ್ಲಿ ಕರ್ನಾಟಕ ಸರ್ಕಾರ ಭೂಮಿ ಹುಡುಕಾಟದಲ್ಲಿದೆ. 

ಕರ್ನಾಟಕವೂ ಟಾರ್ಗೆಟ್!
“ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣದ ಘೋಷಣೆಯು ಈ ಪ್ರದೇಶದ ಅಭಿವೃದ್ಧಿಗೆ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯು ಸಂಪರ್ಕ ಸೌಲಭ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೊಸೂರು ಮಾತ್ರವಲ್ಲದೆ ನೆರೆಯ ಜಿಲ್ಲೆಗಳಾದ ಧರ್ಮಪುರಿ ಮತ್ತು ಸೇಲಂಗೂ ಪ್ರಯೋಜನವನ್ನು ನೀಡುತ್ತದೆ.  ಬೆಂಗಳೂರಿನ ವಿವಿಧ ಭಾಗಗಳಿಗೂ ಹೊಸೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸಹಕಾರಿಯಾಗುತ್ತದೆ” ಎಂದು ರಾಜಾ ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಹೇಳಿಕೆ ನೀಡಿದ್ದಾರೆ.  

ಅಪರಾಧ

ವೈರಲ್ ವಿಡಿಯೋ: ಲಾರಿ ಡಿಕ್ಕಿ ಹೊಡೆದರೂ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿನಿ

Published

on

ತುಮಕೂರು: ಜಿಲ್ಲೆಯ ತಿಪಟೂರು ನಗರದ ಐಬಿ ಸರ್ಕಲ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಿಯಂತ್ರಣ ತಪ್ಪಿದ ಲಾರಿಯೊಂದು ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಗುದ್ದಿದೆ. ಈ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ವೇಗವಾಗಿ ಬಂದ ಲಾರಿಯು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ವಿದ್ಯಾರ್ಥಿನಿಯತ್ತ ನುಗ್ಗಿದೆ. ಡಿಕ್ಕಿಯ ತೀವ್ರತೆಗೆ ವಿದ್ಯಾರ್ಥಿನಿ ಲಾರಿಯ ಕೆಳಗೆ ಸಿಲುಕಿದ್ದರೂ, ಅದೃಷ್ಟವಶಾತ್ ವಾಹನದ ಚಕ್ರ ಆಕೆಯ ಮೇಲೆ ಹರಿಯದೆ ಮಧ್ಯಭಾಗದಲ್ಲಿ ಸಿಲುಕಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಅಪಘಾತ ಕಂಡ ಸ್ಥಳೀಯರು ಕೂಡಲೇ ಲಾರಿಯನ್ನು ನಿಲ್ಲಿಸಿ ವಿದ್ಯಾರ್ಥಿನಿಯನ್ನು ಸುರಕ್ಷಿತವಾಗಿ ಹೊರತೆಗೆದರು. ಬಳಿಕ ಗಾಯಗೊಂಡ ವಿದ್ಯಾರ್ಥಿನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಆಕೆಯ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಿಪಟೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿಯನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.

ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಲಾರಿ ಕೆಳಗೆ ಸಿಲುಕಿದ್ದರೂ ವಿದ್ಯಾರ್ಥಿನಿ ಅದೃಷ್ಟವಶಾತ್ ಜೀವಂತವಾಗಿ ಪಾರಾಗಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ. ವಾಹನ ಚಾಲಕರು ವೇಗ ಮಿತಿಯನ್ನು ಪಾಲಿಸಬೇಕು ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂಬ ಒತ್ತಾಯವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Continue Reading

ಕ್ರೀಡೆ

ಎಚ್ಚರ! Sports Association of India ಹೆಸರಿನಲ್ಲಿ ಭಾರೀ ವಂಚನೆ; PIB ನೀಡಿದ ತುರ್ತು ಎಚ್ಚರಿಕೆ

Published

on

ನವದೆಹಲಿ: ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ (MYAS) ಮಾನ್ಯತೆ ಪಡೆದಿರುವುದಾಗಿ ಸುಳ್ಳು ಹೇಳಿಕೊಂಡು ಆಟಗಾರರಿಂದ ಹಣ ವಸೂಲಿ ಮಾಡುತ್ತಿದ್ದ ‘ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ (Sports Association of India) ಎಂಬ ನಕಲಿ ಸಂಸ್ಥೆಯ ವಂಚನೆ ಜಾಲವನ್ನು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್‌ಚೆಕ್ ಬಯಲಿಗೆಳೆದಿದೆ. ದೇಶದ ಕ್ರೀಡಾಪಟುಗಳು, ಪೋಷಕರು ಹಾಗೂ ತರಬೇತುದಾರರು ಇಂತಹ ನಕಲಿ ಜಾಹೀರಾತುಗಳಿಗೆ ಬಲಿಯಾಗದಂತೆ ಸರ್ಕಾರ ಎಚ್ಚರಿಕೆ ನೀಡಿದೆ.

ಸರ್ಕಾರದ ಅಧಿಕೃತ ಕ್ರೀಡಾ ಸಂಸ್ಥೆಯ ಹೆಸರು Sports Authority of India (SAI) ಆಗಿದ್ದು, ವಂಚಕರು ಅದಕ್ಕೆ ಹೋಲುವ Sports Association of India ಎಂಬ ಹೆಸರನ್ನು ಬಳಸಿಕೊಂಡು ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಹೆಸರಿನಲ್ಲಿರುವ ಈ ಸಣ್ಣ ವ್ಯತ್ಯಾಸವೇ ವಂಚಕರ ಪ್ರಮುಖ ತಂತ್ರವಾಗಿದೆ ಎಂದು PIB ತಿಳಿಸಿದೆ.

ನಕಲಿ ಸಂಸ್ಥೆಯು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವುದಾಗಿ ಹೇಳಿ ಆಟಗಾರರಿಗೆ ಆಹ್ವಾನ ಪತ್ರಗಳನ್ನು ಕಳುಹಿಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿ ಆಟಗಾರರಿಂದ ₹1,500 ನೋಂದಣಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಸರ್ಕಾರಿ ಸಂಸ್ಥೆಯಂತೆ ಕಾಣುವ ನಕಲಿ ಜಾಹೀರಾತುಗಳು ಹಾಗೂ ಪ್ರಚಾರ ಸಾಮಗ್ರಿಗಳನ್ನೂ ಬಳಸಲಾಗುತ್ತಿದೆ.

PIB ಫ್ಯಾಕ್ಟ್‌ಚೆಕ್ ಸ್ಪಷ್ಟಪಡಿಸಿರುವಂತೆ, ಈ ಸಂಸ್ಥೆಗೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯಾವುದೇ ಮಾನ್ಯತೆ ಇಲ್ಲ. ಜೊತೆಗೆ ಕೇಂದ್ರ ಸರ್ಕಾರದ Fit India ಅಭಿಯಾನದ ಹೆಸರು ಹಾಗೂ ಲೋಗೋ ಬಳಸಲು ಸಹ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಸರ್ಕಾರ ಹೇಳಿದೆ.

ಯಾವುದೇ ಕ್ರೀಡಾಕೂಟಕ್ಕೆ ನೋಂದಾಯಿಸಿಕೊಳ್ಳುವ ಮೊದಲು ಸಂಬಂಧಿತ ಸಂಸ್ಥೆಗೆ ಕ್ರೀಡಾ ಸಚಿವಾಲಯದ ಅಧಿಕೃತ ಮಾನ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಆನ್‌ಲೈನ್ ಮೂಲಕ ಕೇಳಲಾಗುವ ಅನುಮಾನಾಸ್ಪದ ನೋಂದಣಿ ಶುಲ್ಕಗಳನ್ನು ಪಾವತಿಸಬಾರದು ಎಂದು PIB ಸಲಹೆ ನೀಡಿದೆ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಯುವ ಪ್ರತಿಭೆಗಳ ಕನಸನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ನಕಲಿ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಯಾವುದೇ ಹಣ ಪಾವತಿಸುವ ಮೊದಲು ಅಧಿಕೃತ ಸರ್ಕಾರಿ ಮೂಲಗಳಿಂದ ಮಾಹಿತಿ ಪರಿಶೀಲಿಸುವುದು ಅತ್ಯಗತ್ಯ ಎಂದು PIB ಮತ್ತೊಮ್ಮೆ ಸಾರ್ವಜನಿಕರಿಗೆ ಮನವಿ ಮಾಡಿದೆ.

Continue Reading

ಕ್ರೀಡೆ

ಲಿಯೋನೆಲ್ ಮೆಸ್ಸಿ ವಿಶ್ವದಾಖಲೆ: ಒಂದೇ ಪಂದ್ಯದಲ್ಲಿ 6 ಐತಿಹಾಸಿಕ ಮೈಲಿಗಲ್ಲು, 1 ಬೇಡದ ದಾಖಲೆ!

Published

on

ಅರ್ಜೆಂಟೀನಾ: ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ವಿಶ್ವಕಪ್ ವೇದಿಕೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಈಜಿಪ್ಟ್ ವಿರುದ್ಧ ನಡೆದ ರೋಚಕ ನಾಕೌಟ್ ಪಂದ್ಯದಲ್ಲಿ 3-2 ಅಂತರದ ಜಯ ಸಾಧಿಸಿದ ಹಾಲಿ ಚಾಂಪಿಯನ್ ಅರ್ಜೆಂಟೀನಾ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಮೆಸ್ಸಿ ಒಂದೇ ಪಂದ್ಯದಲ್ಲಿ ಹಲವು ಐತಿಹಾಸಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಪಂದ್ಯದ ಮೊದಲಾರ್ಧದಲ್ಲಿ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದ್ದ ಮೆಸ್ಸಿ, 83ನೇ ನಿಮಿಷದಲ್ಲಿ ಮಹತ್ವದ ಗೋಲು ದಾಖಲಿಸಿ ಅರ್ಜೆಂಟೀನಾಗೆ ಸಮಬಲ ತಂದುಕೊಟ್ಟರು. ಬಳಿಕ ಇಂಜುರಿ ಟೈಮ್‌ನಲ್ಲಿ ಎಂಜೊ ಫೆರ್ನಾಂಡಿಸ್ ಬಾರಿಸಿದ ಗೋಲಿನ ನೆರವಿನಿಂದ ಅರ್ಜೆಂಟೀನಾ ಸ್ಮರಣೀಯ ಗೆಲುವು ದಾಖಲಿಸಿತು. 79ನೇ ನಿಮಿಷದವರೆಗೂ 0-2 ಹಿನ್ನಡೆಯಲ್ಲಿದ್ದ ತಂಡ ಅಂತಿಮವಾಗಿ ಗೆಲುವು ಸಾಧಿಸಿದ್ದು ವಿಶೇಷವಾಗಿದೆ.

ಈ ಗೋಲಿನೊಂದಿಗೆ ಮೆಸ್ಸಿ ವಿಶ್ವಕಪ್ ಇತಿಹಾಸದಲ್ಲಿ ಸತತ ಆರು ನಾಕೌಟ್ ಪಂದ್ಯಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಿದರು. ಅಲ್ಲದೆ, ಸತತ ಒಂಬತ್ತು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿದ ಸಾಧನೆಯನ್ನೂ ಮುಂದುವರಿಸಿದರು. 2026ರ ವಿಶ್ವಕಪ್‌ನಲ್ಲಿ ಅವರ ಗೋಲುಗಳ ಸಂಖ್ಯೆ ಎಂಟಕ್ಕೇರಿದ್ದು, ವಿಶ್ವಕಪ್ ಇತಿಹಾಸದಲ್ಲಿ ಒಟ್ಟು ಗೋಲುಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಎಂಟು ಗೋಲುಗಳ ಮೂಲಕ ಅರ್ಜೆಂಟೀನಾದ ದಿಗ್ಗಜ ಗಿಲ್ಲೆರ್ಮೊ ಸ್ಟೇಬಿಲ್ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ. ಜೊತೆಗೆ ಡಿಯಾಗೋ ಮರಡೋನಾ ನಂತರ ವಿಶ್ವಕಪ್ ಪಂದ್ಯವೊಂದರಲ್ಲಿ ಗೋಲು ಗಳಿಸಿ, ಕನಿಷ್ಠ ಐದು ಡ್ರಿಬಲ್ಸ್ ಪೂರ್ಣಗೊಳಿಸಿ ಹಾಗೂ ಐದಕ್ಕಿಂತ ಹೆಚ್ಚು ಗೋಲು ಅವಕಾಶಗಳನ್ನು ಸೃಷ್ಟಿಸಿದ ಎರಡನೇ ಅರ್ಜೆಂಟೀನಾ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ಆದರೆ ಇದೇ ಪಂದ್ಯದಲ್ಲಿ ಪೆನಾಲ್ಟಿ ಮಿಸ್ ಮಾಡಿಕೊಂಡ ಕಾರಣ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಎರಡು ಪೆನಾಲ್ಟಿಗಳನ್ನು ಮಿಸ್ ಮಾಡಿದ ಮೊದಲ ಆಟಗಾರ ಎಂಬ ಅನಗತ್ಯ ದಾಖಲೆಯೂ ಅವರ ಹೆಸರಿಗೆ ಸೇರಿದೆ. ಇದರೊಂದಿಗೆ ವಿಶ್ವಕಪ್ ವೃತ್ತಿಜೀವನದಲ್ಲಿ ನಾಲ್ಕು ಪೆನಾಲ್ಟಿಗಳನ್ನು ಕೈಚೆಲ್ಲಿರುವ ಆಟಗಾರ ಎಂಬ ದಾಖಲೆಯನ್ನೂ ಮೆಸ್ಸಿ ಹೊಂದಿದ್ದಾರೆ. ದಾಖಲೆಗಳ ಸಂಭ್ರಮದ ನಡುವೆಯೇ ಈ ಅಪರೂಪದ ಅಂಕಿಅಂಶವೂ ಚರ್ಚೆಗೆ ಕಾರಣವಾಗಿದೆ.

Continue Reading

Trending