blind cricket
ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ
ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ
ಬರ್ಮಿಂಗ್ಹ್ಯಾಮ್: ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಸ್ಎ) ವಿಶ್ವ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸೀಸ್ ಟೀಂಅನ್ನು 9 ವಿಕೆಟ್ಗಳಿಂದ ಸೋಲಿಸಿ ಭಾರತದ ನಾರಿಯರು ಇತಿಹಾಸ ಬರೆದಿದ್ದಾರೆ.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಂಗರೂ ಪಡೆ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114ರನ್ ಕಲೆ ಹಾಕಿತು. ಎರಡನೇ ಇನ್ನಿಂಗ್ಸ್ ವೇಳೆ ಮಳೆ ಬಂದ ಕಾರಣ ಪಂದ್ಯವನ್ನ ಡಿಎಲ್ಎಸ್ ನಿಯಮದಂತೆ 9 ಓವರ್ಗಳಿಗೆ ಇಳಿಸಿ ಭಾರತಕ್ಕೆ 43 ರನ್ಗಳ ಗುರಿ ನೀಡಲಾಯಿತು. ಈ ಗುರಿಯನ್ನ ಬೆನ್ನತ್ತಿದ ಭಾರತ ತಂಡದ ನಾರಿಯರು ಕೇವಲ 3.3 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ ಕಲೆ ಹಾಕಿ ಗೆಲುವಿನ ನಗೆ ಬೀರಿದರು. ಈ ಮೂಲಕ ಮೊದಲ ಬಾರಿಗೆ ಐಬಿಎಸ್ಎ ವಿಶ್ವ ಕ್ರೀಡಾಕೂಟದಲ್ಲಿ ಭಾರತದ ಮಹಿಳೆಯರು ಚಿನ್ನಗೆದ್ದು ದಾಖಲೆ ನಿರ್ಮಿಸಿದರು.
ಇದಕ್ಕೂ ಮೊದಲು ಆಗಸ್ಟ್ 20ರಂದು ನಡೆದ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳಾ ತಂಡವು 8 ವಿಕೆಟ್ಗಳ ಗೆಲವು ಸಾಧಿಸಿದ್ದರು. ಆ ಮೂಲಕ ವರ್ಲ್ಡ್ ಗೇಮ್ಸ್ ಅಭಿಯಾನವನ್ನು ಭಾರತ ಪ್ರಭಾವಶಾಲಿ ರೀತಿಯಲ್ಲಿ ಪ್ರಾರಂಭಿಸಿತು.
ನಂತರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಭಾರತದ ನಾರಿಯರು ಬಿರುಸಿನ ಪ್ರದರ್ಶನವನ್ನು ತೋರಿದ್ದರು. ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 268ರನ್ಗಳ ಕಲೆ ಹಾಕಿದ್ದರು. ಭಾರತದ ಪರ ಗಂಗವ್ವ ಎಚ್. 60 ಎಸೆತಗಳಲ್ಲಿ 117 ರನ್ ಗಳಿಸಿ ತಂಡ ಗೆಲವಿಗೆ ಪ್ರಮುಖ ಪಾತ್ರವಹಿಸಿದ್ದರು. ಈ ಅಸಾಧಾರಣ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ 185 ರನ್ ಗಳಿಸಿ ಭಾರತದ ಎದುರು ಸೋಲೊಪ್ಪಿಕೊಂಡಿತ್ತು.
ಮತ್ತೊಂದೆಡೆ ಭಾರತದ ಪುರುಷರ ಅಂಧರ ಕ್ರಿಕೆಟ್ ತಂಡವು IBSA ವಿಶ್ವ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದೆ. ಅಂತಿಮ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಸೆಣಸಲಿದೆ. ಕಳೆದ ವಾರ ಎರಡು ತಂಡಗಳು ತಮ್ಮ ವರ್ಲ್ಡ್ ಗೇಮ್ಸ್ ಟೂರ್ನಿಯನ್ನು ಆರಂಭಿಸಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 18 ರನ್ಗಳಿಂದ ಮಣಿಸಿತ್ತು.
ಇದೀಗ ಉಭಯ ತಂಡಗಳು ಎರಡನೇ ಬಾರಿಗೆ ಟೂರ್ನಿಯಲ್ಲಿ ಮುಖಾಮುಖಿ ಆಗಿರುವುದರಿಂದ ಚಿನ್ನದ ಮೇಲೆ ಕಣ್ಣಿಟ್ಟಿರುವ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ನೋಡುತ್ತಿದೆ.
-
ದೇಶ7 ಗಂಟೆಗಳು agoKPSC Recruitment Scam: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಗಂಭೀರ ಆರೋಪ; ನೇಮಕಾತಿ ದಂಧೆ ಬಯಲು ಎಂದ ಕೇಂದ್ರ ಸಚಿವ
-
ದೇಶ7 ಗಂಟೆಗಳು agoNepal Flood Horror: ಮಹಿಳೆಯ ಮೃತದೇಹದಿಂದ ಆಭರಣ ಕಳವು; ವೈರಲ್ ವಿಡಿಯೋ ಆಧರಿಸಿ ಇಬ್ಬರ ಬಂಧನ
-
ಬೆಂಗಳೂರು8 ಗಂಟೆಗಳು agoMake My Propertyz ಟೈಟಲ್ ಸ್ಪಾನ್ಸರ್; ಮೋಹನ್, ಆಂಜನಪ್ಪ, ಹರೀಶ್, ಸಂತೋಷ್, ಗೌರೀಶ್, Hosa Suddi, ಶಿವಕುಮಾರ್ರಿಂದ ಕ್ರೀಡೆಗೆ ಬೆಂಬಲ!
-
ರಾಜ್ಯ6 ಗಂಟೆಗಳು agoKRS ಡ್ಯಾಂಗೆ ಭಾರೀ ಶಾಕ್! ಒಳಹರಿವು ದಿಢೀರ್ ಕುಸಿತ; ಸದ್ಯದ ನೀರಿನ ಮಟ್ಟ ಎಷ್ಟು ಗೊತ್ತಾ?
-
ದೇಶ10 ಗಂಟೆಗಳು agoPM Narendra Modi Foreign Visit: ಮೋದಿ 4 ದಿನಗಳ ವಿದೇಶ ಪ್ರವಾಸ, ಎಸ್ಸಿಒ ಶೃಂಗಸಭೆಯಲ್ಲಿ ಭಾಗಿ
-
ರಾಜ್ಯ6 ಗಂಟೆಗಳು agoMysuru Dasara ಗಜಪಡೆ ಅರಮನೆಗೆ ಎಂಟ್ರಿ; ಜನಸಂದಣಿ ಕಂಡು ಶ್ರೀರಾಮ ಆನೆ ಗಾಬರಿ, ಬಳಿಕ ಏನಾಯ್ತು?
-
ಸಿನಿಮಾ9 ಗಂಟೆಗಳು ago‘Toxic’ ವಿರುದ್ಧ ಮಾತನಾಡಿದವರಿಗೆ ಕಾನೂನು ನೋಟಿಸ್? ಚಿತ್ರತಂಡದ ನಡೆಗೆ ಕಾರಣವೇನು?
-
ರಾಜಕೀಯ4 ಗಂಟೆಗಳು agoYathindra Siddaramaiah ಸದ್ದಿಲ್ಲದೆ ಶುರು ಮಾಡಿದ್ರಾ ಹೊಸ ರಾಜಕೀಯ ಲೆಕ್ಕಾಚಾರ? ಜಮೀರ್ ಭೇಟಿಗೆ ಹೆಚ್ಚಿದ ಕುತೂಹಲ
