ರಾಜ್ಯ
ದರ್ಶನ್ ಜೈಲುವಾಸದ ಮಧ್ಯೆ 2005ರ ಮಾಸ್ ಹಿಟ್ ‘ಶಾಸ್ತ್ರೀ’ ಶುಕ್ರವಾರ ಮರು ಬಿಡುಗಡೆ – Shastri Re Release
ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಪ್ರಕರಣದ ತನಿಖೆ ಮುಂದುವರಿದಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, 2005ರಲ್ಲಿ ಮಾಸ್ ಹಿಟ್ ಆಗಿದ್ದ ‘ಶಾಸ್ತ್ರೀ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಹೌದು, ದರ್ಶನ್ ಸಿನಿಮಾ ಕೆರಿಯರ್‌ನ ಹಿಟ್ ಚಿತ್ರಗಳ ಪೈಕಿ ಒಂದಾಗಿರುವ ‘ಶಾಸ್ತ್ರೀ’ ಇದೇ ಶುಕ್ರವಾರ ಮರು ಬಿಡುಗಡೆ ಆಗುತ್ತಿದೆ.
ದರ್ಶನ್ ಜೈಲಿನಲ್ಲಿದ್ದು, ಇದೇ ಸಂದರ್ಭದಲ್ಲಿ ವಿತರಕ ವಿ.ಎಂ.ಶಂಕರ್ ಅವರು ಸಿನಿಮಾ ಮರು ಬಿಡುಗಡೆ ಮಾಡುತ್ತಿದ್ದಾರೆ.
ಈ ಬಗ್ಗೆ ‘ಈಟಿವಿ ಭಾರತ’ದ ಜೊತೆ ಮಾತನಾಡಿರುವ ಅವರು, “ಈ ವಾರ ಒಂದೂ ಕನ್ನಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ಹೀಗಾಗಿ ನಾನು ‘ಶಾಸ್ತ್ರೀ’ ಸಿನಿಮಾವನ್ನು ಸುಮಾರು 50 ಥಿಯೇಟರ್ಗಳಲ್ಲಿ ರೀ ರಿಲೀಸ್ ಮಾಡುತ್ತಿದ್ದೇನೆ. ಕೆ.ಜಿ ರಸ್ತೆಯ ತ್ರಿವೇಣಿ ಅಥವಾ ಸಂತೋಷ್ ಥಿಯೇಟರ್ನಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇನೆ. ‘ಕಾಟೇರ’ ರಿಲೀಸ್ ಆದಾಗ ಅದೆಷ್ಟೋ ಚಿತ್ರಮಂದಿರಗಳು ತೆರೆದವು. ದರ್ಶನ್ ಪ್ರಕರಣಕ್ಕೂ ಸಿನಿಮಾ ರಿಲೀಸ್ಗೂ ಯಾವುದೇ ಸಂಬಂಧವಿಲ್ಲ. ಸುಮಾರು ಆರು ತಿಂಗಳ ಹಿಂದೆ ರೀ ರಿಲೀಸ್ಗೆ ರೆಡಿ ಮಾಡಿಟ್ಟುಕೊಂಡಿದ್ದೆವು. ‘ಶಾಸ್ತ್ರೀ’ ನಿರ್ಮಾಪಕ ಅಣಜಿ ನಾಗರಾಜ್ ಅವರಿಂದ ಈ ಸಿನಿಮಾ ರೈಟ್ಸ್ ಪಡೆದು ಮರು ಬಿಡುಗಡೆ ಮಾಡುತ್ತಿದ್ದೇನೆ. ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಪ್ರೇಕ್ಷಕರು ಬಂದೇ ಬರುತ್ತಾರೆಂಬ ನಂಬಿಕೆ ಇದೆ. ಈ ಹಿಂದೆ ‘ಎ’ ಸಿನಿಮಾವನ್ನೂ ನಾವೇ ರೀ-ರಿಲೀಸ್ ಮಾಡಿದ್ದೆವು. ಆಗಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು” ಎಂದು ತಿಳಿಸಿದರು.
ರಾಜ್ಯ
Udupi ಶ್ರೀಕೃಷ್ಣ ಮಠದಲ್ಲಿ ಹರಿಕಥೆ ವಿವಾದ: ಆದಿ ಶಂಕರಾಚಾರ್ಯರ ಹೇಳಿಕೆಗೆ ಕ್ಷಮೆ
ಉಡುಪಿ: Udupi ವಿಶ್ವಪ್ರಸಿದ್ಧ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಕುರಿತು ಮಾಡಲಾದ ಆಕ್ಷೇಪಾರ್ಹ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಂಬಂಧಿತ ಹರಿಕಥೆ ಕಲಾವಿದೆ ವಿಡಿಯೋ ಸಂದೇಶದ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಕಲಾವಿದೆ, ಈ ವಿವಾದಕ್ಕೂ ಉಡುಪಿ ಮಠ ಅಥವಾ ಶಿರೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಯಾರನ್ನೂ ಅವಹೇಳನ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ. ಮಧ್ವ ಮಠದವರು ಈ ರೀತಿಯ ಹೇಳಿಕೆ ನೀಡುವಂತೆ ಸೂಚಿಸಿಲ್ಲ. ಪುಸ್ತಕವೊಂದರ ಉಲ್ಲೇಖದ ಆಧಾರದ ಮೇಲೆ ಮಾತನಾಡಿದ್ದೇವೆ. ನಮ್ಮ ಮಾತಿನಿಂದ ಯಾವುದೇ ಮಠದವರಿಗೆ ಅಥವಾ ಭಕ್ತರಿಗೆ ನೋವಾಗಿದ್ದರೆ ಹೃತ್ಪೂರ್ವಕವಾಗಿ ಕ್ಷಮೆ ಕೋರುತ್ತೇವೆ” ಎಂದು ತಿಳಿಸಿದ್ದಾರೆ.
ಹರಿಕಥೆ ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯರ ಜೀವನ ಚರಿತ್ರೆ ಹೇಳುವ ವೇಳೆ ಆದಿ ಶಂಕರಾಚಾರ್ಯರನ್ನು ಏಕವಚನದಲ್ಲಿ ಸಂಬೋಧಿಸಿ ಅವಹೇಳನಕಾರಿ ಕಟ್ಟುಕಥೆ ಹೇಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ಶಂಕರಾಚಾರ್ಯರ ಅನುಯಾಯಿಗಳು ಹಾಗೂ ಹಿಂದೂ ಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪರ್ಯಾಯ ಶಿರೂರು ಮಠ ಅಧಿಕೃತ ಪ್ರಕಟಣೆ ಹೊರಡಿಸಿದೆ. ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಅವರ ಪ್ರಕಾರ, ಅಂಕಿತಾ ನಾಯಕ್ ಮತ್ತು ಗೌರಿ ಪಾಂಡುರಂಗಿ ಅವರು ಭರತನಾಟ್ಯ ಕಾರ್ಯಕ್ರಮಕ್ಕೆ ಅನುಮತಿ ಕೋರಿದ್ದರು. ಆದರೆ ಕಾರ್ಯಕ್ರಮದ ವೇಳೆ ಹರಿಕಥೆ ನಡೆಸಲಾಗಿದೆ. ಹರಿಕಥೆಯಲ್ಲಿ ಆದಿ ಶಂಕರಾಚಾರ್ಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದ ತಕ್ಷಣವೇ ಸಂಬಂಧಿತ ಕಲಾವಿದೆಯರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿದ್ದು, ಅವರು ಕ್ಷಮೆ ಕೋರಿದ್ದಾರೆ ಎಂದು ತಿಳಿಸಲಾಗಿದೆ.
ಮಠದ ಆವರಣದಲ್ಲಿ ನಡೆದ ಈ ಅನಪೇಕ್ಷಿತ ಘಟನೆಯ ಬಗ್ಗೆ ಶಿರೂರು ಮಠ ವಿಷಾದ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯ
Congress Government ದ ಮೇಲೆಯೇ ವಿಜಯಶಾಂತಿ ವಾಗ್ದಾಳಿ: ಮಹಿಳಾ ಭದ್ರತೆ ಬಗ್ಗೆ ತೀಕ್ಷ್ಣ ಪ್ರಶ್ನೆ
ಹೈದರಾಬಾದ್: ತೆಲಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ವಿಧಾನ ಪರಿಷತ್ ಸದಸ್ಯೆ ವಿಜಯಶಾಂತಿ (Vijayashanti) ಮತ್ತೆ ರಾಜಕೀಯವಾಗಿ ಸಕ್ರಿಯರಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಫೀಸ್ ರೀಇಂಬರ್ಸ್‌ಮೆಂಟ್ (Fee Reimbursement) ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.
ಶಾಬಾದ್ (Shabad) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಜಯಶಾಂತಿ, ಮಹಿಳೆಯರ ಭದ್ರತೆಗೆ ಸರ್ಕಾರ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪದಲ್ಲೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪೋಕ್ಸೋ (POCSO) ಪ್ರಕರಣದ ಆರೋಪಿ ರಾಜ್‌ಕುಮಾರ್ ಹೇಗೆ ಜಾಮೀನಿನ ಮೇಲೆ ಹೊರಬಂದರು? ಇದರಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸ್ ವ್ಯವಸ್ಥೆಯಲ್ಲಿರುವ ಲೋಪಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುತ್ತಿವೆ. ಶಾಬಾದ್ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಜಯಶಾಂತಿ ತಮ್ಮ ಎಕ್ಸ್ (X) ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಜೂನ್ 26ರಂದು ಫೀಸ್ ರೀಇಂಬರ್ಸ್‌ಮೆಂಟ್ ಬಾಕಿ ಹಣ ಬಿಡುಗಡೆ ಕುರಿತು ಕೂಡ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೈಕೋರ್ಟ್ ಮಧ್ಯಂತರ ಆದೇಶದಂತೆ ವಿದ್ಯಾರ್ಥಿಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಸರ್ಕಾರದ ಮಾನದಂಡಗಳನ್ನು ಪಾಲಿಸದ ಖಾಸಗಿ ಕಾಲೇಜುಗಳ ವಿರುದ್ಧ ವಿಜಿಲೆನ್ಸ್ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಜಯಶಾಂತಿಯ ಈ ಸರಣಿ ಟ್ವೀಟ್‌ಗಳು ತೆಲಂಗಾಣ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಸರ್ಕಾರದ ಒಳಗೇ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿವೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿವೆ. ಮಹಿಳಾ ಸುರಕ್ಷತೆ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಗಮನ ಸೆಳೆದಿವೆ.
ಅಪರಾಧ
Bidadi Township ವಿವಾದ ತೀವ್ರ: 20ಕ್ಕೂ ಹೆಚ್ಚು ರೈತರ ವಿರುದ್ಧ ಎಫ್‌ಐಆರ್
ರಾಮನಗರ: Bidadi Township ಬಿಡದಿ ಟೌನ್‌ಶಿಪ್ ಯೋಜನೆ (Bidadi Township Project) ಸಂಬಂಧ ಜಂಟಿ ಭೂಮಾಪನ (JMC Survey) ಕಾರ್ಯದ ವೇಳೆ ಉಂಟಾದ ಗಲಾಟೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಡಲಹಳ್ಳಿಯಲ್ಲಿ ಜೆಎಂಸಿ ಸರ್ವೆಗೆ ತಡೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆ ನಡೆಸುವುದು ಹಾಗೂ ಸರ್ವೆ ಕಾರ್ಯಕ್ಕೆ ಅಡ್ಡಿಯಾಗಿರುವ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇದಕ್ಕೂ ನಡುವೆ, ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರು ಕಟ್ಟೆಚ್ಚರ ವಹಿಸಿದ್ದು, ಅಧಿಕಾರಿಗಳು ಮತ್ತೆ ಜೆಎಂಸಿ ಸರ್ವೆ ಆರಂಭಿಸಲು ಮುಂದಾದರೆ ಸ್ಥಳದಲ್ಲೇ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರೈತ ಸಂಘಟನೆಗಳು ಹಾಗೂ ಸ್ಥಳೀಯರು ಯಾವುದೇ ಸಂದರ್ಭಕ್ಕೂ ಸಜ್ಜಾಗಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಜೆಎಂಸಿ ಸರ್ವೆ ಕಾರ್ಯವನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಮೊದಲು ಪ್ರತಿಭಟನಾ ನಿರತ ರೈತರೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಮತ್ತೊಂದೆಡೆ, ಯೋಜನೆಗೆ ಒಪ್ಪಿಗೆ ಸೂಚಿಸಿರುವ ರೈತರ ಜಮೀನುಗಳಲ್ಲಿ ಮಾತ್ರ ಸರ್ವೆ ಕಾರ್ಯ ಮುಂದುವರಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆಯೊಂದಿಗೆ ಸರ್ವೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಈ ಬೆಳವಣಿಗೆಗಳಿಂದ ಬಿಡದಿ ಟೌನ್‌ಶಿಪ್ ಯೋಜನೆ ಮತ್ತೊಮ್ಮೆ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ರೈತರ ನಡುವಿನ ಮಾತುಕತೆ ಮಹತ್ವ ಪಡೆದುಕೊಳ್ಳಲಿದೆ. ಯೋಜನೆ (Bidadi Township Project) ಸಂಬಂಧ ಜಂಟಿ ಭೂಮಾಪನ (JMC Survey) ಕಾರ್ಯದ ವೇಳೆ ಉಂಟಾದ ಗಲಾಟೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಡಲಹಳ್ಳಿಯಲ್ಲಿ ಜೆಎಂಸಿ ಸರ್ವೆಗೆ ತಡೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಮತ್ತೊಂದೆಡೆ, ಯೋಜನೆಗೆ ಒಪ್ಪಿಗೆ ಸೂಚಿಸಿರುವ ರೈತರ ಜಮೀನುಗಳಲ್ಲಿ ಮಾತ್ರ ಸರ್ವೆ ಕಾರ್ಯ ಮುಂದುವರಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆಯೊಂದಿಗೆ ಸರ್ವೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಈ ಬೆಳವಣಿಗೆಗಳಿಂದ ಬಿಡದಿ ಟೌನ್‌ಶಿಪ್ ಯೋಜನೆ ಮತ್ತೊಮ್ಮೆ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ರೈತರ ನಡುವಿನ ಮಾತುಕತೆ ಮಹತ್ವ ಪಡೆದುಕೊಳ್ಳಲಿದೆ.
-
ರಾಜ್ಯ18 ಗಂಟೆಗಳು agoBakrid ವೇಳೆ ಗೋಹತ್ಯೆ ತಡೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ; ತಮಿಳುನಾಡು ಸರ್ಕಾರಕ್ಕೆ ಸದ್ಯದ ನೆಮ್ಮದಿ
-
ದೇಶ22 ಗಂಟೆಗಳು agoPM Narendra Modi ಜಕಾರ್ತಾ ಭೇಟಿ ಐತಿಹಾಸಿಕ; ಭಾರತ-ಇಂಡೋನೇಷ್ಯಾ ನಡುವೆ ಹಲವು ಮಹತ್ವದ ಒಪ್ಪಂದಗಳು
-
ರಾಜ್ಯ21 ಗಂಟೆಗಳು agoGovernment Office ಗಳಿಗೆ ಡಿಸಿ ದಿಢೀರ್ ಭೇಟಿ; ತಡವಾಗಿ ಬಂದ ಅಧಿಕಾರಿಗಳ ವಿರುದ್ಧ ಕಠಿಣ ಸೂಚನೆ
-
ರಾಜ್ಯ19 ಗಂಟೆಗಳು agoBidadi Township ವಿರೋಧಕ್ಕೆ ರೈತರ ರಣಕಹಳೆ; JMC ಕಾರಿನ ಮೇಲೆ ಕಲ್ಲು ತೂರಾಟ
-
ಬೆಂಗಳೂರು19 ಗಂಟೆಗಳು agoYeshwanthpura ದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಬ್ಯಾಡರಹಳ್ಳಿ, ಭಾರತನಗರದಲ್ಲಿ ಹೆಚ್ಚಿದ ಭೀತಿ
-
ರಾಜ್ಯ2 ಗಂಟೆಗಳು agoGruha Lakshmi ಫಲಾನುಭವಿಗಳೇ ಗಮನಿಸಿ: ಇ-ಕೆವೈಸಿ ಸುದ್ದಿ ಸುಳ್ಳು, ಸೈಬರ್ ಕೇಂದ್ರಕ್ಕೆ ಅಲೆಯದಿರಿ
-
ದೇಶ19 ಗಂಟೆಗಳು agoAadhar Card ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಇಮೇಲ್ ಅಪ್ಡೇಟ್ ಮೊಬೈಲ್ನಲ್ಲೇ ಉಚಿತ!
-
ದೇಶ26 ನಿಮಿಷಗಳು agoWaynad ಭೂಕುಸಿತ: ರಾಹುಲ್-ಪ್ರಿಯಾಂಕ ಗೈರು ಹಾಜರಿ ಬಗ್ಗೆ ಬಿಜೆಪಿ ವಾಗ್ದಾಳಿ