athlelitics
ತಿರಂಗದ ಮೇಲೆ ಆಟೋಗ್ರಾಫ್ ಹಾಕಲಾರೆ’: ‘ಚಿನ್ನದ ಹುಡುಗ’ ನೀರಜ್ ಚೋಪ್ರಾ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಅಭಿಮಾನಿಯೊಬ್ಬರು ಭಾರತದ ಧ್ವಜದ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳಿದ್ದಾರೆ. ನಯವಾಗಿಯೇ ನಿರಾಕರಿಸಿದ ನೀರಜ್, ಅಭಿಮಾನಿಯ ಟೀ ಶರ್ಟ್ನ ತೋಳಿಗೆ ಸಹಿ ಹಾಕಿ ದೇಶಾಭಿಮಾನ ಮೆರೆದರು.
ಬುಡಾಪೆಸ್ಟ್ (ಹಂಗೇರಿ): ನೀರಜ್ ಚೋಪ್ರಾ ಅವರಿಂದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 88.17 ಮೀಟರ್ ದೂರ ಚಾವೆಲಿನ್ ಥ್ರೋ ಮಾಡಿ ಐತಿಹಾಸಿಕ ಸಾಧನೆಯೊಂದಿಗೆ ಮತ್ತೊಮ್ಮೆ ಭಾರತಕ್ಕೆ ವಿಶೇಷ ಗೌರವ ತಂದುಕೊಟ್ಟಿದ್ದಾರೆ. ಈ ಸಾಧನೆಯ ಮೂಲಕ ಶತಕೋಟಿ ಅಭಿಮಾನಿಗಳ ಹೃದಯವನ್ನೂ ಚೋಪ್ರಾ ಗೆದ್ದರು. ಇದರ ಹೊರತಾಗಿ ಚೋಪ್ರಾ ನಡೆಯೊಂದು ಇನ್ನಷ್ಟು ಮೆಚ್ಚುಗೆ ಗಳಿಸಿದೆ.
ಹಂಗೇರಿಯಾದ ಅಭಿಮಾನಿಯೊಬ್ಬರು ನೀರಜ್ ಬಳಿ ಬಂದು ಭಾರತದ ತ್ರಿವರ್ಣ ಧ್ವಜದ ಮೇಲೆ ಆಟೋಗ್ರಾಫ್ ಹಾಕಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಗೌರವಪೂರ್ವಕವಾಗಿಯೇ ಅವರು ನಿರಾಕರಿಸಿದರು. “ವಹಾ ನಹಿ ಸೈನ್ ಕರ್ ಸಕ್ತಾ (ಅಲ್ಲಿ ಸಹಿ ಹಾಕಲು ಸಾಧ್ಯವಿಲ್ಲ)” ಎಂದು ಅವರು ಹೇಳಿದರು. ಭಾರತದ ಧ್ವಜ ಸಂಹಿತೆಯ 3.28ರ ಪ್ರಕಾರ, “ಧ್ವಜದ ಮೇಲೆ ಯಾವುದೇ ರೀತಿಯ ಅಕ್ಷರಗಳನ್ನು ಬರೆಯುವಂತಿಲ್ಲ”.
-
ದೇಶ2 ಗಂಟೆಗಳು agoEPFO ಹೊಸ ಸೌಲಭ್ಯ 2026: UPI ಮೂಲಕ PF ಹಣ ವಿತ್ಡ್ರಾ
-
ದೇಶ8 ಗಂಟೆಗಳು agoKerala : ಸಿಜೆಐ ಸೂರ್ಯಕಾಂತ್ ರಾಜೀನಾಮೆಗೆ ಕೇರಳ ಕಾಂಗ್ರೆಸ್ ಆಗ್ರಹ: ವಿವಾದಾತ್ಮಕ ಪೋಸ್ಟ್ ಡಿಲೀಟ್, ಬಿಜೆಪಿ ಆಕ್ರೋಶ
-
ದೇಶ7 ಗಂಟೆಗಳು agoDelhi: ದೆಹಲಿ ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್: ಇಂಡಿಯಾ ಒಕ್ಕೂಟದ ಮೆರವಣಿಗೆಯಲ್ಲಿ ಏನಾಯಿತು?
-
ಬೆಂಗಳೂರು8 ಗಂಟೆಗಳು agoBengaluru Potholes : ಬೆಂಗಳೂರು ರಸ್ತೆ ಗುಂಡಿ ದುರಸ್ತಿಗೆ ಬ್ಲಿಂಕಿಟ್ ಮಾದರಿ: GBA ಹೊಸ ಚಿಂತನೆ
-
ರಾಜ್ಯ8 ಗಂಟೆಗಳು agoKarnataka: ಕ್ರಿಶ್ಚಿಯನ್ ಸಮುದಾಯಕ್ಕೆ ಗುಡ್ನ್ಯೂಸ್: ಸಾಲ, ಸಹಾಯಧನ ಅರ್ಜಿ ಅವಧಿ ವಿಸ್ತರಣೆ
-
ರಾಜ್ಯ8 ಗಂಟೆಗಳು agoKarnataka: ಕರ್ನಾಟಕ ಸರ್ಕಾರಿ ನೌಕರರಿಗೆ ಸೂಚನೆ: HRMS-2.0 e-SR ಕಡ್ಡಾಯ
-
ದೇಶ7 ಗಂಟೆಗಳು agoRahul Gandhi : ರಾಹುಲ್ ಗಾಂಧಿ ಅರ್ಜಿಯಲ್ಲಿ 14 ಲೋಪ: ₹220 ಕೋರ್ಟ್ ಶುಲ್ಕ ಕೊರತೆ!
-
ದೇಶ1 ಗಂಟೆ agoRAHUL GANDHI: ರಾಹುಲ್ ಗಾಂಧಿ ವಿರುದ್ಧ ಗರ್ಭಿಣಿ ಪತ್ರಕರ್ತೆಯ ಆರೋಪ: ಕಾಂಗ್ರೆಸ್ ತಿರುಗೇಟು
