Connect with us

ದೇಶ

ಶಿಕ್ಷಣ ಸಾಲ: ಬಡ್ಡಿ ದರದಲ್ಲಿ ಭಾರೀ ರಿಯಾಯ್ತಿ ಘೋಷಣೆ

Published

on

ನವದೆಹಲಿ: ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 7 ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷ ಕೂಡ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ,
2024-25 ಬಜೆಟ್ ಭಾಷಣದಲ್ಲಿ ಸರ್ಕಾರುವ ದೇಶಿಯ ಸಂಸ್ಧೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ವರೆಗಿನ ಸಾಲಕ್ಕೆ ಹಣಕಾಸಿನ ನೆರವು ಘೋಷಿಸಿದ್ದಾರೆ, ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿ ನೇರವಾಗಿ ಇ-ವೋಚರ್‍ಗಳನ್ನು ನೀಡಲಾಗುತ್ತದೆ ಮತ್ತು ಸಾಲದ ಮೊತ್ತದ ಶೇಕಡಾ 3 ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು,
ರಾಜ್ಯಗಳು ಮತ್ತು ಉದ್ಯಮದ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿಗಾಗಿ ಹೊಸ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು 5 ವರ್ಷಗಳಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯ ನೀಡುವ ಗುರಿಯನ್ನು ಒದಿಗಿಸಲಾಗುವುದು ಎಂದು ಬಜೆಟ್ ನಲ್ಲಿ ಮಂಡಿಸಿದರು,

ದೇಶ

Ukraine ಮೇಲೆ ರಷ್ಯಾದ ಭೀಕರ ದಾಳಿ: ಮೊದಲ ಬಾರಿಗೆ FAB-3000 ಗ್ಲೈಡ್ ಬಾಂಬ್ ಪ್ರಯೋಗ

Published

on

ಮಾಸ್ಕೋ:Ukraine Russia ನಾಲ್ಕು ವರ್ಷಗಳಿಂದ ಮುಂದುವರಿಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಇದೀಗ ಮತ್ತಷ್ಟು ತೀವ್ರಗೊಂಡಿದ್ದು, ರಷ್ಯಾ ತನ್ನ ಅತ್ಯಂತ ಶಕ್ತಿಶಾಲಿ FAB-3000 Glide Bomb ಅನ್ನು ಉಕ್ರೇನ್ ಮೇಲೆ ಪ್ರಯೋಗಿಸಿರುವುದಾಗಿ ತಿಳಿಸಿದೆ. ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ಪ್ರತೀಕಾರವಾಗಿ ಈ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.

ರಷ್ಯಾ ಮಿಲಿಟರಿಯ ಪ್ರಕಾರ, ಉಕ್ರೇನ್‌ನ ಜಪೋರಿಝಿಯಾ (Zaporizhzhia) ಪ್ರದೇಶದ ಓರಿಖಿವ್ (Orikhiv) ನಗರವನ್ನು ಗುರಿಯಾಗಿಸಿಕೊಂಡು FAB-3000 ಗ್ಲೈಡ್ ಬಾಂಬ್ ಎಸೆಯಲಾಗಿದೆ. ದಾಳಿಯ ವಿಡಿಯೋವನ್ನೂ ರಷ್ಯಾ ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಸುಮಾರು 3 ಟನ್ ತೂಕದ FAB-3000 ಗ್ಲೈಡ್ ಬಾಂಬ್ ಸುಮಾರು 1.4 ಟನ್ ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಬಾಂಬ್ ಸ್ಫೋಟದಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿರುವ ಸಾಧ್ಯತೆ ಇದ್ದರೂ, ಸಾವುನೋವು ಅಥವಾ ಗಾಯಾಳುಗಳ ಕುರಿತು ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.

ಇನ್ನೊಂದೆಡೆ, ಉಕ್ರೇನ್ ಕೂಡ ರಷ್ಯಾದ ಪ್ರಮುಖ ಮೂಲಸೌಕರ್ಯಗಳು ಹಾಗೂ ಕಪ್ಪು ಸಮುದ್ರ (Black Sea) ಪ್ರದೇಶವನ್ನು ಗುರಿಯಾಗಿಸಿಕೊಂಡು ಡ್ರೋನ್ ಹಾಗೂ ವೈಮಾನಿಕ ದಾಳಿಗಳನ್ನು ಮುಂದುವರಿಸಿದೆ ಎಂದು ವರದಿಗಳು ತಿಳಿಸಿವೆ. ಉಭಯ ದೇಶಗಳ ನಡುವೆ ಪ್ರತಿದಾಳಿ-ಪ್ರತೀಕಾರದ ಕ್ರಮಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುದ್ಧದ ತೀವ್ರತೆ ಮತ್ತಷ್ಟು ಏರಿಕೆಯಾಗಿದೆ.

ಈ ಬೆಳವಣಿಗೆಗಳು ಯುರೋಪಿನ ಭದ್ರತಾ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನಿರಂತರ ಕ್ಷಿಪಣಿ, ಡ್ರೋನ್ ಮತ್ತು ವೈಮಾನಿಕ ದಾಳಿಗಳಿಂದ ಯುದ್ಧ ಪ್ರದೇಶಗಳಲ್ಲಿ ಮಾನವೀಯ ಸಂಕಷ್ಟವೂ ಮತ್ತಷ್ಟು ಗಂಭೀರವಾಗುತ್ತಿದೆ. ಉಭಯ ದೇಶಗಳ ನಡುವಿನ ಸಂಘರ್ಷ ಯಾವಾಗ ಅಂತ್ಯವಾಗಲಿದೆ ಎಂಬ ಪ್ರಶ್ನೆ ಇನ್ನೂ ಉತ್ತರಿಸದೆಯೇ ಉಳಿದಿದೆ.

Continue Reading

ಅಪರಾಧ

Sakleshpur ದಲ್ಲಿ ಕಾಡಾನೆ ಭೀಮನ ಮೇಲೆ ಕಲ್ಲು ತೂರಾಟ: ಕಾರ್ಮಿಕನ ವಿರುದ್ಧ ಆಕ್ರೋಶ

Published

on

ಹಾಸನ: Sakleshpur ತಾಲೂಕಿನ ಒಸ್ಸೂರು ಎಸ್ಟೇಟ್‌ನಲ್ಲಿ ಜನಪ್ರಿಯ ಕಾಡಾನೆ ಭೀಮ (Elephant Bhima) ಮೇಲೆ ಅಸ್ಸಾಂ ಮೂಲದ ಕಾರ್ಮಿಕನೊಬ್ಬ ಕಲ್ಲು ತೂರಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರು ಮತ್ತು ಸ್ಥಳೀಯರು ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಾಹಿತಿಯ ಪ್ರಕಾರ, ಅಸ್ಸಾಂ ಮೂಲದ ಕಾರ್ಮಿಕರು ವಾಸಿಸುತ್ತಿರುವ ಲೈನ್ ಮನೆಗಳ ಸಮೀಪ ಇಂದು (ಜುಲೈ 14) ಬೆಳಿಗ್ಗೆ ಕಾಡಾನೆ ಭೀಮ ಸಾಗುತ್ತಿತ್ತು. ಈ ವೇಳೆ ಕಾರ್ಮಿಕನೊಬ್ಬ ಕಾಡಾನೆಯತ್ತ ಪದೇಪದೇ ಕಲ್ಲು ತೂರಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಕಲ್ಲು ತಗುಲುತ್ತಿದ್ದಂತೆ ಭೀಮ ಘೀಳಿಟ್ಟು ಕಾರ್ಮಿಕನತ್ತ ನುಗ್ಗಲು ಯತ್ನಿಸಿದರೂ, ಬಳಿಕ ಅಲ್ಲಿಂದ ಓಡಿ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರಿಗೂ ತೊಂದರೆ ನೀಡದೆ ಶಾಂತ ಸ್ವಭಾವದಿಂದ ಗ್ರಾಮಗಳು ಹಾಗೂ ರಸ್ತೆಗಳ ಮೂಲಕ ಸಂಚರಿಸುವ ಭೀಮನಿಗೆ ಈ ರೀತಿ ಹಿಂಸೆ ನೀಡಿರುವುದು ಖಂಡನೀಯ ಎಂದು ಪ್ರಾಣಿ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

ಮಲೆನಾಡು ಭಾಗದ ಜನರ ಪ್ರೀತಿಗೆ ಪಾತ್ರವಾಗಿರುವ ಭೀಮ, ಹಲವು ವರ್ಷಗಳಿಂದ ಸಕಲೇಶಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಕ್ತವಾಗಿ ಓಡಾಡುತ್ತಿದ್ದು, ವಾಹನ ದಟ್ಟಣೆ ಇರುವ ರಸ್ತೆಗಳಲ್ಲೂ ಯಾರಿಗೂ ಹಾನಿ ಮಾಡದೆ ಸಂಚರಿಸುವ ಕಾಡಾನೆ ಎಂದು ಸ್ಥಳೀಯರು ಹೇಳುತ್ತಾರೆ.

ವೈರಲ್ ಆಗಿರುವ ವಿಡಿಯೋ ಆಧರಿಸಿ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ, ವನ್ಯಜೀವಿಗೆ ಕಿರುಕುಳ ನೀಡಿದ ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ. ಈ ಘಟನೆ ಮತ್ತೊಮ್ಮೆ ವನ್ಯಜೀವಿಗಳ ಸಂರಕ್ಷಣೆ ಮತ್ತು ಮಾನವ-ಪ್ರಾಣಿ ಸಹಬಾಳ್ವೆಯ ಕುರಿತು ಚರ್ಚೆಗೆ ಕಾರಣವಾಗಿದೆ.

Continue Reading

ಬೆಂಗಳೂರು

Gruhajyoti Scheme ಪರಿಷ್ಕರಣೆ ಗೊಂದಲ: ಬೀದಿಯಲ್ಲೇ ಫಾರಂ ಭರ್ತಿ ಆರೋಪ

Published

on

ನೆಲಮಂಗಲ: Gruhajyoti Scheme ಯೋಜನೆಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕೇಳಿಬಂದಿದೆ. ಮನೆ ಮನೆಗೆ ತೆರಳಿ ಮಾಹಿತಿ ಪರಿಶೀಲಿಸಿ ಅರ್ಜಿ ಭರ್ತಿ ಮಾಡಬೇಕಿದ್ದ ಸಿಬ್ಬಂದಿ, ಸಾರ್ವಜನಿಕ ಸ್ಥಳದಲ್ಲೇ ಜನರನ್ನು ಸೇರಿಸಿ ಫಾರಂ ಭರ್ತಿ ಮಾಡಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ವ್ಯಾಪ್ತಿಯ ನಾರಾಯಣಪ್ಪಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಿಬ್ಬಂದಿ ಮನೆಗಳಿಗೆ ಭೇಟಿ ನೀಡದೆ, ಬಡಾವಣೆಯ ಜನರನ್ನು ಒಂದೇ ಸ್ಥಳದಲ್ಲಿ ಸೇರಿಸಿ ಗೃಹಜ್ಯೋತಿ ಪರಿಷ್ಕರಣಾ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಗೃಹಜ್ಯೋತಿ ಪರಿಷ್ಕರಣಾ ಅರ್ಜಿಯಲ್ಲಿ ಮನೆಯ ಮಾಲೀಕರು ಹೊರರಾಜ್ಯದವರೇ, ಐಟಿ ತೆರಿಗೆ ಪಾವತಿದಾರರೇ, ಎಪಿಎಲ್ ಕಾರ್ಡ್ ಹೊಂದಿರುವವರೇ ಅಥವಾ ಬಾಡಿಗೆ ಮನೆಯವರೇ ಎಂಬ ಹಲವು ಮಾಹಿತಿಗಳನ್ನು ಪರಿಶೀಲಿಸಬೇಕಾಗಿದೆ. ಆದರೆ ಈ ಎಲ್ಲ ಮಾಹಿತಿಯನ್ನು ಸ್ಥಳ ಪರಿಶೀಲನೆ ನಡೆಸದೆ ಸಾಮೂಹಿಕವಾಗಿ ಅರ್ಜಿ ಭರ್ತಿ ಮಾಡುತ್ತಿರುವುದು ಯೋಜನೆಯ ಪಾರದರ್ಶಕತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸ್ಥಳೀಯರು, ಈ ರೀತಿಯ ಕ್ರಮದಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಯೋಜನೆಗಳು ಸರಿಯಾದ ಫಲಾನುಭವಿಗಳಿಗೆ ತಲುಪಬೇಕಾದರೆ ನಿಯಮಾನುಸಾರ ಮನೆ ಮನೆ ಸಮೀಕ್ಷೆ ನಡೆಸುವುದು ಅಗತ್ಯ ಎಂದು ಅವರು ಒತ್ತಾಯಿಸಿದ್ದಾರೆ.

ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳ ಹಿನ್ನೆಲೆಯಲ್ಲಿ ಗೃಹಜ್ಯೋತಿ ಪರಿಷ್ಕರಣೆ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಸಾರ್ವಜನಿಕರಲ್ಲಿ ಚರ್ಚೆ ಆರಂಭವಾಗಿದೆ.

Continue Reading

Trending