Connect with us

ಬೆಂಗಳೂರು

ರಾಮನಗರ ಹೆಸರು ಬದಲಾವನೆ ಪ್ರತಿಭಟನೆ ಎಚ್ಚರಿಕೆ ಕೊಟ್ಟ ಮುತಾಲಿಕ್

ಗದಗ: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜೆಲ್ಲೆಯಾಗಿ ಮರು ನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಬಗ್ಗೆಯ ಶ್ರೀ ರಾಮ ಸೇನೆಯ ಸಂಸ್ಧಾಪಕ ಪ್ರಮೋದ್ ಮುತಾಲಿಕ್ ಕಿಡಿದಾರಿದ್ದಾರೆ,
ರಾಮನಗರ ಜಿಲ್ಲೆಗೆ ಅದರದೇ ಆದ ಐತಿಹಾಸಿಕ ಹಿನ್ನೆಲೆ ಇದೆ, ರಾಮನಗರ ಹೆಸರು ಬದಲಾಯಿಸಿದ್ದು ಖಂಡನೀಯ ಎಂದು ಅವರು, ರಾಮನಗರ ಹೆಸರು ಇದ್ದರೆ ನಿಮಗೇನು ಸಮಸ್ಯೆ ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ,
ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲಾಗುವುದ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ, ಹೆಸರು ಬದಲಾಯಿಸುವುದೇ ಆದರೆ ವಿಕ್ಟೋರಿಯಾ ಆಸ್ಪತ್ರೆ, ಚರ್ಚ್ ರೋಡ್, ಕಬ್ಬನ್ ಪಾರ್ಕ್, ಕರ್ಜನ್ ರೋಡ್ ಇಂತಹ ಹೆಸರುಗಳನ್ನು ಮೊದಲು ಚೇಂಜ್ ಮಾಡಿ, ಕನ್ನಡ ಅಭಿಮಾನ, ದೇಶಾಭಿಮಾನ ಇದ್ದರೆ ಬದಲಾಯಿಸಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರಿಗೆ ಸವಾಲು ಹಾಕಿದ್ದಾರೆ,

ದೇಶ

“ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ” – B. Y. Vijayendra

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಸಾವಿರ ದಿನಗಳ ಸಂಭ್ರಮಾಚರಣೆಗೆ ಸಜ್ಜಾಗಿರುವ ಸಂದರ್ಭದಲ್ಲಿ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಇದು ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ” ಎಂದು ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra ಆರೋಪಿಸಿದರು. ನಗರದಲ್ಲಿನ ಪಕ್ಷ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ Ashwath Narayan ಹಾಗೂ Govind Karjol ಉಪಸ್ಥಿತರಿದ್ದರು.

ವಿಜಯೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಬಡವರ ಬದುಕು ಸುಧಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದರೂ, ರಾಜ್ಯ ಸರ್ಕಾರ ಜನರ ನಿರೀಕ್ಷೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು. “ಕಾಯಕವೇ ಕೈಲಾಸ ಎಂಬ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಮೇಲಿನ ವಿಶೇಷ ಆಸಕ್ತಿ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಿದೆ,” ಎಂದರು.

ಮಹಿಳೆಯರು, ಬಡವರು, ಯುವಜನತೆ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು. ಜಾತಿಗಣತಿ ವಿಚಾರದಲ್ಲಿ 170 ಕೋಟಿ ವೆಚ್ಚದ ವರದಿಯನ್ನು ಕಡೆಗಣಿಸಿ, ಮತ್ತೆ 450 ಕೋಟಿ ವೆಚ್ಚದಲ್ಲಿ ರಿಸರ್ವೇ ನಡೆಸಲಾಗಿದೆ ಎಂದು ಪ್ರಶ್ನಿಸಿದರು. “ಇದು ಜನರ ಹಣದ ದುರ್ಬಳಕೆ,” ಎಂದು ಟೀಕಿಸಿದರು.

ಮುಡಾ, ಗೃಹ ಲಕ್ಷ್ಮೀ, ಅಬಕಾರಿ ಹಾಗೂ ಸ್ಮಾರ್ಟ್ ಮೀಟರ್ ಹಗರಣಗಳ ಆರೋಪಗಳನ್ನೂ ಅವರು ಉಲ್ಲೇಖಿಸಿದರು. ಪಂಚ ಗ್ಯಾರಂಟಿ ಯೋಜನೆಗಳು ‘ಪಂಚರ್’ ಆಗಿವೆ. ಹತ್ತು ಕೆಜಿ ಅಕ್ಕಿ ಹೇಳಿ ಐದು ಕೆಜಿ ಮಾತ್ರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯವಾಗುತ್ತಿದೆ. ನೀರಾವರಿ, ಉದ್ಯೋಗ, ಹುದ್ದೆ ಭರ್ತಿ, ಗೌರವಧನ ಹೆಚ್ಚಳ ಸೇರಿದಂತೆ ಹಲವು ಭರವಸೆಗಳು ಈಡೇರಿಲ್ಲ. “ಇದು ಸಂಭ್ರಮದ ದಿನವಲ್ಲ, ಆತ್ಮಪರಿಶೀಲನೆಯ ದಿನ,” ಎಂದು ವಿಜಯೇಂದ್ರ ಹೇಳಿದರು.

Continue Reading

ಕ್ರೀಡೆ

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್: ಜೈನ್ ವಿಶ್ವವಿದ್ಯಾಲಯ ಚಾಂಪಿಯನ್

ಬೆಂಗಳೂರು, ಫೆಬ್ರವರಿ 14, 2026: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ Jain University ತಂಡವು ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿದೆ. ಕನಕಪುರ ರಸ್ತೆದಲ್ಲಿರುವ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಜೈನ್ ತಂಡವು Panjab University ವಿರುದ್ಧ 74-51 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

ಫೈನಲ್ ಪಂದ್ಯ ಫಲಿತಾಂಶ

ಜೈನ್ ವಿಶ್ವವಿದ್ಯಾಲಯ 74 (ಸಿಯಾ 17, ನಯೋಮಿ 16)
ಪಂಜಾಬ್ ವಿಶ್ವವಿದ್ಯಾಲಯ 51 (ಪೂಜಾ 19, ನಾದರ್ ಕೌರ್ 13)
ಅರ್ಧಾವಧಿ: 40-28

ಆರಂಭದಿಂದಲೇ ಮುನ್ನಡೆ ಸಾಧಿಸಿದ ಜೈನ್ ತಂಡ ಅಂತಿಮ ಕ್ಷಣದವರೆಗೂ ಮೇಲುಗೈ ಕಾಯ್ದುಕೊಂಡಿತು.


3ನೇ ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯ

SRM University 82 (ಜೀವಿಕಾ 18, ಹೇಮಲತಾ 12)
Lakshmibai National Institute of Physical Education 58 (ತಿತಿಕ್ಷಾ 14, ಸೋನಲ್ ನಹಾಲಾ 12)
ಅರ್ಧಾವಧಿ: 24-36

ಎರಡನೇಾರ್ಧದಲ್ಲಿ ದಿಟ್ಟ ಪ್ರದರ್ಶನ ನೀಡಿದ ಎಸ್‌ಆರ್‌ಎಂ ವಿಶ್ವವಿದ್ಯಾಲಯ ಮೂರನೇ ಸ್ಥಾನ ಪಡೆದಿತು.


ಅಂತಿಮ ಸ್ಥಾನಮಾನ

  1. ಜೈನ್ ವಿಶ್ವವಿದ್ಯಾಲಯ
  2. ಪಂಜಾಬ್ ವಿಶ್ವವಿದ್ಯಾಲಯ
  3. ಎಸ್‌ಆರ್‌ಎಂ ವಿಶ್ವವಿದ್ಯಾಲಯ
  4. ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್‌ಎನ್‌ಐಪಿಇ)

ಜೈನ್ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿಯರಾದ ಆದ್ಯ ಗೌಡಾ, ಅಂಜು, ಖುಷಿ, ಆಹಾನಾ, ನೇತ್ರಾ, ಸಿಯಾ ದಿಯೋಧ್ಯರ್ ಸೇರಿದಂತೆ ತಂಡದ ಸದಸ್ಯರು ಮತ್ತು ಕೋಚ್ ಪುನೀತ್ ಅವರ ಮಾರ್ಗದರ್ಶನದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದರು. ಕ್ರೀಡಾ ನಿರ್ದೇಶಕ ಡಾ. ಯು.ವಿ. ಶಂಕರ್ ಮತ್ತು ಮ್ಯಾನೇಜರ್ ಲೋಕೇಶ್ ಉಪಸ್ಥಿತರಿದ್ದರು.

ಬೆಂಗಳೂರುನಲ್ಲಿ ನಡೆದ ಈ ಚಾಂಪಿಯನ್‌ಶಿಪ್ ಮಹಿಳಾ ವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.

Continue Reading

ಕ್ರೀಡೆ

TCS WORLD 10K ಬೆಂಗಳೂರು ಏಪ್ರಿಲ್ 26ರಂದು: ನೋಂದಣಿ ಆರಂಭ, USD 2.1 ಲಕ್ಷ ಬಹುಮಾನ

ಬೆಂಗಳೂರು: ವಿಶ್ವದ ಪ್ರಮುಖ 10K ಮ್ಯಾರಥಾನ್‌ಗಳಲ್ಲಿ ಒಂದಾದ TCS World 10K Bengaluru 18ನೇ ಆವೃತ್ತಿ ಏಪ್ರಿಲ್ 26, 2026ರಂದು ನಡೆಯಲಿದೆ. ಫೆಬ್ರವರಿ 13ರಿಂದ ಆನ್-ಗ್ರೌಂಡ್ ಮತ್ತು ವರ್ಚುವಲ್ ವಿಭಾಗಗಳಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಪ್ರತಿಷ್ಠಿತ ಓಟಕ್ಕೆ ಒಟ್ಟು USD 210,000 (ಸುಮಾರು ₹2.1 ಲಕ್ಷ ಅಮೆರಿಕನ್ ಡಾಲರ್) ಬಹುಮಾನ ಮೊತ್ತ ನಿಗದಿಯಾಗಿದೆ. ವಿಶ್ವದ ಖ್ಯಾತ ಅಥ್ಲೀಟ್‌ಗಳು ಹಾಗೂ ಸಾವಿರಾರು ಹವ್ಯಾಸಿ ಓಟಗಾರರು ಭಾಗವಹಿಸಲಿದ್ದಾರೆ. ಮ್ಯಾರಥಾನ್ ಕಬ್ಬನ್ ರಸ್ತೆಯ ಆರ್‌ಎಸ್‌ಎಒಐ ಗೇಟ್ ನಂ.5ರ ಎದುರು ಪ್ರಾರಂಭವಾಗಿ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್‌ಶಾ ಪೆರೇಡ್ ಮೈದಾನದ ಹೊರಭಾಗದಲ್ಲಿ ಮುಕ್ತಾಯಗೊಳ್ಳಲಿದೆ.


ಅರ್ಹತಾ ಮಾನದಂಡ ಮೊದಲ ಬಾರಿಗೆ

ಓಟಗಾರರ ಸುರಕ್ಷತೆ ಹಾಗೂ ಉತ್ತಮ ಅನುಭವದ ದೃಷ್ಟಿಯಿಂದ 2026ರ ಓಪನ್ 10K ವಿಭಾಗಕ್ಕೆ ಮೊದಲ ಬಾರಿಗೆ ಅರ್ಹತಾ ಮಾನದಂಡಗಳನ್ನು ಪರಿಚಯಿಸಲಾಗಿದೆ. ಮಾನ್ಯ ಸಮಯದ ಪ್ರಮಾಣಪತ್ರ ಸಲ್ಲಿಸಿದವರಿಗೆ ಮಾತ್ರ ನೋಂದಣಿ ಮಾನ್ಯವಾಗಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.


ಆರ್ಥಿಕ ಪರಿಣಾಮದ ಅಂಕಿ-ಅಂಶಗಳು

  • ಹಿಂದಿನ ಆವೃತ್ತಿಗಳಲ್ಲಿ ಓಟಗಾರರು ತರಬೇತಿ, ಬೂಟು, ಉಡುಪು, ತಂತ್ರಜ್ಞಾನ, ಆಹಾರ ಹಾಗೂ ವಸತಿಗೆ ₹179.91 ಕೋಟಿ ಖರ್ಚು.
  • ಪೌಷ್ಠಿಕಾಂಶ ಹಾಗೂ ಆರೋಗ್ಯ ರಕ್ಷಣೆಗೆ ₹78.69 ಕೋಟಿ ಹೂಡಿಕೆ.
  • 85.45% ಮಂದಿ ತಂತ್ರಜ್ಞಾನ ಆಧಾರಿತ ಫಿಟ್ನೆಸ್ ಪರಿಹಾರಗಳ ಬಳಕೆ.
  • ಒಟ್ಟು ಆರ್ಥಿಕ ಪರಿಣಾಮದಲ್ಲಿ 40% ಕೊಡುಗೆ ವಿಶಾಲ ಪರಿಸರ ವ್ಯವಸ್ಥೆಗೆ ಬೆಂಬಲ.

ಆರೋಗ್ಯದ ಮೇಲೆ ಪರಿಣಾಮ

  • 54.21% ಮಂದಿ ಉತ್ತಮ ಆರೋಗ್ಯಕ್ಕಾಗಿ ಓಟ.
  • 70.12% ಮಂದಿ ಪೂರ್ಣ ದೇಹ ತಪಾಸಣೆ ಮಾಡಿಸಿಕೊಂಡಿದ್ದಾರೆ.
  • 53.07% ಮಂದಿ ದೂರದ ಓಟದಿಂದ ಮಾನಸಿಕ ಯೋಗಕ್ಷೇಮ ಹೆಚ್ಚಾಗಿದೆ ಎಂದು ಅಭಿಪ್ರಾಯ.
  • 22.5% ಮಂದಿ ಔಷಧಿ ಬಳಕೆ ಕಡಿಮೆ ಮಾಡಿರುವ ವರದಿ.
  • 85% ಮಂದಿ ಶಕ್ತಿ ತರಬೇತಿ (ಸ್ಟ್ರೆಂಗ್ತ್ ಟ್ರೈನಿಂಗ್) ಅಳವಡಿಸಿಕೊಂಡಿದ್ದಾರೆ.
  • 47.94% ಮಂದಿ ಒತ್ತಡ ನಿರ್ವಹಣೆಗೆ ನಿಯಮಿತ ವ್ಯಾಯಾಮ.

📝 ನೋಂದಣಿ ವಿವರಗಳು

ಆನ್-ಗ್ರೌಂಡ್ ವಿಭಾಗಗಳು:

  • ಓಪನ್ 10K
  • ಮಜ್ಜಾ ರನ್ (4.2 ಕಿ.ಮೀ)
  • ಹಿರಿಯ ನಾಗರಿಕರ ಓಟ
  • ಅಂಗವಿಕಲ (ವಿಶೇಷ) ಚಾಂಪಿಯನ್ಸ್ (3 ಕಿ.ಮೀ)

ಎಲ್ಲಾ ವಿಭಾಗಗಳ ನೋಂದಣಿ ಫೆಬ್ರವರಿ 13ರಿಂದ ಆರಂಭವಾಗಿದ್ದು, ಮಾರ್ಚ್ 20, 2026ರ ರಾತ್ರಿ 11:59ರವರೆಗೆ ಅಥವಾ ಸೀಟುಗಳು ಭರ್ತಿಯಾಗುವವರೆಗೆ ಮುಕ್ತವಾಗಿರುತ್ತದೆ.

Continue Reading

Trending