Connect with us

ಕ್ರೀಡೆ

ಒಲಿಂಪಿಕ್ಸ್ ನಲ್ಲಿ ಸೌಂದರ್ಯ ಸಮರ- ನೋಡುಗರ ಮನಸು ಗೆದ್ದ ಬೆಡಗಿಯರು ಇವರು..!

Published

on

ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಈಗಾಗಲೇ ತೆರೆ ಎಳೆದಿದ್ದು, ಈ ಬಾರಿಯ ಒಲಿಂಪಿಕ್ಸ್ ಬಹಳಷ್ಟು ಸದ್ದು ಮಾಡಿದೆ, ಟೂರ್ನಿ ಮುಗಿದು ಒಂದು ದಿನ ಕಳೆದರೂ ಕೂಡ ಕೆಲ ಸ್ಪರ್ಧಿಗಳು ಮಾತ್ರ ಪಡ್ಡೆ ಹುಡುಗರ ಮನಸನ್ನು ಕದ್ದುಕೊಂಡು ಹೋಗಿದ್ದಾರೆ ,
ಎಂದಿನಂತೆ ಈ ಬಾರಿ ಕುಡ ಒಲಿಂಪಿಕ್ಸ್ ನಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಭಾಗವಹಿಸಿದ್ದು, ಅದರಲ್ಲೂ ವಿದೇಶಿಯರ ಆಟ, ಅವರ ನಡೆ ಅಬ್ಬಬ್ಬಾ ಎಂತವರನ್ನು ಕೂಡು ಮರಳು ಮಾಡುವಂತಿತ್ತು, ಇದೀಗ ಅಂತಹದ್ದೇ ಟಾಪ್ 10 ಹಾಟ್ ಬ್ಯೂಟಿಯರನ್ನು ತೋರಿಸ್ತೀವಿ ನೋಡಿ…
ಸುನಿಸಾ ಲೀ
ಅಮೆರಿಕಾದ ಕಲಾತ್ಮದ ಜಿಮ್ನಾಸ್ಟ್ ಸುನಿಸಾ ಲೀ ತಮ್ಮ ಪ್ರದರ್ಶನದಿದಂ ಜಗತ್ತನ್ನು ಬೆರಗುಗೊಳಿಸಿದರು, ಅವರ 2020 ರ ಒಲಿಂಪಿಕ್ ಆಲ್-ಅರೌಂಡ್ ಚಿನ್ನ ಮತ್ತು ಅಸಮ ಬಾರ್ ಕಂಚಿನ ಪದಕಗಳನ್ನು ಗೆದ್ದರು ಮತ್ತು 2024 ರಲ್ಲಿ ಮತ್ತೊಂದು ಆಲ್-ರೌಂಡ್ ಮತ್ತು ಅಸಮ ಬಾರ್ ಕಂಚಿನ ಪದಕವನ್ನು ಪಡೆದರು,
ಸುನೀಸಾ ಟೋಕಿಯೊ 2020 ರಲ್ಲಿ ತನ್ನ ಚಿನ್ನದ ಪದಕದ ಗೆಲುವಿನೊಂದಿಗೆ ಜಾಗತಿಕ ಗಮನವನ್ನು ಸೆಳೆದರು, ಅದರೆ ಇದೀಗ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೌಂದರ್ಯ ಮತ್ತು ಕೌಶಲ್ಯದ ಬಗ್ಗೆ ಚರ್ಚೆಯಾಗುತ್ತಿದೆ,
ಶಾಕಾರಿ ರಿಚಡ್ರ್ಸ್‍ನ್
ಟ್ರ್ಯಾಕ್ ಮತ್ತು ಫೀಲ್ಡ್ ಹೊಸ ಸೆನ್ಸೇಷನ್ ಸೃಷ್ಟಿಸಿದವರ ಪಟ್ಟಿಯಲ್ಲಿ ಅಮೆರಿಕದ ಶಾಕಾರಿ ರಿಚಡ್ರ್ಸ್‍ನ್ ಕೂಡ ಒಬ್ಬರು, ಪ್ಯಾರಿಸ್ 2024 ರ ಒಲಿಂಪಿಕ್ಸ್‍ನಲ್ಲಿ ಶಾಕಾರಿ 4*100 ರಿಲೇ ಸ್ಪರ್ದೆಯಲ್ಲಿ ಚಿನ್ನದ ಪದಕ ಗೆದ್ದಿದ್ದು, ಅಮೆರಿಕಾದ ಬ್ಲಾಕ್ ಬ್ಯೂಟಿ ಎಂದೇ ಪ್ರಸಿದ್ಧಿಯಾಗಿದ್ದಾರೆ, ನೈಲ್ ಆರ್ಟ್ ಮೂಲಕ ಸುದ್ದಿಯಾಗಿರುವ ಶಾಕಾರಿ ಇದೀಗ ಒಲಿಂಪಿಕ್ಸ್ ನಲ್ಲಿ ತಮ್ಮ ಲುಕ್ ನಿಂದಲೆ ಹುಡುಗರ ನಿದ್ದೆಗೆಡಿಸಿದ್ದಾರೆ,
ಕಿಮ್ ಯೇ ಜಿ
ಕಿಮ್ ಯೆ ಜಿ ದಕ್ಷಿಣ ಕೊರಿಯಾದ ಹಾಟ್ ಬ್ಯೂಟಿ ಎಂದು ಕರೆದರು ಕೂಡ ತಪ್ಪಾಗುವುದಿಲ್ಲ ಮಹಿಳೆಯ ವಿಭಾಗದ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕಿಮ್ ತಮ್ಮ ಲುಕ್ ನಿಂದಲೆ ಹುಡುಗರ ಮನಸನ್ನು ಕದ್ದಿದ್ದಾರೆ,
ಒಲಿಂಪಿಕ್ಸ್ ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತುಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆಲ್ಲುವ ಮೂಲಕ 31 ವರ್ಷದ ಕಿಮ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ, ಸದ್ಯ ಅವರ ಕ್ರೇಜಿ ಲುಕ್ ನ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಹುಡುಗರು ಫುಲ್ ಪ್ಲಾಟ್ ಆಗಿದ್ದಾರೆ,
ಎಲೆನಾ ಕುಲಿಚೆಂಕೊ
ರಷ್ಟಾ ಮೂಲದ ಅಥ್ಲೀಟ್ ಎಲೆನಾ ಕುಲಿಚೆಂಕೊ ಅವರ ಸೈಪ್ರಿಯೋಟ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದು ಎತ್ತರ ಜಿಗಿತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ ,
ಅಲಿಕಾ ಸ್ಮಿತ್
ಅಲಿಕಾ ಸ್ಮಿತ್ ಒಲಿಂಪಿಕ್ಸ್ ನಲ್ಲಿ ಅಷ್ಟೊಂದು ಸದ್ದು ಮಾಡದ ಜರ್ಮನ್ ನ ಈ ಬ್ಯೂಟಿ ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಅಥ್ಲೀಟ್ ಎಂದೇ ಪ್ರಸಿದ್ಧಿಯಾಗಿದ್ದಾರೆ,
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಅಲಿಕಾ ತನ್ನ ಸೌಂದರ್ಯದ ಮೂಲಕ ಪಡ್ಡೆ ಹುಡುಗರ ಮನಸ್ಸನ್ನ ಗೆದ್ದಿದ್ದಾರೆ,
ಲುವಾನಾ ಮಾರಿಯಾ ಅಲೋನ್ಸೊ
ಲುವಾನಾ ಮರಿಯಾ ಅಲೋನ್ಸೊ ಮೆಂಡೆಜ್ ಪರಾಗ್ವೆಯ ಈಗುಗಾರ್ತಿ ಅವರು 2020 ರ ಬೇಸಿಗೆ ಒಲಿಂಪಿಕ್ಸ್ ನ ಮಹಿಳೆಯರ 100 ಮೀಟರ್ ಬಟರ್‍ಫ್ಲೈ ಸ್ಪರ್ಧೆಸಿದ್ದರು ಮತ್ತು ಬಟರ್‍ಫ್ಲೈ ವಿಭಾಗದಲ್ಲಿ ಅನೇಕ ಪರಾಗ್ವೆಯ ದಾಖಲೆಗಳನ್ನು ಹೊಂದಿದ್ದಾರೆ,
ಲಿಶಾ ಎವೆಲಿನ್ ನ್ಯೂಮನ್
ಲಿಶಾ ಎವೆಲಿನ್ ನ್ಯೂಮನ್ ಓಎಲ್‍ಯ ಕೆನಡಾದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದು ಅವರ ಪೋಲ್ ವಾಲ್ಟ್‍ನಲ್ಲಿ ಪರಿಣತಿ ಹೊಂದಿದ್ದಾರೆ, ಅವರು 2024 ರ ಬೇಸಿಗೆ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಮತ್ತು 2018 ರ ಕಾಮನ್ ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ ,

ಕ್ರೀಡೆ

ಕೃಣಾಲ್ ಪಾಂಡ್ಯ ಬೌಲಿಂಗ್‌ಗೆ ಕಾವ್ಯ ಮಾರನ್ ಆಕ್ಷೇಪ? ವೈರಲ್ ಆಯ್ತು SRH ಮಾಲಕಿಯ ರಿಯಾಕ್ಷನ್‌

Published

on

ಹೈದರಾಬಾದ್: Indian Premier League 2026ನಲ್ಲಿ ಶುಕ್ರವಾರ ನಡೆದ Sunrisers Hyderabad ಹಾಗೂ Royal Challengers Bengaluru ನಡುವಿನ ಹೈವೋಲ್ಟೇಜ್ ಪಂದ್ಯ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಸ್ಪಿನ್ನರ್ Krunal Pandya ಎಸೆದ ಬೌನ್ಸರ್‌ಗಳಿಗೆ ಸನ್‌ರೈಸರ್ಸ್‌ ತಂಡದ ಸಿಇಒ ಹಾಗೂ ಮಾಲಕಿ Kavya Maran ಆಕ್ಷೇಪ ವ್ಯಕ್ತಪಡಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಸತತವಾಗಿ ವೇಗದ ಬೌನ್ಸರ್‌ಗಳನ್ನು ಎಸೆದರು. ಸ್ಪಿನ್ನರ್ ಆಗಿದ್ದರೂ ಗಂಟೆಗೆ 120-130 ಕಿ.ಮೀ ವೇಗದಲ್ಲಿ ಚೆಂಡು ಎಸೆಯುತ್ತಿರುವುದರ ಬಗ್ಗೆ ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದರು. Ravichandran Ashwin ಸೇರಿ ಕೆಲ ದಿಗ್ಗಜರು ಅವರ ಬೌಲಿಂಗ್ ಶೈಲಿಯನ್ನು ಪರಿಶೀಲಿಸಬೇಕೆಂದು ಅಭಿಪ್ರಾಯಪಟ್ಟಿದ್ದರು.

ಪಂದ್ಯದ ವೇಳೆ ಕೃಣಾಲ್‌ ಎಸೆದ ಬೌನ್ಸರ್ ಕಂಡು ಗ್ಯಾಲರಿಯಲ್ಲಿ ಕುಳಿತಿದ್ದ ಕಾವ್ಯ ಮಾರನ್ ಅಸಮಾಧಾನ ವ್ಯಕ್ತಪಡಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. “ಅವರು ಸರಿಯಾಗಿ ಬೌಲಿಂಗ್ ಮಾಡುತ್ತಿಲ್ಲ, ಚೆಂಡನ್ನು ಎಸೆಯುತ್ತಿದ್ದಾರೆ” ಎಂಬ ಅರ್ಥ ಬರುವ ರೀತಿಯಲ್ಲಿ ಸಹ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೊ ಈಗ ಭಾರೀ ವೈರಲ್ ಆಗಿದೆ. ಕೆಲ ಅಭಿಮಾನಿಗಳು ಕಾವ್ಯ ಅವರಿಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ಇದು ಕ್ರಿಕೆಟ್‌ನ ಭಾಗವೇ ಎಂದು ಪ್ರತಿಕ್ರಿಯಿಸಿದ್ದಾರೆ.

ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 55 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. Abhishek Sharma (56), Ishan Kishan (79) ಮತ್ತು Heinrich Klaasen (51) ಅರ್ಧಶತಕದ ನೆರವಿನಿಂದ ಎಸ್‌ಆರ್‌ಎಚ್ 255 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿಗೆ Venkatesh Iyer ವೇಗದ ಆರಂಭ ನೀಡಿದರೂ, Virat Kohli ಮತ್ತು Devdutt Padikkal ಬೇಗ ಔಟಾದರು. ನಾಯಕ Rajat Patidar ಹಾಗೂ ಕೃಣಾಲ್ ಪಾಂಡ್ಯ ಹೋರಾಟ ನಡೆಸಿದರೂ ತಂಡ 200 ರನ್‌ಗಳಿಗೆ ಸೀಮಿತವಾಯಿತು.

Continue Reading

ಕ್ರೀಡೆ

ಮೈದಾನದಲ್ಲಿ ಕೋಪ ಸಿಡಿಸಿದ ವಿರಾಟ್ ಕೊಹ್ಲಿ: ವಿಡಿಯೊಗೆ ಭಾರೀ ಚರ್ಚೆ

Published

on

ಹೈದರಾಬಾದ್: Virat Kohli ಅವರ ಕ್ರೀಡಾಸ್ಫೂರ್ತಿಗೆ ಸಂಬಂಧಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. Indian Premier League 2026ನಲ್ಲಿ ಶುಕ್ರವಾರ ನಡೆದ Sunrisers Hyderabad ಮತ್ತು Royal Challengers Bengaluru ನಡುವಿನ ಪಂದ್ಯದಲ್ಲಿ ಕೊಹ್ಲಿ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ Travis Head ಅವರಿಗೆ ಹ್ಯಾಂಡ್‌ಶೇಕ್ ನಿರಾಕರಿಸಿದ ಘಟನೆ ವೈರಲ್ ಆಗಿದೆ.

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ಕೊಹ್ಲಿ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ವರದಿಗಳ ಪ್ರಕಾರ, ವಿಕೆಟ್ ಪತನದ ಬಳಿಕ ಹೆಡ್ ಕೂಡ ಕೊಹ್ಲಿಯನ್ನು ಕೆಣಕಿದರೆಂದು ಹೇಳಲಾಗಿದ್ದು, ಇದರಿಂದ ಕೊಹ್ಲಿ ಅಸಮಾಧಾನಗೊಂಡಿದ್ದರು.

ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ಕೊಹ್ಲಿ, Pat Cummins, Abhishek Sharma ಹಾಗೂ Ishan Kishan ಜೊತೆ ಹೃತ್ಪೂರ್ವಕವಾಗಿ ಮಾತನಾಡಿದರೂ, ಟ್ರಾವಿಸ್ ಹೆಡ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಇದಕ್ಕೆ ಕೆಲ ಅಭಿಮಾನಿಗಳು ಕೊಹ್ಲಿ ವಿರುದ್ಧ ಟೀಕೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದು ಪಂದ್ಯದಲ್ಲಿನ ತೀವ್ರ ಸ್ಪರ್ಧಾತ್ಮಕ ಮನೋಭಾವದ ಪರಿಣಾಮ ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನೊಂದೆಡೆ ಪಂದ್ಯದಲ್ಲಿ 55 ರನ್‌ಗಳಿಂದ ಸೋತಿದ್ದರೂ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಕ್ವಾಲಿಫೈಯರ್-1ಕ್ಕೆ ಪ್ರವೇಶಿಸಿದೆ. ಮೇ 26ರಂದು ಧರ್ಮಶಾಲಾದಲ್ಲಿ Gujarat Titans ವಿರುದ್ಧ ಆರ್‌ಸಿಬಿ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.

Continue Reading

ಕ್ರೀಡೆ

ಹಾಂಗ್ ಕಾಂಗ್‌ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಇಬ್ಬರು ಆಯ್ಕೆ

Published

on

ಬೆಂಗಳೂರು: ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್‌ಗೆ ಹೆಮ್ಮೆಯ ಕ್ಷಣ ಒದಗಿದ್ದು, ರಾಜ್ಯದ ಇಬ್ಬರು ಜಿಮ್ನಾಸ್ಟ್‌ಗಳು ಮತ್ತು ಇಬ್ಬರು ಕೋಚ್‌ಗಳು ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಮೇ 23 ಮತ್ತು 24ರಂದು ನಡೆಯಲಿರುವ 2ನೇ ಏಷ್ಯನ್ ಏಜ್ ಗ್ರೂಪ್ ಸ್ಪರ್ಧೆ ಹಾಗೂ 7ನೇ ಸೀನಿಯರ್ ಏಷ್ಯನ್ ಟ್ರಾಂಪೋಲಿನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತ ಪರ ಕಣಕ್ಕಿಳಿಯಲಿದ್ದಾರೆ.

Aavni Amit ಮಹಿಳಾ AG1 ವಿಭಾಗದಲ್ಲಿ ಮತ್ತು Satvik Gupta ಪುರುಷರ AG3 ವಿಭಾಗದಲ್ಲಿ ಭಾರತ ತಂಡದ ಪರವಾಗಿ ಸ್ಪರ್ಧಿಸಲಿದ್ದಾರೆ. ಜೊತೆಗೆ ಕರ್ನಾಟಕದ ಕೋಚ್‌ಗಳಾದ Jitesh Chandran ಹಾಗೂ Basavaraj S. Tambur ಕೂಡ ಭಾರತೀಯ ತಂಡದೊಂದಿಗೆ ಹಾಂಗ್ ಕಾಂಗ್‌ಗೆ ತೆರಳಲಿದ್ದಾರೆ.

ಭಾರತೀಯ ತಂಡ ಮೇ 21ರಂದು ಹಾಂಗ್ ಕಾಂಗ್‌ಗೆ ಪ್ರಯಾಣ ಬೆಳೆಸಲಿದ್ದು, ಚಾಂಪಿಯನ್‌ಶಿಪ್ ಮುಗಿದ ಬಳಿಕ ಭಾರತಕ್ಕೆ ಮರಳಲಿದೆ. ಕರ್ನಾಟಕದ ಆಟಗಾರರು ಮತ್ತು ಕೋಚ್‌ಗಳ ಆಯ್ಕೆಗೆ ರಾಜ್ಯದ ಕ್ರೀಡಾ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಜಿಮ್ನಾಸ್ಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾದ Dr. C. Prabhakar ಆಯ್ಕೆಯಾದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಕರ್ನಾಟಕದ ಪ್ರತಿಭೆಗಳು ಏಷ್ಯನ್ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅವರು ಶುಭ ಹಾರೈಸಿದರು.

ಈ ಆಯ್ಕೆ ಕರ್ನಾಟಕದ ಜಿಮ್ನಾಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದ್ದು, ರಾಜ್ಯದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.

Continue Reading

Trending