ರಾಜಕೀಯ
ಮಂಡ್ಯದಲ್ಲಿ ಮೆಡಿಕಲ್ ಮಾಫಿಯಾ; ಲೋಕಾಯುಕ್ತ ದಾಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ಮೆಡಿಸಿನ್ ಪತ್ತೆ
ಮಂಡ್ಯ: ಕೊರೊನಾ ಕಾಲದಲ್ಲಿ ರೆಮ್ಡಿಸಿವರ್ ಎಂಬ ಇಂಜೆಕ್ಷನ್‌ಗೆ ಜನರು ಪರದಾಡುತ್ತಿದ್ದರು. ಈ ಇಂಜೆಕ್ಷನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ 1 ರಿಂದ 2 ಲಕ್ಷದವರೆಗೆ ತೆಗೆದುಕೊಂಡಿದ್ದಾರೆ. ಇದೀಗ 40 ಲಕ್ಷ ಮೌಲ್ಯದ ಅವಧಿ ಮುಗಿದಿರುವ ಇದೇ ರೆಮ್ಡಿಸಿವರ್ ಮೆಡಿಸನ್ ಮಂಡ್ಯದ ಮಿಮ್ಸ್‌ನ ಔಷಧಿ ಉಗ್ರಾಣದಲ್ಲಿ ಇರುವುದು ಕಂಡುಬಂದಿದೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವಧಿಗೆ ಮೀರಿನ ಲಕ್ಷಾಂತರ ರೂಪಾಯಿಯ ಮೆಡಿಸಿನ್ ಇದ್ದು, ಅಧಿಕಾರಿಗಳು ಏಜೆನ್ಸಿಯವರೊಂದಿಗೆ ಮೆಡಿಕಲ್ ಮಾಫಿಯಾದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎಂದು ಕೇಶವಮೂರ್ತಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದರು. ದೂರಿನ ಅನ್ವಯ ಮಿಮ್ಸ್‌ನ ಔಷಧಿ ಉಗ್ರಾಣದ ಮೇಲೆ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ರೇಡ್ ಮಾಡಲಾಗಿದೆ.
ಈ ರೇಡ್‌ನಲ್ಲಿ ಪ್ರಮುಖವಾಗಿ ಕೊರೊನಾ ಕಾಲದಲ್ಲಿ ಬಹು ಬೇಡಿಕೆ ಇದ್ದ ರೆಮ್ಡಿಸಿವರ್ ಇಂಜೆಕ್ಷನ್ ಎಕ್ಸ್ಪೆರಿಯಾಗಿ ಇರೋದು ಕಂಡು ಬಂದಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 40 ಲಕ್ಷ ಮೌಲ್ಯದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ 2022ರಲ್ಲಿಯೇ ಮುಕ್ತಾಯವಾಗಿದೆ. ಕೊರೊನಾ ಸಂದರ್ಭದಲ್ಲಿ ಈ ಇಂಜೆಕ್ಷನ್ ಕೇಳಿದ್ರೆ ಮಿಮ್ಸ್‌ನ ಅಧಿಕಾರಿ ವರ್ಗ ನಮ್ಮ ಬಳಿ ಸ್ಟಾಕ್ ಇಲ್ಲ ಎಂಬ ಮಾತನ್ನು ಹೇಳುತ್ತಿತ್ತು. ಆದರೆ ಇದೀಗ ಅದೇ ರೆಮ್ಡಿಸಿವರ್ ಇಂಜೆಕ್ಷನ್ ಅಪಾರ ಮಟ್ಟದಲ್ಲಿ ಅವಧಿ ಮುಕ್ತಾಯಗೊಂಡಿದೆ.ಕೇವಲ ರೆಮ್ಡಿಸಿವರ್ ಮಾತ್ರವಲ್ಲ ಬೇರೆ ಬೇರೆ ರೋಗಗಳಿಗೆ ನೀಡುವ ಔಷಧಿ, ಮಾತ್ರೆ, ಇಂಜೆಕ್ಷನ್‌ನ ಅವಧಿಯೂ ಮುಕ್ತಾಯವಾಗಿದೆ. ಇವುಗಳ ಮೌಲ್ಯವು ಲಕ್ಷಾಂತರ ರೂಪಾಯಿ ಆಗಿವೆ. ಈ ಅಪಾರ ಪ್ರಮಾಣ ನಷ್ಟ ಸರ್ಕಾರಕ್ಕೆ ಉಂಟಾಗಿದೆ.
ಏನಿದು ಮೆಡಿಕಲ್ ಮಾಫಿಯಾ?
ಮಂಡ್ಯದ ಮಿಮ್ಸ್ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಒಂದಷ್ಟು ಮೆಡಿಸಿನ್ ಏಜೆನ್ಸಿಗಳು ಔಷಧಿ, ಇಂಜೆಕ್ಷನ್, ಮಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸರಬರಾಜು ಮಾಡುತ್ತವೆ. ಈ ಸರಬರಾಜು ಆದ ಮೆಡಿಸಿನ್‌ಗಳ ಅವಧಿ ಮುಕ್ತಾಯದ ಎರಡು ಅಥವಾ ಮೂರು ತಿಂಗಳ ಮುಂಚೆಯೇ ಆಯಾ ಏಜೆನ್ಸಿ ಅವರಿಗೆ ಆ ಮೆಡಿಸಿನ್‌ನ್ನು ವಾಪಸ್ಸು ನೀಡಿದ್ರೆ, ಅವರು ಹೊಸ ಮೆಡಿಸಿನ್‌ನ್ನು ನೀಡ್ತಾರೆ. ಅಲ್ಲಿಗೆ ಯಾವುದೇ ಹಣ ವ್ಯಯವಾಗುವುದಿಲ್ಲ.
ಈ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡದೇ ಏಜೆನ್ಸಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಮೆಡಿಸಿನ್‌ಗಳು ಅವಧಿ ಮುಗಿಯುವವರೆಗೆ ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಈಗ ಆ ಮೆಡಿಸಿನ್‌ಗಳನ್ನು ಸಂಬಂಧಪಟ್ಟ ಏಜೆನ್ಸಿ ವಾಪಸ್ಸು ಪಡೆಯುವುದಿಲ್ಲ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಬೀಳ್ತಾ ಇದೆ.
ಡ್ರಗ್‌ಗೆ ಸಂಬಂಧಿಸಿದ ಅಧಿಕಾರಿಗಳು ಮೊದಲೇ ಏಜೆನ್ಸಿ ಅವರೊಂದಿಗೆ ಮಾತಾಡಿಕೊಂಡು ಎರಡು ತಿಂಗಳಲ್ಲಿ ಅವಧಿ ಮುಗಿಯುವ ಮೆಡಿಸಿನ್‌ನ್ನು ಕೊಡಲು ಹೇಳ್ತಾರೆ. ಎರಡು ತಿಂಗಳು ಅವಧಿ ಮುಗಿಯುವ ಮೆಡಿಸಿನ್‌ಗೆ ಏಜೆನ್ಸಿ ಅವರು ಬಾರಿ ರಿಯಾಯಿತಿಯನ್ನು ಕೊಡ್ತಾರೆ. ಉದಾಹರಣೆಗೆ 10 ರೂ. ಒಂದು ಮಾತ್ರೆ ಎರಡು ತಿಂಗಳಲ್ಲಿ ಅವಧಿ ಮುಗಿಯುತ್ತಿದ್ರೆ, ಅದಕ್ಕೆ ಕೇವಲ ಮೂರು ರೂಪಾಯಿಯನ್ನು ಬಿಲ್ ಮಾಡ್ತಾರೆ. ಈ ಮೆಡಿಸಿನ್‌ನ್ನು ಖರೀದಿ ಮಾಡುವ ಅಧಿಕಾರಿಗಳು ಏಜೆನ್ಸಿ ಅವರಿಗೆ 3 ರೂ. ನೀಡಿ, ಸರ್ಕಾರಕ್ಕೆ 10 ರೂ. ಬಿಲ್ ತೋರಿಸುತ್ತಾರೆ. ಆ ಮೂಲಕ ಮೆಡಿಸಿನ್ ಮಾಫಿಯಾ ಮೂಲಕ ಲಕ್ಷಾಂತರ ರೂ. ಹಣ ಸರ್ಕಾರದ ಜೇಬಿಗೆ ಕತ್ತರಿ ಬೀಳ್ತಾ ಇದೆ.
ದೇಶ
“ತಮಿಳುನಾಡಿಗೆ ತಡೆಯುವ ಹಕ್ಕಿಲ್ಲ”: ಮೇಕೆದಾಟು ಬಗ್ಗೆ ಡಿಕೆ ಸ್ಪಷ್ಟನೆ
ಬೆಂಗಳೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಕೇಂದ್ರ ಸರ್ಕಾರದ ಅನುಮತಿ ದೊರೆತ ತಕ್ಷಣ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ D. K. Shivakumar ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ (DPR) ಈಗಾಗಲೇ ಸಿದ್ಧವಾಗಿದೆ. ಮೇಕೆದಾಟು ಕಚೇರಿ ಆರಂಭಿಸಲಾಗಿದೆ. ಯೋಜನೆಗೆ ಅಗತ್ಯ ಜಮೀನು ಗುರುತಿಸಲಾಗಿದೆ. ಇದೀಗ ಹೊಸ ಡಿಪಿಆರ್ ಸಲ್ಲಿಸಲಾಗುತ್ತಿದೆ” ಎಂದು ಹೇಳಿದರು.
ತಮಿಳುನಾಡು ಸರ್ಕಾರ ಕಾವೇರಿ ಜಲ ಸಮಿತಿ ಅಥವಾ ಕೇಂದ್ರ ಜಲ ಆಯೋಗದ ಮುಂದೆ ಆಕ್ಷೇಪ ಸಲ್ಲಿಸಿದರೂ, ಕರ್ನಾಟಕದ ಪರವಾಗಿ ಅರ್ಜಿ ವಜಾಗೊಳ್ಳುವ ವಿಶ್ವಾಸವಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. “ತಮಿಳುನಾಡಿಗೆ ಈ ಯೋಜನೆಯನ್ನು ತಡೆಯುವ ಯಾವುದೇ ಹಕ್ಕಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರುದ್ಧ ಕಾನೂನು ಹೋರಾಟ ಮುಂದುವರಿಸುವ ಸೂಚನೆ ನೀಡಿದೆ. ಮುಖ್ಯಮಂತ್ರಿ Joseph Vijay ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಜಲ ತಜ್ಞರು ಹಾಗೂ ಕಾನೂನು ತಜ್ಞರೊಂದಿಗೆ ಮಹತ್ವದ ಸಭೆ ನಡೆದಿದ್ದು, ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ತಮಿಳುನಾಡು ಸರ್ಕಾರದ ವಾದದ ಪ್ರಕಾರ, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು, ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪಿನ ವ್ಯಾಪ್ತಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ 2018 ಮತ್ತು 2022ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025ರ ನವೆಂಬರ್ 13ರಂದು ನಡೆದ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟ್ ಮೇಕೆದಾಟು ಯೋಜನೆಗೆ ಯಾವುದೇ ಅಂತಿಮ ಅನುಮತಿ ನೀಡಿಲ್ಲ ಹಾಗೂ ಅದು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಅಭಿಪ್ರಾಯಪಟ್ಟಿತ್ತು. ಯೋಜನೆ ನ್ಯಾಯಾಲಯದ ಹಿಂದಿನ ತೀರ್ಪಿನ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಕೇಂದ್ರ ಜಲ ಆಯೋಗವೇ ನಿರ್ಧರಿಸಬೇಕು ಎಂದು ಹೇಳಿ ಪ್ರಕರಣಗಳನ್ನು ಮುಚ್ಚಿತ್ತು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ವಿವಾದ ಹಲವು ದಶಕಗಳಿಂದ ಮುಂದುವರಿದಿದ್ದು, ಮೇಕೆದಾಟು ಯೋಜನೆ ಮತ್ತೆ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕ ಸರ್ಕಾರ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗಾಗಿ ಯೋಜನೆ ಅಗತ್ಯ ಎಂದು ವಾದಿಸುತ್ತಿದ್ದರೆ, ತಮಿಳುನಾಡು ನೀರಿನ ಹರಿವು ಮತ್ತು ರೈತರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದೆ.
ದೇಶ
Karnataka BJP President: ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯುವುದು ಬಹುತೇಕ ಖಚಿತ!
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ (Karnataka BJP President) ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾಹಿತಿ ಪಕ್ಷದ ಆಂತರಿಕ ವಲಯದಿಂದ ಹೊರಬಿದ್ದಿದೆ. ಪಕ್ಷದ ಹಿರಿಯ ನಾಯಕರು ನಡೆಸಿದ ಆಂತರಿಕ ಅಭಿಪ್ರಾಯ ಸಂಗ್ರಹದಲ್ಲೂ ವಿಜಯೇಂದ್ರ ಪರವಾಗಿ ಬಹುಮತದ ಬೆಂಬಲ ವ್ಯಕ್ತವಾಗಿದ್ದು, ಈ ವರದಿ ಇದೀಗ ಬಿಜೆಪಿ ಹೈಕಮಾಂಡ್‌ಗೆ ಸಲ್ಲಿಕೆಯಾಗಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕುರಿತ ಗೊಂದಲ ಕಳೆದ ಕೆಲವು ವಾರಗಳಿಂದ ಪಕ್ಷದ ಒಳಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರ ಪಕ್ಷದ ಸಂಘಟನೆ ಹಾಗೂ ಹೋರಾಟದ ರಾಜಕಾರಣದ ಮೇಲೂ ಪರಿಣಾಮ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದ ಹಿನ್ನೆಲೆ, ಗೊಂದಲ ನಿವಾರಣೆಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹ ನಡೆಸಿದ್ದರು.
ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಈ ವರದಿಯನ್ನು ದೆಹಲಿಗೆ ಕಳುಹಿಸುವ ಸಾಧ್ಯತೆ ಇದೆ. ಸೋಮವಾರದ ನಂತರ ಅಧಿಕೃತವಾಗಿ ರಾಷ್ಟ್ರೀಯ ನಾಯಕತ್ವದ ಮುಂದೆ ವರದಿ ಮಂಡನೆಯಾಗಲಿದ್ದು, ಅದರ ಬಳಿಕ ರಾಜ್ಯಾಧ್ಯಕ್ಷರ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ವಿಜಯೇಂದ್ರ ಪರ ಬಹುಮತ ಬೆಂಬಲ
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. “ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕೇ? ಬದಲಿಸಿದರೆ ಯಾರಿಗೆ ಅವಕಾಶ ನೀಡಬೇಕು?” ಎಂಬ ಪ್ರಶ್ನೆಗಳ ಆಧಾರದಲ್ಲಿ ನಾಯಕರು ಹಾಗೂ ಶಾಸಕರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.
ಕೆಲವರು ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೂ, ಬಹುತೇಕ ನಾಯಕರು ಮತ್ತು ಸಂಘಟನಾ ವಲಯ ವಿಜಯೇಂದ್ರ ಪರವೇ ಅಭಿಪ್ರಾಯ ನೀಡಿರುವುದು ಅವರ ಸ್ಥಾನ ಇನ್ನಷ್ಟು ಬಲಪಡಿಸಿದೆ.
ದೆಹಲಿಯಲ್ಲಿ ಮಹತ್ವದ ಚರ್ಚೆ ಸಾಧ್ಯತೆ
ಶಿವಪ್ರಕಾಶ್ ಹಾಗೂ ಬೈಜಯಂತ್ ಪಾಂಡಾ ಈಗಾಗಲೇ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಜೊತೆಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಸಂಘಟನೆ, ಮುಂಬರುವ ರಾಜಕೀಯ ಹೋರಾಟಗಳು ಹಾಗೂ ಅಧ್ಯಕ್ಷರ ಆಯ್ಕೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರಮಣಕಾರಿ ಹೋರಾಟ ಸಂಘಟಿಸಲು ಮುಂದಿನ ದಿನಗಳಲ್ಲಿ ಹೊಸ ತಂತ್ರ ರೂಪಿಸುವ ಸಾಧ್ಯತೆ ಇದ್ದು, ವಿಜಯೇಂದ್ರ ಮುಂದುವರಿದರೆ ಪಕ್ಷದ ಸಂಘಟನೆಗೆ ಮತ್ತಷ್ಟು ಚೈತನ್ಯ ಸಿಗಲಿದೆ ಎನ್ನುವ ಲೆಕ್ಕಾಚಾರವೂ ಪಕ್ಷದೊಳಗೆ ಕೇಳಿಬರುತ್ತಿದೆ.
ದೇಶ
ಶಿವಲಿಂಗ ಅಪವಿತ್ರ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸ್
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು (State Govt) ಮತ್ತೊಮ್ಮೆ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಮುಂದಾಗಿದೆ ಎಂಬ ಆರೋಪಗಳ ನಡುವೆಯೇ, ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಪ್ರಸಿದ್ಧ ಲಾಡ್ಲೆ ಮುಶಾಕ್ ದರ್ಗಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಕೇಸ್‌ಗಳನ್ನು ವಾಪಸ್ ಪಡೆಯುವ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರದ ಕ್ರಮ ಈಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯ ಆಧಾರದ ಮೇಲೆ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 2022ರ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಲವು ಸ್ಥಳೀಯ ಮುಖಂಡರು ಹಾಗೂ ಯುವಕರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.
2022ರ ಶಿವರಾತ್ರಿ ಸಂದರ್ಭದಲ್ಲಿ ಆಳಂದ ಪಟ್ಟಣದ ಲಾಡ್ಲೆ ಮುಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಯ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಭಾರೀ ಉದ್ವಿಗ್ನತೆ ಉಂಟಾಗಿತ್ತು. ಶಿವಲಿಂಗದ ಮೇಲೆ ಕಿಡಿಗೇಡಿಗಳು ಮಲಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದ ಬಳಿಕ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು.
ಈ ಹಿನ್ನೆಲೆಯಲ್ಲಿ ಶಿವಲಿಂಗ ಶುದ್ಧೀಕರಣ ಹಾಗೂ ಮಹಾಪೂಜೆಗೆ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಹಲವರು ಸ್ಥಳಕ್ಕೆ ತೆರಳಿದ್ದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಉದ್ರಿಕ್ತ ಗುಂಪೊಂದು ಕಲ್ಲು ತೂರಾಟ ನಡೆಸಿ ಅಧಿಕಾರಿಗಳು ಹಾಗೂ ನಾಯಕರ ವಾಹನಗಳ ಮೇಲೆ ದಾಳಿ ಮಾಡಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯಾಗಿದೆ ಎಂಬ ಆರೋಪದಡಿ ಪೊಲೀಸರು ಹಲವು ಎಫ್‌ಐಆರ್ ದಾಖಲಿಸಿದ್ದರು.
ಈಗ ಆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 13 ಪ್ರಮುಖ ಪ್ರಕರಣಗಳನ್ನು ಸರ್ಕಾರ ಅಧಿಕೃತವಾಗಿ ವಾಪಸ್ ಪಡೆದಿದೆ. ಸರ್ಕಾರದ ಈ ಕ್ರಮದ ವಿರುದ್ಧ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಕಾನೂನು ಸುವ್ಯವಸ್ಥೆ ಹಾಳು ಮಾಡಿದವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ” ಎಂದು ಆರೋಪಿಸಿವೆ.
ಇನ್ನೊಂದೆಡೆ, ಸರ್ಕಾರದ ನಿರ್ಧಾರವನ್ನು ಬೆಂಬಲಿಸುವವರು “ಸಾಮಾಜಿಕ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಂಡ ತೀರ್ಮಾನ” ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಈ ನಿರ್ಧಾರ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.
-
ದೇಶ47 minutes ago‘ಡಾನ್ 3’ ತೊರೆದ ರಣವೀರ್ ಸಿಂಗ್ಗೆ ಸಂಕಷ್ಟ; FWICEನಿಂದ ಪರೋಕ್ಷ ಬ್ಯಾನ್?
-
ದೇಶ1 hour agoದಿವಂಗತ ಧರ್ಮೇಂದ್ರರಿಗೆ ಪದ್ಮವಿಭೂಷಣ; ರಾಷ್ಟ್ರಪತಿಯಿಂದ ಹೇಮಾ ಮಾಲಿನಿಗೆ ಪ್ರಶಸ್ತಿ ಪ್ರದಾನ
-
ದೇಶ57 minutes ago“ತಮಿಳುನಾಡಿಗೆ ತಡೆಯುವ ಹಕ್ಕಿಲ್ಲ”: ಮೇಕೆದಾಟು ಬಗ್ಗೆ ಡಿಕೆ ಸ್ಪಷ್ಟನೆ
-
ದೇಶ52 minutes ago16 ವರ್ಷದ ಸೂಪರ್ಹಿಟ್ ಜೋಡಿಗೆ ಭವ್ಯ ಗೌರವ: ‘ಕ್ರೇಜಿ-ಬ್ರಹ್ಮ’ ಕಾರ್ಯಕ್ರಮ
-
ದೇಶ1 hour agoಕೃಷ್ಣಾ ನದಿಗೆ ಹೊಸ ಬ್ಯಾರೇಜ್? ಕರ್ನಾಟಕ-ತೆಲಂಗಾಣ ಸಚಿವರ ಮಹತ್ವದ ಸಭೆ
