ರಾಜಕೀಯ
ಗೃಹಲಕ್ಷ್ಮಿ ಯೋಜನೆ ತಾತ್ಕಾಲಿಕ ಸ್ಧಗಿತ- ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?
ಉಡುಪಿ: ಕಳೆದ ಎರಡು ಮೂರು ತಿಂಗಳಿಂದ ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ತಾತ್ಕಾಲಿಕವಾಗಿ ಸ್ಧಗಿತಗೊಂಡಿದ್ದು, ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ,
ಈ ಬಗ್ಗೆ ಮಾತನಾಡಿದ ಅವರು ಗ್ಯಾರಂಟಿ ಯೋಜನೆಯ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ, ಗ್ಯಾರಂಟಿ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ಕೂಡ ಮಾಡಲ್ಲ ಐದು ಗ್ಯಾರಂಟಿಗಳು ಮೊದಲು ಹೇಗಿತ್ತು ಎಲ್ಲವೂ ಮುಂದುವರಿಯುತ್ತದೆ ಎಂದರು,
ಗ್ಯಾರೆಂಟಿ ಯೋಜನೆಗಳ ಬಗ್ಗೆ ಯಾರು ಅನ್ಯತಾ ವ್ಯಾಖ್ಯಾನಿಸಬಾರದು ಚುನಾವಣೆಗಿಂತ ಮೊದಲು ಕೊಟ್ಟ ಭರವಸೆ ಜಾರಿಯಲ್ಲಿ ಇರುತ್ತದೆ, ಕ್ಯಾಬಿನೆಟ್ ನ ಒಕ್ಕೋರೆಲ್ಲ ಧನಿ ಒಂದೇ ಗ್ಯಾರಂಟಿ ಯೋಜನೆ ಮುಂದು ವರಿಯಬೇಕು ಎಂಬುದು, ಅದರಮತೆಯೇ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತ ಎಂದು ಸಚಿವರು ಹೇಳಿದರು,
ನಾವು ಚುನಾವಣಾ ದೃಷ್ಟಿಯಿಂದ ನಾವು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿಲ್ಲ, ಬದಲಿಗೆ ಮಹಿಳೆಯು ಸಬಲೀಕರಣ ಬಡವರ ಉದ್ದಾರಕ್ಕಾಗಿ ಈ ಮಹತ್ವದ ಯೋಜನೆಯನ್ನು ರೂಪಿಸಿದ್ದೇವೆ, ಮೊದಲೇ ಹೇಳಿದಂತೆ ರಾಜ್ಯ ಸರ್ಕಾರ ಅಧಿಕಾರಿದಲ್ಲಿರುವವರೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ ಎಮದು ಭರವಸೆ ನೀಡಿದರು,
ದೇಶ
ಕೊಲ್ಲೂರು ಮೂಕಾಂಬಿಕೆಯಲ್ಲಿ ವಿಜಯ್ ವಿಶೇಷ ಪೂಜೆ: ‘ಶತ್ರು ಸಂಹಾರ ಸಂಕಲ್ಪ’ ಭಾರೀ ಚರ್ಚೆ
ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ ಅವರು ಕರ್ನಾಟಕದ ಪ್ರಸಿದ್ಧ ಶಕ್ತಿಪೀಠವಾದ Kollur Sri Mookambika Templeಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿರುವುದು ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ದೇವಿಯ ಸನ್ನಿಧಿಯಲ್ಲಿ ಅವರು ‘ಶತ್ರು ಸಂಹಾರ ಸಂಕಲ್ಪ’ ಮಾಡಿರುವರೆಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧ್ಯಾಹ್ನ Mangaluru International Airportಗೆ ಆಗಮಿಸಿದ ವಿಜಯ್, ಅಲ್ಲಿಂದ ಕೊಲ್ಲೂರು ಕಡೆ ಪ್ರಯಾಣ ಬೆಳೆಸಿದರು. ಮಾರ್ಗಮಧ್ಯೆ ಅತಿಥಿ ಗೃಹದಲ್ಲಿ ತಂಗಿ ಸಾಂಪ್ರದಾಯಿಕ ಉಡುಪಿಗೆ ಬದಲಾದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಾಲಯದ ವತಿಯಿಂದ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಗೌರವಿಸಲಾಯಿತು.
ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿಜಯ್, ದೇವಿಯ ಮುಂದೆ ಭಕ್ತಿಯಿಂದ ಪ್ರಾರ್ಥನೆ ನಡೆಸಿದರು. ಈ ವೇಳೆ ‘ಶತ್ರು ಸಂಹಾರ ಸಂಕಲ್ಪ’ ನೆರವೇರಿಸಿ ರಕ್ಷಾಸೂತ್ರ ಕಟ್ಟಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ರಾಜಕೀಯವಾಗಿ ಸಕ್ರಿಯರಾಗಿರುವ ಸಂದರ್ಭದಲ್ಲಿ ಈ ವಿಶೇಷ ಪೂಜೆ ನಡೆಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದರ್ಶನದ ಬಳಿಕ ವಿಜಯ್ ತಮ್ಮೊಂದಿಗೆ ತಂದಿದ್ದ ವಿಶೇಷ ಬೆಳ್ಳಿಯ ಖಡ್ಗವನ್ನು ದೇವಿಗೆ ಸಮರ್ಪಿಸಿದ್ದಾರೆ ಎನ್ನಲಾಗಿದೆ. ಈ ಸಮರ್ಪಣೆ ಭಕ್ತಿಯ ಸಂಕೇತವಾಗಿ ಕಂಡುಬಂದರೂ, ‘ಶತ್ರು ಸಂಹಾರ ಸಂಕಲ್ಪ’ ಕುರಿತ ಚರ್ಚೆಯೇ ಹೆಚ್ಚು ಗಮನ ಸೆಳೆಯುತ್ತಿದೆ.
ರಾಜಕೀಯ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿರುವ ವಿಜಯ್ ಅವರ ಈ ಭೇಟಿ ಕೇವಲ ಧಾರ್ಮಿಕ ಕಾರ್ಯಕ್ರಮವೇ ಅಥವಾ ಅದರ ಹಿಂದೆ ರಾಜಕೀಯ ಸಂದೇಶವೂ ಇದೆಯೇ ಎಂಬ ಪ್ರಶ್ನೆಗಳು ಮೂಡಿವೆ. ಆದರೆ ಈ ಕುರಿತು ವಿಜಯ್ ಅಥವಾ ಅವರ ಕಚೇರಿಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಇದರ ನಡುವೆಯೇ ಅಭಿಮಾನಿಗಳು ಹಾಗೂ ರಾಜಕೀಯ ವಲಯದಲ್ಲಿ ವಿವಿಧ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ದೇಶ
ಟಿಎಂಸಿಯಲ್ಲಿ ಬಂಡಾಯ ಸ್ಫೋಟ: ‘ಅಭಿಷೇಕ್ ಬೇಕೋ ನಾವು ಬೇಕೋ?’ ದೀದಿಗೆ ಕಲ್ಯಾಣ್ ಬ್ಯಾನರ್ಜಿ ಸವಾಲು
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಬಹಿರಂಗವಾಗಿ ಸ್ಫೋಟಗೊಂಡಿವೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ದೀದಿ, ಅಭಿಷೇಕ್ ಬೇಕೋ ಅಥವಾ ನಾವು ಬೇಕೋ ಆಯ್ಕೆ ಮಾಡಿ” ಎಂದು ನೇರ ಸವಾಲು ಹಾಕಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ನಕಲಿ ಸಹಿ ಸಂಗ್ರಹ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಪರ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಏಕಾಏಕಿ ಬದಲಾಯಿಸಿರುವುದು ಈ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಅವಮಾನಕರ ಎಂದು ಬಣ್ಣಿಸಿರುವ ಅವರು, ಪ್ರಕರಣದ ತುರ್ತು ವಿಚಾರಣೆಗೆ ರಾತ್ರಿಯಿಡೀ ಸಿದ್ಧತೆ ನಡೆಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರೂ, ನಂತರ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಅವರ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಲ್ಯಾಣ್ ಬ್ಯಾನರ್ಜಿ, “ಅವರು ಇತರರಿಗೆ ಗೌರವ ನೀಡುವುದಿಲ್ಲ. ಎಲ್ಲರನ್ನೂ ತಮ್ಮಗಿಂತ ಕೀಳಾಗಿ ನೋಡುತ್ತಾರೆ. ಇದೇ ಕಾರಣದಿಂದ ಪಕ್ಷದ ಹಲವಾರು ನಾಯಕರು ದೂರವಾಗುತ್ತಿದ್ದಾರೆ” ಎಂದು ಹೇಳಿದ್ದಾರೆ. ಅಲ್ಲದೆ, ಈ ವಿಷಯವನ್ನು ಮಮತಾ ಬ್ಯಾನರ್ಜಿ ಅವರ ಗಮನಕ್ಕೂ ತಂದಿರುವುದಾಗಿ ತಿಳಿಸಿದ್ದಾರೆ.
ಇದಕ್ಕೂ ನಡುವೆ ಟಿಎಂಸಿಯಲ್ಲಿ ರಾಜೀನಾಮೆಗಳ ಸರಣಿ ಮುಂದುವರಿದಿದೆ. ಹಲವು ಸಂಸದರು ಹಾಗೂ ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಕೆಲವರು ಪಕ್ಷ ತೊರೆಯುವ ನಿರ್ಧಾರಕ್ಕೂ ಬಂದಿದ್ದಾರೆ ಎನ್ನಲಾಗಿದೆ. ಇತ್ತೀಚಿನ ಚುನಾವಣಾ ಸೋಲಿನ ಬಳಿಕ ಪಕ್ಷದೊಳಗಿನ ಭಿನ್ನಮತ ಮತ್ತಷ್ಟು ತೀವ್ರಗೊಂಡಿದ್ದು, ಬಂಡಾಯ ಚಟುವಟಿಕೆಗಳು ಹೆಚ್ಚಾಗಿವೆ.
ಈ ಬೆಳವಣಿಗೆಗಳು ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದ್ದು, ಪಕ್ಷದ ಮೇಲಿನ ಹಿಡಿತ ದುರ್ಬಲವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಟಿಎಂಸಿಯ ಭವಿಷ್ಯದ ಬಗ್ಗೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ದೇಶ
‘ನನಗೆ ಡಬಲ್ ಸಮಾಧಾನ ಸಿಕ್ಕಿದೆ’: ಸಿಎಂ ಹುದ್ದೆ ಚರ್ಚೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ಬೆಂಗಳೂರು: ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ Siddaramaiah ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿಗಳನ್ನು ಸಚಿವ Satish Jarkiholi ತಳ್ಳಿಹಾಕಿದ್ದು, ಕೆಲ ಐಟಿ ಸೆಲ್‌ಗಳು ಅನಗತ್ಯವಾಗಿ ಈ ವಿಚಾರವನ್ನು ದೊಡ್ಡದಾಗಿಸಿವೆ ಎಂದು ಹೇಳಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೂ ಸಿದ್ದರಾಮಯ್ಯ ಅವರಿಗೂ ಭಿನ್ನಾಭಿಪ್ರಾಯ ಇದೆ ಎಂದು ಯಾರು ಹೇಳಿದರು? ಈ ಬಗ್ಗೆ ನಾನು ಮೊದಲಿನಿಂದಲೂ ಸ್ಪಷ್ಟಪಡಿಸುತ್ತಿದ್ದೇನೆ. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಕೆಲವರು ಹೆಚ್ಚಿನ ಪ್ರಚಾರ ನೀಡಿ ಅನಗತ್ಯ ಚರ್ಚೆಗೆ ಕಾರಣರಾಗಿದ್ದಾರೆ” ಎಂದು ಹೇಳಿದರು.
ಅಹಿಂದ ಸಂಘಟನೆ ಕುರಿತಂತೆ ಮಾತನಾಡಿದ ಜಾರಕಿಹೊಳಿ, ಅದು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಪಕ್ಷದ ಹೊರತಾಗಿಯೂ ಸಾಮಾಜಿಕ ಸಂಘಟನೆಯಾಗಿ ತನ್ನ ಕೆಲಸವನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದರು. “ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತೇನೆ” ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, “ಅಧ್ಯಕ್ಷರಾಗಿಯೇ ಪಕ್ಷದ ಕೆಲಸ ಮಾಡಬೇಕು ಎಂಬ ನಿಯಮವಿಲ್ಲ. ಪಕ್ಷಕ್ಕಾಗಿ ದುಡಿಯುವವರಿಗೆ ಅಧಿಕಾರ ಸಿಗಲೇಬೇಕು. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಲಸ ಮಾಡಿದವರಿಗೆ ಪಕ್ಷ ಸೂಕ್ತ ಜವಾಬ್ದಾರಿ ನೀಡಿದೆ” ಎಂದು ಹೇಳಿದರು.
2028ರ ನಾಯಕತ್ವದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, “ಇನ್ನೂ ಚುನಾವಣೆಗೆ ಸಾಕಷ್ಟು ಸಮಯವಿದೆ. ಮಗು ಹುಟ್ಟುವ ಮುನ್ನವೇ ಅದರ ಬಗ್ಗೆ ಚರ್ಚೆ ಮಾಡುವಂತಾಗಿದೆ. ನನಗೆ ಈಗಾಗಲೇ ಸಚಿವ ಸ್ಥಾನ ಸಿಕ್ಕಿದ್ದು, ಅದರಿಂದ ಸಮಾಧಾನವಾಗಿದೆ” ಎಂದರು.
ಇದೇ ವೇಳೆ ಕ್ರೀಡಾ ಖಾತೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಅವರು, “ಕ್ರೀಡಾ ಇಲಾಖೆ ನೀಡಿದ್ದರೆ ರಾಜ್ಯವನ್ನು ಕ್ರೀಡೆಯಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಲು ಪ್ರಯತ್ನಿಸುತ್ತಿದ್ದೆವು. ಆ ಖಾತೆಗಾಗಿ ಬೇಡಿಕೆಯನ್ನೂ ಇಟ್ಟಿದ್ದೆ” ಎಂದು ತಿಳಿಸಿದರು.
-
ಅಪರಾಧ10 hours agoಪುಣೆಯಲ್ಲಿ ಐಟಿ ಇಂಜಿನಿಯರ್ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ
-
ದೇಶ5 hours agoವೀಕೆಂಡ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಧರ್ಮಸ್ಥಳ, ಕುಕ್ಕೆ ದರ್ಶನಕ್ಕೆ ಬಂಪರ್ ಆಫರ್
-
ದೇಶ10 hours agoಕೆನಡಾಗೆ ಐತಿಹಾಸಿಕ ಪಾಯಿಂಟ್: ಬೋಸ್ನಿಯಾ ವಿರುದ್ಧ ಡ್ರಾ, ವಿಶ್ವಕಪ್ನಲ್ಲಿ ಹೊಸ ದಾಖಲೆ
-
ದೇಶ10 hours agoಅಸ್ಸಾಂನಲ್ಲಿ ವಾಯುಪಡೆಗೆ ಆಘಾತ: ಎಎನ್-32 ಸಾರಿಗೆ ವಿಮಾನ ಪತನ, ಬೆಂಕಿಗಾಹುತಿ
-
ದೇಶ16 hours agoಇರಾನ್ ವಿರುದ್ಧ ಟ್ರಂಪ್ ಕಿಡಿ: ‘ಭಾರತೀಯ ಹಡಗುಗಳ ಮೇಲೆ ಡ್ರೋನ್ ದಾಳಿ ಒಪ್ಪಲಾಗದು
-
ದೇಶ16 hours agoಡೀಸೆಲ್ ಖರೀದಿಗೆ ಹೊಸ ಮಿತಿ: ದಿನಕ್ಕೆ 200 ಲೀಟರ್ ಮಾತ್ರ, ಕೇಂದ್ರ ಸರ್ಕಾರದ ಮಹತ್ವದ ಆದೇಶ
-
Blog5 hours ago‘ಲಂಚ ಕೇಳಿದರೆ ತಕ್ಷಣ ದೂರು ನೀಡಿ’: ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ
-
ದೇಶ4 hours ago‘ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ’: ಮೋದಿ ಘೋಷಣೆ ಪುನರುಚ್ಚರಿಸಿದ ರಾಜನಾಥ್ ಸಿಂಗ್
