Connect with us

ದೇಶ

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌ – Raghavendra Swami

Published

on

ರಾಯಚೂರು: ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಗುರು ರಾಯರ ಪೂರ್ವಾರಾಧನೆ ಸಂಭ್ರಮ‌ ಸಡಗರದಿಂದ ನಡೆಯುತ್ತಿದೆ.

ಆರಾಧನಾ ಮೂರನೇ ದಿನವಾದ ಇಂದು ಬೆಳಿಗ್ಗೆಯಿಂದಲೇ ಮಠದಲ್ಲಿ ವಿವಿಧ ಪೂಜ ಕೈಂಕರ್ಯಗಳು ಶ್ರೀಮಠದ ಪೀಠಾಧಿಪತಿ ಶೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಆರಂಭವಾಗಿವೆ. ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ ನಡೆದಿದ್ದು ಇದಾದ ನಂತರ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ ನಡೆದಿದೆ. ಪೀಠಾಧಿಪತಿಗಳಿಂದ ಮೂಲ ರಾಮ ದೇವರ ಪೂಜೆ ಹಾಗೂ ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ ಜರುಗಲಿದೆ.

ಮಠದ ಪ್ರಾಕಾರದಲ್ಲಿ ರಜತ ಸಿಂಹ ವಾಹನೋತ್ಸವ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಇಂದು ಸಂಜೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಯರು ಸಶರೀರರಾಗಿ ವೃಂದಾವನಸ್ಥರಾದ ಪೂರ್ವ ದಿನವನ್ನು ರಾಯರ ಪೂರ್ವಾಧನೆಯನ್ನಾಗಿ ಮಾಡಲಾಗುತ್ತಿದೆ.

ಆರಾಧನಾ ಮಹೋತ್ಸವಕ್ಕೆ ದೇಶ, ವಿದೇಶ, ಅಂತಾರಾಜ್ಯ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಈ‌ ಮಹೋತ್ಸವಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಶ್ರೀಮಠ ಕಲ್ಪಿಸಿದೆ.

ಇನ್ನು ಆರಾಧನಾ ಮಹೋತ್ಸವಕ್ಕೆ ನಾನಾ ಭಾಗಗಳಿಂದ ಭಕ್ತರು ರಾತ್ರಿ ವೇಳೆ ಮಠದ ಮುಂಭಾಗದ ಕಾರಿಡಾರ್ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ರಾತ್ರಿ 2 ಗಂಟೆಯ ಸುಮಾರಿಗೆ ಭಾರಿ ಮಳೆ ಸುರಿಯುತ್ತಿತ್ತು. ಆಗ ಖುದ್ದು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು‌ ಶ್ರೀಮಠದ ಬಾಗಿಲು ತೆರೆದು, ರಾಯರ ಮಠದ ಪ್ರಾಕಾರ ಹಾಗೂ ಮಂಟಪದಲ್ಲಿ ವಿಶ್ರಾಂತಿ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು.

Continue Reading
Click to comment

Leave a Reply

Your email address will not be published. Required fields are marked *

ದೇಶ

30 ದಿನ ಜೈಲಿನಲ್ಲಿದ್ದರೆ ಸಿಎಂ, ಸಚಿವರಿಗೆ ಅಮಾನತು? ‘ತೆಗೆದುಹಾಕುವಿಕೆ’ ಪದ ಬದಲಿಸಲು JPC ಶಿಫಾರಸು

Published

on

ನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಪ್ರಧಾನಿ, ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಹುದ್ದೆಯಿಂದ ‘ತೆಗೆದುಹಾಕುವ’ (Removal) ಪ್ರಸ್ತಾಪಿತ ಕಾನೂನಿಗೆ ಮಹತ್ವದ ತಿದ್ದುಪಡಿ ತರಲು ಸಂಸತ್ತಿನ ಜಂಟಿ ಸಂಸದೀಯ ಸಮಿತಿ (JPC) ಮುಂದಾಗಿದೆ. ಮಸೂದೆಯಲ್ಲಿರುವ ‘ತೆಗೆದುಹಾಕುವಿಕೆ’ ಎಂಬ ಪದದ ಬದಲಿಗೆ ‘ಅಮಾನತು’ (Suspension) ಎಂಬ ಪದವನ್ನು ಬಳಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ನೇತೃತ್ವದ ಜಂಟಿ ಸಂಸದೀಯ ಸಮಿತಿಯು ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಕುರಿತು ಪರಿಶೀಲನೆ ನಡೆಸಿ ಕರಡು ವರದಿ ಸಿದ್ಧಪಡಿಸಿದೆ. ಹಾಲಿ ಸಚಿವರು ಅಥವಾ ಮುಖ್ಯಮಂತ್ರಿಗಳು ದೀರ್ಘಕಾಲ ನ್ಯಾಯಾಂಗ ಬಂಧನದಲ್ಲಿದ್ದರೂ ಅಧಿಕಾರದಲ್ಲಿ ಮುಂದುವರಿಯುವುದರಿಂದ ಉಂಟಾಗುವ ಆಡಳಿತಾತ್ಮಕ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಈ ಮಸೂದೆ ತರಲಾಗಿದೆ.

‘ತೆಗೆದುಹಾಕುವಿಕೆ’ ಬದಲು ‘ಅಮಾನತು’ ಯಾಕೆ?

ಸಮಿತಿಯ ಅಭಿಪ್ರಾಯದಂತೆ, ಒಬ್ಬ ಜನಪ್ರತಿನಿಧಿಯನ್ನು ನೇರವಾಗಿ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಹೇಳುವುದರಿಂದ ಅವರ ವಿರುದ್ಧದ ಆರೋಪ ಸಾಬೀತಾಗಿದೆ ಎಂಬ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ. ಆದ್ದರಿಂದ, ಸರ್ಕಾರಿ ನೌಕರರಿಗೆ ಅನ್ವಯವಾಗುವ ಮಾದರಿಯಲ್ಲಿ ಅಮಾನತು ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಶಿಫಾರಸು ಮಾಡಲಾಗಿದೆ.

ಒಂದು ವೇಳೆ ಸಂಬಂಧಪಟ್ಟ ನಾಯಕ ನ್ಯಾಯಾಲಯದಲ್ಲಿ ನಿರ್ದೋಷಿ ಎಂದು ತೀರ್ಪು ಪಡೆದರೆ ಅಥವಾ ಆರೋಪಗಳಿಂದ ಮುಕ್ತರಾದರೆ, ಅವರ ಅಮಾನತು ಸ್ವಯಂಚಾಲಿತವಾಗಿ ರದ್ದಾಗಿ ಹಿಂದಿನ ಹುದ್ದೆಗೆ ಮರಳುವ ಅವಕಾಶ ಇರಬೇಕು ಎಂದು ಸಮಿತಿ ಸೂಚಿಸಿದೆ.

ಯಾವ ಪ್ರಕರಣಗಳಿಗೆ ಮಾತ್ರ ಈ ನಿಯಮ?

ಕೇವಲ ರಾಜಕೀಯ ಪ್ರೇರಿತ ಅಥವಾ ಸಣ್ಣ ಪ್ರಕರಣಗಳಿಗೆ ಈ ನಿಯಮ ಅನ್ವಯವಾಗಬಾರದು ಎಂದು JPC ಸ್ಪಷ್ಟಪಡಿಸಿದೆ. ಕನಿಷ್ಠ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಬಹುದಾದ ಗಂಭೀರ ಅಪರಾಧಗಳ ಪ್ರಕರಣಗಳಿಗೆ ಮಾತ್ರ ಈ ನಿಯಮ ಅನ್ವಯಿಸಬೇಕು ಎಂದು ಶಿಫಾರಸು ಮಾಡಿದೆ.

ಇದರ ಜೊತೆಗೆ, ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಕೂಡ ಸಮಿತಿ ಸಲಹೆ ನೀಡಿದೆ.

ಪ್ರಸ್ತುತ ಕಾನೂನಿನಲ್ಲಿ ಸ್ಪಷ್ಟತೆ ಇಲ್ಲ

ಪ್ರಸ್ತುತ ಜಾರಿಯಲ್ಲಿರುವ ಸಂವಿಧಾನ ಅಥವಾ ಜನಪ್ರತಿನಿಧಿಗಳ ಕಾಯ್ದೆಯಲ್ಲಿ, ಹಾಲಿ ಪ್ರಧಾನಿ ಅಥವಾ ಮುಖ್ಯಮಂತ್ರಿಗಳು ನ್ಯಾಯಾಂಗ ಬಂಧನಕ್ಕೊಳಗಾದರೆ ಅವರ ಹುದ್ದೆಯ ಬಗ್ಗೆ ಯಾವುದೇ ಸ್ಪಷ್ಟ ನಿಯಮವಿಲ್ಲ. ಈ ಹಿನ್ನೆಲೆ ಹೊಸ ಕಾನೂನು ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ವಿರೋಧ ಪಕ್ಷಗಳ ಆಕ್ಷೇಪವೇನು?

ಈ ಮಸೂದೆಯನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಈ ಕಾನೂನು ಬಳಸುವ ಸಾಧ್ಯತೆ ಇದೆ ಎಂದು ಆರೋಪಿಸಿ, ಕೆಲವು ವಿರೋಧ ಪಕ್ಷಗಳು ಜಂಟಿ ಸಂಸದೀಯ ಸಮಿತಿ ಸಭೆಗಳನ್ನೇ ಬಹಿಷ್ಕರಿಸಿದ್ದವು.

ಇದರ ಜೊತೆಗೆ, ಕಾನೂನು ತಜ್ಞರು ಹಾಗೂ Association for Democratic Reforms (ADR) ಸೇರಿದಂತೆ ಹಲವು ಸಂಸ್ಥೆಗಳು, ಕೇವಲ ಬಂಧನದ ಆಧಾರದ ಮೇಲೆ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಥವಾ ಸಚಿವರನ್ನು ಅಮಾನತುಗೊಳಿಸುವ ಬದಲು, ನ್ಯಾಯಾಲಯ ಅಧಿಕೃತವಾಗಿ ದೋಷಾರೋಪಣೆ (Framing of Charges) ಮಾಡಿದ ನಂತರವೇ ಈ ನಿಯಮ ಜಾರಿಗೆ ಬರಬೇಕು ಎಂದು ಸಲಹೆ ನೀಡಿವೆ.

ಜಂಟಿ ಸಂಸದೀಯ ಸಮಿತಿಯ ಈ ವರದಿ ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

Continue Reading

ದೇಶ

20 ಗಂಟೆಗಳ ಕಾಲ ನೀರಿನಡಿ ಸಾಹಸ! ‘ಮೈಸಾ’ ಸಿನಿಮಾದಲ್ಲಿ ಇತಿಹಾಸ ಸೃಷ್ಟಿಸಿದ ರಶ್ಮಿಕಾ ಮಂದಣ್ಣ

Published

on

ನವದೆಹಲಿ: ಕನ್ನಡತಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಮೈಸಾ’ (Mysaa) ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚಿತ್ರದ ಪ್ರಮುಖ ಸಾಹಸ ದೃಶ್ಯಕ್ಕಾಗಿ ಅವರು ಯಾವುದೇ ಬಾಡಿ ಡಬಲ್ ಅಥವಾ ಡೂಪ್ ಬಳಸದೇ ಸ್ವತಃ ಅಂಡರ್‌ವಾಟರ್ (Underwater) ಫೈಟ್ ಸೀಕ್ವೆನ್ಸ್‌ನಲ್ಲಿ ಅಭಿನಯಿಸಿದ್ದು, ಮಹಿಳಾ ಪ್ರಧಾನ ನಟಿಯೊಬ್ಬರು ಇಂತಹ ಸಾಹಸ ಮಾಡಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

20 ಗಂಟೆಗಳ ಕಾಲ ನೀರಿನಡಿಯಲ್ಲೇ ಚಿತ್ರೀಕರಣ

ಈ ರೋಚಕ ಸಾಹಸ ದೃಶ್ಯದ ಚಿತ್ರೀಕರಣಕ್ಕಾಗಿ ರಶ್ಮಿಕಾ ಎರಡು ದಿನಗಳಲ್ಲಿ ಒಟ್ಟು 20 ಗಂಟೆಗಳ ಕಾಲ ನೀರಿನಡಿಯಲ್ಲೇ ಕಳೆದಿದ್ದಾರೆ. ಚಿತ್ರದ ನಿರ್ದೇಶಕ ರವೀಂದ್ರ ಪುಲ್ಲೆ (Ravindra Pulle) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರೀಕರಣದ ಅಪರೂಪದ ಚಿತ್ರಗಳನ್ನು ಹಂಚಿಕೊಂಡು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಹಂಚಿಕೊಂಡಿರುವ ಚಿತ್ರಗಳಲ್ಲಿ ರಶ್ಮಿಕಾ ವೆಟ್‌ಸೂಟ್ ಧರಿಸಿ ಡೈವಿಂಗ್ ತಂಡದೊಂದಿಗೆ ಸಾಹಸ ದೃಶ್ಯಕ್ಕೆ ಸಿದ್ಧತೆ ನಡೆಸುತ್ತಿರುವುದು ಕಾಣಿಸುತ್ತದೆ. ಮತ್ತೊಂದು ಚಿತ್ರದಲ್ಲಿ ಅವರ ಬೆನ್ನಿನ ಮೇಲಿನ ಗಾಯದ ಗುರುತುಗಳು ಪಾತ್ರದ ತೀವ್ರತೆಯನ್ನು ತೋರಿಸುತ್ತವೆ.

‘ಇದು ನನ್ನ ಜೀವನದ ಅತ್ಯಂತ ಕಠಿಣ ಚಿತ್ರೀಕರಣ’

ಈ ಅನುಭವದ ಬಗ್ಗೆ ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

“ಇತ್ತೀಚೆಗೆ ನಾನು ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಾಗಿದ್ದೆ. ಅದಕ್ಕೆ ಕಾರಣ ಇದೇ. ನನ್ನ ಜೀವನದಲ್ಲೇ ನಾನು ಎದುರಿಸಿದ ಅತ್ಯಂತ ಕಠಿಣ ಮತ್ತು ಸವಾಲಿನ ಚಿತ್ರೀಕರಣ ಇದಾಗಿದೆ. ಈ ಸಾಹಸಕ್ಕಾಗಿ ನಾವೆಲ್ಲರೂ ಸ್ವಲ್ಪ ಹುಚ್ಚುತನ ಮೆರೆದಿದ್ದೇವೆ. ಆದರೆ ಇದೇ ಅನುಭವ ನನಗೆ ಅಪಾರ ಉತ್ಸಾಹ ನೀಡಿದೆ.” ಎಂದು ಅವರು ತಿಳಿಸಿದ್ದಾರೆ.

ಗಿರಿಜನರ ಹಿನ್ನೆಲೆಯ ಆಕ್ಷನ್ ಥ್ರಿಲ್ಲರ್

‘ಮೈಸಾ’ ಚಿತ್ರವನ್ನು ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಿಸುತ್ತಿದ್ದು, ನಿರ್ದೇಶನವನ್ನು ರವೀಂದ್ರ ಪುಲ್ಲೆ ಮಾಡಿದ್ದಾರೆ. ಗಿರಿಜನ ಸಮುದಾಯದ ಹಿನ್ನೆಲೆಯ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಶ್ಮಿಕಾ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪ್ಯಾನ್-ಇಂಡಿಯಾ ಆಕ್ಷನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಫಸ್ಟ್ ಲುಕ್‌ನಲ್ಲೇ ಸದ್ದು ಮಾಡಿದ್ದ ಸಿನಿಮಾ

ಕಳೆದ ವರ್ಷ ಬಿಡುಗಡೆಯಾದ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರಶ್ಮಿಕಾ ರಕ್ತಸಿಕ್ತ ಅವತಾರದಲ್ಲಿ ಕೈಯಲ್ಲಿ ಆಯುಧ ಹಿಡಿದು ಕಾಣಿಸಿಕೊಂಡಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಈಗ ಅಂಡರ್‌ವಾಟರ್ ಫೈಟ್ ದೃಶ್ಯದ ಸುದ್ದಿಯಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಚಿತ್ರದ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ‘ಮೈಸಾ’ ಸಿನಿಮಾ ಮುಂದಿನ ದಿನಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

Continue Reading

ದೇಶ

ಬಿಹಾರ ರಾಜಕೀಯದಲ್ಲಿ ಭಾರಿ ಟ್ವಿಸ್ಟ್: ನಾಮಪತ್ರದ ಮರುದಿನವೇ BJP ಅಭ್ಯರ್ಥಿ ಬದಲಾವಣೆ, ಪ್ರಶಾಂತ್ ಕಿಶೋರ್ ವಿರುದ್ಧ ಹೊಸ ಮುಖ!

Published

on

ನವದೆಹಲಿ: ಬಿಹಾರದ (Bihar) ಬ್ಯಾಂಕಿಪುರ (Bankipur Assembly) ವಿಧಾನಸಭಾ ಉಪಚುನಾವಣೆಯಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದೆ. ನಾಮಪತ್ರ ಸಲ್ಲಿಸಿದ ಕೇವಲ ಒಂದು ದಿನದ ಬಳಿಕವೇ ಭಾರತೀಯ ಜನತಾ ಪಕ್ಷ (BJP) ತನ್ನ ಅಭ್ಯರ್ಥಿಯನ್ನು ಬದಲಾಯಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಶುಕ್ರವಾರ ನೀರಜ್ ಕುಮಾರ್ ಸಿನ್ಹಾ (Neeraj Kumar Sinha) ಅವರನ್ನು ಬ್ಯಾಂಕಿಪುರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದೆ. ಈ ಮೂಲಕ ಅವರು ಜನ ಸುರಾಜ್ ಪಕ್ಷದ (Jan Suraaj Party) ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಅಭಿಷೇಕ್ ಬಂಟಿ ಹಿಂದೆ ಸರಿದಿದ್ದು ಏಕೆ?

ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದ ಅಭಿಷೇಕ್ ಬಂಟಿ (Abhishek Bunty) ಗುರುವಾರ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಸೇರಿದಂತೆ ಎನ್‌ಡಿಎ (NDA) ನಾಯಕರ ಸಮ್ಮುಖದಲ್ಲಿ ಭರ್ಜರಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಶುಕ್ರವಾರ ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಸರಾವಗಿ ಅವರಿಗೆ ಪತ್ರ ಬರೆದು “ವೈಯಕ್ತಿಕ ಕಾರಣಗಳಿಂದ” ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ನಂತರ ನಡೆದ ಸುದ್ದಿಗೋಷ್ಠಿಯಲ್ಲೂ ಇದೇ ಕಾರಣವನ್ನು ಪುನರುಚ್ಚರಿಸಿದ ಅವರು ಭಾವುಕರಾಗಿರುವುದು ಗಮನ ಸೆಳೆಯಿತು.

ಅಭ್ಯರ್ಥಿ ಬದಲಾವಣೆಯ ಹಿಂದಿನ ಕಾರಣವೇನು?

ಮೂಲಗಳ ಪ್ರಕಾರ, ಅಭಿಷೇಕ್ ಬಂಟಿ ಅವರ ತಂದೆ ರವೀಂದ್ರ ಪ್ರಸಾದ್ ಅವರು ಪ್ರಸಿದ್ಧ ಮೇವು ಹಗರಣ (Fodder Scam) ಪ್ರಕರಣದಲ್ಲಿ ಆರ್‌ಜೆಡಿ (RJD) ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಆರೋಪಿಯಾಗಿ ಶಿಕ್ಷೆಗೆ ಗುರಿಯಾಗಿದ್ದರು.

2022ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಲಾಲು ಯಾದವ್ ಸೇರಿದಂತೆ 75 ಮಂದಿಯನ್ನು ದೋಷಿಗಳೆಂದು ಘೋಷಿಸಿತ್ತು. ಆ ವೇಳೆ ಮಗಧ್ ಕೆಮಿಕಲ್ ಕಾರ್ಪೊರೇಷನ್‌ನ ವ್ಯವಸ್ಥಾಪಕರಾಗಿದ್ದ ರವೀಂದ್ರ ಪ್ರಸಾದ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಸುಮಾರು ₹139 ಕೋಟಿ ಮೌಲ್ಯದ ಮೇವು ಹಗರಣ ಪ್ರಕರಣದಲ್ಲಿ ಸಿಬಿಐ 2001ರಿಂದ 2003ರ ನಡುವೆ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಿತ್ತು.

ಪ್ರಶಾಂತ್ ಕಿಶೋರ್ ತಂತ್ರಕ್ಕೆ BJP ಪ್ರತಿತಂತ್ರ

ಬಿಜೆಪಿ ಮೂಲಗಳ ಪ್ರಕಾರ, ಪ್ರಶಾಂತ್ ಕಿಶೋರ್ ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯವನ್ನಾಗಿಸಲು ಸಿದ್ಧತೆ ನಡೆಸಿದ್ದರು. ಇದು ಚುನಾವಣೆಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕದಿಂದ ಬಿಜೆಪಿ ಮುನ್ನೆಚ್ಚರಿಕೆ ಕ್ರಮವಾಗಿ ಅಭ್ಯರ್ಥಿಯನ್ನು ಬದಲಾಯಿಸಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಾಮಾನ್ಯ ಪಕ್ಷದ ಕಾರ್ಯಕರ್ತರಾಗಿರುವ ನೀರಜ್ ಕುಮಾರ್ ಸಿನ್ಹಾ ಅವರಿಗೆ ಟಿಕೆಟ್ ನೀಡಲಾಗಿದೆ.

ಬ್ಯಾಂಕಿಪುರದಲ್ಲಿ ಹೈವೋಲ್ಟೇಜ್ ಕದನ

ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನವೀನ್ (Nitin Nabin) ಅವರು ಬ್ಯಾಂಕಿಪುರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.

1995ರಿಂದ ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಈ ಬಾರಿ ಪ್ರಶಾಂತ್ ಕಿಶೋರ್ ಕಣಕ್ಕಿಳಿದಿರುವುದರಿಂದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿ ಬದಲಾವಣೆ ಈ ಚುನಾವಣೆಗೆ ಮತ್ತಷ್ಟು ರಂಗು ತುಂಬಿದೆ.

Continue Reading

Trending