Connect with us

ದೇಶ

ಆರ್‍ಎಸ್‍ಎಸ್ ಅವಹೇಳನ-ವಿವಾದದ ಬಳಿಕ ನಟ ಪ್ರಕಾಶ್ ರಾಜ್ ಸ್ಪಷ್ಟನೆ

Published

on

ಮುಂಬೈ: ಆರ್‍ಎಸ್‍ಎಸ್ ಇಲ್ಲದ ಕಾರಣ ಇಂಡೋನೇಷ್ಯಾದಲ್ಲಿ ಗಲಭೆಗಳು ನಡೆಯುವುದಿಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಲಾದ ಪೋಸ್ಟ್ ವೈರಲ್ ಆಗಿದ್ದು ಸ್ಪಷ್ಟನೆ ನೀಡಿದ್ದಾರೆ,
ಪ್ರಕಾಶ್ ರಾಜ್ ಅವರು ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ, ಈ ರೀತಿಯ ಹೇಳಿಕೆಯನ್ನು ನೀಡಿಲ್ಲ, ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ,
ವೈರಲ್ ಆದ ಪೋಸ್ಟ್‍ನಲ್ಲಿ ಏನಿದೆ?
ಪ್ರಕಾಶ್ ರಾಜ್ ಅವರ ಹೇಳಿಕೆ ಎನ್ನಲಾದ ಪೋಸ್ಟ್‍ನಲ್ಲಿ ಇಂಡೋನೇಷ್ಯಾದಲ್ಲಿ ಮುಸ್ಲಿಮರು ಶೇಕಡಾ 90 ರಷ್ಟು, ಹಿಂದೂಗಳು ಶೇಕಡಾ 2 ರಷ್ಟಿದ್ದಾರೆ, ಅಲ್ಲಿ ಸುಮಾರು 11,000 ದೇವಾಲಯಗಳಿವೆ, ಅಲ್ಲಿ ಆರ್‍ಎಸ್‍ಎಸ್ ಇಲ್ಲದ ಕಾರಣ ನಾನು ಗಲಭೆಗಳ ಬಗ್ಗೆ ಕೇಳಿಲ್ಲ ಎನ್ನಲಾಗಿತ್ತು,

ಪ್ರಕಾಶ್ ರಾಜ್ ಸ್ಪಷ್ಟನೆ ಏನು?
ಇದು ನನ್ನ ಹೇಳಿಕೆಯಲ್ಲ, ಈ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ, ಇದನ್ನು ರಚಿಸಿದವರು ಯಾರು? ಇದು ನನ್ನ ಹೇಳಿಕೆಯಲ್ಲ, ನಿಮ್ಮ ಹೇಳಿಕೆಯನ್ನು ನನ್ನ ಹೆಸರಿನಲ್ಲಿ ಹಾಕಬೇಡಿ ಎಂದು ತಿಳಿಸಿದ್ದಾರೆ,
ಅಷ್ಟೇ ಅಲ್ಲದೇ ಪ್ರಕಾಶ್ ರಾಜ್ ಅವರು ಸುಳ್ಳು ಸುದ್ದಿ ಹರಡುವವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ, ಈಗಾಗಲೇ ಈ ಬಗ್ಗೆ ನನ್ನ ವಕೀಲರನ್ನು ಸಂಪರ್ಕಿಸುತ್ತಿದ್ದೇನೆ, ಈ ರೀತಿಯ ಹೇಳಿಕೆಗಳನ್ನು ಬಲಪಂಥೀಯರು ನೀಡಿದ್ದಾರೆ, ತಮ್ಮ ಸುಳ್ಳುಗಳನ್ನು ಪ್ರಚಾರ ಮಾಡಲು ಸಾಮಾಜಿಕ ಜಾಲತಾಣವನ್ನು ಬಳಸುತ್ತಾರೆ ಎಂದು ಕಿಡಿಕಾರಿದರು,

ಕ್ರೀಡೆ

ಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!

Published

on

By

ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ನಡೆಯುತ್ತಿರುವ Indian Premier League ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ (28) ಬೇಗ ಔಟ್ ಆದರೂ, ಫಿಲ್ ಸಾಲ್ಟ್ (46) ತಂಡಕ್ಕೆ ವೇಗ ನೀಡಿದರು.

ಆದರೆ, ನಂತರದ ಹಂತದಲ್ಲಿ ಆರ್ಸಿಬಿ ಬ್ಯಾಟಿಂಗ್ ಭರ್ಜರಿಯಾಗಿ ಸಿಡಿಯಿತು. ದೇವದತ್ತ ಪಡಿಕಲ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ನೀಡಿದರೆ, ನಾಯಕ ರಜತ್ ಪಾಟೀದಾರ್ (48*) ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟಿಮ್ ಡೇವಿಡ್ (70*) ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳಿಂದ ಚೆನ್ನೈ ಬೌಲರ್ಗಳನ್ನು ಕಂಗೆಡಿಸಿದರು.

ಪವರ್ಪ್ಲೇಯಲ್ಲೇ ವಿಕೆಟ್ ಪಡೆಯಲು ವಿಫಲವಾದ ಸಿಎಸ್ಕೆ ಬೌಲರ್ಗಳು ಮತ್ತೆ ಅದೇ ತಪ್ಪನ್ನು ಮುಂದುವರೆಸಿದರು. ಪರಿಣಾಮವಾಗಿ, ಆರ್ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರೀ 250 ರನ್ ಗಳಿಸಿತು.

ಈ ಬೃಹತ್ ಗುರಿಯನ್ನು ಬೆನ್ನತ್ತುತ್ತಿರುವ ಸಿಎಸ್ಕೆ, ತನ್ನ ಮೊದಲ ಗೆಲುವು ದಾಖಲಿಸಬಹುದೇ ಎಂಬುದು ಈಗ ಕುತೂಹಲ ಮೂಡಿಸಿದೆ.

ಆರ್ಸಿಬಿ ಬ್ಯಾಟಿಂಗ್ ವಿವರ:

  • ವಿರಾಟ್ ಕೊಹ್ಲಿ – 28 (18)
  • ಫಿಲ್ ಸಾಲ್ಟ್ – 46 (30)
  • ದೇವದತ್ತ ಪಡಿಕಲ್ – 50 (29)
  • ರಜತ್ ಪಾಟೀದಾರ್ – 48* (19)
  • ಟಿಮ್ ಡೇವಿಡ್ – 70* (25)
Continue Reading

ದೇಶ

ಪೊಲೀಸ್ ವಾಹನವೇ ಪ್ರವೇಶಿಸದ ಗ್ರಾಮ: ಶಾಂತಿಯುತ ಬದುಕಿನ ಅದ್ಭುತ ಕಥೆ

Published

on

By

ಇತ್ತೀಚಿನ ದಿನಗಳಲ್ಲಿ ಸಣ್ಣ ವಿಷಯಕ್ಕೂ ಜಗಳ-ಕೇಸು ಸಾಮಾನ್ಯವಾಗಿರುವ ಸಂದರ್ಭದಲ್ಲೇ, ಬಿಹಾರದ ಒಂದು ಹಳ್ಳಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ. ಕಲಿಯಾಚಕ್ ಗ್ರಾಮ ಕಳೆದ 118 ವರ್ಷಗಳಿಂದ ಯಾವುದೇ ಅಪರಾಧ ದಾಖಲಾಗದೇ ಶಾಂತಿಯುತ ಜೀವನ ನಡೆಸುತ್ತಿರುವುದು ವಿಶೇಷ.

ನಳಂದ ಜಿಲ್ಲೆಯ ಈ ಗ್ರಾಮದಲ್ಲಿ ಸ್ಥಾಪನೆಯಾದ ದಿನದಿಂದಲೂ ಗಂಭೀರ ಅಪರಾಧಗಳೇ ನಡೆದಿಲ್ಲ. ಅಷ್ಟೇ ಅಲ್ಲ, ಇಷ್ಟು ವರ್ಷಗಳಲ್ಲಿ ಪೊಲೀಸ್ ಸೈರನ್ ಕೂಡ ಕೇಳಿಸಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಗ್ರಾಮದಲ್ಲಿ ಯಾವುದೇ ಸಣ್ಣಪುಟ್ಟ ವಿವಾದಗಳು ಉಂಟಾದರೂ, ಹಿರಿಯರು ಕೂತು ಸಮಸ್ಯೆಯನ್ನು ಪರಿಹರಿಸುತ್ತಾರೆ.

ಈ ಗ್ರಾಮ ಹಿಲ್ಸಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಆದರೆ ಪೊಲೀಸ್ ದಾಖಲೆಗಳಲ್ಲಿ ಈ ಗ್ರಾಮದಿಂದ ಒಂದೇ ಒಂದು ದೂರು ಕೂಡ ಇಲ್ಲದಿರುವುದು ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ.

ಗ್ರಾಮದಲ್ಲಿ ಸುಮಾರು 60 ಕುಟುಂಬಗಳು, 500 ಜನರು ವಾಸಿಸುತ್ತಿದ್ದು, ವಿವಿಧ ಜಾತಿ-ವರ್ಗಗಳ ಜನರು ಸಹೋದರತ್ವದಿಂದ ಬದುಕುತ್ತಿದ್ದಾರೆ. “ಗ್ರಾಮದ ಸಮಸ್ಯೆಗಳನ್ನು ಗ್ರಾಮದಲ್ಲೇ ಬಗೆಹರಿಸಬೇಕು” ಎಂಬುದು ಇವರ ಮೂಲ ತತ್ವವಾಗಿದೆ.

ಈ ಶಾಂತಿಯುತ ವಾತಾವರಣಕ್ಕೆ ಪ್ರಮುಖ ಕಾರಣ ಮಾಜಿ ಪಂಚಾಯಿತಿ ಅಧ್ಯಕ್ಷ ಸಾಧು ಶರಣ್ ಸಿಂಗ್ ಅವರ ಮಾರ್ಗದರ್ಶನ. ಅವರ ಪ್ರಯತ್ನದಿಂದ ಈ ಗ್ರಾಮ ಮಾದರಿಯಾಗಿ ರೂಪುಗೊಂಡಿದೆ.

ಇಲ್ಲಿನ ಯುವಕರು ಕೆಟ್ಟ ಅಭ್ಯಾಸಗಳಿಂದ ದೂರವಿದ್ದು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ.

ಗಮನಿಸಿ: ಮೇಲಿನ ವಿವರಗಳು ಬಿಹಾರದ ಕಲಿಯಾಚಕ್ ಗ್ರಾಮದ ಕುರಿತು ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಒದಗಿಸಿದ ಮಾಹಿತಿಯನ್ನು ಆಧರಿಸಿವೆ. ಇದು ಅಪರಾಧ ಮುಕ್ತ ಗ್ರಾಮವಾಗಿ ದೇಶದಲ್ಲಿ ವಿಶೇಷ ಮನ್ನಣೆಯನ್ನು ಗಳಿಸಿದೆ.

ಒಟ್ಟಿನಲ್ಲಿ, ಕಲಿಯಾಚಕ್ ಗ್ರಾಮವು ಒಗ್ಗಟ್ಟು, ಸಹೋದರತ್ವ ಮತ್ತು ಶಾಂತಿಯುತ ಬದುಕಿನ ನಿಜವಾದ ಮಾದರಿಯಾಗಿ ಇಡೀ ದೇಶಕ್ಕೆ ಪ್ರೇರಣೆಯಾಗಿದೆ.

Continue Reading

ದೇಶ

ಯುದ್ಧ ಮಧ್ಯೆ ಸಾಹಸ ಕಾರ್ಯಾಚರಣೆ: ಅಮೆರಿಕಾ ಪೈಲಟ್ ರಕ್ಷಣೆ ಘೋಷಣೆ

Published

on

By

Continue Reading

Trending