Connect with us

ದೇಶ

ಚಾಮುಂಡೇಶ್ವರಿ ಪ್ರಾಧಿಕಾರ ಸಭೆ ಕಾನೂನಾತ್ಮಕವಾಗಿ ನಡೆಯುತ್ತಿದೆ, ಸಿಎಂ ಯಾರು ಎಂದು ತೀರ್ಮಾನಿಸುವುದು ಶಾಸಕರು, ಹೈಕಮಾಂಡ್: ಸಿದ್ದರಾಮಯ್ಯ

Published

on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ (Chamundeshwari Development Authority) ಸಭೆಯಲ್ಲಿ ಭಾಗವಹಿಸಲು ಮೈಸೂರಿಗೆ ಇಂದು ಮಂಗಳವಾರ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಅವರು ಮೈಸೂರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಮಾಡಿದ್ದಾರೆ.

ಈ ಸಭೆಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಯದುವಂಶದ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪ್ರಾಧಿಕಾರದ ಸಭೆಯನ್ನು ಕಾನೂನಾತ್ಮಕವಾಗಿ ಮಾಡುತ್ತಿದ್ದೇನೆ. ಯಾರದ್ದೋ ಹೇಳಿಕೆ ಆಧರಿಸಿ ಸಭೆ ಮಾಡಲು ಆಗುವುದಿಲ್ಲ. ಸಭೆ ಮುಂದೂಡಲು ಸಾಧ್ಯವಿಲ್ಲ ಎಂದರು. ಯದುವೀರ್ ಹೇಳಿಕೆ ಮುಖ್ಯವೋ ಕಾನೂನು ಮುಖ್ಯವೋ? ನಾನು ಕಾನೂನು ಪ್ರಕಾರವೇ ಇವತ್ತಿನ ಸಭೆ ಮಾಡುತ್ತಿದ್ದೇನೆ. ಕೋರ್ಟ್​​​ನಲ್ಲಿ ತಡೆಯಾಜ್ಞೆ ತೆರವು ಆಗಿದ್ದಕ್ಕೆ ಸಭೆ ಮಾಡುತ್ತಿದ್ದೇನೆ ಎಂದರು.

ಮುಡಾ ಮಾಜಿ ಆಯುಕ್ತ ದಿನೇಶ್ ಅಮಾನತು ವಿಚಾರ ಗೊತ್ತಿಲ್ಲ. 2009ರ ಹಿಂದಿನ ಬಡಾವಣೆಗೆ 50:50 ಬದಲಿ ನಿವೇಶನ ಅನ್ವಯ ಆಗುವುದಿಲ್ಲ. ಈ ಅಂಶ ಉಲ್ಲೇಖದ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಡಾ ಆದೇಶದ ಅಂಶಗಳು ಏನು ಎಂಬುದು ಸಹ ಗೊತ್ತಿಲ್ಲ. ಗೊತ್ತಿಲ್ಲದನ್ನು ನಾನು ಹೇಗೆ ವಿವರವಾಗಿ ಹೇಳಲಿ. ಆದೇಶದಲ್ಲಿ ಏನಿದೆ ಎಂದು ನೋಡಿಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಕೊರೊನಾ​​ ಹಗರಣದ ಮಧ್ಯಂತರ ವರದಿಯನ್ನು ಮುಂದಿನ ಸಚಿವ ಸಂಪುಟದ ಮುಂದೆ ಮಂಡಿಸುತ್ತೇನೆ. ಸಂಪುಟದಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಹೇಳುತ್ತೇನೆ. ವರದಿಯಲ್ಲಿ ಏನಿದೆ ಎಂಬುದನ್ನು ನಾನು ನೋಡಿಲ್ಲ. ಎಷ್ಟು ಪ್ರಮಾಣದ ಭ್ರಷ್ಟಾಚಾರ ಆಗಿದೆ ಎಂಬುದು ಗಮನಕ್ಕೆ ಬಂದಿಲ್ಲ. ನನ್ನ ಗಮನಕ್ಕೆ ಬರದೆ ಸುಧಾಕರ್​​ಗೆ ಮಾಹಿತಿ ಕೊಟ್ಟವರು ಯಾರು? ಕುಂಬಳಕಾಯಿ‌ ಕಳ್ಳ ಅಂದ್ರೆ ಏಕೆ ಹೆಗಲು ಮುಟ್ಟಿಕೊಳ್ಳಬೇಕು? ಸುಧಾಕರ್ ಗೆ ತಪ್ಪು ಮಾಡಿರುವುದು ಮಾನಸಿಕವಾಗಿ ಗೊತ್ತಿದೆ. ಹೀಗಾಗಿ ಅವನು ಆ ರೀತಿ ಮಾತನಾಡುತ್ತಿದ್ದಾನೆ ಎಂದರು.

ವೇತನ ಬಾಕಿ ಇಲ್ಲ: ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಆಗದ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಮಾಹಿತಿ ಪಡೆಯುತ್ತೇನೆ. ಆದರೆ, ನಾವು ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ. ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಇನ್ನು ಸಿದ್ದರಾಮಯ್ಯನವರು ಒಪ್ಪಿಗೆ ಕೊಟ್ಟರೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಆಗಲು ಪರ್ಮಿಷನ್ ಕೊಡೋದಿಕ್ಕೆ ನಾನ್ಯಾರು, ಅದು ಪಕ್ಷದ ಶಾಸಕರು ಮತ್ತು ಹೈಕಮಾಂಡ್ ಗೆ ಬಿಟ್ಟ ತೀರ್ಮಾನ ಎಂದು ನಗುತ್ತಾ ಹೇಳಿದರು.

ಇದಕ್ಕೂ ಮುನ್ನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೈಸೂರಿನ ಅರಮನೆ ಮೈದಾನದಲ್ಲಿ “ಕನ್ನಡ ಸುವರ್ಣ ಸಂಭ್ರಮ ರಥ” ಕ್ಕೆ ಚಾಲನೆ ನೀಡಿ, ಅಭಿಯಾನ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ರಾಜ್ಯವು ಕರ್ನಾಟಕವೆಂದು ನಾಮಕರಣಗೊಂಡು ಐದು ದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಸುವರ್ಣ ಸಂಭ್ರಮ ರಥಕ್ಕೆ ಚಾಲನೆ ನೀಡಲಾಗಿದೆ.

ಚುನಾವಣೆ

Davangere By Election 2026 : 25 ಅಭ್ಯರ್ಥಿಗಳ ಕಣ: ಮುಸ್ಲಿಂ ಅಭ್ಯರ್ಥಿಗಳೇ ಗೇಮ್‌ಚೇಂಜರ್?

Published

on

By

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತಿಮ ಹಂತ ತಲುಪಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಶಾಸಕ Shamanur Shivashankarappa ಅವರ ನಿಧನದಿಂದ ತೆರವಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಈ ಬಾರಿ ಸವಾಲು ಗಟ್ಟಿಯಾಗಿದೆ.

2008ರ ಕ್ಷೇತ್ರ ಮರುವಿಂಗಡಣೆಯ ನಂತರದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ, ಶಾಮನೂರು ಶಿವಶಂಕರಪ್ಪ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿರುವುದನ್ನು ಕಾಂಗ್ರೆಸ್ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ.

ಒಟ್ಟು 2,31,132 ಮತದಾರರಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ. ಸುಮಾರು 70 ಸಾವಿರ ಮತಗಳು ಯಾರಿಗೆ ಸಿಗುತ್ತವೆ ಎಂಬುದೇ ಗೆಲುವಿನ ಲೆಕ್ಕಾಚಾರವನ್ನು ನಿರ್ಧರಿಸಲಿದೆ.

ಕಾಂಗ್ರೆಸ್ ಪರವಾಗಿ Mallikarjun Shamanur ಕಣಕ್ಕಿಳಿದಿದ್ದು, ಕುಟುಂಬ ರಾಜಕಾರಣದ ಆರೋಪ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸಚಿವ S. S. Mallikarjun ಮತ್ತು ಸಂಸದೆ Dr. Prabha Mallikarjun ಅವರ ಕುಟುಂಬದ ಮತ್ತೊಬ್ಬರನ್ನು ಅಭ್ಯರ್ಥಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇನ್ನೊಂದೆಡೆ, ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ 13 ಮುಸ್ಲಿಂ ಅಭ್ಯರ್ಥಿಗಳಿರುವುದು ಚುನಾವಣೆಗೆ ಹೊಸ ತಿರುವು ನೀಡಿದೆ. Social Democratic Party of India ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಸೇರಿದಂತೆ ಹಲವರು ಸಕ್ರಿಯ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ಶಿಬಿರ ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದರೆ, ಕಾಂಗ್ರೆಸ್ ಒಳಗಿನ ಗೊಂದಲ ಇನ್ನೂ ಸಂಪೂರ್ಣವಾಗಿ ಶಮನವಾಗಿಲ್ಲ. ಈ ಹಿನ್ನೆಲೆ, ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ, ಗೆಲುವು ಈ ಬಾರಿ ಸುಲಭವಾಗಿಲ್ಲ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

Continue Reading

ದೇಶ

ಗಡಿಯಲ್ಲಿ ಹಾವು-ಮೊಸಳೆ ಕಾವಲು?: ಬಿಎಸ್‌ಎಫ್ ಹೊಸ ಯೋಜನೆ ಚರ್ಚೆಯಲ್ಲಿ

Published

on

By

ನವದೆಹಲಿ: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆಯುತ್ತಿರುವ ಅಕ್ರಮ ನುಸುಳುವಿಕೆ ಮತ್ತು ಕಳ್ಳಸಾಗಣೆ ತಡೆಯಲು Border Security Force ಒಂದು ವಿಭಿನ್ನ ಹಾಗೂ ಸಾಹಸಮಯ ಯೋಜನೆಗೆ ಮುಂದಾಗಿದೆ. ದುರ್ಗಮ ಮತ್ತು ಜೌಗು ಪ್ರದೇಶಗಳಲ್ಲಿ ಕಾವಲು ಬಿಗಿಗೊಳಿಸಲು ಹಾವು ಮತ್ತು ಮೊಸಳೆಗಳಂತಹ ವನ್ಯಜೀವಿಗಳನ್ನು ಬಳಸುವ ಕುರಿತು ಗಂಭೀರ ಚಿಂತನೆ ನಡೆದಿದೆ.

ವಿಶೇಷವಾಗಿ Sundarbans ಪ್ರದೇಶದಲ್ಲಿ ಗಡಿ ಕಾವಲು ಮಾಡುವುದು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿದೆ. ದಟ್ಟ ಕಾಡು, ನದಿ ಮಾರ್ಗಗಳು ಮತ್ತು ಜೌಗು ಭೂಮಿಯಿಂದಾಗಿ ನುಸುಳುಕೋರರು ಸುಲಭವಾಗಿ ಗಡಿ ದಾಟುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನದಿ ಮಾರ್ಗಗಳಲ್ಲಿ ಮೊಸಳೆಗಳನ್ನು ಹಾಗೂ ಭೂಮಿಯ ಪೊದೆಗಳಲ್ಲಿ ವಿಷಕಾರಿ ಹಾವುಗಳನ್ನು ಇರಿಸುವ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ.

ಸಾಮಾನ್ಯವಾಗಿ ಗಡಿಗಳಲ್ಲಿ ತಂತಿ ಬೇಲಿ ಹಾಗೂ ಸೈನಿಕರ ಗಸ್ತು ಇರುತ್ತದೆ. ಆದರೆ ನದಿ ಮತ್ತು ಜೌಗು ಪ್ರದೇಶಗಳಲ್ಲಿ ಇದು ಸಾಧ್ಯವಾಗದ ಕಾರಣ, ನೈಸರ್ಗಿಕ ಭದ್ರತೆಯನ್ನು ಹೆಚ್ಚಿಸಲು ಈ ಕ್ರಮ ಸಹಾಯಕವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನುಸುಳುಕೋರರು ಹೆಚ್ಚಾಗಿ ಬಳಸುವ ಮಾರ್ಗಗಳಲ್ಲಿ ಈ ವನ್ಯಜೀವಿಗಳ ಉಪಸ್ಥಿತಿ ಭಯ ಹುಟ್ಟಿಸಿ ಅಕ್ರಮ ಪ್ರವೇಶವನ್ನು ತಡೆಯಬಹುದು ಎಂದು ಅಧಿಕಾರಿಗಳು ನಂಬಿದ್ದಾರೆ.

ಇದಲ್ಲದೆ, ಈ ಯೋಜನೆಯಿಂದ ಪರಿಸರ ಸಮತೋಲನಕ್ಕೂ ಸಹಕಾರಿಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೆ ಪ್ರಾಣಿಗಳ ಸುರಕ್ಷತೆ, ಪರಿಸರದ ಮೇಲೆ ಪರಿಣಾಮ ಹಾಗೂ ಕಾನೂನುಬದ್ಧ ಅನುಮತಿಗಳ ಬಗ್ಗೆ ತಜ್ಞರೊಂದಿಗೆ ಚರ್ಚೆಗಳು ನಡೆಯುತ್ತಿವೆ.

ಯೋಜನೆ ಜಾರಿಗೆ ಬಂದರೆ, ತಾಂತ್ರಿಕ ಸಾಧನಗಳ ಜೊತೆಗೆ ಪ್ರಕೃತಿಯ ಸಹಕಾರದಿಂದ ಗಡಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಹೊಸ ಪ್ರಯೋಗವಾಗಲಿದೆ ಎಂಬ ನಿರೀಕ್ಷೆ ಇದೆ.

Continue Reading

ದೇಶ

X ನಲ್ಲಿ ವೈರಲ್ ಆದ CA ಕಥೆ: ನಂಬಲೇಬೇಕಾ ಅಥವಾ ಕೇವಲ ಕಥೆಯಾ?

Published

on

By

ನವದೆಹಲಿ: ದೆಹಲಿಯ ಚಾರ್ಟರ್ಡ್ ಅಕೌಂಟೆಂಟ್ Nitin Kaushik ಅವರು ಹಂಚಿಕೊಂಡ ಒಂದು ವಿಚಿತ್ರ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು ₹11 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಗ್ರಾಹಕ ₹15,000 ರಿಯಾಯಿತಿ ಕೇಳಿದ ಘಟನೆ ನೆಟ್ಟಿಗರನ್ನು ಆಶ್ಚರ್ಯಕ್ಕೆ ಗುರಿಮಾಡಿದೆ.

ಸೋಶಿಯಲ್ ಮೀಡಿಯಾ ವೇದಿಕೆ X ನಲ್ಲಿ ಈ ಕಥೆಯನ್ನು ಹಂಚಿಕೊಂಡ ಕೌಶಿಕ್, ತನ್ನ ಬಳಿ ನೆಟ್‌ವರ್ತ್ ಪ್ರಮಾಣಪತ್ರಕ್ಕಾಗಿ ಬಂದ ‘ಹೈ ನೆಟ್ ವರ್ತ್ ಇಂಡಿವಿಜುವಲ್’ (HNI) ಬಗ್ಗೆ ವಿವರಿಸಿದ್ದಾರೆ. ಈ ವ್ಯಕ್ತಿಯ ಒಟ್ಟು ಆಸ್ತಿ ಮೌಲ್ಯ ₹11.4 ಕೋಟಿ ಎಂದು ಅಂದಾಜಿಸಲಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಭೂಮಿ, ಸ್ಟಾರ್ಟ್‌ಅಪ್ ಹೂಡಿಕೆಗಳು ಹಾಗೂ ಹಲವು ಕಂಪನಿಗಳ ಪಾಲುದಾರಿಕೆಗಳಿಂದ ಸಂಪಾದನೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಈ ಸೇವೆಗೆ ₹1 ಲಕ್ಷ ಶುಲ್ಕ ಕೇಳಿದಾಗ, ಗ್ರಾಹಕ ಡಿಸ್ಕೌಂಟ್ ಕೇಳಿ ಕೊನೆಗೆ ₹85,000 ಪಾವತಿಸಿದ್ದಾನೆ. “ಹೌದು, ಇಂತಹ ಕ್ಲೈಂಟ್‌ಗಳೂ ಇರುತ್ತಾರೆ” ಎಂದು ಕೌಶಿಕ್ ವ್ಯಂಗ್ಯವಾಗಿ ಹೇಳಿದ್ದಾರೆ.

ಈ ಪೋಸ್ಟ್ ವೈರಲ್ ಆದ ಬಳಿಕ, ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಇದರ ನಿಜಾಸ್ತಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಕೆಲವು ಬಳಕೆದಾರರು ಈ ಕಥೆ ಕೇವಲ ಅತಿರಂಜಿತವಾಗಿದೆ ಎಂದು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೌಶಿಕ್, ತಮ್ಮ ಕ್ಲೈಂಟ್ ಹಿಂದಿನ ವರ್ಷ ಕಡಿಮೆ ಆಸ್ತಿ ಹೊಂದಿದ್ದರಿಂದ ಕಡಿಮೆ ಶುಲ್ಕ ಪಾವತಿಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಆಸ್ತಿ ಹೆಚ್ಚಿಸಿಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಪ್ರಮಾಣಪತ್ರ ಅಗತ್ಯವಾಯಿತು ಎಂದು ಹೇಳಿದ್ದಾರೆ.

(ಸೂಚನೆ: ಈ ವರದಿ ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯ ಸ್ವತಂತ್ರ ದೃಢೀಕರಣ ನಡೆದಿಲ್ಲ.)

Continue Reading

Trending