Connect with us

ದೇಶ

Horoscope Today 06 September 2024: ಈ ಶುಭ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ….

Published

on

ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.

ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.

ಮೇಷ

ವೈಯಕ್ತಿಕ ವಿಚಾರಗಳ ಬಗ್ಗೆ ಇತರರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಭಾವನೆ ನಿಮ್ಮನ್ನು ಬಹಳ ಕಾಡಲಿದೆ. ಸ್ವಂತ ನಿರ್ಧಾರವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಸೃಷ್ಟಿಯಾಗಲಿದೆ. ಆರ್ಥಿಕ ಒತ್ತಡದ ಕಾರಣಕ್ಕೆ ಇತರರ ಬಳಿ ಸಾಲ ಮಾಡಬೇಕಾದ ಸೃಷ್ಟಿ ನಿರ್ಮಾಣವಾಗಲಿದೆ.

ವೃಷಭ

ಎಣ್ಣೆಯಲ್ಲಿ ಕರಿದ ಅಥವಾ ಮಸಾಲೆ ಪದಾರ್ಥಗಳ ಸೇವನೆಯಿಂದ ಸಾಧ್ಯವಾದಷ್ಟೂ ದೂರ ಇರಿ. ಇತರರಿಗೆ ಮಾದರಿ ಎನಿಸುವಂತೆ ಇರುವುದಕ್ಕೆ ಪ್ರಯತ್ನಿಸಿ. ಕಾನೂನು ಮುರಿಯಲು ಹೋಗಬೇಡಿ. ತುರ್ತು ಕೆಲಸಗಳು ಬರಬಹುದು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿರಿ.

ಮಿಥುನ

ಇಡೀ ದಿನ ಬಿಡುವಿಲ್ಲದಂಥ ಕೆಲಸ ಇರಲಿದೆ. ಈ ಹಿಂದೆ ನೀವು ಮಾಡಿದ್ದ ಕೆಲವು ಕೆಲಸಗಳನ್ನು ಮೆಚ್ಚಿ, ಹೊಸ ಜವಾಬ್ದಾರಿಗಳನ್ನು ವಹಿಸಲಾಗುತ್ತದೆ. ಪ್ರಾಣಿ- ಪಕ್ಷಿಗಳ ಸಲುವಾಗಿ ಹಣ ಖರ್ಚು ಮಾಡಲಿದ್ದೀರಿ. ತಾಯಿಯ ಕಡೆ ಸಂಬಂಧಿಕರಿಗೆ ನಿಮ್ಮ ನೆರವು ಬೇಕಾಗಬಹುದು.

ಕರ್ಕಾಟಕ

ಸಣ್ಣ ಸಮಸ್ಯೆಗಳನ್ನು ನೀವೇ ಮನಸಿಗೆ ತೆಗೆದುಕೊಂಡು, ದೊಡ್ಡದು ಮಾಡಲು ಹೋಗದಿರಿ. ಸಂಗಾತಿಯ ಬಗ್ಗೆ ಅಸಮಾಧಾನಗಳು ಇದ್ದಲ್ಲಿ ಕೂತು, ಮಾತನಾಡಿ ಬಗೆಹರಿಸಿಕೊಳ್ಳಿ. ಎಲ್ಲರನ್ನೂ ಅನುಮಾನದಿಂದ ನೋಡಿದರೆ ನಿಮ್ಮ ಸಹಾಯಕ್ಕೆ ಯಾರೂ ಇಲ್ಲದಂತೆ ಆಗುತ್ತದೆ. ತಾಳ್ಮೆಯಿಂದ ಇರುವುದನ್ನು ರೂಢಿ ಮಾಡಿಕೊಳ್ಳಿ.

ಸಿಂಹ

ಅಂದುಕೊಂಡಿದ್ದಕ್ಕಿಂತ ವೇಗವಾಗಿ ಕೆಲಸ- ಕಾರ್ಯಗಳು ಮುಗಿಯುತ್ತವೆ. ಸೇವಾ ಮನೋಭಾವ ಹೆಚ್ಚಾಗುತ್ತದೆ. ಇಷ್ಟು ಸಮಯ ನಿಮ್ಮನ್ನು ಕಾಡುತ್ತಿದ್ದ ಆತಂಕ ನಿವಾರಣೆ ಆಗುವ ದಾರಿ ಗೋಚರಿಸಲಿದೆ. ಯಾರನ್ನೋ ನಂಬಿ, ಹೂಡಿಕೆ ಮಾಡುವುದು ನಷ್ಟಕ್ಕೆ ಕಾರಣ ಆಗಬಹುದು. ಆ ಬಗ್ಗೆ ಎ‌ಚ್ಚರ ಇರಲಿ.

ಕನ್ಯಾ

ದೇವತಾರಾಧನೆ, ಅಧ್ಯಾತ್ಮ ಚಿಂತನೆಗೆ ಹೆಚ್ಚು ಸಮಯ ಮೀಸಲಿಡಲಿದ್ದೀರಿ. ಊಟ- ತಿಂಡಿ ರುಚಿಕಟ್ಟಾಗಿ ಇರಲಿದೆ. ಒಪ್ಪಿಕೊಂಡ ಕೆಲಸ- ಕಾರ್ಯಗಳನ್ನು ಪೂರ್ಣಗೊಳಿಸುವುದು ಕಷ್ಟವಾಗುತ್ತದೆ. ಯಾರ ನೆರವನ್ನು ಬಯಸಿದ್ದರೋ ಅವರಿಗೇ ಸಮಸ್ಯೆ ಎದುರಾಗಲಿದೆ. ಅತಿಯಾದ ನಿರೀಕ್ಷೆ ಬೇಡ.

ತುಲಾ

ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ನಿಮ್ಮ ನಿರ್ಧಾರಗಳು ಕೆಲಸ ಮಾಡುತ್ತವೆ. ಸಹೋದ್ಯೋಗಿಗಳು ನಿಮ್ಮನ್ನು ಮೆಚ್ಚುಗೆಯಿಂದ ನೋಡುತ್ತಾರೆ. ತಂದೆ- ತಾಯಿ ಕೂಡ ನಿಮ್ಮ ಬಗ್ಗೆ ಹೆಮ್ಮೆ ಪಡುವ ದಿನ ಇದು. ಸಂಗಾತಿ- ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.

ವೃಶ್ಚಿಕ

ಈ ದಿನ ಹೊತ್ತು ಕಳೆಯುವುದೇ ಕಷ್ಟ ಎಂಬಷ್ಟು ಬೇಸರ ಉಂಟಾಗುತ್ತದೆ. ಏಕಾಗ್ರತೆಯಿಂದ ಕೆಲಸ ಮಾಡುವುದು ಅಸಾಧ್ಯ ಎಂಬ ಸನ್ನಿವೇಶ ಸೃಷ್ಟಿಯಾಗುತ್ತದೆ. ಯಾರದೋ ಅಪ್ಪಣೆಗಾಗಿ ಕಾದು ಕೂರುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಆಪ್ತರಿಗೆ ನಿಮ್ಮ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮೂಡುವಂತೆ ಆಗುತ್ತದೆ.

ಧನು

ಹಳೆಯ ಗೆಳೆಯ- ಗೆಳತಿಯರು, ಸಂಬಂಧಿಗಳು ನಿಮ್ಮ ಜತೆಗೆ ಮಾತು ಕತೆ ನಡೆಸಲಿದ್ದೀರಿ. ಹಳೆಯ ನೆನಪುಗಳು ನಿಮ್ಮನ್ನು ಕಾಡಲಿದೆ. ಮಕ್ಕಳ ಸಲುವಾಗಿಯೇ ಹೆಚ್ಚಿನ ಸಮಯ ಹೋಗುತ್ತದೆ. ಮನರಂಜನೆಗಾಗಿ ಹಣ ಖರ್ಚು ಮಾಡಲಿದ್ದೀರಿ. ತಾಯಿ ಮನೆ ಕಡೆಯವರ ಪ್ರೀತಿ ದೊರೆಯಲಿದೆ.

ಮಕರ

ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂಥ ಬೆಳವಣಿಗೆಗಳು ನಡೆಯಲಿವೆ. ವಹಿಸಿದ ಕೆಲಸವನ್ನು ನಿಗದಿತ ಸಮಯದೊಳಗೆ ಪೂರ್ಣ ಮಾಡುವುದು ಅಸಾಧ್ಯ ಎಂಬಂತಾಗುತ್ತದೆ. ವಿವಿಧ ಬಗೆಯ ಸ್ನೇಹಿತರಿಂದ ಬರುವ ಸಲಹೆ- ಸೂಚನೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಿ. ಯಾರ ಮೇಲೂ ಸಿಟ್ಟಾಗಬೇಡಿ.

ಕುಂಭ

ವಿಚಿತ್ರವಾದ ಕೋರಿಕೆಗಳು ನಿಮ್ಮನ್ನು ಬೆನ್ನಟ್ಟಲಿವೆ. ಎಲ್ಲವನ್ನೂ ಈಡೇರಿಸಿಕೊಳ್ಳಬೇಕು ಅಂತ ಹೊರಡಬೇಡಿ. ಖರ್ಚಿನ ಮೇಲೆ ಗಮನ ಇರಲಿ. ಇತರರಿಗೆ ನೆರವಾಗಬೇಕು ಎಂಬ ಆಲೋಚನೆಯೇನೋ ಸರಿ. ಆದರೆ ನಿಮಗೂ ಇಲ್ಲದಂತೆ ಮಾಡಿಕೊಂಡು, ಸಹಾಯ ಮಾಡುವುದು ಒಳ್ಳೆ ವಿಚಾರ ಅಲ್ಲ.

ಮೀನ

ಹೊಸ ವ್ಯಾಪಾರದ ಆಲೋಚನೆಗಳು ಬರುವ ದಿನ ಇದು. ಮುಮ್ದೆ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಸರಿಯಾದ ಯೋಜನೆಯನ್ನು ಮಾಡಿಟ್ಟುಕೊಳ್ಳಿ. ಹಣಕಾಸಿನ ಅಗತ್ಯವನ್ನು ಪೂರೈಸಿಕೊಳ್ಳಲು ಇತರರ ನೆರವು ಬೇಕಾಗಲಿದೆ. ನಿಮ್ಮ ಯೋಜನೆಗಳಿಗೆ ತಂದೆ- ತಾಯಿ ಅಥವಾ ಸಂಗಾತಿಯ ಸಹಾಯ ದೊರೆಯಬಹುದು.

ದೇಶ

PM Narendra Modi ಜಕಾರ್ತಾ ಭೇಟಿ ಐತಿಹಾಸಿಕ; ಭಾರತ-ಇಂಡೋನೇಷ್ಯಾ ನಡುವೆ ಹಲವು ಮಹತ್ವದ ಒಪ್ಪಂದಗಳು

Published

on

PM Narendra Modi ಯವರ ಜಕಾರ್ತಾ ಭೇಟಿಯ ನಂತರ, ಭಾರತ ಮತ್ತು ಇಂಡೋನೇಷ್ಯಾ ಎರಡು ಸಾವಿರ ವರ್ಷಗಳಿಗೂ ಹಳೆಯದಾದ ನಾಗರಿಕತೆಯ ನಂಟನ್ನು ಕಾರ್ಯತಂತ್ರದ ಸಹಭಾಗಿತ್ವವಾಗಿ ಪರಿವರ್ತಿಸಿವೆ. ಮೋದಿಯವರ ನಾಯಕತ್ವದಲ್ಲಿ, ಭಾರತ ತನ್ನ ನಾಗರಿಕತೆಯನ್ನು ಕೇವಲ ಇತಿಹಾಸವಾಗಿ ನೋಡದೆ, ಭವಿಷ್ಯದ ಸಹಭಾಗಿತ್ವ ಕಟ್ಟಲು ಈ ಪರಂಪರೆಯನ್ನು ಬಳಸುತ್ತಿದೆ. ಭಾರತದ MAHASAGAR ದೃಷ್ಟಿಕೋನದ ಮಾರ್ಗದರ್ಶನದಲ್ಲಿ ನಡೆದ ಈ ಭೇಟಿಯಲ್ಲಿ, ಮೋದಿಯವರಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ಬಿಂಟಾಂಗ್ ಆದಿಪುರ್ನ ಪ್ರಶಸ್ತಿ ನೀಡಲಾಯಿತು. ಇದು ಭಾರತದ ಪ್ರಾಚೀನ ನಾಗರಿಕತೆ ಮತ್ತು ಆಳವಾದ ಸಾಂಸ್ಕೃತಿಕ ಸಂಬಂಧದ ಗುರುತಿಸುವಿಕೆಯಾಗಿದೆ. ರಾಮಾಯಣ, ಮಹಾಭಾರತ, ಸಂಸ್ಕೃತ, ಗರುಡ ಹಾಗೂ ಬಾಲಿಯಂತಹ ಹಂಚಿಕೆಯ ಸಂಕೇತಗಳು ಇಂದು ಭಾರತ-ಇಂಡೋನೇಷ್ಯಾ ಸಂಬಂಧದ ಪ್ರಮುಖ ಬುನಾದಿಯಾಗಿವೆ. ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ತಮ್ಮ “ಭಾರತೀಯ ಡಿಎನ್ಎ” ಬಗ್ಗೆ ಮಾತನಾಡಿ ಮೋದಿಯವರ ಆಡಳಿತವನ್ನು ಶ್ಲಾಘಿಸಿದ್ದಾರೆ. “ವಿಕಾಸ್ ಭಿ, ವಿರಾಸತ್ ಭಿ” ದೃಷ್ಟಿಕೋನದಂತೆ, ಭಾರತ ಇಂಡೋನೇಷ್ಯಾದ ಪ್ರಂಬನನ್ ಹಿಂದೂ ದೇವಾಲಯದ ಸಂರಕ್ಷಣೆಗೆ ನೆರವು ನೀಡಲಿದೆ. ಭಾರತೀಯ ವ್ಯಾಪಾರಿಗಳು ಮತ್ತು ಸನ್ಯಾಸಿಗಳು ಕಟ್ಟಿದ ನಂಟನ್ನೇ ಬಳಸಿ, ಮೋದಿಯವರು ಇಂದು ರಕ್ಷಣೆ, ಶಿಕ್ಷಣ, ತಂತ್ರಜ್ಞಾನ ಮತ್ತು ಕಡಲ ಭದ್ರತೆಯಲ್ಲಿ ಸಹಕಾರ ಗಾಢಗೊಳಿಸುತ್ತಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ, ಇಂಡೋನೇಷ್ಯಾ ಭಾರತದ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಅಸ್ತ್ರ ಗಾಳಿಯಿಂದ ಗಾಳಿಗೆ ಕ್ಷಿಪಣಿಗಳನ್ನು ಖರೀದಿಸಲು ಒಪ್ಪಿಕೊಂಡಿದೆ, ಜೊತೆಗೆ NDA ಮತ್ತು DSSCಯಲ್ಲಿ ಅಧಿಕಾರಿಗಳ ತರಬೇತಿಗೂ ಒಪ್ಪಂದವಾಗಿದೆ — ಇದು 1965ರಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ್ದ ಇಂಡೋನೇಷ್ಯಾದಿಂದ ದೊಡ್ಡ ಬದಲಾವಣೆ. ಕಡಲ ಭದ್ರತಾ ಚೌಕಟ್ಟಿನಡಿ ಕೋಸ್ಟ್ ಗಾರ್ಡ್ ಸಹಕಾರ, ಬ್ಲೂ ಎಕಾನಮಿ, ಬಂದರು ಅಭಿವೃದ್ಧಿ ಮತ್ತು ಮಲಕ್ಕಾ ಜಲಸಂಧಿಯ ಬಳಿಯ ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ ಸೇರಿವೆ, ಇದು ಭಾರತದ ಗ್ರೇಟ್ ನಿಕೋಬಾರ್ ಯೋಜನೆಗೆ ಸಮೀಪದಲ್ಲಿದೆ.

ಆರ್ಥಿಕ ಸಹಕಾರದಲ್ಲಿ, NFTDC, ಮಿಡ್‌ವೆಸ್ಟ್ ಲಿಮಿಟೆಡ್ ಮತ್ತು PT PERMINAS ನಡುವೆ ಅಪರೂಪದ ಭೂಮಿಯ ಮ್ಯಾಗ್ನೆಟ್‌ಗಳ ಕುರಿತ ತ್ರಿಪಕ್ಷೀಯ ಒಡಂಬಡಿಕೆ, ಜೊತೆಗೆ ಉಕ್ಕು, ನಿಕಲ್ ಹಾಗೂ ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಹೂಡಿಕೆ ಸೇರಿವೆ. ಉಪಗ್ರಹ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲೂ ಸಹಕಾರ ಮುಂದುವರಿಯಲಿದೆ.

ಸಾಫ್ಟ್ ಪವರ್ ಉಪಕ್ರಮಗಳಲ್ಲಿ ಇಂಡೋನೇಷ್ಯಾದ ಸಿಂಗಾಸಾರಿ SEZನಲ್ಲಿ IIM ಬೆಂಗಳೂರಿನ ಮೊದಲ ವಿದೇಶಿ ಕ್ಯಾಂಪಸ್, ಚುನಾವಣಾ ಆಯೋಗ-KPU ನಡುವಿನ EVM ಅಭಿವೃದ್ಧಿ ಸಹಕಾರ, ಮತ್ತು ಯೋಗ್ಯಕಾರ್ತದ 9ನೇ ಶತಮಾನದ ಪ್ರಂಬನನ್ ದೇವಾಲಯದ ಪುನರುಜ್ಜೀವನಕ್ಕೆ ಭಾರತದ ನೆರವು ಸೇರಿವೆ.

ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ, ಇಂಡೋನೇಷ್ಯಾದ 28 ಕೋಟಿ ಜನರಿಗೆ ಕೈಗೆಟುಕುವ ಭಾರತೀಯ ಔಷಧಗಳು ಮತ್ತು ವೈದ್ಯಕೀಯ ಫೆಲೋಶಿಪ್‌ಗಳು, ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಾದರಿ ಹಂಚಿಕೆ, ಮತ್ತು 100 ಟನ್ “DWR 162” ಗೋಧಿ ಬೀಜಗಳ ಪೂರೈಕೆ ಸೇರಿವೆ, ಇದು ಆಹಾರ ಭದ್ರತೆ ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸುತ್ತದೆ.

ಡಿಜಿಟಲ್ ಸಹಕಾರದಲ್ಲಿ ವೈರ್‌ಲೆಸ್ ನೆಟ್‌ವರ್ಕ್‌ಗಳು, ಕ್ವಾಂಟಮ್ ವ್ಯವಸ್ಥೆಗಳು ಮತ್ತು ಡಿಜಿಟಲ್ ಮೂಲಸೌಕರ್ಯದ ಸಹಕಾರ ಸೇರಿದ್ದು, ಇದು ಸ್ಟಾರ್ಟ್‌ಅಪ್ ಇಂಡಿಯಾ ಮಿಷನ್‌ಗೆ ಬೆಂಬಲ ನೀಡಲಿದೆ. ಭಾರತದ UPI ಮತ್ತು ಇಂಡೋನೇಷ್ಯಾದ QRIS ವ್ಯವಸ್ಥೆಯ ನಡುವಿನ ಸಂಭಾವ್ಯ ಸಮಗ್ರೀಕರಣವನ್ನೂ ಇದು ಒಳಗೊಂಡಿದೆ. ಎರಡೂ ವಿಪತ್ತು ಪೀಡಿತ ರಾಷ್ಟ್ರಗಳಾಗಿರುವುದರಿಂದ, NDMA ಮತ್ತು BNPB ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ತಂತ್ರಜ್ಞಾನ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಗಳು ಲಕ್ಷಾಂತರ ಜೀವಗಳನ್ನು ಉಳಿಸಲಿದೆ.

ಪ್ರಧಾನಮಂತ್ರಿ ಮೋದಿಯವರ ಈ ರಾಜ್ಯ ಭೇಟಿ ಉಭಯ ದೇಶಗಳ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಭಾರತದ ಪ್ರಾಚೀನ ನಾಗರಿಕತೆ ಕೇವಲ ಹೆಮ್ಮೆಯ ಮೂಲವಲ್ಲ, ಬದಲಿಗೆ ಕಾರ್ಯತಂತ್ರದ ಸಹಭಾಗಿತ್ವ ಕಟ್ಟುವ ಪ್ರಬಲ ಸಾಧನವೆಂದು ಸಾಬೀತುಪಡಿಸುತ್ತದೆ. ಈ ಒಪ್ಪಂದಗಳು ಭಾರತ-ಇಂಡೋನೇಷ್ಯಾ ಸಂಬಂಧದ ಅತ್ಯಂತ ಸಮಗ್ರ ಮೇಲ್ದರ್ಜೆಗೇರಿಸುವಿಕೆಗಳಲ್ಲಿ ಒಂದಾಗಿದೆ.

Continue Reading

ಬೆಂಗಳೂರು

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು; ರಾಜ್ಯಪಾಲರಿಂದ ರಾಷ್ಟ್ರಪತಿಗೆ ತನಿಖೆ ಶಿಫಾರಸು

Published

on

ಬೆಂಗಳೂರು: KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಮಾನತುಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಅವರ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಅಧಿಕಾರ ದುರುಪಯೋಗದ ಆರೋಪಗಳ ಕುರಿತು ತನಿಖೆ ನಡೆಸಲು ಭಾರತದ ಸಂವಿಧಾನದ 317(1)ನೇ ವಿಧಿ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ.

ರಾಜ್ಯಪಾಲರ ಆದೇಶದಂತೆ, ತನಿಖೆ ಪೂರ್ಣಗೊಂಡು ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿಯರು ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಿತಾಸಕ್ತಿ ಸಂಘರ್ಷವನ್ನು ಘೋಷಿಸದೇ ಇದ್ದಿರುವುದು, ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿಯದಿರುವುದು ಹಾಗೂ ಮೀಸಲಾತಿ ಸೌಲಭ್ಯ ಪಡೆಯಲು ತಪ್ಪು ಮಾಹಿತಿ ನೀಡಿರುವ ಆರೋಪಗಳು ತನಿಖೆಗೆ ಕಾರಣವಾಗಿವೆ. ಪ್ರಕರಣದಲ್ಲಿ ಅವರ ಪುತ್ರಿಯೊಬ್ಬರು ವಾರ್ಷಿಕ ಆದಾಯವನ್ನು ಕೇವಲ ₹40,000 ಎಂದು ನಮೂದಿಸಿದ ಆದಾಯ ಪ್ರಮಾಣಪತ್ರ ಸಲ್ಲಿಸಿ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ‘ಕ್ರೀಮಿ ಲೇಯರ್’ ವಿನಾಯಿತಿ ಪಡೆಯಲು ಯತ್ನಿಸಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಕೆಪಿಎಸ್‌ಸಿ ಕಾರ್ಯದರ್ಶಿ ಶೋಭಾ ಅವರ ದೂರಿನ ಮೇರೆಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಆದಾಯ ಪ್ರಮಾಣಪತ್ರ ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಧಿಕಾರ ದುರುಪಯೋಗ ನಡೆದಿದೆಯೇ ಎಂಬುದರ ಕುರಿತು ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಬೆಳವಣಿಗೆಯಿಂದ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಮತ್ತು ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಕುರಿತು ಹೊಸ ಚರ್ಚೆ ಆರಂಭವಾಗಿದ್ದು, ತನಿಖೆಯ ಅಂತಿಮ ವರದಿಯತ್ತ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.

Continue Reading

ಅಪರಾಧ

Telangana ‘ಇದು ನನ್ನ ಆಯ್ಕೆ’ ಎಂದ ಎಸ್‌ಐಗೆ ದುಬಾರಿ ಆಯಿತು; ಡಿಜಿಪಿಯಿಂದ ಅಮಾನತು ಸೂಚನೆ

Published

on

ಹೈದರಾಬಾದ್: Telangana ದ ರಂಗಾರೆಡ್ಡಿ ಜಿಲ್ಲೆಯಲ್ಲಿ ಆರು ವರ್ಷದ ಮೊಮ್ಮಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಾಲನೆ ಮಾಡಲು ಅವಕಾಶ ನೀಡಿದ ಪೊಲೀಸ್ ಸಬ್‌-ಇನ್‌ಸ್ಪೆಕ್ಟರ್ (SI) ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಅಮಾನತು ಮಾಡಲು ಆದೇಶ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ವರದಿಗಳ ಪ್ರಕಾರ, ಸಬ್‌-ಇನ್‌ಸ್ಪೆಕ್ಟರ್ ಪೂಜಾರಿ ತಿರುಪತಿ ಅವರು ತಮ್ಮ ಆರು ವರ್ಷದ ಮೊಮ್ಮಗಳನ್ನು ನಗರದ ಜನನಿಬಿಡ ರಸ್ತೆಯಲ್ಲಿ ಕಾರಿನ ಸ್ಟೀರಿಂಗ್ ಹಿಂದೆ ಕುಳ್ಳಿರಿಸಿ ಚಾಲನೆ ಮಾಡಲು ಅವಕಾಶ ನೀಡಿದ್ದರು. ವಾಹನ ನಿಧಾನವಾಗಿ ಚಲಿಸುತ್ತಿದ್ದರೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ವಾಹನಗಳ ಸಾಲು ನಿರ್ಮಾಣವಾಗಿತ್ತು.

ಸ್ಥಳೀಯರು ಈ ಅಪಾಯಕಾರಿ ಕ್ರಮವನ್ನು ಪ್ರಶ್ನಿಸಿದಾಗ, “ಇದು ನನ್ನ ಆಯ್ಕೆ, ಪ್ರಶ್ನೆ ಮಾಡಲು ನೀವು ಯಾರು?” ಎಂದು ಅಧಿಕಾರಿ ಪ್ರತಿಕ್ರಿಯಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಪೊಲೀಸ್ ಇಲಾಖೆಯ ವಿರುದ್ಧ ಟೀಕೆ ವ್ಯಕ್ತಪಡಿಸಿ, ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದು ಆಗ್ರಹಿಸಿದರು.

ಘಟನೆಯ ಬಳಿಕ ನರ್ಸಿಂಗಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 125 ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 180 ಮತ್ತು 184ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಇದು ಆಟೋಮ್ಯಾಟಿಕ್ ಕಾರಾಗಿದ್ದರಿಂದ ವಾಹನ ತನ್ನ ನಿಯಂತ್ರಣದಲ್ಲೇ ಇತ್ತು ಎಂದು ಎಸ್‌ಐ ಹೇಳಿದ್ದು, ಮೊಮ್ಮಗಳನ್ನು ವಿಶ್ವದ ಅತಿ ಕಿರಿಯ ಚಾಲಕಿ ಎಂಬ ಗಿನ್ನೆಸ್ ವಿಶ್ವ ದಾಖಲೆ ಪ್ರಯತ್ನಕ್ಕೆ ಸಿದ್ಧಪಡಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ತೆಲಂಗಾಣ ಡಿಜಿಪಿ ಸಿ.ವಿ. ಆನಂದ್, ಸೈಬರಾಬಾದ್ ಪೊಲೀಸ್ ಆಯುಕ್ತರಿಗೆ ಆರೋಪಿತ ಎಸ್‌ಐ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ಆರಂಭಿಸುವಂತೆ ಸೂಚಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ಕ್ರಮವನ್ನು ಇಲಾಖೆ ಕೈಗೊಳ್ಳಲಿದೆ.

Continue Reading

Trending