ಬೆಂಗಳೂರು
ತೀರ್ಪು ನೋಡದೆ ಮಾತಾಡಲ್ಲ; ಪ್ರಜ್ವಲ್ ಪ್ರಕರಣದ ಬಗ್ಗೆ ದೇವೇಗೌಡ ಪ್ರತಿಕ್ರಿಯೆ
ಹಾಸನ: ನಾನು ಮಾಜಿ ಪ್ರಧಾನಿ. ತೀರ್ಪು ನೋಡದೆ ಮಾತನಾಡುವುದಿಲ್ಲ: ಹೀಗೆಂದು ಹೇಳಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು. ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಹೈಕೋರ್ಟ್ ಸಂಸದ ಹುದ್ದೆಯಿಂದ ಅನರ್ಹಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಅವರು ಪ್ರತಿಕ್ರಿಯೆ ನೀಡಿದರು.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಇರುವ ಕುಲ ದೇವರಿಗೆ ಶ್ರಾವಣ ಮಾಸದ ಶನಿವಾರ ಪೂಜೆ ನೆರವೇರಿಸಲು ಬಂದಿದ್ದ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಾನು ಏನೂ ಮುಚ್ಚುಮರೆಯಿಂದ ಮಾತನಾಡಬೇಕಾಗಿಲ್ಲ. ಕೋರ್ಟ್ ತೀರ್ಪಿನ ಪ್ರತಿ ಇನ್ನೂ ಸಿಕ್ಕಿಲ್ಲ. ತೀರ್ಪು ನೋಡದೆ ಏನೂ ಮಾತನಾಡಲು ಆಗಲ್ಲ. ನಾನೊಬ್ಬ ಮಾಜಿ ಪ್ರಧಾನಿ ಆಗಿ ತೀರ್ಪು ಪೂರ್ತಿ ನೋಡದೆ ಮಾತನಾಡುವುದು ಸರಿಯಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಸಹಜವಾಗಿ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಎಚ್.ಡಿ. ದೇವೇಗೌಡರು ಹೇಳಿದರು.
ತೀರ್ಪಿನಲ್ಲಿ ಸದ್ಯ ಅನರ್ಹ ಎಂದಷ್ಟೇ ಹೇಳಿದ್ದಾರೆ. ನ್ಯಾಯಾಧೀಶರು ಅವರಿಗೆ ತಿಳಿದದ್ದು ಬರೆದಿದ್ದಾರೆ. ಹಾಗಾಗಿ ಅವರ ಬಗ್ಗೆ ನಾವು ಕಾಮೆಂಟ್ ಮಾಡಲು ಆಗಲ್ಲ. ಸಹಜವಾಗಿ ಸುಪ್ರೀಂಕೋರ್ಟ್‌ಗೆ ಹೋಗಲಾಗುತ್ತದೆ. ಮುಂದೆ ಏನಾಗುತ್ತೆ ಎಂದು ಹೇಳಲು ಆಗಲ್ಲ ಎಂದು ದೇವೇಗೌಡರು ಹೇಳಿದರು.
ʻʻನಮ್ಮ ಕುಲದೇವರಿಗೆ ಪೂಜೆ ಮಾಡಿ ಪ್ರಜ್ಚಲ್ ಬೆಂಗಳೂರಿಗೆ ಹೋಗಿದ್ದಾರೆ. ಬೆಳಗ್ಗೆ ಪ್ರಜ್ವಲ್ ಪೂಜೆ ಸಲ್ಲಿಸಿ ಕೋರ್ಟ್ ತೀರ್ಪಿನ ಬಗ್ಗೆ ಚರ್ಚೆ ಮಾಡಲು ಬೆಂಗಳೂರಿಗೆ ಹೋಗಿದ್ದಾರೆʼʼ ಎಂದು ದೇವೇಗೌಡರು ಹೇಳಿದ್ದಾರೆ.
ದೇಶ
ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್: ಬಾಡಿಗೆ ಒಪ್ಪಂದ ಇಲ್ಲದಿದ್ದರೂ ಉಚಿತ ವಿದ್ಯುತ್ ಪಡೆಯಬಹುದು!
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ (Gruha Jyothi Scheme) ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಬಾಡಿಗೆದಾರರಿಗೆ ಇಂಧನ ಇಲಾಖೆ ಮಹತ್ವದ ಸಡಿಲಿಕೆ ನೀಡಿದೆ. ಇನ್ನು ಮುಂದೆ ಬಾಡಿಗೆ ಒಪ್ಪಂದದ ಪತ್ರ (Rent Agreement) ಇಲ್ಲದಿದ್ದರೂ ಸಹ ಬಾಡಿಗೆದಾರರು ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಬಹುದಾಗಿದೆ.
ಇಲ್ಲಿಯವರೆಗೆ ಅಧಿಕೃತ ಬಾಡಿಗೆ ಕರಾರು ಪತ್ರ ಇಲ್ಲದ ಕಾರಣ ಅನೇಕ ಬಾಡಿಗೆದಾರರು ಯೋಜನೆಗೆ ನೋಂದಣಿ ಮಾಡಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಗಮನಿಸಿದ ಇಂಧನ ಇಲಾಖೆ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅದರಂತೆ, ಬಾಡಿಗೆ ಒಪ್ಪಂದದ ಪ್ರತಿ ಇಲ್ಲದಿದ್ದರೆ ಸಂಬಂಧಿತ ಬೆಸ್ಕಾಂ (BESCOM) ಅಥವಾ ಆಯಾ ಎಸ್ಕಾಂ ಕಚೇರಿಯಿಂದ ನೀಡಲಾಗುವ ವಿಶೇಷ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಈ ನಮೂನೆಗೆ ಬಾಡಿಗೆದಾರ ಮತ್ತು ಮನೆಯ ಮಾಲೀಕರು ಇಬ್ಬರೂ ಸಹಿ ಹಾಕಿ ಸಲ್ಲಿಸಿದರೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಪೂರ್ಣಗೊಳ್ಳಲಿದೆ.
ಇದರ ಜೊತೆಗೆ ಜುಲೈ ತಿಂಗಳ ವಿದ್ಯುತ್ ಬಿಲ್ಲಿಗೂ ಮಹತ್ವದ ಬದಲಾವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಪರಿಷ್ಕರಿಸುವ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳು ಮನೆ ಮನೆಗೆ ತೆರಳಿ ಮೀಟರ್ ರೀಡಿಂಗ್ ಮಾಡುವ ಪ್ರಕ್ರಿಯೆ ಇರುವುದಿಲ್ಲ ಎಂದು ವಿದ್ಯುತ್ ಸರಬರಾಜು ಕಂಪನಿಗಳು ಸ್ಪಷ್ಟಪಡಿಸಿವೆ.
ಹೀಗಾಗಿ ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಈ ಸರಾಸರಿ ಬಳಕೆಯನ್ನು ಪರಿಗಣಿಸಿ ಬಿಲ್ ಸಿದ್ಧಪಡಿಸಿ ಗ್ರಾಹಕರಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಈ ಹೊಸ ಕ್ರಮದಿಂದ ಬಾಡಿಗೆದಾರರಿಗೆ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುವುದು ಮತ್ತಷ್ಟು ಸುಲಭವಾಗಿದ್ದು, ಬಾಡಿಗೆ ಕರಾರು ಪತ್ರ ಇಲ್ಲದ ಕಾರಣ ಇದುವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಸಾವಿರಾರು ಕುಟುಂಬಗಳಿಗೆ ಇದು ದೊಡ್ಡ ಅನುಕೂಲವಾಗಲಿದೆ.
ಕ್ರೀಡೆ
ಅಪ್ಪು ಕಪ್ ಸೀಸನ್ 4ಕ್ಕೆ ಅದ್ದೂರಿ ಚಾಲನೆ: ಜುಲೈ 24ರಿಂದ ಶಟಲ್ ಬ್ಯಾಡ್ಮಿಂಟನ್ ಲೀಗ್ ಆರಂಭ
ಬೆಂಗಳೂರು: ರಾಜ್ಯದ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಅಪ್ಪು ಕಪ್ ಸೀಸನ್ 4 (Appu Cup Season 4) ಶಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಅದ್ದೂರಿ ಚಾಲನೆ ದೊರೆತಿದೆ. STELLER STUDIO & EVENT MANAGEMENT ಸಂಸ್ಥೆ, PRK Audio ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಈ ಪ್ರತಿಷ್ಠಿತ ಟೂರ್ನಿಯ ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಂಭ್ರಮದಿಂದ ನಡೆಯಿತು. ಇದೇ ಜುಲೈ 24, 25 ಮತ್ತು 26ರಂದು ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ. ಪ್ರಭಾಕರ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಟೂರ್ನಿಗೆ ಶುಭ ಕೋರಿದರು. ತಂಡಗಳ ಮಾಲೀಕರು, ನಾಯಕರು, ರಾಯಭಾರಿಗಳು ಹಾಗೂ ಮೆನ್ ಮತ್ತು ವುಮನ್ ಐಕಾನ್‌ಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕ ಚೇತನ್ ಸೂರ್ಯ, “ಅಪ್ಪು ಕಪ್ ಆರಂಭವಾದ ದಿನದಿಂದಲೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬೆಂಬಲ ನಮ್ಮೊಂದಿಗಿದೆ. ಈ ಬಾರಿಯ ಪಂದ್ಯಗಳು ಜುಲೈ 24ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಪಂದ್ಯಗಳ ನೇರ ಪ್ರಸಾರವೂ ಇರಲಿದೆ. ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ತಿಳಿಸಿದರು.
ಟಿ.ಎ. ಶರವಣ ಅವರು, “ಅಪ್ಪು ಕಪ್ ಆರಂಭದಿಂದಲೇ ಚೇತನ್ ಸೂರ್ಯ ಅವರೊಂದಿಗೆ ಇದ್ದೇನೆ. ಮುಂದೆಯೂ ಈ ಕ್ರೀಡಾ ಉತ್ಸವಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ” ಎಂದು ಹೇಳಿದರು. ಕೆ.ವಿ. ಪ್ರಭಾಕರ್ ಹಾಗೂ ಸಾ.ರಾ. ಗೋವಿಂದು ಅವರು ಕೂಡ ಟೂರ್ನಿಯ ಯಶಸ್ಸಿಗೆ ಶುಭ ಹಾರೈಸಿದರು.
ಕ್ರೀಡೆ, ಮನರಂಜನೆ ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆಯಾಗಿರುವ ಅಪ್ಪು ಕಪ್ ಸೀಸನ್ 4 ಈ ಬಾರಿ ಮತ್ತಷ್ಟು ಭರ್ಜರಿಯಾಗಿ ನಡೆಯಲಿದ್ದು, ಬ್ಯಾಡ್ಮಿಂಟನ್ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಬೆಂಗಳೂರಿನ ಕ್ರೀಡಾ ಕ್ಯಾಲೆಂಡರ್‌ನಲ್ಲಿ ಈ ಟೂರ್ನಿ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ದೇಶ
ರಾಮಮಂದಿರ ದೇಣಿಗೆ ಪ್ರಕರಣ ಸಿಬಿಐಗೆ ವಹಿಸಿ: ಮೋದಿ, ಅಮಿತ್ ಶಾ, ಯೋಗಿ ರಾಜೀನಾಮೆಗೆ ಕೆಪಿಸಿಸಿ ಆಗ್ರಹ
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ (KPCC) ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಐದು ಮಹತ್ವದ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಹಿಸಿದ್ದರು. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ₹10,000 ಕೋಟಿ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮೊದಲ ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗಗಳಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆ ಗಂಭೀರವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಇನ್ನೊಂದು ಪ್ರಮುಖ ನಿರ್ಣಯದಲ್ಲಿ ರಾಮಮಂದಿರ ದೇಣಿಗೆ ಹಾಗೂ ಹುಂಡಿ ಹಣದ ದುರ್ಬಳಕೆ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು. ಪ್ರಕರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಸಭೆ ನಿರ್ಣಯದಲ್ಲಿ ತಿಳಿಸಿತು. ಆರೋಪದಲ್ಲಿ ಭಾಗಿಯಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಇದರ ಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ನೇಮಕಗೊಂಡ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ ಹಾಗೂ ಪಕ್ಷದ ಸಂಘಟನೆಗೆ ಸಂಬಂಧಿಸಿದ ಮತ್ತೊಂದು ಅಭಿನಂದನಾ ನಿರ್ಣಯವನ್ನೂ ಸಭೆ ಅಂಗೀಕರಿಸಿತು.
ಕೆಪಿಸಿಸಿ ಸಭೆಯಲ್ಲಿ ಕೈಗೊಂಡ ಈ ಐದು ನಿರ್ಣಯಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬರ ನಿರ್ವಹಣೆ ಹಾಗೂ ರಾಮಮಂದಿರ ದೇಣಿಗೆ ಪ್ರಕರಣದ ಕುರಿತಾಗಿ ಕಾಂಗ್ರೆಸ್ ತನ್ನ ಅಧಿಕೃತ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
-
ದೇಶ21 hours ago30 ನಿಮಿಷ ಸಿಂಹದ ಹಿಡಿತದಲ್ಲೇ ವ್ಯಕ್ತಿ! ಗ್ರಾಮಸ್ಥರ ಕೂಗಾಟಕ್ಕೂ ಜಗ್ಗದ ಕಾಡಿನ ರಾಜ
-
ದೇಶ22 hours agoPetrol Diesel Price: ಜುಲೈ 20ರೊಳಗೆ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ? ಗ್ರಾಹಕರಿಗೆ ಸಿಗುತ್ತಾ ಸಿಹಿಸುದ್ದಿ
-
ದೇಶ21 hours agoGrama Panchayat Election ಬಿಗ್ ಅಪ್ಡೇಟ್! ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಆದೇಶ
-
ದೇಶ21 hours agoಕೇರಳದಲ್ಲಿ ಮತ್ತೆ ಪ್ರಕೃತಿ ವಿಕೋಪ! ವಯನಾಡಿನ ಕಲ್ಲಾಡಿ ಗ್ರಾಮದಲ್ಲಿ ಭಾರೀ ಭೂ ಕುಸಿತ
-
ದೇಶ18 hours agoಅಂಜನಾದ್ರಿ ಹುಂಡಿ ಎಣಿಕೆ ಬಳಿಕ 4 ದಿನ ಮೌನ! ಈಗ ಪ್ರಕಟಣೆ ಹೊರಬಿದ್ದಿದ್ದು ಏಕೆ?
-
ಕ್ರೀಡೆ23 hours agoಸಂಜು ಸ್ಯಾಮ್ಸನ್ ಕೈಬಿಟ್ಟಿದ್ದೇಕೆ? ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಅಶ್ವಿನ್ ಸ್ಫೋಟಕ ಹೇಳಿಕೆ
-
ದೇಶ18 hours ago‘ಕಿಂಗ್100’ನಲ್ಲಿ ಟಬು ವಿಲನ್! ನಾಗಾರ್ಜುನ ವಿರುದ್ಧ ಹೊಸ ಅವತಾರ
-
ದೇಶ21 hours agoರೈತರ ಬೆಳೆ ಸಾಲ ಮನ್ನಾ ಆಗುತ್ತಾ? ಕಲಬುರಗಿಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು?
