Connect with us

ಸುತ್ತ ಮುತ್ತ

ವಿಠ್ಠಲನ ಭಕ್ತರಿಗೆ ಗುಡ್‌ ನ್ಯೂಸ್‌

ನಾಳೆಯಿಂದ ಪಂಢರಾಪುರಕ್ಕೆ ರೈಲು ಸೇವೆ ಆರಂಭ:

ನಾಳೆಯಿಂದ ಪಂಢರಾಪುರಕ್ಕೆ ರೈಲು ಸೇವೆ ಆರಂಭ:

ಮೈಸೂರು ಸೋಲಾಪುರ ನಡುವೆ ಸದ್ಯ ಸಂಚರಿಸುತ್ತಿರುವ ‘ಗೋಳಗುಮ್ಮಟ ಎಕ್ಸ್‌ಪ್ರೆಸ್’ ರೈಲು (ರೈಲುಗಳ ಸಂಖ್ಯೆ 16535/16536) ಇನ್ನು ಮುಂದೆ ನೆರೆಯ ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾಸ್ಥಳ ಪಂಢರಪುರದ ವರೆಗೂ ತೆರಳಲಿದೆ.  ಗೋಳಗುಮ್ಮಟ ಎಕ್ಸ್‌ಪ್ರೆಸ್ ರೈಲನ್ನು ಪಂಢರಪುರ ನಿಲ್ದಾಣದ ವರೆಗೆ ವಿಸ್ತರಿಸಲಾಗಿದೆ. ರೈಲು ವೇಳಾಪಟ್ಟಿ ಬಿಡುಗಡೆಸೆಪ್ಟೆಂಬರ್ 4 ಅಂದರೆ ನಾಳೆಯಿಂದ ಜಾರಿಗೆ ಬರುವಂತೆ ಮೈಸೂರು, ಪಂಢರಾಪುರ ಗೋಳಗುಮ್ಮಟ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16535) ಮೈಸೂರು ನಿಲ್ದಾಣದಿಂದ ಮಧ್ಯಾಹ್ನ 3.45ಕ್ಕೆ ಹೊರಟು, ಮರುದಿನ ಸೆ.5 ರಂದು ಮಧ್ಯಾಹ್ನ 12.25 ಗಂಟೆಗೆ ಪಂಢರಪುರ ನಿಲ್ದಾಣವನ್ನು ತಲುಪಲಿದೆ.

ಈ ಹಿಂದೆ ರೈಲ್ವೆ ಸಚಿವಾಲಯ ನೆರೆಯ ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾಸ್ಥಳ ಪಂಢರಾಪುರದ ವರೆಗೆ ರೈಲು ಓಡಿಸಲು ಅನುಮೋದನೆ ನೀಡಿ ದೃಢಪಡಿಸಿತ್ತು. ಪ್ರಯಾಣಿಕರು ಸುರಕ್ಷಿತವಾಗಿ, ಯಾವುದೇ ತೊಂದರೆ ಇಲ್ಲದೇ ನೇರವಾಗಿ ಮಹಾರಾಷ್ಟ್ರದ ಪಂಢರಾಪುರ ವಿಠ್ಠಲ ದರ್ಶನಕ್ಕೆ ರೈಲು ಸೇವೆ ಆರಂಭಿಸುವುದಾಗಿ ಮಾಹಿತಿ ನೀಡಿತ್ತು. ಹೇಳಿಕೆಯಂತೆ ನಾಳೆಯಿಂದ ಈ ಸೇವೆ ಆರಂಭವಾಗಲಿದೆ.

Continue Reading

ಅಪರಾಧ

VIRAL NEWS : ಹಾಸಿಗೆಯಲ್ಲಿ ಹಾವಿನ ಪೊರೆ: ಗ್ರಾಮವೇ ಬೆಚ್ಚಿಬಿತ್ತು

ಲಕ್ನೋ: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಯುವತಿ ನಾಪತ್ತೆಯಾದ ಬಳಿಕ ಆಕೆಯ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಯುವತಿ ನಾಗಿಣಿಯಾಗಿದ್ದಾಳೆ ಎಂಬ ವದಂತಿಗಳು ಹಬ್ಬಿ, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 25 ವರ್ಷದ ರೀನಾ ಎಂಬ ಯುವತಿಯ ಮದುವೆಯನ್ನು ಕುಟುಂಬಸ್ಥರು ಈಗಾಗಲೇ ನಿಶ್ಚಯಿಸಿದ್ದರು. ಆದರೆ ಮದುವೆಗೆ ಇಷ್ಟವಿಲ್ಲದ ಆಕೆ, ಮನೆಯಿಂದ ಓಡಿ ಹೋಗಲು ಫಿಲ್ಮಿ ಶೈಲಿಯ ನಾಟಕ ರೂಪಿಸಿದ್ದಾಳೆ ಎಂಬುದು ನಂತರ ಬೆಳಕಿಗೆ ಬಂದಿದೆ.

ರೀನಾ ತನ್ನ ಕೊಠಡಿಯಲ್ಲಿ ಸುಮಾರು ಐದು ಅಡಿ ಉದ್ದದ ಹಾವಿನ ಪೊರೆಯನ್ನು ಹಾಸಿಗೆಯ ಮೇಲೆ ಇಟ್ಟು, ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಬೆಳಿಗ್ಗೆ ಆಕೆಯ ಕೊಠಡಿಗೆ ಹೋದ ಕುಟುಂಬಸ್ಥರು ಹಾವಿನ ಚರ್ಮ ಕಂಡು ಬೆಚ್ಚಿಬಿದ್ದಿದ್ದಾರೆ. ವಿಚಾರ ಕ್ಷಣಾರ್ಧದಲ್ಲಿ ಇಡೀ ಗ್ರಾಮಕ್ಕೆ ಹರಡಿದ್ದು, ಯುವತಿ ನಾಗಿಣಿಯಾಗಿದ್ದಾಳೆ ಎಂಬ ನಂಬಿಕೆ ಕೆಲವರಲ್ಲಿ ಗಟ್ಟಿಯಾಗಿತ್ತು.

ಕೆಲವರು ಇದನ್ನು ಪವಾಡವೆಂದು ಭಾವಿಸಿ, ಆಕೆಯ ಮನೆ ಬಳಿ ಗುಂಪುಗಟ್ಟಿದ್ದರು. ಈ ನಡುವೆ ಯುವತಿ ನಾಪತ್ತೆಯಾದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಹೊರಬಂದಿದೆ.

ರೀನಾಗೆ ಈಗಾಗಲೇ ಬೇರೆ ಪ್ರೇಮ ಸಂಬಂಧ ಇದ್ದು, ಕುಟುಂಬ ಬೇರೊಂದು ಮದುವೆ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಆಕೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಹಾವಿನ ಪೊರೆ ನಾಟಕ ಕೇವಲ ಜನರನ್ನು ತಪ್ಪು ದಾರಿಗೆಳೆಯಲು ರೂಪಿಸಿದ ತಂತ್ರವಾಗಿತ್ತು. ಪ್ರಸ್ತುತ ಪೊಲೀಸರು ಯುವತಿಯನ್ನು ಹುಡುಕಾಟ ನಡೆಸುತ್ತಿದ್ದಾರೆ.

Continue Reading

ದೇಶ

BENGALURU : ಬಸ್‌ನಲ್ಲಿ ಮರೆತಿದ್ದ ₹10 ಲಕ್ಷ ಮೌಲ್ಯದ ಚಿನ್ನಾಭರಣ ಸುರಕ್ಷಿತವಾಗಿ ಹಿಂತಿರುಗಿಸಿದ ಬಿಎಂಟಿಸಿ ಸಿಬ್ಬಂದಿ

ಬೆಂಗಳೂರು: ಬಿಎಂಟಿಸಿ (BMTC) ಬಸ್ ಸಿಬ್ಬಂದಿಯ ಪ್ರಾಮಾಣಿಕತೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಬಸ್‌ನಲ್ಲೇ ಮರೆತು ಹೋಗಿದ್ದ ಸುಮಾರು ₹10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿರುವ ಬ್ಯಾಗನ್ನು ಯಾವುದೇ ನಷ್ಟವಿಲ್ಲದೆ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಿದ ಘಟನೆ ನಗರದಲ್ಲಿ ನಡೆದಿದ್ದು, ಮಾನವೀಯತೆಯ ಉತ್ತಮ ಉದಾಹರಣೆಯಾಗಿದೆ.

ಜನವರಿ 31ರಂದು ಕೆ.ಆರ್ ಮಾರ್ಕೆಟ್‌ನಿಂದ ಪದ್ಮನಾಭ ನಗರಕ್ಕೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಕೆ.ಆರ್ ಮಾರ್ಕೆಟ್‌ನಲ್ಲಿ ಬಸ್ ಹತ್ತಿದ್ದ ಮಹಿಳೆ, ಬಸವನಗುಡಿಯಲ್ಲಿ ಇಳಿಯುವ ವೇಳೆ ತಮ್ಮ ಚಿನ್ನಾಭರಣಗಳಿರುವ ಬ್ಯಾಗನ್ನು ಬಸ್‌ನಲ್ಲೇ ಮರೆತು ಇಳಿದಿದ್ದಾರೆ. ಬ್ಯಾಗಿನಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇದ್ದವು.

ಬಸ್‌ನಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ ಬ್ಯಾಗ್ ಬಿಟ್ಟು ಹೋಗಿರುವುದು ತಕ್ಷಣ ಬಸ್ ಸಿಬ್ಬಂದಿಯ ಗಮನಕ್ಕೆ ಬಂದಿರಲಿಲ್ಲ. ಬಳಿಕ ಬ್ಯಾಗ್ ಕಳೆದುಕೊಂಡಿರುವುದನ್ನು ಗಮನಿಸಿದ ಮಹಿಳೆ ಆತಂಕಗೊಂಡು ಬಿಎಂಟಿಸಿ ಸೆಂಟ್ರಲ್ ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಟಿಕೆಟ್‌ನಲ್ಲಿ ನಮೂದಿಸಿದ್ದ ಬಸ್ ಸಂಖ್ಯೆಯ ಆಧಾರದ ಮೇಲೆ ಸಂಬಂಧಿತ ಬಸ್ ಅನ್ನು ಪತ್ತೆ ಹಚ್ಚಲಾಯಿತು.

ಬಸ್ ಪರಿಶೀಲನೆ ವೇಳೆ ಬ್ಯಾಗ್ ಸುರಕ್ಷಿತವಾಗಿ ಪತ್ತೆಯಾಗಿದ್ದು, ಯಾವುದೇ ಚಿನ್ನಾಭರಣ ಕಳೆದು ಹೋಗಿರಲಿಲ್ಲ. ಬ್ಯಾಗ್ ಮರಳಿ ಸಿಕ್ಕುದನ್ನು ಕಂಡ ಮಹಿಳೆ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಳಿಕ ಬಿಎಂಟಿಸಿ ಬಸ್ ಸಿಬ್ಬಂದಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆಯಲ್ಲಿ ವಿಶ್ವಾಸ ಮೂಡಿಸುವಂತಹ ಈ ಘಟನೆಯು ಬಿಎಂಟಿಸಿ ಸಿಬ್ಬಂದಿಯ ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.

Continue Reading

ದೇಶ

“ಸ್ವಲ್ಪ ಬೇಗ ಮನೆಗೆ ಹೋಗಿದ್ದರೆ ಅಮ್ಮ ಬದುಕುತ್ತಿದ್ದರು” – ತಾಯಿಯ ಅಗಲಿಕೆಯನ್ನು ನೆನೆದು ಭಾವುಕರಾದ ಸನ್ನಿ ಲಿಯೋನ್

ಮುಂಬೈ: ಒಂದು ಕಾಲದಲ್ಲಿ ಗ್ಲಾಮರ್ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಸನ್ನಿ ಲಿಯೋನ್, ಇಂದು ಬಾಲಿವುಡ್‌ನಲ್ಲಿ ಶಿಸ್ತುಬದ್ಧ ಹಾಗೂ ಕುಟುಂಬಪರ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಹಿಂದಿನ ಜೀವನದ ತಪ್ಪುಗಳಿಂದ ಪಾಠ ಕಲಿತಿರುವ ಸನ್ನಿ, ಪೋರ್ನ್ ಇಂಡಸ್ಟ್ರಿಯನ್ನು ಸಂಪೂರ್ಣವಾಗಿ ತೊರೆದು ಹಿಂದಿ ಚಿತ್ರರಂಗದಲ್ಲಿ ಹೊಸ ಬದುಕು ಆರಂಭಿಸಿ, ಇಂದು ಹಲವರಿಗೆ ಪ್ರೇರಣೆಯಾಗಿದ್ದಾರೆ.

ಸದ್ಯ ರಿಯಾಲಿಟಿ ಶೋಗಳು, ಸಿನಿಮಾಗಳು ಹಾಗೂ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸನ್ನಿ ಲಿಯೋನ್, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಅತ್ಯಂತ ನೋವಿನ ಘಟನೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ತಮ್ಮ ತಾಯಿ ಅಗಲಿಕೆಯ ಬಗ್ಗೆ ಮಾತನಾಡುವ ವೇಳೆ ಅವರು ತೀವ್ರ ಭಾವುಕರಾದರು.

“ಆ ದಿನ ನಾನು ಸ್ವಲ್ಪ ಬೇಗ ಶೂಟಿಂಗ್ ಮುಗಿಸಿ ಮನೆಗೆ ಹೋಗಿದ್ದರೆ, ಬಹುಶಃ ನನ್ನ ಅಮ್ಮನನ್ನು ಉಳಿಸಿಕೊಳ್ಳಬಹುದಿತ್ತು” ಎಂದು ಸನ್ನಿ ಕಣ್ಣೀರಾಕಿದರು. ಮನೆಗೆ ತಲುಪುವಷ್ಟರಲ್ಲಿ ತಾಯಿ ಕೊನೆಯುಸಿರೆಳೆದಿದ್ದರು ಎಂಬ ಸತ್ಯ ಇಂದಿಗೂ ತಮ್ಮನ್ನು ಕಾಡುತ್ತದೆ ಎಂದು ಹೇಳಿದರು.

ಭಾರತೀಯ ಪೋಷಕರ ಸ್ವಭಾವದ ಬಗ್ಗೆ ಮಾತನಾಡಿದ ಅವರು, “ಬಹುತೇಕ ತಂದೆ-ತಾಯಿಗಳು ತಮ್ಮ ಆರೋಗ್ಯ ಸಮಸ್ಯೆಗಳನ್ನು ಮಕ್ಕಳಿಗೆ ಹೇಳುವುದಿಲ್ಲ. ಮಕ್ಕಳು ಗಾಬರಿ ಪಡುವರು ಎಂಬ ಕಾರಣಕ್ಕೆ ಈ ರೀತಿ ಮುಚ್ಚಿಡುತ್ತಾರೆ. ನನ್ನ ತಾಯಿಯೂ ಹಾಗೆಯೇ ಮಾಡಿದರು” ಎಂದು ಭಾವುಕವಾಗಿ ಹೇಳಿದರು.

ನಮ್ಮ ತಂದೆಗೆ ಮಕ್ಕಳ ಸಂತೋಷವೇ ಮೊದಲ ಆದ್ಯತೆ. ಆದ್ದರಿಂದ ಯಾವುದೇ ಸಮಸ್ಯೆಯಾದರೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಕೊನೆಯ ಕ್ಷಣಗಳಲ್ಲಿ ತಾಯಿಯ ಜೊತೆ ಇರಲಾಗಲಿಲ್ಲ ಎಂಬ ನೋವು ನನ್ನ ಜೀವನಪೂರ್ತಿ ಕಾಡುತ್ತಲೇ ಇರುತ್ತದೆ ಎಂದು ಸನ್ನಿ ಲಿಯೋನ್ ತಮ್ಮ ಮನದಾಳದ ನೋವನ್ನು ಹೊರಹಾಕಿದರು.

ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸನ್ನಿಗೆ ಸಹಾನುಭೂತಿ ಸೂಚಿಸುತ್ತಿದ್ದಾರೆ. ತಮ್ಮ ಜೀವನದ ಕಹಿ ಕ್ಷಣಗಳನ್ನೂ ಹಂಚಿಕೊಳ್ಳುವ ಸನ್ನಿಯ ನೈಜತೆಯನ್ನು ಅನೇಕರು ಶ್ಲಾಘಿಸಿದ್ದಾರೆ.

Continue Reading

Trending