ರಾಜಕೀಯ
Controversy ಲೇ ಅರೇಬಿಕ್ ತಳಿ, ತುರ್ಕಾ-ಪುನೀತ್ ಕೆರೆಹಳ್ಳಿಯಿಂದ ಜಮೀರ್ ಅವಹೇಳನ!
ಬೆಂಗಳೂರು: ಕೇಂದ್ರ ಸಚಿವ ಹಚ್ ಡಿ ಕುಮಾರಸ್ವಾಮಿ ಅವರ ದೇಹದ ಬಣ್ಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಅವಹೇಳನಕಾರಿಯಾಗಿ ಮಾತನಾಡಿ ಪೋಸ್ಟ್ ಹಾಕಿದ್ದಾರೆ,
ಪುನೀತ್ ಮಾತನಾಡಿರೋ ವೀಡಿಯೋದಲ್ಲಿ ಲೇ ಅರೇಬಿಕ್ ತಳಿ, ತುರ್ಕಾ ಜಮೀರ್ ಅಹ್ಮದ್ ಖಾನ್ ನಮ್ಮದೇ ನಾಡಿನಲ್ಲಿ ನಿಂತು ನಮ್ಮದೇ ನಾಡಿನ ನಾಯಕನೊಬ್ಬನ ಬಗ್ಗೆ ನಮ್ಮದೇ ನಾಡಿನ ಜನರ ಎದುರಿಗೆ ಅವರ ಬಣ್ಣವನ್ನು ಹಂಗಿಸಿ ಕರಿಯ ಕುಮಾರಸ್ವಾಮಿ.. ಕಾಲಾ ಕುಮಾರಸ್ವಾಮಿ ಎಂದು ಹಂಗಿಸುವಷ್ಟು ನಿನಗೆ ದುರಹಂಕಾರವೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಕಪ್ಪಗಿದ್ದಾರೆ…ಹೀಗಾಗಿ ಕರಿಯ ಅಂತಾ ಹೇಳಿದ್ದೆ ಎಂಬ ಭಂಡತನದಲ್ಲಿ ಉತ್ತರ ಕೊಡುತ್ತಿಯಾ, ನಿಮ್ಮ ಅಲ್ಲಾಹು ಕಪ್ಪಗಿದ್ದಾನೋ.. ಇಲ್ಲಾ ಬೆಳ್ಳಗೆ ಇದ್ದಾನೋ ಎಂದು ಪ್ರಶ್ನೆ ಎತ್ತಿದ್ದಾರೆ, ಕುಮಾರಸ್ವಾಮಿ ಅವರು ಬಣ್ಣದ ಬಗ್ಗೆ ಹಾಸನದಲ್ಲಿ ನಿಂತು ಹೇಳು, ಆಗ ನೀನು ಹಾಸನದ ಗಡಿ ದಾಟಿ ಬರುತ್ತೀಯಾ ಎಂದು ಪುನೀತ್ ಸವಾಲ್ ಕೂಡ ಹಾಕಿದ್ದಾರೆ,
ರಾಜ್ಯ
Congress Government ದ ಮೇಲೆಯೇ ವಿಜಯಶಾಂತಿ ವಾಗ್ದಾಳಿ: ಮಹಿಳಾ ಭದ್ರತೆ ಬಗ್ಗೆ ತೀಕ್ಷ್ಣ ಪ್ರಶ್ನೆ
ಹೈದರಾಬಾದ್: ತೆಲಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ವಿಧಾನ ಪರಿಷತ್ ಸದಸ್ಯೆ ವಿಜಯಶಾಂತಿ (Vijayashanti) ಮತ್ತೆ ರಾಜಕೀಯವಾಗಿ ಸಕ್ರಿಯರಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಫೀಸ್ ರೀಇಂಬರ್ಸ್‌ಮೆಂಟ್ (Fee Reimbursement) ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.
ಶಾಬಾದ್ (Shabad) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಜಯಶಾಂತಿ, ಮಹಿಳೆಯರ ಭದ್ರತೆಗೆ ಸರ್ಕಾರ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪದಲ್ಲೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪೋಕ್ಸೋ (POCSO) ಪ್ರಕರಣದ ಆರೋಪಿ ರಾಜ್‌ಕುಮಾರ್ ಹೇಗೆ ಜಾಮೀನಿನ ಮೇಲೆ ಹೊರಬಂದರು? ಇದರಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸ್ ವ್ಯವಸ್ಥೆಯಲ್ಲಿರುವ ಲೋಪಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುತ್ತಿವೆ. ಶಾಬಾದ್ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಜಯಶಾಂತಿ ತಮ್ಮ ಎಕ್ಸ್ (X) ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಜೂನ್ 26ರಂದು ಫೀಸ್ ರೀಇಂಬರ್ಸ್‌ಮೆಂಟ್ ಬಾಕಿ ಹಣ ಬಿಡುಗಡೆ ಕುರಿತು ಕೂಡ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೈಕೋರ್ಟ್ ಮಧ್ಯಂತರ ಆದೇಶದಂತೆ ವಿದ್ಯಾರ್ಥಿಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಸರ್ಕಾರದ ಮಾನದಂಡಗಳನ್ನು ಪಾಲಿಸದ ಖಾಸಗಿ ಕಾಲೇಜುಗಳ ವಿರುದ್ಧ ವಿಜಿಲೆನ್ಸ್ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಜಯಶಾಂತಿಯ ಈ ಸರಣಿ ಟ್ವೀಟ್‌ಗಳು ತೆಲಂಗಾಣ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಸರ್ಕಾರದ ಒಳಗೇ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿವೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿವೆ. ಮಹಿಳಾ ಸುರಕ್ಷತೆ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಗಮನ ಸೆಳೆದಿವೆ.
ಬೆಂಗಳೂರು
ಮಾಜಿ ಸಚಿವ ರಾಮಚಂದ್ರಗೌಡ ನಿಧನ: ಬೆಂಗಳೂರಿನಲ್ಲಿ ರಾಜಕೀಯ ಶೋಕ
ಬೆಂಗಳೂರು: ಮಾಜಿ ಸಚಿವ ರಾಮಚಂದ್ರಗೌಡ ಹಾಗೂ ಕರ್ನಾಟಕದ ಹಿರಿಯ ರಾಜಕಾರಣಿ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಂದ್ರಾಲೇಔಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಮಚಂದ್ರಗೌಡ ಅವರು ವೈದ್ಯಕೀಯ ಶಿಕ್ಷಣ, ರೇಷ್ಮೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದರು. ಸಾರ್ವಜನಿಕ ಜೀವನದಲ್ಲಿ ಹಲವು ದಶಕಗಳ ಕಾಲ ಸಕ್ರಿಯರಾಗಿದ್ದ ಅವರು ಬೆಂಗಳೂರು ಪದವೀಧರರ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿ ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದರು.
ಕುಟುಂಬಸ್ಥರ ಮಾಹಿತಿಯಂತೆ, ಇಂದು ಕಾಮಾಕ್ಷಿಪಾಳ್ಯದ ಜಮೀನಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ನಿಧನದ ಸುದ್ದಿ ರಾಜ್ಯ ರಾಜಕೀಯ ವಲಯದಲ್ಲಿ ಆಘಾತ ಮತ್ತು ದುಃಖವನ್ನುಂಟು ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ರಾಮಚಂದ್ರಗೌಡರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡ ವಿಜಯೇಂದ್ರ, ರಾಮಚಂದ್ರಗೌಡರು ಪಕ್ಷದ ಹಿರಿಯ ನಾಯಕರು, ಮಾರ್ಗದರ್ಶಕರು ಹಾಗೂ ಜನಸಾಮಾನ್ಯರ ಧ್ವನಿಯಾಗಿದ್ದರು ಎಂದು ಹೇಳಿದ್ದಾರೆ.
ಸಂಘದ ಸ್ವಯಂಸೇವಕರಾಗಿ ಸಾರ್ವಜನಿಕ ಜೀವನ ಆರಂಭಿಸಿದ ಅವರು ಜನಸಂಘದ ದಿನಗಳಿಂದಲೇ ತತ್ವಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದರು. ಬೆಂಗಳೂರು ಪಾಲಿಕೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಸಚಿವರಾಗಿ ಅವರು ಸಲ್ಲಿಸಿದ ಸೇವೆ ರಾಜ್ಯ ರಾಜಕಾರಣದಲ್ಲಿ ಆದರ್ಶಪ್ರಾಯವಾಗಿದೆ ಎಂದು ವಿಜಯೇಂದ್ರ ಸ್ಮರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನು ತಳಮಟ್ಟದಿಂದ ಬೆಳೆಸುವಲ್ಲಿ ರಾಮಚಂದ್ರಗೌಡರ ಪಾತ್ರ ಮಹತ್ತರವಾಗಿದೆ. ಅವರ ಆಡಳಿತಾತ್ಮಕ ದಕ್ಷತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಸದಾ ಪ್ರೇರಣಾದಾಯಕವಾಗಿದ್ದು, ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ
Bakrid ವೇಳೆ ಗೋಹತ್ಯೆ ತಡೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ; ತಮಿಳುನಾಡು ಸರ್ಕಾರಕ್ಕೆ ಸದ್ಯದ ನೆಮ್ಮದಿ
ಚೆನ್ನೈ, ಜು.13: Bakrid ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಗೋಹತ್ಯೆ ನಡೆಯದಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಮದ್ರಾಸ್ ಹೈಕೋರ್ಟ್ ಮೇ 27ರಂದು ನೀಡಿದ್ದ ಆದೇಶದಲ್ಲಿ, ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ಪ್ರಾಣಿವಧೆ ನಡೆಸಬೇಕು ಎಂದು ತಿಳಿಸುವುದರ ಜೊತೆಗೆ, ಬಕ್ರೀದ್ ಹಬ್ಬದಂದು ಅಥವಾ ಇತರ ಯಾವುದೇ ದಿನ ಹಸು ಹಾಗೂ ಕರುಗಳ ಹತ್ಯೆ ನಡೆಯದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಈ ಆದೇಶವನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.
ಆದರೆ, ತಮಿಳುನಾಡು ಸರ್ಕಾರ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, 1958ರ ಜಾನುವಾರು ಸಂರಕ್ಷಣಾ ಕಾಯ್ದೆಯಡಿ ನಿಗದಿತ ಷರತ್ತುಗಳನ್ನು ಪೂರೈಸಿದ ಕೆಲವು ಸಂದರ್ಭಗಳಲ್ಲಿ ಗೋಹತ್ಯೆಗೆ ಅವಕಾಶವಿದೆ ಎಂದು ವಾದಿಸಿತು. ಜಾನುವಾರು 10 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ ಅಥವಾ ಕೃಷಿ ಹಾಗೂ ಸಂತಾನೋತ್ಪತ್ತಿಗೆ ಯೋಗ್ಯವಿಲ್ಲವೆಂದು ಪ್ರಮಾಣೀಕರಿಸಿದರೆ ಮಾತ್ರ ವಧೆಗೆ ಅನುಮತಿ ಇದೆ ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಈ ವಾದವನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಿದ್ದುಪಡಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದು, ಮುಂದಿನ ಆದೇಶದವರೆಗೆ ಅದರ ಜಾರಿಗೆ ತಡೆ ನೀಡಿದೆ.
ಈ ಪ್ರಕರಣವು ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದ ಆರಂಭವಾಗಿತ್ತು. ಇದೀಗ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ವಿಚಾರಣೆಯಲ್ಲಿ ಅಂತಿಮ ಕಾನೂನು ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.
-
ರಾಜ್ಯ18 ಗಂಟೆಗಳು agoBakrid ವೇಳೆ ಗೋಹತ್ಯೆ ತಡೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ; ತಮಿಳುನಾಡು ಸರ್ಕಾರಕ್ಕೆ ಸದ್ಯದ ನೆಮ್ಮದಿ
-
ದೇಶ22 ಗಂಟೆಗಳು agoPM Narendra Modi ಜಕಾರ್ತಾ ಭೇಟಿ ಐತಿಹಾಸಿಕ; ಭಾರತ-ಇಂಡೋನೇಷ್ಯಾ ನಡುವೆ ಹಲವು ಮಹತ್ವದ ಒಪ್ಪಂದಗಳು
-
ರಾಜ್ಯ21 ಗಂಟೆಗಳು agoGovernment Office ಗಳಿಗೆ ಡಿಸಿ ದಿಢೀರ್ ಭೇಟಿ; ತಡವಾಗಿ ಬಂದ ಅಧಿಕಾರಿಗಳ ವಿರುದ್ಧ ಕಠಿಣ ಸೂಚನೆ
-
ರಾಜ್ಯ19 ಗಂಟೆಗಳು agoBidadi Township ವಿರೋಧಕ್ಕೆ ರೈತರ ರಣಕಹಳೆ; JMC ಕಾರಿನ ಮೇಲೆ ಕಲ್ಲು ತೂರಾಟ
-
ಬೆಂಗಳೂರು19 ಗಂಟೆಗಳು agoYeshwanthpura ದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಬ್ಯಾಡರಹಳ್ಳಿ, ಭಾರತನಗರದಲ್ಲಿ ಹೆಚ್ಚಿದ ಭೀತಿ
-
ರಾಜ್ಯ2 ಗಂಟೆಗಳು agoGruha Lakshmi ಫಲಾನುಭವಿಗಳೇ ಗಮನಿಸಿ: ಇ-ಕೆವೈಸಿ ಸುದ್ದಿ ಸುಳ್ಳು, ಸೈಬರ್ ಕೇಂದ್ರಕ್ಕೆ ಅಲೆಯದಿರಿ
-
ದೇಶ19 ಗಂಟೆಗಳು agoAadhar Card ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಇಮೇಲ್ ಅಪ್ಡೇಟ್ ಮೊಬೈಲ್ನಲ್ಲೇ ಉಚಿತ!
-
ದೇಶ26 ನಿಮಿಷಗಳು agoWaynad ಭೂಕುಸಿತ: ರಾಹುಲ್-ಪ್ರಿಯಾಂಕ ಗೈರು ಹಾಜರಿ ಬಗ್ಗೆ ಬಿಜೆಪಿ ವಾಗ್ದಾಳಿ
