ಆರೋಗ್ಯ
antibiotics ಸೂಕ್ತ ಬಳಕೆ, ನಿಯಂತ್ರಣಕ್ಕೆ ನೀತಿ ಅಗತ್ಯ: ಸಂಸದ ಡಾ.ಸಿ .ಎನ್.ಮಂಜುನಾಥ್
ಬೆಂಗಳೂರು: ಆ್ಯಂಟಿಬಯೋಟಿಕ್ ಸೂಕ್ತ ಬಳಕೆ ಮತ್ತು ನಿಯಂತ್ರಣಕ್ಕೆ ಹೊಸ ನೀತಿಯ ಅಗತ್ಯವಿದೆ ಎಂದು ಸಂಸದ ಡಾ.ಸಿ .ಎನ್.ಮಂಜುನಾಥ್ ಅವರು ಭಾನುವಾರ ಹೇಳಿದರು.
ನಗರದಲ್ಲಿ ಆಯೋಜಿಸಲಾಗಿದ್ದ 7ನೇ ರಾಷ್ಟ್ರೀಯ ಮಟ್ಟದ ಫೀವರ್ಕಾನ್-2024 ಸಮಾವೇಶದಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ಕಾಯಿಲೆಗಳಿಗೂ ಆ್ಯಂಟಿಬಯೋಟಿಕ್ಗಳ ಬಳಕೆ ಮಾಡಲಾಗುತ್ತಿದೆ. ಇವುಗಳ ದುರುಪಯೋಗ ಹೆಚ್ಚಾಗುತ್ತಿದ್ದು, ಆ್ಯಂಟಿಮೈಕ್ರೊಬಿಯಲ್ ಪ್ರತಿರೋಧ ಹೆಚ್ಚುತ್ತಿದೆ, ಹೀಗಾಗಿ ಆ್ಯಂಟಿಬಯೋಟಿಕ್ ಸೂಕ್ತ ಬಳಕೆ ಮತ್ತು ನಿಯಂತ್ರಣಕ್ಕೆ ಹೊಸ ನೀತಿಯ ಅಗತ್ಯವಿದೆ ಎಂದು ಹೇಳಿದರು.
ಹಲವು ಆರೋಗ್ಯ ಸಮಸ್ಯೆಗಳ ಮೊದಲ ಲಕ್ಷಣವೆಂದರೆ ಜ್ವರ, ಇದರ ರೋಗನಿರ್ಣಯವು ಪ್ರಮುಖ ಅಂಶವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ರೋಗಗಳನ್ನು ತ್ವರಿತವಾಗಿ ಗುಣಪಡಿಸುವ ಆತುರದಲ್ಲಿ ಆ್ಯಂಟಿಬಯೋಟಿಕ್ಗಳನ್ನು ಅತಿಯಾದ ಬಳಕೆ ಮಾಡಲಾಗುತ್ತಿದೆ. ಕೇವಲ ಆರೋಗ್ಯ ರಕ್ಷಣೆಯಲ್ಲಿ ಮಾತ್ರವಲ್ಲದೆ ಕೃಷಿಯಲ್ಲಿಯೂ ವ್ಯಾಪಕವಾಗಿದೆ. ಪ್ರತಿಜೀವಕಗಳು ಒಂದು ವರವಾಗಿದ್ದರೂ, ಅತಿಯಾದ ಬಳಕೆಯು ಆ್ಯಂಟಿಮೈಕ್ರೊಬಿಯಲ್ ಪ್ರತಿರೋಧದ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಆ್ಯಂಟಿಬಯೋಟಿಕ್ ಅಮೃತವೂ ಹೌದು. ಅತಿಯಾದರೆ ವಿಷವೂ ಹೌದು. ಹೀಗಾಗಿ ಇದನ್ನು ಅತಿಯಾಗಿ ಬಳಸಬಾರದು. ಈ ಬಗ್ಗೆ ತಕ್ಷಣ ಗಮನ ಹರಿಸಿ, ನಿಯಂತ್ರಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ರೋಗಿಗಳ ಆರೈಕೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಬಹಳಷ್ಟು ಅರೋಗ್ಯ ಸಮಸ್ಯೆಗಳ ಪ್ರಥಮ ಲಕ್ಷಣ ಜ್ವರ. ಇದನ್ನ ಸೂಕ್ತವಾಗಿ ಪರಿಶೀಲನೆ ಮಾಡುವುದು ಅಗತ್ಯ. ತಂತ್ರಜ್ಞಾನ ಮುಂದುವರೆದಂತೆ ವೈದ್ಯರು, ರೋಗಿಗಳ ಮಾಹಿತಿ ಪರಿಶೀಲಿಸಿ ಚಿಕಿತ್ಸೆ ಪ್ರಾರಂಭಿಸುತ್ತಾರೆ. ರೋಗಿಯನ್ನು ಮುಟ್ಟಿ ಆರೋಗ್ಯ ಪರಿಶೀಲಿಸಿದರೆ ಬಹಳಷ್ಟು ವಿಷಯ ತಿಳಿಯಬಹುದು. ಆದರೆ, ಇದೀಗ ಚಿಕಿತ್ಸಾ ವಿಧಾನವೇ ಬದಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ
Bengaluru ಹೆಚ್ಸಿಜಿ ಆಸ್ಪತ್ರೆಗೆ ಕೇಂದ್ರದ ಕಠಿಣ ಶಾಕ್: 2 ವರ್ಷ ಹೊಸ ಕ್ಲಿನಿಕಲ್ ಟ್ರಯಲ್ಗೆ ಬ್ರೇಕ್!
ಬೆಂಗಳೂರು: ನಗರದ ಪ್ರತಿಷ್ಠಿತ ಹೆಚ್ಸಿಜಿ (HCG) ಕ್ಯಾನ್ಸರ್ ಆಸ್ಪತ್ರೆಯ ನೈತಿಕ ಸಮಿತಿಗೆ (Ethics Committee) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಭಾರೀ ಆಘಾತ ನೀಡಿದೆ. ಮಾನವ ಪ್ರಯೋಗಗಳ (Clinical Trials) ವೇಳೆ ಗಂಭೀರ ನಿಯಮ ಉಲ್ಲಂಘನೆಗಳು ಹಾಗೂ ಸುರಕ್ಷತಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ, ಮುಂದಿನ 24 ತಿಂಗಳುಗಳ ಕಾಲ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್ಗಳನ್ನು ನಡೆಸದಂತೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಸಲ್ಲಿಸಿದ್ದ ಲಿಖಿತ ದೂರಿನ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳು ಜಂಟಿ ತನಿಖೆ ನಡೆಸಿದ್ದವು. ತನಿಖೆಯಲ್ಲಿ ಹಲವು ಗಂಭೀರ ಅಕ್ರಮಗಳು ಬೆಳಕಿಗೆ ಬಂದಿದ್ದು, ನೈತಿಕ ಸಮಿತಿಯು ನಿಯಮಾವಳಿಗಳನ್ನು ಪಾಲಿಸದಿರುವುದು ದೃಢಪಟ್ಟಿದೆ.
ವರದಿಗಳ ಪ್ರಕಾರ, ಔಷಧ ಸಂಶೋಧನಾ ಪ್ರಯೋಗಗಳ ಸಂದರ್ಭದಲ್ಲಿ ಕೆಲವು ರೋಗಿಗಳು ಮೃತಪಟ್ಟಿದ್ದರೂ, ಆ ಮಾಹಿತಿಯನ್ನು ನಿಯಂತ್ರಣ ಸಂಸ್ಥೆಗೆ ನಿಗದಿತ ಅವಧಿಯಲ್ಲಿ ಸಲ್ಲಿಸಲಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಸಾವಿನ ವರದಿಗಳನ್ನೇ ದಾಖಲಿಸದೇ ಮುಚ್ಚಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಪ್ರಯೋಗಗಳಿಂದ ಹಾನಿಗೊಳಗಾದ ಅಥವಾ ಮೃತಪಟ್ಟ ರೋಗಿಗಳ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಧನ ವಿತರಣೆ ಕುರಿತು ಅಗತ್ಯ ದಾಖಲೆಗಳ ಕೊರತೆಯೂ ಕಂಡುಬಂದಿದೆ.
ಹೊಸ ಔಷಧ ಪ್ರಯೋಗಗಳಿಗೆ ಒಳಗಾಗುವ ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ಆರೈಕೆಯನ್ನು ಖಚಿತಪಡಿಸುವಲ್ಲಿ ಆಸ್ಪತ್ರೆ ವಿಫಲವಾಗಿದೆ ಎಂದು ತನಿಖಾ ವರದಿ ಉಲ್ಲೇಖಿಸಿದೆ. ಇದರ ಹಿನ್ನೆಲೆಯಲ್ಲಿ ಸಿಡಿಎಸ್ಸಿಒ ಕಠಿಣ ಕ್ರಮ ಕೈಗೊಂಡಿದೆ.
ಆದರೆ, ಈ ನಿಷೇಧವು ಕೇವಲ ಹೊಸ ಕ್ಲಿನಿಕಲ್ ಟ್ರಯಲ್ಗಳಿಗೆ ಮಾತ್ರ ಅನ್ವಯವಾಗುತ್ತದೆ. ಆಸ್ಪತ್ರೆಯ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆ, ತಪಾಸಣೆ ಹಾಗೂ ಈಗಾಗಲೇ ನಡೆಯುತ್ತಿರುವ ಪ್ರಯೋಗಗಳು ಮುಂದುವರಿಯಲಿವೆ. ಆದರೆ ಚಾಲ್ತಿಯಲ್ಲಿರುವ ಎಲ್ಲಾ ಪ್ರಯೋಗಗಳ ಕುರಿತು ಪ್ರತಿ ತಿಂಗಳು ರೋಗಿಗಳ ಸುರಕ್ಷತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.
ಸಿಡಿಎಸ್ಸಿಒ ಆದೇಶವನ್ನು ಪರಿಶೀಲಿಸುತ್ತಿರುವ ಹೆಚ್ಸಿಜಿ ಆಡಳಿತ ಮಂಡಳಿ, ಮುಂದಿನ ಕಾನೂನು ಕ್ರಮಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯ
ಫಾಸ್ಟ್ ಲೈಫ್ನಲ್ಲಿ ಯೋಗದ ಮಹತ್ವ ಹೆಚ್ಚಳ: ಆರೋಗ್ಯಕರ ಬದುಕಿಗೆ ಯೋಗವೇ ಮಂತ್ರ
ನಾಳೆ ಜಗತ್ತಿನಾದ್ಯಂತ International Day of Yogaವನ್ನು ಆಚರಿಸಲಾಗುತ್ತಿದೆ. ಆಧುನಿಕ ಜೀವನಶೈಲಿಯಲ್ಲಿ ಕೆಲಸದ ಒತ್ತಡ, ಸಮಯದ ಕೊರತೆ, ಮಾನಸಿಕ ಆತಂಕ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಪರಿಣಾಮಕಾರಿ ಮಾರ್ಗವಾಗಿ ಹೊರಹೊಮ್ಮಿದೆ.ತಜ್ಞರ ಪ್ರಕಾರ, ಪ್ರತಿದಿನ ಕೇವಲ 20 ರಿಂದ 30 ನಿಮಿಷಗಳ ಯೋಗಾಭ್ಯಾಸವು ದೇಹದ ಲವಚಿಕತೆಯನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಯೋಗದ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು, ಏಕಾಗ್ರತೆಯನ್ನು ವೃದ್ಧಿಸಬಹುದು ಹಾಗೂ ಉತ್ತಮ ನಿದ್ರೆಯನ್ನು ಪಡೆಯಬಹುದು.ಇಂದಿನ ವೇಗದ ಬದುಕಿನಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಯುವಜನರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಯೋಗ ಮತ್ತು ಪ್ರಾಣಾಯಾಮ ಅಭ್ಯಾಸಗಳು ಈ ಸಮಸ್ಯೆಗಳನ್ನು ನಿಯಂತ್ರಿಸಲು ನೆರವಾಗುತ್ತವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ನಾಳೆಯ ಯೋಗ ದಿನಾಚರಣೆಯ ಅಂಗವಾಗಿ ದೇಶದ ವಿವಿಧ ನಗರಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ವಿಶೇಷ ಕಾರ್ಯಾಗಾರಗಳು ನಡೆಯಲಿವೆ. ಶಾಲೆಗಳು, ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳು ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ವರದಿ: ಯೋಗವು ಕೇವಲ ವ್ಯಾಯಾಮವಲ್ಲ; ಅದು ಆರೋಗ್ಯಕರ ಮತ್ತು ಸಂತೋಷದಾಯಕ ಜೀವನದತ್ತ ಕೊಂಡೊಯ್ಯುವ ಜೀವನಶೈಲಿಯಾಗಿದೆ.
“ಆರೋಗ್ಯಕರ ದೇಹ, ಶಾಂತ ಮನಸ್ಸು ಮತ್ತು ಸಮತೋಲನಯುತ ಜೀವನಕ್ಕಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು” ಎಂಬ ಸಂದೇಶದೊಂದಿಗೆ ಈ ಬಾರಿಯ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಆರೋಗ್ಯ
ಮಧುಮೇಹಿಗಳು ಎಚ್ಚರ! ಉಳಿದವರಿಗೆ ಲಾಭ: ಹಲಸಿನ ಹಣ್ಣಿನ ಆರೋಗ್ಯಕರ ವಿಶೇಷತೆಗಳು
ಹಲಸಿನ ಹಣ್ಣು ಹಲಸಿನ ಹಣ್ಣು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರ ಪ್ರಮುಖ ಲಾಭಗಳು ಹೀಗಿವೆ:
ರೋಗನಿರೋಧಕ ಶಕ್ತಿ ಹೆಚ್ಚಳ – ವಿಟಮಿನ್ C ಸಮೃದ್ಧವಾಗಿದ್ದು ದೇಹದ ರಕ್ಷಣಾ ಶಕ್ತಿಯನ್ನು ಬಲಪಡಿಸುತ್ತದೆ.
ಜೀರ್ಣಕ್ರಿಯೆ ಸುಧಾರಣೆ – ಹೆಚ್ಚಿನ ನಾರಿನಾಂಶ (ಫೈಬರ್) ಜೀರ್ಣಕ್ರಿಯೆಗೆ ಸಹಾಯ ಮಾಡಿ ಮಲಬದ್ಧತೆ ತಡೆಯುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು – ಪೊಟ್ಯಾಸಿಯಂ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗಬಹುದು.
ತ್ವರಿತ ಶಕ್ತಿ ನೀಡುತ್ತದೆ – ನೈಸರ್ಗಿಕ ಕಾರ್ಬೊಹೈಡ್ರೇಟ್ಗಳ ಉತ್ತಮ ಮೂಲ.
ಚರ್ಮದ ಆರೈಕೆ – ವಿಟಮಿನ್ A ಮತ್ತು ಆಂಟಿಆಕ್ಸಿಡೆಂಟ್ಗಳು ಚರ್ಮದ ಆರೋಗ್ಯ ಕಾಪಾಡುತ್ತವೆ.
ಎಲುಬುಗಳನ್ನು ಬಲಪಡಿಸುತ್ತದೆ – ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಎಲುಬಿನ ಆರೋಗ್ಯಕ್ಕೆ ಸಹಕಾರಿ.
ಕಣ್ಣಿನ ಆರೋಗ್ಯಕ್ಕೆ ಲಾಭಕಾರಿ – ವಿಟಮಿನ್ A ದೃಷ್ಟಿ ಶಕ್ತಿಯನ್ನು ಬೆಂಬಲಿಸುತ್ತದೆ.
ಪೌಷ್ಟಿಕಾಂಶಗಳ ಭಂಡಾರ – ದೇಹಕ್ಕೆ ಅಗತ್ಯವಾದ ಹಲವು ವಿಟಮಿನ್ಗಳು ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ.
ಗಮನಿಸಬೇಕಾದ ಅಂಶ:ಹಲಸಿನ ಹಣ್ಣನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.ಮಧುಮೇಹ ಇರುವವರು ವೈದ್ಯರ ಸಲಹೆಯಂತೆ ಸೇವಿಸಬೇಕು.
ಸಾರಾಂಶ: ಹಲಸಿನ ಹಣ್ಣು ರುಚಿ ಮತ್ತು ಆರೋಗ್ಯ ಎರಡರಲ್ಲೂ ಉತ್ತಮ ಆಯ್ಕೆಯಾಗಿದ್ದು, ಸಮತೋಲಿತ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಲು ಯೋಗ್ಯವಾದ ಹಣ್ಣಾಗಿದೆ.
-
ದೇಶ18 hours agoಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತೆಹ್ರಾನ್ ಬೀದಿಗಳಲ್ಲಿ ಲಕ್ಷಾಂತರ ಜನರ ಅಂತಿಮ ನಮನ
-
ದೇಶ19 hours ago‘ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ SIR’ – ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ-ಜೆಡಿಎಸ್
-
ದೇಶ23 hours agoSakkath Santhe 2026: ಗೃಹ ಉತ್ಪನ್ನಗಳಿಗೆ ವೇದಿಕೆ, ಇಂದಿರಾನಗರದಲ್ಲಿ ಜನಸಾಗರ
-
ದೇಶ21 hours agoಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಜುಲೈ 6ರ ಬೆಂಗಳೂರು ಗೋಲ್ಡ್ ರೇಟ್ ಇಲ್ಲಿದೆ
-
ದೇಶ21 hours agoರಾಜಾಜಿನಗರ ಶಾಸಕರ ಕಚೇರಿ ಮುಂದೆ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
-
ದೇಶ20 hours ago“ಇನ್ನೆಷ್ಟು ಜನ ಸತ್ತರೆ ಕ್ರಮ?” ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ ಎಸ್.ಟಿ. ಸೋಮಶೇಖರ್
-
ದೇಶ19 hours agoಚೀನಾ-ಪಾಕ್ ಜಲಾಂತರ್ಗಾಮಿಗಳಿಗೆ ಭಾರತದ ಹೈಟೆಕ್ ಬ್ರಹ್ಮಾಸ್ತ್ರ! ಸಮುದ್ರದಾಳದಲ್ಲಿ ‘ಸೀಕ್ರೆಟ್ ಸೆನ್ಸಾರ್ ನೆಟ್ವರ್ಕ್’
-
ದೇಶ21 hours agoPoK ಪ್ರತಿಭಟನೆ ತೀವ್ರ: ‘ಗಡಿ ತೆರೆಯಿರಿ, ಮಾನವೀಯ ನೆರವು ನೀಡಿ’ ಎಂದು ಭಾರತದತ್ತ ಮೊರೆ
