ದೇಶ
“ಪರ್ಫೆಕ್ಷನಿಸ್ಟ್ ನ ಮುಖವಾಡ ಕಳಚಿದ ಸಹೋದರ! ಆಮೀರ್ ಖಾನ್ ವಿರುದ್ಧ ಫೈಸಲ್ ಖಾನ್ ಭಾರಿ ಬಾಂಬ್!”
ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಪ್ರಖ್ಯಾತನಾಗಿರುವ ಆಮೀರ್ ಖಾನ್ ಈಗ ತಮ್ಮದೇ ಸಹೋದರನಿಂದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ಒಡಹುಟ್ಟಿದ ತಮ್ಮ ಫೈಸಲ್ ಖಾನ್ ತಮ್ಮ ಜೀವನ ಹಾಳಾಗಿದ್ದು, ಅದಕ್ಕೆ ಕಾರಣವೇ ಅಣ್ಣ ಆಮೀರ್ ಖಾನ್ ಎಂದು ಹೇಳಿದ್ದಾರೆ.
ಫೈಸಲ್ ಖಾನ್ ಮಾಧ್ಯಮದೊಂದಿಗೆ ಮಾತನಾಡುತ್ತಾ,
“2005ರಿಂದ ನನ್ನನ್ನು ಹೌಸ್ ಅರೆಸ್ಟ್‌ನಲ್ಲಿ ಇಟ್ಟು, ಬಲವಂತವಾಗಿ ಔಷಧಿ ನೀಡಲಾಗುತ್ತಿತ್ತು. ಆಮೀರ್ ನನ್ನ ಸಿನಿಮಾ ಕನಸುಗಳನ್ನು ತುಳಿದಿದ್ದಾರೆ. ನನ್ನನ್ನು ಬೆಳೆಯದಂತೆ ಮಾಡಿದ್ದಾರೆ.” ಎಂದು ಕಿಡಿಕಾರಿದ್ದಾರೆ.
ಫೈಸಲ್ 2016ರಲ್ಲಿಯೇ ಈ ಸಂಬಂಧ ಕೋರ್ಟ್‌ನಲ್ಲಿ ಗೆಲುವು ಸಾಧಿಸಿದ್ದಾಗಿ ಹೇಳಿದರು. ಆಮೀರ್ ಖಾನ್‌ಗೆ ಸಂಬಂಧಪಟ್ಟಂತೆ ತೀವ್ರ ಆರೋಪ ಹೊರಿಸಿರುವ ಅವರು, “ಪರ್ಫೆಕ್ಷನಿಸ್ಟ್ ಎಂಬ ಮುಖವಾಡದ ಹಿಂದಿನ ಅಸಲಿ ವ್ಯಕ್ತಿತ್ವ ಈಗ ಬೆಳಕಿಗೆ ಬಂದಿದೆ” ಎಂದು ಜೋರಾಗಿ ಚಾಟಿ ಹೊಡೆದಿದ್ದಾರೆ.
ಅಕ್ರಮ ಸಂಬಂಧಗಳ ಆರೋಪವೂ ಹೊರವಿದ್ದಾ?
ಫೈಸಲ್ ಆರೋಪಿಸಿರುವಂತೆ, ಆಮೀರ್ ಖಾನ್ ಅವರು ತಮ್ಮ ಮೊದಲ ಪತ್ನಿ ರೀನಾ ದತ್ತಾ ಅವರೊಂದಿಗೆ ವಿಚ್ಛೇದನದ ನಂತರ, ಬೆಂಗಳೂರು ಮೂಲದ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಆದರೆ ಆ ಬಳಿಕವೂ ಅವರು ಯುಕೆ ಮೂಲದ ಜರ್ನಲಿಸ್ಟ್ ಜೊತೆ ಅಕ್ರಮ ಸಂಬಂಧದಲ್ಲಿದ್ದರು.
“ಅವರಿಂದ ಮಗನೂ ಜನಿಸಿದ್ದಾನೆ” ಎಂಬ ಬಾಂಬ್‌ಶೆಲ್ ಮಾಹಿತಿ ಕೂಡ ಫೈಸಲ್ ನೀಡಿದ್ದಾರೆ.
ಮೂರನೇ ಮದುವೆಗೂ ಸಿದ್ಧತೆ?
ಇತ್ತೀಚೆಗೆ ಆಮೀರ್ ಖಾನ್ ಮತ್ತೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಫೈಸಲ್ ಖಾನ್ ಹೇಳಿಕೆಯಿಂದ ಇದು “ಮೂರನೇ” ಮದುವೆಯಲ್ಲ, “ನಾಲ್ಕನೇ” ಮದುವೆ ಎಂದು ತಿಳಿಯಲಾಗಿದೆ.
ಸಿನಿ ಲೋಕದಲ್ಲಿ ಭಾರೀ ಚರ್ಚೆ
ಈ ಹೇಳಿಕೆಗಳು ಇದೀಗ ಬಾಲಿವುಡ್ ಮತ್ತು ಫ್ಯಾನ್ಸ್ ನಡುವೆ ಭಾರೀ ಚರ್ಚೆಗೆ ಕಾರಣವಾಗಿದ್ದು, “ಮಿಸ್ಟರ್ ಪರ್ಫೆಕ್ಷನಿಸ್ಟ್” ಎಂಬ ಟ್ಯಾಗ್‌ಗೆ ಈ ಹೇಳಿಕೆಗಳಿಂದ ಧಕ್ಕೆ ತರುವ ಸಾಧ್ಯತೆಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಾಟ್ ಟಾಪಿಕ್ ಆಗಿ ಚರ್ಚಿಸುತ್ತಿದ್ದಾರೆ.