ರೇಣುಕಾಸ್ವಾಮಿ ಕೊಲೆ ಕೇಸ್ : ಮೊದಲ ಜಾಮೀನು ಮಂಜೂರು! | Hosa Suddi

ಅಪರಾಧ

ರೇಣುಕಾಸ್ವಾಮಿ ಕೊಲೆ ಕೇಸ್ : ಮೊದಲ ಜಾಮೀನು ಮಂಜೂರು!

Published

on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮು ಕೊಲೆ ಕೇಸ್ ನಲ್ಲಿ ಮೊದಲ ಬಾರಿಗೆ ಒಟ್ಟು 17 ಆರೋಪಿಗಳ ಪೈಕಿ ಓರ್ವ ಆರೋಪಿಗೆ ಇದೇ ಮೊದಲ ಸಲ ಬೇಲ್ ಸಿಕ್ಕಿದೆ,
ಪ್ರಕರಣದ ಎ 16 ಕೇಶವ ಮೂರ್ತಿ ಎಂಬುವವನಿಗೆ ಹೈಕೋರ್ಟ್ ನ್ಯಾ.ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠವು ಓರ್ವರ ಶ್ಯೂರಿಟಿ ಮೇರೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ, ಆರೋಪಿಯು ಸದ್ಯ ತುಮಕೂರು ಜೈಲಿನಲ್ಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣಗೆ ಹಾಜರುಪಡಿಸಲಾಗಿತ್ತು, ಭೀಕರ ಕೊಲೆ ಕೇಸ್ ನಲ್ಲಿ ಇಂದು ಮೊದಲ ಜಾಮೀನು ಮಂಜೂರಾಗಿದೆ,
ಕೊಲೆ ಕೇಸ್ ನ ಆರೋಪಿಗಳಾದ ನಿಖಿಲ್ ಹಾಗೂ ರಘೂ ಸೂಚನೆಯಂತೆ ಆರೋಪಿ ಕೇಶವ್ ಮೂರ್ತಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ನೇರವಾಗಿ ಹೋಗಿ ಶರಣಾಗತಿ ಆಗಿದ್ದು. ಹತ್ಯೆಯಲ್ಲಿ ಕೇಶವನ ಯಾವುದೇ ಪಾತ್ರವಿಲ್ಲ, ಶವ ವಿಲೇವಾರಿಯಲ್ಲಿ ಮಾತ್ರ ಕೇಶವನ ಹೆಸರು ಕೇಳಿ ಬಂದಿತ್ತು, ಆರೋಪಿ ಪರ ವಕೀಲರಾದ ರಂಗನಾಥರೆಡ್ಡಿ ಅವರು ವಕಾಲತ್ತು ಮಾಡಿದರು, ಈಗಾಗಲೇ ಎ 2 ಆರೋಪಿ ದರ್ಶನ್ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿದೆ,

Trending

Exit mobile version