ದೇಶ
‘Shri Ram Mandir Prasad’ ಹೆಸರಿನಲ್ಲಿ ಸಿಹಿ ಮಾರಾಟ: Amazon ಗೆ ಕೇಂದ್ರದಿಂದ ಭಾರೀ ಕ್ರಮ!
ನವದೆಹಲಿ: ಅಯೋಧ್ಯೆಯ Shri Ram Mandir Prasad ವೆಂದು ಪ್ರತಿಪಾದಿಸಿ ಸಾಮಾನ್ಯ ಸಿಹಿ ತಿಂಡಿಗಳನ್ನು ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿAmazon ಇಂಡಿಯಾಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸಿದೆ.
‘ಶ್ರೀ ರಾಮಮಂದಿರ ಅಯೋಧ್ಯೆ ಪ್ರಸಾದ’ ಎಂಬ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿತ್ತು. ಆದರೆ ಈ ಉತ್ಪನ್ನಗಳನ್ನು ಮಾರಾಟ ಮಾಡಲು ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು CCPA ತಿಳಿಸಿದೆ. ಇದರಿಂದ ಗ್ರಾಹಕರನ್ನು ದಾರಿ ತಪ್ಪಿಸಲಾಗಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.
Amazon ₹1 ಲಕ್ಷ ದಂಡ
CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರಿದ್ದ ಪ್ರಾಧಿಕಾರವು ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ಗೆ ದಂಡ ವಿಧಿಸಿದೆ. ದಂಡದ ಮೊತ್ತವನ್ನು 15 ದಿನಗಳ ಒಳಗಾಗಿ ಪಾವತಿಸುವಂತೆ ಸೂಚಿಸಲಾಗಿದೆ.
ಖಾಸಗಿ ಕಂಪನಿಯೊಂದು ತನ್ನದೇ ಬ್ರ್ಯಾಂಡ್ ಅಡಿಯಲ್ಲಿ ತುಪ್ಪದ ಲಾಡು, ಖೋವಾ ಲಾಡು, ಬೂಂದಿ ಲಾಡು ಹಾಗೂ ಹಸುವಿನ ಹಾಲಿನ ಪೇಡಾಗಳನ್ನು ‘ಪ್ರಸಾದ’ ಎಂದು ಜಾಹೀರಾತು ನೀಡಿ ಮಾರಾಟ ಮಾಡುತ್ತಿತ್ತು ಎಂದು CCPA ತಿಳಿಸಿದೆ.
CAIT ದೂರಿನ ಬಳಿಕ ತನಿಖೆ
ಅಖಿಲ ಭಾರತ ವರ್ತಕರ ಒಕ್ಕೂಟ (CAIT) ನೀಡಿದ ದೂರಿನ ಆಧಾರದ ಮೇಲೆ CCPA ಈ ಕುರಿತು ವಿಚಾರಣೆ ನಡೆಸಿತ್ತು. ಧಾರ್ಮಿಕ ಕ್ಷೇತ್ರದ ಹೆಸರನ್ನು ಬಳಸಿಕೊಂಡು ಸಾಮಾನ್ಯ ಸಿಹಿ ತಿಂಡಿಗಳನ್ನು ಪ್ರಸಾದವೆಂದು ಮಾರಾಟ ಮಾಡುವುದು ಗ್ರಾಹಕರನ್ನು ದಾರಿ ತಪ್ಪಿಸುವುದಲ್ಲದೆ, ಭಕ್ತರ ಧಾರ್ಮಿಕ ಭಾವನೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಪ್ರಾಧಿಕಾರ ಪರಿಗಣಿಸಿದೆ.
ಈ ಪ್ರಕರಣದಲ್ಲಿ ಅಮೆಜಾನ್ ತನ್ನನ್ನು ಕೇವಲ ಮಧ್ಯವರ್ತಿ ಇ-ಕಾಮರ್ಸ್ ವೇದಿಕೆ ಎಂದು ಸಮರ್ಥಿಸಿಕೊಂಡಿತ್ತು. ಆದರೆ ಈ ವಾದವನ್ನು CCPA ತಳ್ಳಿಹಾಕಿದೆ.
‘ಮಧ್ಯವರ್ತಿ’ ವಾದ ತಳ್ಳಿಹಾಕಿದ CCPA
ತನ್ನ ವೇದಿಕೆಯಲ್ಲಿ ಇಂತಹ ಉತ್ಪನ್ನಗಳನ್ನು ಪ್ರದರ್ಶಿಸಿ, ಅವುಗಳ ಮಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಅಮೆಜಾನ್ ಕೂಡ ಗ್ರಾಹಕರನ್ನು ದಾರಿ ತಪ್ಪಿಸುವ ಪ್ರಕ್ರಿಯೆಯಲ್ಲಿ ಹೊಣೆಗಾರಿಕೆಯ ಭಾಗವಾಗಿದೆ ಎಂದು CCPA ಸ್ಪಷ್ಟಪಡಿಸಿದೆ.
ಪ್ರಸಾದ ಎಂದು ತಪ್ಪಾಗಿ ಬಿಂಬಿಸಲಾದ ಉತ್ಪನ್ನಗಳನ್ನು ಗ್ರಾಹಕರು ನಿಜವಾಗಿಯೂ ಅಯೋಧ್ಯೆ ರಾಮಮಂದಿರದಿಂದ ಬಂದ ಪ್ರಸಾದ ಎಂದು ನಂಬುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಜಾಹೀರಾತುಗಳ ಬಗ್ಗೆ ಇ-ಕಾಮರ್ಸ್ ವೇದಿಕೆಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ಪ್ರಾಧಿಕಾರ ಸೂಚಿಸಿದೆ.
ಇನ್ನು ಮುಂದೆ ಇಂತಹ ಮಾರಾಟಕ್ಕೆ ಬ್ರೇಕ್
ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಟ್ರಸ್ಟ್‌ಗಳ ಅನುಮತಿ ಇಲ್ಲದೆ ‘ಪ್ರಸಾದ’, ‘ಮಹಾಪ್ರಸಾದ’ ಅಥವಾ ‘ಭೋಗ್’ ಎಂಬ ಹೆಸರಿನಲ್ಲಿ ಯಾವುದೇ ಉತ್ಪನ್ನಗಳನ್ನು ತನ್ನ ವೇದಿಕೆಯಲ್ಲಿ ಮಾರಾಟ ಮಾಡದಂತೆ ಅಮೆಜಾನ್‌ಗೆ CCPA ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಕ್ರಮವು ಧಾರ್ಮಿಕ ಸಂಸ್ಥೆಗಳ ಹೆಸರನ್ನು ಬಳಸಿಕೊಂಡು ನಡೆಯುವ ದಾರಿ ತಪ್ಪಿಸುವ ಜಾಹೀರಾತುಗಳು ಹಾಗೂ ಆನ್‌ಲೈನ್ ಮಾರಾಟದ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಕೈಗೊಂಡಿರುವ ಮಹತ್ವದ ಕ್ರಮವಾಗಿದೆ.
ಅಪರಾಧ
Ramanagara ದಲ್ಲಿ ಕೋಟಿ ಕೋಟಿ ನಕಲಿ ಔಷಧ ದಂಧೆ ಬಯಲು! ಫಾರ್ಮ್‌ಹೌಸ್‌ನಲ್ಲಿ ಏನಾಗುತ್ತಿತ್ತು?
ರಾಮನಗರ: Ramanagara ಜಿಲ್ಲೆಯ ದೊಡ್ಡೇರಿ ಗ್ರಾಮದ ಸಮೀಪ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ಎನ್ನಲಾದ ನಕಲಿ ಔಷಧ ದಂಧೆ (Ramanagara Fake Medicine Racket) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಸದ್ಯ ವಿದೇಶದಲ್ಲಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಅನುಮಾನಾಸ್ಪದ ವಾಹನ ಸಂಚಾರದಿಂದ ಬಯಲಾಯ್ತು ದಂಧೆ!
ಫಾರ್ಮ್‌ಹೌಸ್‌ಗೆ ಅನುಮಾನಾಸ್ಪದವಾಗಿ ವಾಹನಗಳು ಬಂದು ಹೋಗುತ್ತಿರುವುದು ಹಾಗೂ ಬಾಕ್ಸ್‌ಗಳನ್ನು ಲೋಡ್ ಮಾಡಲಾಗುತ್ತಿದೆ ಎಂಬ ಮಾಹಿತಿ ಬೀಟ್ ಸಿಬ್ಬಂದಿಗಳಿಗೆ ಲಭ್ಯವಾಗಿತ್ತು. ಶಿವರಾಜು ಮತ್ತು ರಘು ನೀಡಿದ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ದೊಡ್ಡ ಪ್ರಮಾಣದ ಔಷಧಗಳು ಪತ್ತೆಯಾಗಿವೆ.
ಬಳಿಕ ಡ್ರಗ್ ಕಂಟ್ರೋಲರ್ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಲಾಗಿದ್ದು, ಪತ್ತೆಯಾದ ಔಷಧಗಳು ನಕಲಿಯಾಗಿರುವ ಶಂಕೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈ ಎಂಡ್ ICU ಔಷಧಗಳೇ ಟಾರ್ಗೆಟ್?
ತನಿಖೆಯ ಪ್ರಕಾರ, ಐಸಿಯುನಲ್ಲಿ ಬಳಸುವ ದುಬಾರಿ ಮತ್ತು ಹೈ ಎಂಡ್ ಔಷಧಗಳನ್ನು ನಕಲಿ ರೂಪದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕಡಿಮೆ ಬೆಲೆಯ ಔಷಧಗಳಿಗೆ ವಿದೇಶಿ ಕಂಪನಿಗಳ ಹೆಸರಿನ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಒಬ್ಬನ ಬಂಧನ, ಪ್ರಮುಖ ಆರೋಪಿ ವಿದೇಶದಲ್ಲಿ
ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ. ಸುಮಾರು 10 ಎಕರೆ ವಿಸ್ತೀರ್ಣದ ಫಾರ್ಮ್‌ಹೌಸ್ ಅನ್ನು ಪ್ರಮುಖ ಆರೋಪಿ ವರ್ಷಕ್ಕೆ ಸುಮಾರು ₹10 ಲಕ್ಷಕ್ಕೆ ಲೀಸ್‌ಗೆ ಪಡೆದಿದ್ದ ಎನ್ನಲಾಗಿದೆ. ಕೃಷಿ ಚಟುವಟಿಕೆ ನೆಪದಲ್ಲಿ ಈ ದಂಧೆ ನಡೆಸಲಾಗುತ್ತಿತ್ತೇ ಎಂಬ ಕೋನದಲ್ಲೂ ತನಿಖೆ ಮುಂದುವರಿದಿದೆ.
ಇದೇ ವೇಳೆ ಸಾರ್ವಜನಿಕರು ಔಷಧ ಖರೀದಿಸುವಾಗ QR Code, Batch Number ಹಾಗೂ ಉತ್ಪನ್ನದ ವಿವರಗಳನ್ನು ಪರಿಶೀಲಿಸುವಂತೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಲು ಮುಂದಾಗಿದೆ. ಪ್ರಕರಣದ ಜಾಲ ಎಷ್ಟು ವಿಸ್ತಾರವಾಗಿದೆ ಮತ್ತು ನಕಲಿ ಔಷಧಗಳನ್ನು ಎಲ್ಲೆಲ್ಲಿ ಪೂರೈಸಲಾಗಿದೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ದೇಶ
Bihar ‘ಸರ್ಕಾರ ತಲೆಬಾಗಲೇಬೇಕು’: ವಾಟರ್ ಕ್ಯಾನನ್ ಪ್ರಯೋಗಕ್ಕೂ ಜಗ್ಗದ Tejashwi Yadav
ಪಟ್ನಾ: Bihar ದ ಪಟ್ನಾದಲ್ಲಿ ಬುಧವಾರ ವಿದ್ಯಾರ್ಥಿಗಳು ಮತ್ತು ಯುವಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಲೋಕಭವನದತ್ತ ಸಾಗುತ್ತಿದ್ದ ಕಾಲ್ನಡಿಗೆ ಪ್ರತಿಭಟನೆಯನ್ನು ತಡೆಯಲು ಪೊಲೀಸರು ವಾಟರ್ ಕ್ಯಾನನ್‌ಗಳನ್ನು ಬಳಸಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ರಾಷ್ಟ್ರೀಯ ಜನತಾ ದಳ (RJD) ನಾಯಕ ತೇಜಸ್ವಿ ಯಾದವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಸಿವಾನ್‌ನಲ್ಲಿ AK-47 ರೈಫಲ್ ಬಳಕೆಯಾಗಿದೆ ಎಂಬ ವಿವಾದದ ಬೆನ್ನಲ್ಲೇ ಈ ಬೃಹತ್ ಪ್ರತಿಭಟನೆ ನಡೆದಿದೆ. ವಿದ್ಯಾರ್ಥಿಗಳ ಗುಂಪಿನಲ್ಲಿ ಸಿಲುಕಿದ್ದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು AK-47ನಿಂದ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದರು ಎಂದು ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಗುಂಡಿನ ದಾಳಿಯಲ್ಲಿ ಯಾವುದೇ ಪ್ರತಿಭಟನಾಕಾರರಿಗೆ ಗಾಯವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಘಟನೆಯ ಬಳಿಕ ಸಂಬಂಧಪಟ್ಟ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಲಾಗಿದೆ.
ವಾಟರ್ ಕ್ಯಾನನ್‌ಗೂ ಜಗ್ಗದ ತೇಜಸ್ವಿ ಯಾದವ್
ಲೋಕಭವನದತ್ತ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ವಾಟರ್ ಕ್ಯಾನನ್ ಬಳಸಿದರೂ, ಈ ಕ್ರಮ ತಮ್ಮ ಚಳವಳಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
“ಜನರು ಎಚ್ಚೆತ್ತುಕೊಂಡಿದ್ದಾರೆ ಮತ್ತು ಬೀದಿಗಿಳಿದಿದ್ದಾರೆ. ಸರ್ಕಾರ ಜನರ ಮುಂದೆ ತಲೆಬಾಗಬೇಕಾಗುತ್ತದೆ. ಇಂತಹ ಕ್ರಮಗಳಿಂದ ನಮ್ಮ ಚಳವಳಿಯನ್ನು ತಡೆಯಲು ಸಾಧ್ಯವಿಲ್ಲ” ಎಂದು ತೇಜಸ್ವಿ ಯಾದವ್ ಸುದ್ದಿಸಂಸ್ಥೆ ANIಗೆ ತಿಳಿಸಿದ್ದಾರೆ.
ಪ್ರತಿಭಟನೆಯ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬೆಳವಣಿಗೆ ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
AK-47 ಬಳಕೆ ಬಗ್ಗೆ ಮಿಸಾ ಭಾರತಿ ಪ್ರಶ್ನೆ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ RJD ಸಂಸದೆ ಮಿಸಾ ಭಾರತಿ, ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ AK-47 ಬಳಕೆಯಾಗಿದೆ ಎಂಬ ವಿಷಯವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಬಿಹಾರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“AK-47 ಬಳಸಲಾಗಿದೆ ಎಂದು ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡಿರುವುದನ್ನು ನಾವು ಕೇಳಿದ್ದೇವೆ. ಪ್ರತಿಭಟನೆಯ ವೇಳೆ AK-47 ಬಳಸಲು ಯಾರ ಅನುಮತಿ ನೀಡಿದರು ಎಂಬ ಪ್ರಶ್ನೆ ಕೇಳಬೇಕು. ಜಿಲ್ಲಾಧಿಕಾರಿ ಅನುಮತಿ ನೀಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು” ಎಂದು ಮಿಸಾ ಭಾರತಿ ಆಗ್ರಹಿಸಿದ್ದಾರೆ.
ಪೇಪರ್ ಲೀಕ್, ನಿರುದ್ಯೋಗ ವಿರುದ್ಧ ಆಕ್ರೋಶ
RJD ಸಂಸದ ಮನೋಜ್ ಝಾ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬಿಹಾರ ಸೇರಿದಂತೆ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಪೇಪರ್ ಲೀಕ್ ಹಾಗೂ ನಿರುದ್ಯೋಗದ ಬಗ್ಗೆ ತೀವ್ರ ಅಸಮಾಧಾನವಿದೆ ಎಂದು ಹೇಳಿದ್ದಾರೆ.
“ಪೇಪರ್ ಲೀಕ್ ಪ್ರಕರಣಗಳು ನಿರಂತರ ಮಾದರಿಯಾಗಿವೆ. ಯುವಜನರು ನಿರುದ್ಯೋಗದ ಹೊರೆ ತಾಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ಕೇವಲ ಭಾಷಣಗಳು ಬೇಡ, ಸಮಸ್ಯೆಗಳಿಗೆ ಪರಿಹಾರ ಬೇಕು” ಎಂದು ಅವರು ಹೇಳಿದ್ದಾರೆ.
ಯುವಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು RJD ನಾಯಕರು ಒತ್ತಾಯಿಸಿದ್ದಾರೆ.
ರಾಜ್ಯಪಾಲರಿಗೆ ಮನವಿ ಸಲ್ಲಿಸಲು RJD ನಿರ್ಧಾರ
RJD ಶಾಸಕ ಅಲೋಕ್ ಕುಮಾರ್ ಮೆಹ್ತಾ ಅವರ ಪ್ರಕಾರ, ವಿದ್ಯಾರ್ಥಿಗಳು ಮತ್ತು ಯುವಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಕ್ಷವು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಕಾಲ್ನಡಿಗೆ ಪ್ರತಿಭಟನೆ ನಡೆಸುತ್ತಿದೆ.
ಪೇಪರ್ ಲೀಕ್ ಸೇರಿದಂತೆ ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳನ್ನು ರಾಜ್ಯಪಾಲರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದ್ದಾರೆ. ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಾಗ, ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರ ಗಮನಕ್ಕೆ ವಿಷಯವನ್ನು ತರುವುದು ತಮ್ಮ ಹಕ್ಕು ಎಂದು ಮೆಹ್ತಾ ತಿಳಿಸಿದ್ದಾರೆ.
ಒಟ್ಟಿನಲ್ಲಿ, AK-47 ಬಳಕೆ ವಿವಾದ, ಪೇಪರ್ ಲೀಕ್ ಪ್ರಕರಣಗಳು ಮತ್ತು ನಿರುದ್ಯೋಗದ ವಿರುದ್ಧ ಪಟ್ನಾದಲ್ಲಿ ನಡೆದ ಪ್ರತಿಭಟನೆ ರಾಜಕೀಯವಾಗಿ ತೀವ್ರತೆ ಪಡೆದುಕೊಂಡಿದೆ. ವಾಟರ್ ಕ್ಯಾನನ್ ಪ್ರಯೋಗ ಮತ್ತು ತೇಜಸ್ವಿ ಯಾದವ್ ವಶಕ್ಕೆ ಪಡೆದಿರುವ ಘಟನೆ ಬಿಹಾರ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.
ರಾಜ್ಯ
Tamil Nadu ಶಾಸಕರಿಗೆ ಭರ್ಜರಿ ಗಿಫ್ಟ್: 234 MLAsಗೆ ಕಾರು, ₹75 ಸಾವಿರ ಭತ್ಯೆ; ಕಾರ್ಯದರ್ಶಿಗೂ ₹25 ಸಾವಿರ!
ಚೆನ್ನೈ: Tamil Nadu ಮುಖ್ಯಮಂತ್ರಿ Joseph Vijay ನೇತೃತ್ವದ ಸರ್ಕಾರ ರಾಜ್ಯದ ಶಾಸಕರಿಗೆ ಭರ್ಜರಿ ಸೌಲಭ್ಯಗಳನ್ನು ಘೋಷಿಸಿದೆ. ರಾಜ್ಯದ 234 ಶಾಸಕರಿಗೂ ಸರ್ಕಾರಿ ಕಾರು, ವಾಹನದ ಇಂಧನ ಮತ್ತು ನಿರ್ವಹಣೆಗೆ ಮಾಸಿಕ ₹75,000 ಭತ್ಯೆ ಹಾಗೂ ಅಧಿಕೃತ ಕೆಲಸಗಳಿಗಾಗಿ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲು ₹25,000 ರಾಜ್ಯ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ ವಿಜಯ್, ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ಸರ್ಕಾರಿ ಯೋಜನೆಗಳ ಪ್ರಗತಿ ಪರಿಶೀಲಿಸಲು ನಿರಂತರವಾಗಿ ಪ್ರಯಾಣಿಸಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
234 ಶಾಸಕರಿಗೂ ಸರ್ಕಾರಿ ಕಾರು
ಶಾಸಕರು ತಮ್ಮ ಕ್ಷೇತ್ರಗಳಿಗೆ ಆಗಾಗ್ಗೆ ತೆರಳಿ ಜನರ ಕುಂದುಕೊರತೆಗಳನ್ನು ಆಲಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರಿ ವಾಹನ ಒದಗಿಸುವುದರಿಂದ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪ್ರಸ್ತುತ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಹಲವರು ಸಾಮಾನ್ಯ ಕುಟುಂಬಗಳಿಂದ ಬಂದಿದ್ದಾರೆ. ಅವರಿಗೆ ಕ್ಷೇತ್ರದ ಕೆಲಸಗಳನ್ನು ನಿರ್ವಹಿಸಲು ಅಗತ್ಯವಿರುವ ಸಾರಿಗೆ ಸೌಲಭ್ಯ ಇಲ್ಲದಿರಬಹುದು. ಹೀಗಾಗಿ ಎಲ್ಲ ಶಾಸಕರಿಗೂ ಸರ್ಕಾರಿ ವಾಹನ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಜಯ್ ತಿಳಿಸಿದ್ದಾರೆ.
ಕಾರು ಖರ್ಚಿಗೆ ತಿಂಗಳಿಗೆ ₹75 ಸಾವಿರ
ಸರ್ಕಾರಿ ವಾಹನದ ಜೊತೆಗೆ ಶಾಸಕರಿಗೆ ವಾಹನದ ಚಾಲಕ, ಇಂಧನ ಮತ್ತು ನಿರ್ವಹಣಾ ವೆಚ್ಚಕ್ಕಾಗಿ ಪ್ರತಿ ತಿಂಗಳು ₹75,000 ಭತ್ಯೆ ನೀಡಲಾಗುತ್ತದೆ.
“ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಬೇಕು ಹಾಗೂ ಸರ್ಕಾರಿ ಯೋಜನೆಗಳ ಮೇಲ್ವಿಚಾರಣೆ ನಡೆಸಬೇಕು. ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಮೊದಲ ಬಾರಿಗೆ ಆಯ್ಕೆಯಾಗಿರುವ ಶಾಸಕರು ಯಾವುದೇ ತೊಂದರೆಯಿಲ್ಲದೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಈ ಸೌಲಭ್ಯ ಸಹಾಯ ಮಾಡಲಿದೆ” ಎಂದು ಮುಖ್ಯಮಂತ್ರಿ ವಿಜಯ್ ಹೇಳಿದ್ದಾರೆ.
ಕಾರ್ಯದರ್ಶಿಗೆ ₹25 ಸಾವಿರ ಅನುದಾನ
ಇದರ ಜೊತೆಗೆ ಪ್ರತಿ ಶಾಸಕರಿಗೂ ಅಧಿಕೃತ ಕೆಲಸಗಳಿಗಾಗಿ ಒಬ್ಬ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲು ತಿಂಗಳಿಗೆ ₹25,000 ರಾಜ್ಯ ಅನುದಾನ ನೀಡಲಾಗುತ್ತದೆ. ಶಾಸಕರ ಕಚೇರಿ ನಿರ್ವಹಣೆ ಹಾಗೂ ಜನರಿಂದ ಬರುವ ಮನವಿಗಳನ್ನು ಸಂಯೋಜಿಸಲು ಈ ಸೌಲಭ್ಯ ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಈ ಘೋಷಣೆಯನ್ನು ಆಡಳಿತಾರೂಢ ಪಕ್ಷದ ಶಾಸಕರು ಸ್ವಾಗತಿಸಿದ್ದಾರೆ. ಟಿವಿಕೆ ಶಾಸಕಿ ಸಬರಿ ಐಂಗರನ್ ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡು, ತಮಗೆ ಈ ಹಿಂದೆ ಕಾರು ಅಥವಾ ಉದ್ಯೋಗವೂ ಇರಲಿಲ್ಲ. ಇದೀಗ ಪಕ್ಷದ ನಾಯಕರು ಉದ್ಯೋಗದ ಜೊತೆಗೆ ಕಾರಿನ ಸೌಲಭ್ಯವನ್ನೂ ನೀಡಿದ್ದಾರೆ ಎಂದು ಹೇಳಿದ್ದಾರೆ.
ತಾವು ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ವಿಧಾನಸಭೆಗೆ ಆಟೋದಲ್ಲಿ ಬಂದಾಗ ತಾವು ಶಾಸಕಿ ಎಂದು ಹೇಳಿದರೂ ಪೊಲೀಸರು ನಂಬದ ಸಂದರ್ಭಗಳಿದ್ದವು. ಆಗ ಗುರುತಿನ ಚೀಟಿ ತೋರಿಸಬೇಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಮತ್ತೊಬ್ಬ ಟಿವಿಕೆ ಶಾಸಕಿ ಸಿಂಧು ವಿಧಾನಸಭೆಯಲ್ಲೇ ಎಂಜಿಆರ್ ಅವರ ಜನಪ್ರಿಯ ಹಾಡನ್ನು ಹಾಡಿ ಮುಖ್ಯಮಂತ್ರಿ ವಿಜಯ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ ಮುಖ್ಯಮಂತ್ರಿ ನಗುತ್ತಾ ಪ್ರತಿಕ್ರಿಯಿಸಿದ್ದು, ಇತರ ಶಾಸಕರು ಮೇಜು ತಟ್ಟಿ ಬೆಂಬಲ ವ್ಯಕ್ತಪಡಿಸಿದರು.
ವಿರೋಧ ಪಕ್ಷ ಡಿಎಂಕೆ ತೀವ್ರ ವಿರೋಧ
ಆದರೆ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷ ಡಿಎಂಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 234 ಶಾಸಕರಿಗೂ ಕಾರು ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ಹೊರೆ ಬೀಳಲಿದೆ ಎಂದು ಡಿಎಂಕೆ ಟೀಕಿಸಿದೆ.
ಡಿಎಂಕೆ ವಕ್ತಾರ ಎ. ಸರ್ವಣನ್ ಅವರು Hosasuddi.in ಜೊತೆ ಮಾತನಾಡಿ, “234 ಶಾಸಕರಿಗೆ ಕಾರು ನೀಡುವುದರ ಜೊತೆಗೆ ಇಂಧನ, ಚಾಲಕ ಮತ್ತು ನಿರ್ವಹಣೆಗೆ ಹೆಚ್ಚುವರಿ ಭತ್ಯೆ ನೀಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ದೊಡ್ಡ ಪ್ರಮಾಣದ ಹಣ ಖರ್ಚು ಮಾಡಬೇಕಾಗುತ್ತದೆ. ಈ ನಿರ್ಧಾರದ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ್ದಾರೆ.
ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಶಾಸಕರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವುದರ ಜೊತೆಗೆ ಚಾಲಕರು ಮತ್ತು ಕಾರ್ಯದರ್ಶಿಗಳಿಗೆ ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.
-
ದೇಶ24 ಗಂಟೆಗಳು agoImran Khan ಆರೋಗ್ಯದ ಬಗ್ಗೆ ಭಾರೀ ಆತಂಕ; ವಿಶೇಷ ವೈದ್ಯಕೀಯ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶ
-
ಸಿನಿಮಾ2 ಗಂಟೆಗಳು ago‘Toxic’ ಅಬ್ಬರ ಶುರು! ವಿಶ್ವದಾದ್ಯಂತ 12,000+ ಸ್ಕ್ರೀನ್ಗಳಲ್ಲಿ Yash ಸಿನಿಮಾ, ಇಲ್ಲಿದೆ ರಿಲೀಸ್ ಡೇಟ್
-
ಬೆಂಗಳೂರು6 ಗಂಟೆಗಳು agoVaramahalakshmi ಹಬ್ಬಕ್ಕೆ 3 ದಿನ ಬಾಕಿ: ಕನಕಾಂಬರ ಕೆ.ಜಿ.ಗೆ ₹3,000! ಬೆಂಗಳೂರಿನಲ್ಲಿ ಹೂ-ಹಣ್ಣಿನ ಬೆಲೆ ಶಾಕ್
-
ಬೆಂಗಳೂರು6 ಗಂಟೆಗಳು agoCM DK Shivakumar ಖಡಕ್ ಸೂಚನೆ: ನಾಗೇಂದ್ರರನ್ನು ಬಿಡಬೇಡಿ, ಬಿಜೆಪಿಗೆ ತಿರುಗೇಟು ನೀಡಿ!
-
ಅಪರಾಧ4 ಗಂಟೆಗಳು agoAAPಗೆ ಬಿಗ್ ಶಾಕ್: ಸತ್ಯೇಂದ್ರ ಜೈನ್ ಮತ್ತೆ ಬಂಧನ; ₹1.52 ಕೋಟಿ ಲಂಚದ ಆರೋಪ
-
ಬೆಂಗಳೂರು2 ಗಂಟೆಗಳು agoಶ್ರಾವಣ ಶುಕ್ರವಾರ ವಿಶೇಷ ಪೂಜೆ: ಯಶವಂತಪುರ MLA S T Somashekhar ಕಚೇರಿಯಲ್ಲಿ ಭಕ್ತಿಭಾವದ ಸಂಭ್ರಮ
-
ರಾಜ್ಯ6 ಗಂಟೆಗಳು agoTamil Nadu CM Vijay Work Style: 4 ಗಂಟೆಗೆ ಸಚಿವರಿಗೆ ಕರೆ, ಭ್ರಷ್ಟಾಚಾರ ವಿರುದ್ಧ ಕಟ್ಟುನಿಟ್ಟಿನ ಕ್ರಮ!
-
ದೇಶ4 ಗಂಟೆಗಳು agoMysuru Dasara ಗೆ ಈ ಬಾರಿ ‘ಅಭಿಮನ್ಯು’ ಮಿಸ್; 6 ಬಾರಿ ಚಿನ್ನದ ಅಂಬಾರಿ ಹೊತ್ತ ಗಜರಾಜನಿಗೆ ನಿವೃತ್ತಿ!
