“ಬೆಂಗಳೂರು ಬಿ-ಖಾತಾ TO ಎ-ಖಾತಾ! BBMP ಆನ್‌ಲೈನ್ ಪೋರ್ಟಲ್ ಚಾಲನೆ” | Hosa Suddi

ಬೆಂಗಳೂರು

“ಬೆಂಗಳೂರು ಬಿ-ಖಾತಾ TO ಎ-ಖಾತಾ! BBMP ಆನ್‌ಲೈನ್ ಪೋರ್ಟಲ್ ಚಾಲನೆ”

Published

on

ಬೆಂಗಳೂರು: ಸಿಲಿಕಾನ್ ಸಿಟಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ದೀಪಾವಳಿ ಗಿಫ್ಟ್ ನೀಡುತ್ತಿದೆ. 1,200 ಚದರ ಅಡಿವರೆಗಿನ ನಿವೇಶನಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ಪಡೆಯುವಲ್ಲಿ ವಿನಾಯಿತಿ ನೀಡಿದರೂ, ಇದೀಗ ‘ಬಿ-ಖಾತಾ’ ಆಸ್ತಿಗಳನ್ನು ‘ಎ-ಖಾತಾ’ಗೆ ಪರಿವರ್ತಿಸಲು ಆನ್‌ಲೈನ್ ಪೋರ್ಟಲ್ ಶುರುಮಾಡಲಾಗಿದೆ.

ಪೋರ್ಟಲ್ ಚಾಲನೆ:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಅಧಿಕೃತವಾಗಿ ‘ಬಿ-ಖಾತೆ’ಯಿಂದ ‘ಎ-ಖಾತೆ’ಗೆ ಪರಿವರ್ತಿಸುವ ಆನ್‌ಲೈನ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಗ್ರೇಟರ್ ಬೆಂಗಳೂರು ವ್ಯಾಪ್ತಿಯ 6 ಲಕ್ಷಕ್ಕೂ ಅಧಿಕ ‘ಬಿ-ಖಾತೆ’ದಾರರು ತಮ್ಮ ಆಸ್ತಿಗಳಿಗೆ ಸುಲಭವಾಗಿ ‘ಎ-ಖಾತೆ’ ಪಡೆಯಬಹುದು. ಹೊಸ ನಿವೇಶನಗಳಿಗೂ ನೇರವಾಗಿ ‘ಎ-ಖಾತೆ’ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

2000 ಚದರ ಮೀಟರ್‌ಗಳ ವರೆಗೆ ಆಸ್ತಿಗಾಗಿ ಅಪ್ಲಿಕೇಶನ್ ಪ್ರಕ್ರಿಯೆ:

  1. BBMP A Khata Portal ಗೆ ಮೊಬೈಲ್ ನಂಬರ್ ಮೂಲಕ ಲಾಗಿನ್ ಮಾಡಿ (OTP ಮೂಲಕ).
  2. ಫೈನಲ್ ಬಿ-ಖಾತಾ EPID ನಂಬರ್ ನಮೂದಿಸಬೇಕು.
  3. ಆಧಾರ್ ದೃಢೀಕರಣ ಮಾಡಬೇಕು.
  4. ನಿವೇಶನ ಸ್ಥಳ ಮತ್ತು ರಸ್ತೆ ವಿವರಗಳನ್ನು ದೃಢೀಕರಿಸಬೇಕು.
  5. ಭೂಪರಿವರ್ತನೆಯಾದ ಮತ್ತು ಆಗದ ಸೈಟ್‌ಗಳಿಗೆ ಅರ್ಜಿ ಸಲ್ಲಿಸಬಹುದು (ಫ್ಲ್ಯಾಟ್‌ಗಳಿಗೆ ಅರ್ಹತೆ ಇಲ್ಲ).
  6. ನಗರಪಾಲಿಕೆಯಿಂದ ಸ್ಥಳ ಪರಿಶೀಲನೆ.
  7. ಮಾರುಕಟ್ಟೆ ಮೌಲ್ಯದ 5% ಮೊತ್ತ ‘ಏಕ ನಿವೇಶನ’ ಅನುಮೋದನೆ ಶುಲ್ಕ ಹಾಗೂ ಇತರ ಶುಲ್ಕ ಪಾವತಿಸಬೇಕು.
  8. ಪ್ರಕ್ರಿಯೆ ಪೂರ್ಣವಾದ ಮೇಲೆ ಸ್ವಯಂಕೃತವಾಗಿ ಎ-ಖಾತಾ ಸಿಗುತ್ತದೆ.

2000 ಚದರ ಮೀಟರ್‌ಕ್ಕಿಂತ ಹೆಚ್ಚಿನ ವಿಸ್ತೀರ್ಣದ ಆಸ್ತಿಗೆ ಅಪ್ಲಿಕೇಶನ್ ಪ್ರಕ್ರಿಯೆ:

  1. ನೋಂದಾಯಿತ ಇಂಜಿನಿಯರ್ ಅಥವಾ ಆರ್ಕಿಟೆಕ್ಟ್ ಸಂಪರ್ಕಿಸಬೇಕು.
  2. BPAS Portal ಮೂಲಕ ಅರ್ಜಿ ಸಲ್ಲಿಸಬೇಕು.
  3. ಅಗತ್ಯ ದಾಖಲೆಗಳು ಮತ್ತು CAD ಡ್ರಾಯಿಂಗ್ ಅಪ್‌ಲೋಡ್ ಮಾಡಬೇಕು.
  4. ಆರಂಭಿಕ ಪರಿಶೀಲನಾ ಶುಲ್ಕ ₹500 ಪಾವತಿಸಬೇಕು.
  5. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಂತರ ನಿವೇಶನಕ್ಕೆ ಭೇಟಿ ನೀಡಿ ಪರಿಶೀಲನೆ.
  6. ಅರ್ಹತೆಗೆ ಅನುಸಾರ ಅನುಮೋದನೆ ನೀಡಲಾಗುತ್ತದೆ.
  7. ಅನ್ವಯವಾಗುವ ಶುಲ್ಕ ಪಾವತಿಸಿ ‘ಏಕ ನಿವೇಶನ’ ಅನುಮೋದನೆ ಪ್ರಮಾಣಪತ್ರ, ಡ್ರಾಯಿಂಗ್‌ ಮತ್ತು ಎ-ಖಾತಾ ವಿತರಣೆ ಪಡೆಯಬಹುದು.

Trending

Exit mobile version