ದೇಶ
ಟ್ರಾಫಿಕ್ ಪಾಯಿಂಟ್ಸ್ ಗುರುತಿಸಲು 1 ಕೋಟಿ ರೂ.ವೆಚ್ಚ-ರಾಜ್ಯ ಸರ್ಕಾರವನ್ನು ಛೇಡಿಸಿದ ಉದ್ಯಮಿ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಬಗ್ಗೆ ಜಗತ್ತೇ ಮಾತಾಡುತ್ತೆ, ಇಲ್ಲಿ ವಾಹನ ಚಲಾವಣೆ ನಿಜಕ್ಕೂ ಕಷ್ಟ, ಇದೇ ವಿಚಾರ ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ದೊಡ್ಡ ಸಮರಕ್ಕೆ ನಾಂದಿ ಹಾಡಿದೆ,
ಕರ್ನಾಟಕದಲ್ಲಿ ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ವೋಟ್ ಹಾಕ್ಬೇಡಿ ಅಂತ ಬಿಜೆಪಿ ಟಾಂಗ್ ನೀಡಿದೆ, ಈಸಿ ಮೈ ಟ್ರಿಪ್ ಸಹ ಸಂಸ್ಧಾಪಕ ಪ್ರಶಾಂತ್ ಪಿತ್ತಿ ಬೆಂಗಳೂರು ಟ್ರಾಫಿಕ್ ನಿಯಂತ್ರಣ ಸಂಬಂಧ ಚೋಕ್ ಪಾಯಿಂಟ್ಸ್ ಗುರುತು ಮಾಡಲು 1 ಕೋಟಿ ಹಣ ವ್ಯಯ ಮಾಡೋಕೆ ಸಿದ್ಧ ಎಂದು ಟ್ವಿಟ್ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ,
ಬೆಂಗಳೂರಿನ ರಣ ಟ್ರಾಫಿಕ್ ನಲ್ಲಿ ಪ್ರಶಾಂತ್ ಪಿತ್ತಿ ಸಿಲುಕಿದ್ದರು, ಸುಮಾರು 2 ಗಂಟೆ ಕಾಲ ವಾಹನ ಚಲಾವಣೆ ಆಗದೆ ಕಂಗಾಲಾಗಿದ್ದರು, ಈ ಬೆನ್ನಲ್ಲೇ ಟ್ರಾಫಿಕ್ ಸಮಸ್ಯೆ ನಿವಾರಣೆಗೆ 1 ಕೋಟಿ ಕೊಡಲು ಸಿದ್ಧ ಎಂದು ಟ್ವಟ್ ಮಾಡಿದ್ದರು, ಅಲ್ಲದೆ ಚೋಕಿಂಗ್ ಪಾಯಿಂಟ್ಸ್ ಗುರುತಿಸುವಿಕೆಗೆ 1 ಕೋಟಿ ಹಣ ಮೀಸಲಿಟ್ಟ ಬಗ್ಗೆ ಹೇಳಿದ್ದರು, ಈ ಬೆನ್ನಲ್ಲೇ ಸದ್ಯ ಬಿಜೆಪಿ ಕಾಂಗ್ರೆಸ್ ಗೆ ಟಕ್ಕರ್ ಕೊಟ್ಟಿದೆ,
ಮುಂಬೈನಲ್ಲಿಯೂ ಸಹ ಟ್ರಾಫಿಕ್ ಸಮಸ್ಯೆ ದಟ್ಟವಾಗಿದ್ದು, ಟ್ರಾಫಿಕ್ ಸಮಸ್ಯೆಯಿಮದಲೇ ಕಿರಿಕ್ ಸಹ ನಡೆದಿರುವ ಘಟನೆ ಸಂಭವಿಸಿದೆ, ಪ್ರಯಾಣದ ವೇಳೆ ಚಾಲನಾ ಪರವಾನಿಗಿ ಕೇಳಿದ್ದಕ್ಕೆ ಸಿಟ್ಟಾದ ತಂದೆ ಹಾಗೂ ಮಗ ನಡು ರಸ್ತೆಯಲ್ಲೇ ಟ್ರಾಫಿಕ್ ಪೊಲೀಸ್ ನನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದು ಹಲ್ಲೆ ನಡೆಸಿರುವಂತಹ ಶಾಕಿಂಗ್ ಘಟನೆ ಮಹಾರಾಷ್ಟ್ರದ ನಲಸೋಪಾರದಲ್ಲಿ ನಡೆದಿದೆ,
ನಲಸೋಪಾರದಲ್ಲಿ ನಡೆದ ಈ ಆಘಾತಕಾರಿ ಘಟನೆ ನಗರದ ಕಾನೂನು ಸುವ್ಯವಸ್ಧೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ,