ಅಪರಾಧ
BENGALURU : ಸರಗಳ್ಳನನ್ನು 1 ಕಿ.ಮೀ ಚೇಸ್ ಮಾಡಿ ಹಿಡಿದ ಕಾನ್ಸ್‌ಟೇಬಲ್‌ಗೆ ಕಮಿಷನರ್ ಗೌರವ
ಬೆಂಗಳೂರು, ಫೆಬ್ರವರಿ 17: ರಾಜಧಾನಿ ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣದಲ್ಲಿ ಶೌರ್ಯ ತೋರಿದ ಕಾನ್ಸ್‌ಟೇಬಲ್ ಹಣಮಂತ ಪುಟಾಣಿ ಅವರನ್ನು ನಗರ ಪೊಲೀಸ್ ಕಮಿಷನರ್ Seemanth Kumar Singh ಅಭಿನಂದಿಸಿ ಗೌರವಿಸಿದ್ದಾರೆ.
ಕಳೆದ ಫೆಬ್ರವರಿ 5ರಂದು Vijayanagar ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಕ್ಷಾಯಣಿ ಎಂಬ ಮಹಿಳೆಯವರ 40 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಸೈಯದ್ ಜಾಫರ್ ಎಂಬ ಆರೋಪಿಯನ್ನು ಹಣಮಂತ ಪುಟಾಣಿ ಬೆನ್ನಟ್ಟಿದ್ದರು. ಸುಮಾರು ಒಂದು ಕಿಲೋಮೀಟರ್ ದೂರ ಚೇಸ್ ಮಾಡಿದ ಬಳಿಕ ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸದ್ಯ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಣಮಂತ ಪುಟಾಣಿ ಅವರ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಬಂಧಿತ ಆರೋಪಿಯಿಂದ ಸುಮಾರು ₹6 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ Vijayanagar Police Station ನಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳ ನಡುವೆ ಕಾನ್ಸ್‌ಟೇಬಲ್ ತೋರಿದ ಧೈರ್ಯ ಸಾರ್ವಜನಿಕರಲ್ಲಿ ಭದ್ರತಾ ವಿಶ್ವಾಸ ಹೆಚ್ಚಿಸಿದೆ.